Mizoram Result; ಸಮೀಕ್ಷೆ ತಲೆಕೆಳಗಾಗಿಸಿದ ಲಲ್ದುಹೊಮಾ; ಝಡ್ ಪಿಎಂ ಪಕ್ಷಕ್ಕೆ ಸರಳ ಬಹುಮತ
Team Udayavani, Dec 4, 2023, 3:04 PM IST
ಹೊಸದಿಲ್ಲಿ: ಇತ್ತೀಚೆಗೆ ನಡೆದ ಮಿಜೋರಂ ವಿಧಾನಸಭೆ ಚುನಾವಣೆಯಲ್ಲಿ ಲಲ್ದುಹೊಮಾ ಅವರ ಝೆಡ್ ಪಿಎಂ ಪಕ್ಷವು (ಜೋರಾಮ್ ಪೀಪಲ್ಸ್ ಮೂವ್‌ಮೆಂಟ್) ಸರಳ ಬಹುಮತ ಪಡೆದಿದೆ. 40 ಅಸೆಂಬ್ಲಿ ಸ್ಥಾನಗಳಲ್ಲಿ 27 ಸ್ಥಾನಗಳನ್ನು ಗೆದ್ದು ಆಡಳಿತಾರೂಢ ಎಂಎನ್ಎಫ್ (ಮಿಜೋ ನ್ಯಾಷನಲ್ ಫ್ರಂಟ್) ಅನ್ನು ಸೋಲಿಸಿದೆ.
ಇದುವರೆಗೆ ಮಿಜೋ ಮುಖ್ಯಮಂತ್ರಿಯಾಗಿದ್ದ ಝೋರಾಂತಂಗ ಅವರಿಗೆ ಇಂದು ಡಬಲ್ ಶಾಕ್ ಎದುರಾಗಿದೆ. ರಾಜ್ಯದಲ್ಲಿ ಅಧಿಕಾರವನ್ನು ಕಳೆದುಕೊಂಡ ಅವರು ಐಜ್ವಾಲ್ ಪೂರ್ವದಲ್ಲಿ ಪ್ರತಿಸ್ಪರ್ಧಿ ಝಡ್ ಪಿಎಂ ಅಭ್ಯರ್ಥಿ ಲಾಲ್ತನ್‌ಸಂಗ ಅವರ ಎದುರು ಸೋಲನುಭವಿಸಿದ್ದಾರೆ. ಲಾಲ್ತನ್ ಸಂಗ 2,101 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಈತನ್ಮಧ್ಯೆ, ಝಡ್ ಪಿಎಂ ನ ಮುಖ್ಯಮಂತ್ರಿ ಅಭ್ಯರ್ಥಿ ಲಲ್ದುಹೊಮ ಅವರು ಸರ್ಚಿಪ್ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಎಂಎನ್ಎಫ್ ಅಭ್ಯರ್ಥಿಯನ್ನು ಅವರು 2,982 ಮತಗಳ ಅಂತರದಿಂದ ಸೋಲಿಸಿದರು.
ಇದನ್ನೂ ಓದಿ:ಅಂದು ಇಂದಿರಾ ಭದ್ರತಾ ಉಸ್ತುವಾರಿ, ಇಂದು ಮಿಜೋ ಸಿಎಂ ಸ್ಥಾನದತ್ತ..: ಇದು ಲಲ್ದುಹೊಮ ಕಥೆ
ಆಡಳಿತಾರೂಢ ಎಂಎನ್‌ಎಫ್ ಹತ್ತು ಸ್ಥಾನಗಳನ್ನು ಗೆದ್ದುಕೊಂಡಿದೆ. ಬಿಜೆಪಿ ಎರಡು ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಒಂದು ಸ್ಥಾನದಲ್ಲಿ ಗೆಲುವು ಕಂಡಿದೆ.
ಗೆಲುವು ಸಾಧಿಸುತ್ತಿದ್ದಂತೆ ಮಾತನಾಡಿದ ಲಲ್ದುಹೊಮ ಅವರು “ನನಗೆ ಅಚ್ಚರಿಯಾಗಿಲ್ಲ, ಇದನ್ನೇ ನಾನು ನಿರೀಕ್ಷಿಸಿದ್ದೆ” ಎಂದು ಹೇಳಿದರು.
ಚುನಾವಣಾ ನಂತರದ ಸಮೀಕ್ಷೆಗಳು ಎಂಎನ್ಎಫ್ ಪಕ್ಷದ ಪರವಾಗಿ ಬಂದಿದ್ದವು. ಹೆಚ್ಚಿನ ಸಮೀಕ್ಷೆಗಳಲ್ಲಿ ಎಂಎನ್ಎಫ್ ಪಕ್ಷವು ಅತಿ ದೊಡ್ಡ ಪಕ್ಷವಾಗಿ ಹೊರಬರಲಿದೆ ಎಂದು ತಿಳಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Dr. Manmohan Singh; ನಾಳೆ ನಿಗಮಬೋಧ್ ಘಾಟ್ ಚಿತಾಗಾರದಲ್ಲಿ ಮಾಜಿ ಪ್ರಧಾನಿ ಅಂತ್ಯಕ್ರಿಯೆ
Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
New Delhi: ಸಂಸತ್ತಿನ ಬಳಿ ಬೆಂಕಿ ಹಚ್ಚಿಕೊಂಡಿದ್ದ ಯುವಕ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Kasaragod Crime News: ಅವಳಿ ಪಾಸ್‌ಪೋರ್ಟ್; ಕೇಸು ದಾಖಲು
Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.