Cyber: “ಡಿಜಿಟಲ್ ಅರೆಸ್ಟ್” ವ್ಯವಸ್ಥೆ: ಇದು ಸೈಬರ್ ಕಳ್ಳರ ಹೊಸ ಮೋಸದ ಜಾಲ
Team Udayavani, Dec 2, 2023, 11:51 PM IST
ಲಕ್ನೋ: ದೇಶದಲ್ಲಿ ಸೈಬರ್ ಅಪರಾಧಿಗಳ ತಂಡ ಮತ್ತೆ ಗರಿಗೆದರಿದ್ದು ಜನರನ್ನು ವಂಚಿಸಲು ದುಷ್ಕರ್ಮಿಗಳು ಇದೀಗ ಪೊಲೀಸರ ಹೆಸರನ್ನೇ ದಾಳವಾಗಿಸಿಕೊಂಡಿ ದ್ದಾರೆ. ಐಪಿಎಸ್, ಸಿಬಿಐ ಅಧಿಕಾರಿಗಳ ಹೆಸರಿನಲ್ಲಿ ಮಹಿಳೆಯೊಬ್ಬರನ್ನು “ಡಿಜಿಟಲ್ ಅರೆಸ್ಟ್’ ಮಾಡುವ ಮೂಲಕ 11 ಲಕ್ಷ ರೂ. ವಂಚಿಸಿರುವ ಪ್ರಕರಣ ಉತ್ತರ ಪ್ರದೇಶದ ನೋಯ್ಡಾದಲ್ಲಿ ವರದಿಯಾಗಿದೆ. ನೋಯ್ಡಾ ಮೂಲದ ಮಹಿಳೆ ಯೊಬ್ಬರಿಗೆ ಮುಂಬಯಿ ಪೊಲೀಸರ ಹೆಸರಿನಲ್ಲಿ ಕರೆಯೊಂದು ಬಂದಿದೆ.
ಅದರಲ್ಲಿ ಮಾತನಾಡಿದ ವ್ಯಕ್ತಿಯು ” ನಾನು ಪೊಲೀಸ್ ಅಧಿಕಾರಿ ನಿಮ್ಮ ಆಧಾರ್ಕಾರ್ಡ್ ಬಳಸಿ ಖರೀದಿಸಿರುವ ಮೊಬೈಲ್ ಮತ್ತು ಸಿಮ್ಕಾರ್ಡ್ಗಳಿಂದ ಕಾನೂನು ಬಾಹಿರ ಚಟುವಟಿಕೆಗಳು ನಡೆದಿವೆ ಈ ಕುರಿತು ನಿಮ್ಮನ್ನು ತನಿಖೆ ಮಾಡ ಬೇಕಿದೆ’ಎಂದಿದ್ದಾನೆ. ಬಳಿಕ “ಆಧಾರ್ಕಾರ್ಡ್ ಮೂಲಕ ಬ್ಯಾಂಕ್ ಖಾತೆಯನ್ನು ಬಳಸಿ ಅಕ್ರಮ ಹಣ ವರ್ಗಾವಣೆ ಮಾಡಿರುವುದು ತಿಳಿದುಬಂದಿದೆ. ಹೀಗಾಗಿ ತನಿಖೆಗೆ ಸಹಕರಿಸಿ ಇದು ಡಿಜಿಟಲ್ ಅರೆಸ್ಟ್’ ಎಂದು ಹಾದಿ ತಪ್ಪಿಸಿದ್ದಾನೆ. ಬಳಿಕ ಸುಪ್ರೀಂ ಕೋರ್ಟ್ ಆದೇಶ ನೀಡಿದೆ, ಖಾತೆಯಲ್ಲಿರುವ ಎಲ್ಲ ಹಣವನ್ನು ವೈಯಕ್ತಿಕ ವಿದೇಶಿ ಕರೆನ್ಸಿ ಅಕೌಂಟ್ಗೆ ವರ್ಗಾವಣೆ ಮಾಡಿಕೊಳ್ಳಿ ಎಂದು ಸೂಚನೆ ನೀಡಿ, ಬಳಿಕ ಆಕೆಗೇ ತಿಳಿಯದಂತೆ 11 ಲಕ್ಷ ರೂ. ಲಪಟಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.