Telangana: ಇಂದು ರೇವಂತ್ ರೆಡ್ಡಿ ಪ್ರಮಾಣ ಸ್ವೀಕಾರ
Team Udayavani, Dec 7, 2023, 12:07 AM IST
ಹೈದರಾಬಾದ್/ಹೊಸದಿಲ್ಲಿ: ತೆಲಂಗಾಣದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ರೇವಂತ್ ರೆಡ್ಡಿ ಅವರು ಗುರುವಾರ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಲಿದ್ದಾರೆ. ಹೈದರಾಬಾದ್‌ನಲ್ಲಿರುವ ಎಲ್.ಬಿ. ಸ್ಟೇಡಿಯಂ ನಲ್ಲಿ ಮಧ್ಯಾಹ್ನ 1.04 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿ ಎ. ಶಾಂತಿಕುಮಾರಿ ಅವರು ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದರು. ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಖರ್ಗೆ, ಸೋನಿಯಾ ಗಾಂಧಿ ಸೇರಿದಂತೆ ಪ್ರಮುಖರು ಹಾಜರಾಗುವ ಸಾಧ್ಯತೆಗಳಿವೆ.
ಇದೇ ವೇಳೆ, ನಿಯೋಜಿತ ಸಿಎಂ ರೇವಂತ್ ರೆಡ್ಡಿ ಹೊಸದಿಲ್ಲಿ ಪ್ರವಾಸದಲ್ಲಿದ್ದು, ಬುಧವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಮಲ್ಕಾಜ್‌ಗಿರಿ ಲೋಕಸಭಾ ಕ್ಷೇತ್ರದ ಸದಸ್ಯರೂ ಆಗಿರುವ ರೇವಂತ್ ರೆಡ್ಡಿ ಬುಧವಾರ ಲೋಕಸಭೆ ಸ್ಪೀಕರ್ ಓಂ ಬಿರ್ಲಾರನ್ನು ಭೇಟಿಯಾಗಿ ರಾಜೀನಾಮೆ ನೀಡಿದ್ದಾರೆ. ತೆಲಂಗಾಣ ಹೊಸ ರಾಜ್ಯವಾಗಿ ರಚನೆಗೊಂಡ ಬಳಿಕ ಅಸ್ತಿ¤ತ್ವಕ್ಕೆ ಬರಲಿರುವ ಕಾಂಗ್ರೆಸ್‌ನ ಮೊದಲ ಮುಖ್ಯಮಂತ್ರಿ ಯಾಗಲಿದ್ದಾರೆ ರೇವಂತ್.
ಛತ್ತೀಸ್‌ಗಢ: 17 ಶಾಸಕರ ವಿರುದ್ಧ ಕ್ರಿಮಿನಲ್ ಕೇಸು: 90 ಸದಸ್ಯ ಬಲದ ಛತ್ತೀಸ್‌ಗಢದ ನೂತನ ಶಾಸಕರ ಪೈಕಿ 17 ಮಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ. ಶಾಸಕರೇ ನಾಮಪತ್ರ ಸಲ್ಲಿಕೆಯ ವೇಳೆ ಸಲ್ಲಿಕೆ ಮಾಡಿರುವ ಪ್ರಮಾಣಪತ್ರಗಳ ವಿವರಗಳಿಂದ ಈ ಅಂಶಗಳು ದೃಢಪಟ್ಟಿವೆ. ಈ ಪೈಕಿ ಆರು ಮಂದಿ ಶಾಸಕರು ಗಂಭೀರ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಛತ್ತೀಸ್‌ಗಢ ಚುನಾವಣ ವೀಕ್ಷಕ ಮತ್ತು ಅಸೋಸಿಯೇಶನ್ ಫಾರ್ ಡೆಮಾಕ್ರಾಟಿಕ್ ರಿಫಾಮ್ಸ್ (ಎಡಿಆರ್) 90 ಮಂದಿ ನೂತನ ಶಾಸಕರು ಸಲ್ಲಿಸಿರುವ ಅಫಿದವಿತ್‌ಗಳನ್ನು ಅಧ್ಯಯನ ನಡೆಸಿ ಈ ತೀರ್ಮಾನಕ್ಕೆ ಬಂದಿದೆ. 54 ಬಿಜೆಪಿ ಶಾಸಕರ ಪೈಕಿ 12 ಮಂದಿ (ಶೇ.22) ಕಾಂಗ್ರೆಸ್‌ನ 35 ಶಾಸಕರ ಪೈಕಿ ಐವರು (ಶೇ.14) ತಮ್ಮ ವಿರುದ್ಧ ಕ್ರಿಮಿನಲ್ ಕೇಸುಗಳಿವೆ ಎಂದು ತಿಳಿಸಿದ್ದಾರೆ.
