Chinese: ಭಾರತ ದ್ವೇಷಿ ಚೀನೀ ಖಾತೆಗಳು ಡಿಲೀಟ್
Team Udayavani, Dec 6, 2023, 12:22 AM IST
ಹೊಸದಿಲ್ಲಿ: ಭಾರತದ ವಿರುದ್ಧ ಸದಾ ಒಂದಿಲ್ಲೊಂದು ಕುತಂತ್ರ ರೂಪಿಸುವ ಚೀನ ಇದೀಗ ಜಾಲತಾಣಗಳನ್ನೂ ಅದಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದೆ. ಅದರಲ್ಲೂ ಫೇಸ್ಬುಕ್ನಲ್ಲಿ ಚೀನದಿಂದಲೇ ನಕಲಿ ಖಾತೆಗಳನ್ನು ಸೃಷ್ಟಿಸಿ, ಆ ಖಾತೆಗಳು ಭಾರತೀ ಯರದ್ದು ಎನ್ನುವಂತೆ ಬಿಂಬಿಸಿ ಸರಕಾರದ ವಿರುದ್ಧ, ದೇಶದ ಪರಿಸ್ಥಿತಿಯ ಬಗ್ಗೆ ವದಂತಿಗಳನ್ನು ಹಬ್ಬಿಸಲು ಬಳಸಲಾಗುತ್ತಿದೆ! ಹೀಗೆಂದು ಸ್ವತಃ ಫೇಸ್ಬುಕ್ನ ಮಾತೃಸಂಸ್ಥೆ ಮೆಟಾ ತಿಳಿಸಿದೆ.
ಮೆಟಾದ ಇತ್ತೀಚೆಗಿನ ವರದಿಗಳ ಪ್ರಕಾರ ಭಾರತೀಯರ ಹೆಸರಿನಲ್ಲಿ ಚೀನದಿಂದ ಸೃಷ್ಟಿಸುತ್ತಿರುವ ನಕಲಿ ಖಾತೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಅವುಗಳಲ್ಲಿ ಅನೇಕ ಖಾತೆಗಳು ವಕೀಲರು, ಪತ್ರಕರ್ತರು, ಮಾನವ ಹಕ್ಕುಗಳ ಹೋರಾಟಗಾರರು ಎನ್ನುವಂತೆ ಬಿಂಬಿಸಿಕೊಂಡಿವೆ. ಅರುಣಾಚಲ ಪ್ರದೇಶದ ನಿವಾಸಿಗಳು ಎನ್ನುವಂತೆ ಸೃಷ್ಟಿಸಿಕೊಂಡಿರುವ ಖಾತೆಗಳಲ್ಲಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಸ್ಥಳೀಯ ಸುದ್ದಿಗಳು, ಸಂಸ್ಕೃತಿ, ಕ್ರೀಡೆ, ಪ್ರವಾಸದ ಕುರಿತು ವಿಷಯಗಳನ್ನು ಪೋಸ್ಟ್ ಮಾಡಲಾಗಿದೆ. ಭಾರತೀಯ ಸೇನೆಯನ್ನು ಶ್ಲಾ ಸುತ್ತಲೇ ಸರಕಾರವನ್ನು ವಿರೋಧಿಸುವ, ಈಶಾನ್ಯ ರಾಜ್ಯಗಳ ಸಂಘರ್ಷಕ್ಕೆ ಸರಕಾರವನ್ನು ಹೊಣೆ ಮಾಡುವಂಥ ಪೋಸ್ಟ್ಗಳನ್ನು ಹಾಕಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.