Session: ಅನುದಾನ ಜಟಾಪಟಿ- ಸದನ ಪಾವಿತ್ರ್ಯ ಹಾಳು ಮಾಡಿದ ಮುಖ್ಯಮಂತ್ರಿ ಕ್ಷಮೆಗೆ ಆಗ್ರಹ
ಸುವರ್ಣ ಸೌಧದಲ್ಲಿ ಆಡಳಿತ-ವಿಪಕ್ಷಗಳ ನಡುವೆ ವಾಗ್ವಾದ
Team Udayavani, Dec 7, 2023, 12:43 AM IST
ಬೆಳಗಾವಿ: ಮುಸ್ಲಿಮರಿಗೆ 10 ಸಾವಿರ ಕೋಟಿ ರೂ. ಅನುದಾನ ನೀಡಲಾಗುವುದು ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಜಟಾಪಟಿಗೆ ಕಾರಣವಾಗಿದೆ. ಸರಕಾರದ ಉತ್ತರವನ್ನು ವಿರೋಧಿಸಿ ಬಿಜೆಪಿ ಸದಸ್ಯರು ಸಭಾತ್ಯಾಗ ನಡೆಸಿದರು.
ಬುಧವಾರ ಪ್ರಶ್ನೋತ್ತರ ಕಲಾಪ ಮುಗಿಯುತ್ತಿದ್ದಂತೆ ವಿಷಯ ಪ್ರಸ್ತಾವಿಸಿದ ಬಿಜೆಪಿಯ ವಿ. ಸುನಿಲ್‌ಕುಮಾರ್, ಅಧಿವೇಶನ ನಡೆಯುತ್ತಿರು ವಾಗ ಸಚಿವರು ಯಾವುದೇ ಹೊಸ ಯೋಜನೆ ಘೋಷಿಸುವಂತಿಲ್ಲ. ಹೀಗಿದ್ದರೂ ಮುಖ್ಯಮಂತ್ರಿಗಳು 10 ಸಾವಿರ ಕೋಟಿ ರೂ. ಕೊಡುವುದಾಗಿ ಘೋಷಿಸಿದ್ದಾರೆ. ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಯಾವುದೇ ಸಮುದಾಯಕ್ಕೆ ಅನುದಾನ ಕೊಡಲು ಇವರ ಅನುಮತಿ ಪಡೆಯಬೇಕೇ? ಇಲ್ಲಿಗೆ ಅಧಿಕೃತವಾಗಿ ವಿಚಾರ ತಂದಾಗ ವಿರೋಧಿಸುತ್ತೀರೋ? ಬಿಡುತ್ತೀರೋ ತೀರ್ಮಾನಿಸಿ. ಸಿಎಂ ಹೇಳಿಕೆಯಲ್ಲಿ ಸಮಸ್ಯೆ ಏನಿದೆ ಎಂದು ಮರು ಪ್ರಶ್ನಿಸಿದರು.
ರೈತರಿಗೆ ಕೊಡಲು ಹಣ ಇಲ್ಲ
ಇದರಿಂದ ಆಡಳಿತ-ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಬರಗಾಲದಲ್ಲಿ ರೈತರಿಗೆ ಕೊಡಲು ನಿಮ್ಮ ಸರಕಾರದಲ್ಲಿ ಹಣ ಇಲ್ಲ. ಆದರೆ ಸಮುದಾಯಗಳಿಗೆ ಹಣ ಕೊಡಲು ಇದೆಯೇ ಎಂದು ಬಿಜೆಪಿ ಸದಸ್ಯರು ತರಾಟೆಗೆ ತೆಗೆದುಕೊಂಡಾಗ, ಹಿಂದೆ ನೀವೂ ಇದನ್ನೇ ಮಾಡಿದ್ದು ಎಂದು ಆಡಳಿತಾರೂಢ ಶಾಸಕರು ತಿರುಗೇಟು ನೀಡಿದರು.
ಬಳಿಕ ಉತ್ತರಿಸಲು ಎದ್ದುನಿಂತ ಸಚಿವ ಎಚ್.ಕೆ. ಪಾಟೀಲ್, “ಸಿಎಂ ಇದ್ದ ಸಭೆಯಲ್ಲಿ ನಾನೂ ಇದ್ದೆ. ಮಾಹಿತಿ ಕೊರತೆಯಿಂದ ಆರೋಪಿಸ ಬೇಡಿ. ಈ ಬಜೆಟ್‌ನಲ್ಲಿ ಇರುವ ಅನುದಾನವನ್ನು ಎರಡು ಪಟ್ಟು ಹೆಚ್ಚಿಸುತ್ತೇವೆ. ನಿಮ್ಮ ಸಮುದಾಯಕ್ಕೆ 10 ಸಾವಿರ ಕೋಟಿ ರೂ.ವರೆಗೂ ಅನುದಾನದ ಪ್ರಮಾಣವನ್ನು ತಲುಪಿಸುತ್ತೇವೆ ಎಂದಷ್ಟೇ ಹೇಳಿದ್ದಾರೆ. ಈ ವರ್ಷವೇ 10 ಸಾವಿರ ಕೋಟಿ ರೂ. ಕೊಡುತ್ತೇವೆ ಎಂದಿಲ್ಲ. ಇದರಲ್ಲಿ ಹಕ್ಕುಚ್ಯುತಿ ಆಗುವಂಥದ್ದು ಏನಿದೆ’ ಎಂದು ಪ್ರಶ್ನಿಸಿದರು.
