Manipal ಎಂಕಾಪ್ಸ್ ಸಿಜಿಎಂಪಿಗೆ ಇಂಡಿಯಾ ಫಾರ್ಮಾ ಪ್ರಶಸ್ತಿ
Team Udayavani, Dec 3, 2023, 12:06 AM IST
ಮಣಿಪಾಲ: ಮಾಹೆ ವಿಶ್ವವಿದ್ಯಾನಿಲಯದ ಮಣಿಪಾಲ ಕಾಲೇಜ್ ಆಫ್ ಫಾರ್ಮಾಸುಟಿಕಲ್ ಸೈನ್ಸಸ್ (ಎಂಕಾಪ್ಸ್)ನಲ್ಲಿರುವ ಸಿಜಿಎಂಪಿ ಕೇಂದ್ರವು ಗುಣಮಟ್ಟದ ಶ್ರೇಷ್ಠತೆಗಾಗಿ ಗ್ರೇಟರ್ ನೋಯ್ಡಾದ ಎಕ್ಸ್‌ಪೋ ಸೆಂಟರ್‌ನಲ್ಲಿ ನಡೆದ ಸಿಪಿಎಚ್- ಪಿಎಂಇಸಿ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ “ಇಂಡಿಯಾ ಫಾರ್ಮಾ ಅವಾರ್ಡ್-
2023′ ಪಡೆದಿದೆ.
ಇನಾ#ರ್ಮಾ ಮಾರ್ಕೆಟ್ಸ್‌ನ ಹಿರಿಯ ಉಪಾಧ್ಯಕ್ಷ ಕ್ರಿಸ್ಟೋಫರ್ ಈವ್ ಅವರಿಂದ ಕೇಂದ್ರದ ಸಂಯೋಜಕ ಡಾ| ಗಿರೀಶ್ ಪೈ ಕೆ., ಸಹ ಸಂಯೋಜಕ ಡಾ| ಮುದ್ದುಕೃಷ್ಣ ಬಿ.ಎಸ್. ಪ್ರಶಸ್ತಿ ಸ್ವೀಕರಿಸಿದರು.
ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್ ಮಾತನಾಡಿ, ಸಿಜಿಎಂಪಿ ಕಾರ್ಯ ದಕ್ಷತೆ ಹಾಗೂ ಬದ್ಧತೆಗೆ ಸಿಕ್ಕ ಮನ್ನಣೆ ಇದಾಗಿದೆ. ಔಷಧೀಯ ವಲಯದಲ್ಲಿ ಇನ್ನಷ್ಟು ಸಾಧನೆಗೆ ಪ್ರೇರಣೆಯಾಗಲಿದೆ ಎಂದರು.
ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕೇಂದ್ರದ ಸಂಯೋಜಕ ಡಾ| ಗಿರೀಶ್ ಪೈ ಕೆ., ಸಹ ಸಂಯೋಜಕ ಡಾ| ಮುದ್ದುಕೃಷ್ಣ ಬಿ.ಎಸ್. ಅವರು ಸಿಜಿಎಂಪಿಯ ಬಗ್ಗೆ ಅಗತ್ಯ ಮಾಹಿತಿ ನೀಡಿದರು. ಇತ್ತೀಚೆಗೆ ಮಾಹೆ ವಿ.ವಿ.ಯಿಂದ ನಡೆದ ರಾಷ್ಟ್ರೀಯ ಸಿಜಿಎಂಪಿ ದಿನದ ಆಚರಣೆ, ಉಪಕ್ರಮ ಹಾಗೂ ಕಲ್ಪನೆಯನ್ನು ವಿವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮತಿ ಪ್ರತಿಭಾ, ಗೀತಾ ತ್ರಯೋದಶಾವಧಾನ’ ಸಂಪನ್ನ
Adani: ಅದಾನಿ ಫೌಂಡೇಶನ್ 17 ಲಕ್ಷ ರೂಪಾಯಿ ಕಾಮಗಾರಿಗೆ ಗುದ್ದಲಿ ಪೂಜೆ
Udupi: ಬಚ್ಚಿಟ್ಟ ಮದುವೆ; ಗಂಡನ ಗುಟ್ಟು-ರಟ್ಟು; ಪತಿ ಸಹಿತ 6ಮಂದಿ ವಿರುದ್ಧ ಪ್ರಕರಣ ದಾಖಲು
Padubidri:15 ಲಕ್ಷ ರೂ. ಪಡೆದು ಮರಳಿಸದೆ ಜೀವಬೆದರಿಕೆ; ಪ್ರಕರಣ ದಾಖಲು
Kudremukh: ಹೊತ್ತಿ ಉರಿದ ಟೆಂಪೋದಲ್ಲಿದ್ದದ್ದು ಕಟಪಾಡಿ ಮೂಲದ 8 ಕುಟುಂಬಗಳು
MUST WATCH
ಹೊಸ ಸೇರ್ಪಡೆ
ಸ್ಪೀಕರ್, ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಸಭಾಪತಿ ಹೊರಟ್ಟಿ
ಕೆಕೆಆರ್‌ಡಿಬಿಯಲ್ಲಿ ಕಾಂಗ್ರೆಸ್ ಮುಖಂಡರಿಗೆ ಮಾತ್ರ ಅವಕಾಶ: ಪ್ರತಿಪಕ್ಷ ಸದಸ್ಯರ ಬೇಸರ
Rain: 5 ವಿದ್ಯುತ್ ನಿಗಮ ವ್ಯಾಪ್ತಿಯಲ್ಲಿ 156 ಕೋಟಿರೂ. ಸೌಕರ್ಯ ಹಾನಿ: ಕೆ.ಜೆ. ಜಾರ್ಜ್
Winter Session: ಸರ್ಕಾರದ ವರ್ತನೆಗೆ ವಿಪಕ್ಷ ಸದಸ್ಯರ ಆಕ್ರೋಶ: ಸಭಾಪತಿ ಹೊರಟ್ಟಿ ಎಚ್ಚರಿಕೆ
Kannada Sahitya Sammelana: ಮೊದಲ ಬಾರಿಗೆ ದೃಷ್ಟಿಚೇತನರ ವಿಶೇಷ ಕವಿಗೋಷ್ಠಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.