ಮಿಜೋರಾಂ: ನಾಳೆ ಲಾಲ್ದುಹೋಮಾ ಪ್ರಮಾಣ
ಐಜ್ವಾಲ್: ಮಿಜೋರಾಂನಲ್ಲಿ ಅಧಿ ಕಾರಕ್ಕೆ ಬಂದಿರುವ ಆರು ಪಕ್ಷಗಳ ಮೈತ್ರಿಕೂಟ ಜೋರಾಮ್ ಪೀಪಲ್ಸ್ ಮೂವ್‌ಮೆಂಟ್ (ಝಡ್ ಪಿಎಂ)ನ ನಾಯಕ ಲಾಲುªಹೋಮಾ ನೇತೃ ತ್ವದ ಸರಕಾರ ಶುಕ್ರ ವಾರ ಪ್ರಮಾಣವಚನ ಸ್ವೀಕರಿ ಸಲಿದೆ. ಈ ಬಗ್ಗೆ ಐಜ್ವಾಲ್‌ನಲ್ಲಿ ಬುಧವಾರ ರಾಜ ಭವನದ ಮೂಲ ಗಳು ಮಾಹಿತಿ ನೀಡಿವೆ. ಅವರ ಜತೆಗೆ ಸಂಪುಟದ ಇತರ ಸದಸ್ಯರೂ ಸಚಿವರಾಗಿ ಪ್ರಮಾಣ ಸ್ವೀಕರಿಸಲಿ ದ್ದಾರೆ. ಅದಕ್ಕಿಂತ ಮೊದಲು ಮೈತ್ರಿಕೂಟದ ನಾಯಕ ಲಾಲುªಹೋಮಾ ಅವರು ರಾಜ್ಯಪಾಲ ಡಾ| ಹರಿಬಾಬು ಖಂಬಂಪತಿ ಅವರನ್ನು ಭೇಟಿಯಾಗಿ ಸರಕಾರ ರಚಿಸುವ ಬಗ್ಗೆ ಹಕ್ಕು ಮಂಡಿಸಿದ್ದಾರೆ. ಝಡ್‌ಪಿಎಂನ ಸಲಹಾ ಮಂಡಳಿ ಗುರುವಾರ ಸಭೆ ಸೇರಿ ಸರಕಾರದ ರೂಪುರೇಷೆ ಹೇಗೆ ಇರಬೇಕು ಎಂಬ ಬಗ್ಗೆ ಮಾರ್ಗಸೂಚಿ ಸಿದ್ಧಪಡಿಸಲಿದೆ.
ಹಲವು ಪ್ರಥಮಗಳು: ಮಿಜೋರಾಂನ ಹೊಸ ವಿಧಾನಸಭೆಯಲ್ಲಿ 3 ಮಹಿಳಾ ಶಾಸಕರಿದ್ದಾರೆ. ಐಜ್ವಾಲ್ ದಕ್ಷಿಣ ಕ್ಷೇತ್ರದಿಂದ ಶಾಸಕಿಯಾಗಿರುವ ಬಾಯ್ಲ ವನ್ನಿಸಂಗೈ ರೇಡಿಯೋ ಜಾಕಿಯಾಗಿದ್ದವರು. ಅವರು ಝಡ್‌ಪಿಎಂ ಮೈತ್ರಿಕೂಟಕ್ಕೆ ಸೇರಿದವರು. ಜತೆಗೆ ರಾಜ್ಯದ ಅತ್ಯಂತ ಯುವ ಶಾಸಕಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಅವರಿಗೆ ಇನ್‌ಸ್ಟಾಗ್ರಾಂನಲ್ಲಿ ಸಾಕಷ್ಟು ಮಂದಿ ಫಾಲೋವರ್‌ಗಳೂ ಇದ್ದಾರೆ. ಮತ್ತೂಬ್ಬ ಶಾಸಕಿ ವನ್ಲಾಲಾವುಂಪಿ ಚಾಂಗ್ತು 2014 ರಲ್ಲಿ ನಡೆದಿದ್ದ ಉಪ ಚುನಾ ವಣೆಯಲ್ಲಿ ಆಯ್ಕೆಯಾಗಿದ್ದರು. ಪ್ರಾವೋ ಚಕಾ¾ ಮತ್ತೂಬ್ಬ ಮಹಿಳಾ ಶಾಸಕಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.