Australia ಮೋಸದಾಟದ ಡೇವಿಡ್ ವಾರ್ನರ್ಗೆ ವಿದಾಯ ಪಂದ್ಯ!: ಮಿಚೆಲ್ ಜಾನ್ಸನ್ ಕಿಡಿ
Team Udayavani, Dec 4, 2023, 11:29 PM IST
ಸಿಡ್ನಿ: ಮೋಸದಾಟದಲ್ಲಿ ಭಾಗಿಯಾಗಿದ್ದ ಡೇವಿಡ್ ವಾರ್ನರ್ ಅವರಿಗೆ ವಿದಾಯ ಪಂದ್ಯವೊಂದನ್ನು ಆಯೋಜಿಸಲಾಗುತ್ತಿದೆ ಎಂಬ ಸುದ್ದಿ ತಿಳಿದು ಅದೇ ನಾಡಿನ ಮಾಜಿ ವೇಗಿ ಮಿಚೆಲ್ ಜಾನ್ಸನ್ ಆಕ್ರೋಶ, ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಆಸ್ಟ್ರೇಲಿಯದ ಕ್ರಿಕೆಟ್ ಇತಿಹಾಸ ದಲ್ಲೇ ಅತೀ ದೊಡ್ಡ ಹಗರಣದಲ್ಲಿ ಭಾಗಿ ಯಾದ ಕುಖ್ಯಾತಿ ಡೇವಿಡ್ ವಾರ್ನರ್ ಅವರದು. ಅಲ್ಲದೇ ಟೆಸ್ಟ್ ಮಾದರಿಯಲ್ಲಿ ಅವರು ರನ್ ಬರಗಾಲದಲ್ಲಿದ್ದಾರೆ. ಇಂಥವರಿಗೆ ವಿದಾಯ ಪಂದ್ಯದ ಅಗತ್ಯವಿತ್ತೇ?’ ಎಂಬುದಾಗಿ ಜಾನ್ಸನ್ ನೇರ ಪ್ರಶ್ನೆ ಮಾಡಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ವೇಳೆ “ಸ್ಯಾಂಡ್ಪೇಪರ್ ಗೇಟ್’ ಪ್ರಕರಣದಲ್ಲಿ ಸಿಕ್ಕಿಬಿದ್ದು ನಿಷೇಧ ಕ್ಕೊಳಗಾದವರಲ್ಲಿ ಡೇವಿಡ್ ವಾರ್ನರ್ ಕೂಡ ಒಬ್ಬರು. ಉಳಿದಿಬ್ಬರೆಂದರೆ ಕ್ಯಾಮರೂನ್ ಬಾನ್ಕ್ರಾಫ್ಟ್ ಮತ್ತು ಸ್ಟೀವನ್ ಸ್ಮಿತ್.
“ಈ ಪ್ರಕರಣದಲ್ಲಿ ವಾರ್ನರ್ ಒಬ್ಬರೇ ಇರಲಿಲ್ಲ. ಆದರೆ ಅವರು ಹಿರಿಯ ಆಟಗಾರನಾಗಿದ್ದರು. ತಂಡದ ನಾಯಕನೂ ಆಗಿದ್ದರು. ಇಂಥವರಿಗೂ ವಿದಾಯ ಪಂದ್ಯ ಏರ್ಪಡಿಸಲಾಗುತ್ತಿದೆ ಎಂಬುದೇ ವಿಪರ್ಯಾಸ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ
Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್, ಸಿಮ್ರನ್ ಗೆ ಕಂಚು
Diamond League: ಡೈಮಂಡ್ ಲೀಗ್ ಋತು ಫೈನಲಿಗೆ ನೀರಜ್ ಚೋಪ್ರಾ ಅರ್ಹತೆ
Paralympics: ಸಮಾರೋಪ ಸಮಾರಂಭದಲ್ಲಿ ಹರ್ವಿಂದರ್ ಸಿಂಗ್, ಪ್ರೀತಿ ಪಾಲ್ ಧ್ವಜಧಾರಿಗಳು
US Open: ಯುಎಸ್ ಓಪನ್ ಟೆನಿಸ್ ಗ್ರ್ಯಾನ್ ಸ್ಲಾಮ್: ಪೆಗುಲಾ-ಸಬಲೆಂಕಾ ನಡುವೆ ಫೈನಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.