Kalaburagi; ಮಣಿಕಂಠ ರಾಠೋಡ ಬಂಧನ: ಸುದ್ದಿಗೋಷ್ಠಿ ತಯಾರಿ ವೇಳೆ ಮನೆ ಮೇಲೆ ಪೊಲೀಸ್ ದಾಳಿ
Team Udayavani, Dec 7, 2023, 12:40 PM IST
ಕಲಬುರಗಿ: ನಗರದಲ್ಲಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡನನ್ನು ಪೋಲಿಸರು ವಶಕ್ಕೆ ಪಡೆದಿದ್ದು, ಇದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಬುಧವಾರ ಮಣಿಕಂಠ ತನ್ನ ಮೇಲೆ ಹಲ್ಲೆಯಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದು ಅದಕ್ಕೆ ಆತನೇ ಕಥಾನಾಯಕ ಎಂದು ಸಾಕ್ಷಿಗಳನ್ನು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರು ಪಡಿಸುವ ಮೂಲಕ ನಾಟಕ ಬಯಲು ಮಾಡಿದ್ದರು.
ಅಲ್ಲದೆ ಸಚಿವ ಪ್ರಿಯಾಂಕ್ ಖರ್ಗೆ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ಮಾಡಿ ಮಣಿಕಂಠನ ಹಲ್ಲೆ ಡ್ರಾಮಾ ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ. ಈ ಕುರಿತು ಸಾಕ್ಷ್ಯಗಳಿವೆ. ಬಿಜೆಪಿ ನಾಯಕರು ಇದನ್ನೆಲ್ಲಾ ಬೆಂಬಲಿಸಿದ್ದರು. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದರು.
ಗುರುವಾರ ಹಲ್ಲೆಯ ಕುರಿತು ಸುದ್ದಿಗೋಷ್ಠಿ ಮಾಡಿ ನಿಜವಾದ ಬಣ್ಣ ಬಯಲು ಮಾಡುವುದಾಗಿ, ಪೊಲೀಸರ ತನಿಖೆಯ ನಿಜಾಂಶ ಬಯಲು ಮಾಡಲು ಮುಂದಾಗಿದ್ದರು. ಪೊಲೀಸರು ಬೆಳಗ್ಗೆ ಪತ್ರಿಕಾ ಭವನದಲ್ಲಿ ಪಹರೆ ಹಾಕಿದ್ದರು. ಇದನ್ನು ಅರಿತು ಪತ್ರಿಕಾಗೋಷ್ಠಿಯ ಸ್ಥಳ ಬದಲಿಸಿದ್ದ ಮಣಿಕಂಠನನ್ನು ಆತನ ಭಾರತ್ ಪ್ರೈಡ್ ಅಪಾರ್ಟ್ಮೆಂಟ್ ನಲ್ಲಿ ಸುದ್ದಿಗೋಷ್ಠಿ ಮಾಡಲು ತಯಾರಿ ಮಾಡುತ್ತಿದ್ದಾಗಲೇ ಚೌಕ್ ಪೊಲೀಸ್ ಠಾಣೆಯ ಸಿಪಿಐ ನೇತೃತ್ವದ ತಂಡ ಬಂಧಿಸಿ ಕರೆದೊಯ್ದಿದೆ ಎಂದು ಮೂಲಗಳು ತಿಳಿಸಿವೆ.
ಬಂಧನವನ್ನು ಪ್ರಶ್ನಿಸಿದ ಮಣಿಕಂಠ ಯಾವ ಕಾರಣಕ್ಕೆ ತನ್ನನ್ನು ಬಂಧಿಸುವುದಾಗಿ ಪ್ರಶ್ನಿಸಿ ರಂಪಾಟ ಮಾಡಿದ ಘಟನೆಯೂ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.