Adani: ಗೌತಮ್ ಅದಾನಿ ಆಸ್ತಿ ಮೌಲ್ಯ 12 ಶತಕೋಟಿ ಡಾಲರ್ ಏರಿಕೆ
Team Udayavani, Dec 7, 2023, 12:10 AM IST
ಹೊಸದಿಲ್ಲಿ: ಖ್ಯಾತ ಉದ್ಯಮಿ ಗೌತಮ್ ಅದಾನಿ ಅವರ ನಿವ್ವಳ ಆಸ್ತಿ ಮೌಲ್ಯವು ಒಂದೇ ದಿನ ದಲ್ಲಿ 12 ಶತಕೋಟಿ ಡಾಲರ್ಗಳಷ್ಟು ಏರಿಕೆ ಯಾಗಿದೆ. ಈ ಮೂಲಕ ಅದಾನಿ ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ 7 ಸ್ಥಾನಗಳ ಜಿಗಿತದೊಂದಿಗೆ 15ನೇ ಸ್ಥಾನಕ್ಕೆ ತಲುಪಿ ದ್ದಾರೆ. ಷೇರು ಮಾರುಕಟ್ಟೆ ಯಲ್ಲಿ ಸತತ ಮೂರನೇ ಅವಧಿಯಲ್ಲೂ ಅದಾನಿ ಸಮೂಹ ಸಂಸ್ಥೆಗಳ ಷೇರು ಗಣನೀಯ ವಾಗಿ ಏರಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಅವರ ನಿವ್ವಳ ಆಸ್ತಿ ಮೌಲ್ಯ 82.5 ಶತಕೋಟಿ ಡಾಲರ್ಗಳಿಗೆ ತಲುಪಿದೆ. ಇದರೊಂದಿಗೆ ಭಾರತದ ಅತ್ಯಂತ ಶ್ರೀಮಂತ ರಾಗಿರುವ ಮುಕೇಶ್ ಅಂಬಾನಿ ಅವರಿಗಿಂತ ಕೇವಲ 2 ಸ್ಥಾನ ಗಳಷ್ಟೇ ಅದಾನಿ ಹಿಂದುಳಿದಿದ್ದಾರೆ ಎಂದು ಬ್ಲೂಮ್ಬರ್ಗ್ ಬಿಲಿಯ ನೇರ್ ಇಂಡೆಕ್ಸ್ನಲ್ಲಿ ವರದಿಯಾಗಿದೆ.
ಇನ್ನೊಂದೆರೆಡು ವಹಿವಾಟು ಗಳಲ್ಲಿ ಅದಾನಿ ಸಮೂಹ ಸಂಸ್ಥೆಗಳ ಷೇರು ಇದೇ ರೀತಿಯಲ್ಲಿ ಏರಿಕೆ ದಾಖಲಿಸಿದರೆ ರಿಲಯನ್ಸ್ ಇಂಡ ಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ 91.4 ಶತಕೋಟಿ ಡಾಲರ್ ಆಸ್ತಿಯ ಮೌಲ್ಯವನ್ನು ಅದಾನಿ ಮೀರಿ ಸಲಿದ್ದಾರೆ. ಅದಾನಿ ಗ್ರೂಪ್ಸ್ ಕುರಿತಂತೆ ಹಿಂಡನ್ಬರ್ಗ್ ಮಾಡಿರುವ ಆರೋಪಗಳು, ಅದಾನಿ ಪೋರ್ಟ್ಸ್ ಜತೆಗಿನ ಅಮೆರಿಕದ ಒಪ್ಪಂದಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅಮೆರಿಕ ಮಂಗಳವಾರ ಹೇಳಿತ್ತು. ಅದರ ಪರಿಣಾಮ ಅವರ ಷೇರು ಮೌಲ್ಯದಲ್ಲಾದ ಏರಿಕೆ ಎಂದು ವಿಶ್ಲೇಷಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.