ಸಿಎಂ ಮಾತಿಗೆ ಅಡ್ಡಿಪಡಿಸಲೂ ಗೊತ್ತಿದೆ: ಅಶೋಕ್
ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, “ನಾವು ಕೂಡ ಮಂತ್ರಿಗಳಾಗಿದ್ದವರು. ಸದನ ನಡೆಯುತ್ತಿರುವಾಗ ಇಂಥ ಘೋಷಣೆ ಮಾಡುತ್ತಿರಲಿಲ್ಲ. ಸಿಎಂನ ವೀಡಿಯೋವನ್ನು ನಾನು ಸ್ಪಷ್ಟವಾಗಿ ಗಮನಿಸಿ ದ್ದೇನೆ. ಮುಂದಿನ ವರ್ಷಗಳಲ್ಲಿ ಅನುದಾನ ಕೊಡುವುದಾಗಿ ಹೇಳಿದ್ದಲ್ಲ. 10 ಸಾವಿರ ಕೋಟಿ ರೂ.ಗಳನ್ನು ಕೊಡುತ್ತೇನೆ ಎಂದೇ ಹೇಳಿದ್ದಾರೆ’ ಎಂದು ಹೇಳಿದರು. ತನ್ನ ಮಾತಿಗೆ ವಿಪಕ್ಷಗಳು ಅಡ್ಡಿಪಡಿಸಿದಾಗ, ನಿಮ್ಮ ನಾಯಕ ಸಿದ್ದರಾಮಯ್ಯ ಮಾತನಾಡುವಾಗ ಅಡ್ಡಿ ಮಾಡಲು ನಮಗೂ ಗೊತ್ತಿದೆ ಎಂದು ಅಶೋಕ್ ಆಕ್ರೋಶದಿಂದ ಹೇಳಿದರು.
ಹೇಳಿಕೆ ಸರಿಯಾಗಿ ಪ್ರಕಟಿಸಿಲ್ಲ: ಸಿಎಂ ಗರಂ
ಮುಸ್ಲಿಮರಿಗೆ ಅನುದಾನ ಹಂಚಿಕೆ ವಿಚಾರದಲ್ಲಿ ನನ್ನ ಹೇಳಿಕೆ ಯನ್ನು ಮಾಧ್ಯಮಗಳು ಸರಿಯಾಗಿ ಪ್ರಕಟಿಸದ ಕಾರಣ ಅದು ಚರ್ಚೆಗೆ ಗ್ರಾಸವಾಗಿದೆ. ಮುಸ್ಲಿಂ ಸಹಿತ ಎಲ್ಲ ಸಮುದಾಯದವರಿಗೆ ಅನುದಾನ ನೀಡುತ್ತೇನೆ ಎಂದಿದ್ದೆನಷ್ಟೆ ಎಂದು ಸಿಎಂ ಹೇಳಿದ್ದಾರೆ.
ಎನ್‌ಐಎ ತನಿಖೆ ಕೋರಿ ಅಮಿತ್ ಶಾಗೆ ಯತ್ನಾಳ್ ಪತ್ರ
ಭಯೋತ್ಪಾದಕ ಸಂಘಟನೆ ಐಎಸ್ ಬಗ್ಗೆ ಸಹಾನು ಭೂತಿ ಹೊಂದಿರುವ ಮುಸ್ಲಿಂ ನಾಯಕ ತನ್ವೀರ್ ಪೀರಾ ಜತೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವೇದಿಕೆ ಹಂಚಿಕೊಂಡಿರುವುದು
ರಾಷ್ಟ್ರೀಯ ಆತಂಕದ ವಿಷಯ. ಈ ಬಗ್ಗೆ ಎನ್‌ಐಎಯಿಂದ ತನಿಖೆ ನಡೆಸಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಆರ್. ಪಾಟೀಲ್ ಯತ್ನಾಳ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ಕೋರಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದಿದ್ದ ಮುಸ್ಲಿಂ ಸಮುದಾಯದ ಸಭೆ ಸಹಿತ ಹಲವು ಸಭೆ, ಸಮಾರಂಭಗಳಲ್ಲಿ ತನ್ವೀರ್ ಪೀರಾ ಜತೆಗೆ ಸಿಎಂ ವೇದಿಕೆ ಹಂಚಿಕೊಂಡಿದ್ದರು. ಹಲವು ಕಾರ್ಯಕ್ರಮಗಳಲ್ಲಿ ಸಿದ್ದರಾಮಯ್ಯ ಜತೆ ಪೀರಾ ಇರುವ ಹಾಗೂ ಪೀರಾ ಮೂಲಭೂತವಾದಿ ನಾಯಕರನ್ನು ಭೇಟಿಯಾಗಿರುವ ಪೋಟೋಗಳನ್ನು ಯತ್ನಾಳ್ “ಎಕ್ಸ್” ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಮಧ್ಯ ಪ್ರಾಚ್ಯ ದೇಶಗಳಲ್ಲಿ ತನ್ವೀರ್ ಪೀರಾ ಮೂಲಭೂತವಾದಿ ಇಸ್ಲಾಮಿಕ್ ಸಂಘಟನೆಗಳ ನಾಯಕರನ್ನು ಭೇಟಿಯಾಗಿರುವ ಮಾಹಿತಿ ನನಗೆ ಸಿಕ್ಕಿದೆ. ನಮ್ಮ ದೇಶದಲ್ಲಿ ಅಶಾಂತಿ ಸೃಷ್ಟಿಸಲು ಮುಸ್ಲಿಂ ದೇಶಗಳಿಂದ ಪೀರಾ ನಿಧಿ ತರುತ್ತಿರುವ ಬಗ್ಗೆ ವಿಶ್ವಾಸಾರ್ಹ ಮಾಹಿತಿ ನನಗೆ ಸಿಕ್ಕಿದೆ ಎಂದು ಪತ್ರದಲ್ಲಿ ಯತ್ನಾಳ್ ಉಲ್ಲೇಖೀಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.