LLC; ಮೈದಾನದಲ್ಲಿ ಗಂಭೀರ್- ಶ್ರೀಶಾಂತ್ ಜಗಳ; ಆರೋಪಗಳ ಸುರಿಮಳೆಗೈದ ವೇಗಿ
Team Udayavani, Dec 7, 2023, 10:56 AM IST
ಸೂರತ್: ಇಲ್ಲಿ ನಡೆಯುತ್ತಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್ 2023 ಕೂಟದಲ್ಲಿ ಇಂಡಿಯಾ ಕ್ಯಾಪಿಟಲ್ಸ್ ಮತ್ತು ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯವು ಮಾಜಿ ಆಟಗಾರರ ಸೆಣಸಾಟಕ್ಕೆ ಸಾಕ್ಷಿಯಾಗಿದೆ. ಗೌತಮ್ ಗಂಭೀರ್ ಮತ್ತು ಎಸ್.ಶ್ರೀಶಾಂತ್ ಜಗಳವಾಡಿಕೊಂಡಿದ್ದು, ಪಂದ್ಯದ ಬಳಿಕ ವೇಗಿಯು ಕ್ಯಾಪಿಟಲ್ಸ್ ನಾಯಕನ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.
ಬುಧವಾರ ಸೂರತ್ ನ ಲಾಲಭಾಯ್ ಕಾಂಟ್ರಾಕ್ಟರ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಈ ಘಟನೆ ನಡೆದಿದೆ.
ಗಂಭೀರ್ ಬ್ಯಾಟಿಂಗ್ ಮಾಡುವಾಗ, ಅವರು ಶ್ರೀಶಾಂತ್ ಅವರೊಂದಿಗೆ ತೀವ್ರ ವಾಗ್ವಾದದಲ್ಲಿ ತೊಡಗಿದ್ದರು, ನಂತರ ಅಂಪೈರ್ ಗಳು ಮತ್ತು ಸಹ ಆಟಗಾರರು ಮಧ್ಯಪ್ರವೇಶಿಸಬೇಕಾಯಿತು.
ಪಂದ್ಯದ ಬಳಿಕ ಮಾತನಾಡಿದ ಶ್ರೀಶಾಂತ್, ಯಾವುದೇ ಕಾರಣವಿಲ್ಲದೆ ಗಂಭೀರ್ ತನ್ನನ್ನು ಕೆಣಕಿದ್ದರು. ಸಹ ಆಟಗಾರರನ್ನು ಗೌರವಿಸಿದ ಗಂಭೀರ್ ನಡೆಯಿಂದ ಬೇಸರವಾಗಿದೆ ಎಂದು ಹೇಳಿದ್ದಾರೆ.
Sreesanth and Gambhir in an animated chat during the @llct20 Eliminator!#LegendsLeagueCricket #CricketTwitter
— Adhirajsinh Jadeja AJ 🇮🇳 (@AdhirajHJadeja) December 7, 2023
“ಯಾವುದೇ ಕಾರಣವಿಲ್ಲದೆ ಯಾವಾಗಲೂ ತನ್ನ ಎಲ್ಲಾ ಸಹ ಆಟಗಾರರೊಂದಿಗೆ ಜಗಳವಾಡುವ ಮಿಸ್ಟರ್ ಫೈಟರ್ ನೊಂದಿಗೆ ಏನಾಯಿತು ಎಂಬುದರ ಕುರಿತು ತಿಳಿಸಲು ನಾನು ಬಯಸುತ್ತೇನೆ. ಅವರು ವೀರೂ ಭಾಯ್ ಮತ್ತು ಬಹಳಷ್ಟು ಜನರನ್ನು ಒಳಗೊಂಡಂತೆ ತಮ್ಮದೇ ಆದ ಹಿರಿಯ ಆಟಗಾರರನ್ನು ಸಹ ಗೌರವಿಸುವುದಿಲ್ಲ. ಅಂತಹುದೇ ಇಂದು ಸಂಭವಿಸಿದೆ. ಯಾವುದೇ ಪ್ರಚೋದನೆಯಿಲ್ಲದೆ, ಅವರು ನನ್ನನ್ನು ರೇಗಿಸುತ್ತಿದ್ದರು, ಇದು ತುಂಬಾ ಅಸಭ್ಯವಾಗಿತ್ತು” ಎಂದಿದ್ದಾರೆ.
“ಇದರಲ್ಲಿ ನನ್ನದೇನು ತಪ್ಪಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ. ಅವರು ಬಳಸಿದ ಪದಗಳು ಮತ್ತು ಕ್ರಿಕೆಟ್ ಮೈದಾನದಲ್ಲಿ ಅವರು ಹೇಳಿದ ಮಾತುಗಳು ಸ್ವೀಕಾರಾರ್ಹವಲ್ಲ ”ಎಂದು ಪಂದ್ಯದ ನಂತರ ಶ್ರೀಶಾಂತ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Singapore: ಇಂದಿನಿಂದ ವಿಶ್ವ ಚೆಸ್: ಗುಕೇಶ್-ಲಿರೆನ್ ಮುಖಾಮುಖಿ
Australia: ಪರ್ತ್‌ಗೆ ಆಗಮಿಸಿದ ರೋಹಿತ್ ಶರ್ಮ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.