Athi I Love You…; ಫ್ಯಾಮಿಲಿಗೆ ಇಷ್ಟವಾಗೋ ಸಿನಿಮಾ
Team Udayavani, Dec 7, 2023, 1:59 PM IST
ಲೋಕೇಂದ್ರ ಸೂರ್ಯ ಮತ್ತು ಸಾತ್ವಿಕಾ ರಾವ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ “ಆಥಿ ಐ ಲವ್ ಯು’ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಈಗಾಗಲೇ ತನ್ನ ಟೈಟಲ್, ಟ್ರೇಲರ್ ಮೂಲಕ ಗಮನ ಸೆಳೆಯುತ್ತಿರುವ “ಆಥಿ ಐ ಲವ್ ಯು’ ಸಿನಿಮಾದ ಬಗ್ಗೆ ನಟ ಕಂ ನಿರ್ದೇಶಕ ಲೋಕೇಂದ್ರ ಸೂರ್ಯ ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ.
“ಆಥಿ ಐ ಲವ್ ಯು’ ಸಿನಿಮಾದ ವಿಶೇಷತೆಯೇನು?
ಈ ಸಿನಿಮಾ ಅಥಿ ಹಾಗೂ ವಸಂತ್ ಎಂಬ ಕೇವಲ ಎರಡು ಪಾತ್ರಗಳ ಸುತ್ತ ನಡೆಯುತ್ತದೆ. ಇಡೀ ಸಿನಿಮಾದಲ್ಲಿ ಕೇವಲ ಎರಡು ಪಾತ್ರಗಳು ಮಾತ್ರ ತೆರೆಮೇಲೆ ಕಾಣುತ್ತವೆ. ಉಳಿದ ಪಾತ್ರಗಳು ಕೇವಲ ಧ್ವನಿಯಾಗಿ ಸಿನಿಮಾದಲ್ಲಿದೆ. ಒಂದೇ ದಿನ, ಒಂದೇ ಲೊಕೇಶನ್ ಮತ್ತು ಎರಡು ಪಾತ್ರಗಳಲ್ಲಿ ಇಡೀ ಸಿನಿಮಾ ಸಸ್ಪೆನ್ಸ್-ಥ್ರಿಲ್ಲಿಂಗ್ ಆಗಿ ನಡೆಯುತ್ತದೆ.
“ಆಥಿ’ ಸಿನಿಮಾದ ಕಥೆಯಲ್ಲಿ ಅಂಥದ್ದೇನಿದೆ?
ಇದು ಒಂದು ದಿನದಲ್ಲಿ ನಡೆಯುವ ಕಥೆ. ಪ್ರತಿದಿನ ಬೆಳಗ್ಗೆ ಕೆಲಸಕ್ಕೆ ಹೋಗುವ ಗಂಡ ದಿನ ರಾತ್ರಿ ವಾಪಸು ಬರುತ್ತಾನೆ. ಒಂದು ದಿನ ಇದಕ್ಕಿದ್ದಂತೆ ಗಂಡ ಮಧ್ಯಾಹ್ನ ಮನೆಗೆ ಬಂದಾಗ ಮನೆಯಲ್ಲಿ ಹೆಂಡತಿ ಏನು ಮಾಡುತ್ತಿರುತ್ತಾಳೆ? ಎಂಬುದೇ ಸಿನಿಮಾದ ಕಥೆಯ ಒಂದು ಎಳೆ. ನೋಡುಗರು ನಿರೀಕ್ಷಿಸುವುದಕ್ಕಿಂತ, ಬೇರೇನೋ ಅಲ್ಲಿ ತೆರೆದುಕೊಳ್ಳುತ್ತದೆ. ಅದೇನು ಎಂಬುದನ್ನು ತೆರೆಯ ಮೇಲೆ ನೋಡಬೇಕು.
ಯಾವ ಥರದ ಆಡಿಯನ್ಸ್‌ಗೆ “ಆಥಿ’ ಇಷ್ಟವಾಗುತ್ತದೆ?
ಇದು ಎಲ್ಲ ಥರದ ಆಡಿಯನ್ಸ್‌ಗೂ ಇಷ್ಟವಾಗುವ ಸಿನಿಮಾ. ಪ್ರೇಮಿಗಳು, ಮದುವೆಯಾದವರು, ಪೋಷಕರು ಎಲ್ಲರೂ ಕೂತು ನೋಡುವಂಥ ಸಿನಿಮಾ ಮಾಡಿದ್ದೇವೆ. ಸಿನಿಮಾದಲ್ಲಿ ಸಮಾಜಕ್ಕೆ ಒಂದೊಳ್ಳೆ ಉತ್ತಮ ಸಂದೇಶ ಕೊಡುವ ಪ್ರಯತ್ನ ಮಾಡಿದ್ದೇವೆ. ನೋಡುವ ಪ್ರತಿಯೊಬ್ಬರಿಗೂ “ಆಥಿ’ ಸಿನಿಮಾ ಬಹುಬೇಗ ಕನೆಕ್ಟ್ ಆಗುತ್ತದೆ ಎಂಬ ವಿಶ್ವಾಸವಿದೆ.
ಪ್ರಚಾರದ ವೇಳೆ “ಆಥಿ’ಗೆ ರೆಸ್ಪಾನ್ಸ್ ಹೇಗಿದೆ?
ತುಂಬ ಚೆನ್ನಾಗಿದೆ. ಈಗಾಗಲೇ “ಅಥಿ ಐ ಲವ್ ಯು’ ಸಿನಿಮಾದ ಹಾಡುಗಳಿಗೆ, ಟೀಸರ್ ಮತ್ತು ಟ್ರೇಲರ್ ಎಲ್ಲದಕ್ಕೂ ಆಡಿಯನ್ಸ್ ಕಡೆಯಿಂದ ತುಂಬ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಹೊಸ ಥರದ ಪ್ರಮೋಶನ್ಸ್ ಪೋಸ್ಟರ್‌ಗಳು ಆಡಿಯನ್ಸ್ ಗಮನ ಸೆಳೆಯುತ್ತಿದೆ. ಸಿನಿಮಾದ ಬಗ್ಗೆ ಆಡಿಯನ್ಸ್ ಕೂಡ ನಿರೀಕ್ಷೆಯ ಮಾತುಗಳನ್ನಾಡುತ್ತಿದ್ದಾರೆ.
ಸಿನಿಮಾದ ಒಟ್ಟಾರೆ ಅನುಭವ ಹೇಗಿತ್ತು?
ನಿರ್ಮಪಕ ಸೆವೆನ್ ರಾಜ್ ತುಂಬ ಒಳ್ಳೆಯ ಕಥೆಗೆ ಬಂಡವಾಳ ಹೂಡಿ, ಎಲ್ಲೂ ರಾಜಿಯಾಗದಂತೆ ಸಿನಿಮಾ ನಿರ್ಮಿಸಿದ್ದಾರೆ. ಸಾತ್ವಿಕಾ ರಾವ್ ತಮ್ಮ ಪಾತ್ರವನ್ನು ತುಂಬ ಚೆನ್ನಾಗಿ ನಿಭಾಯಿಸಿದ್ದಾರೆ. ಸಿನಿಮಾಕ್ಕೆ ಒಪ್ಪುವಂಥ ಸಂಗೀತವನ್ನು ಅನಂತ್ ಆರ್ಯನ್ ಸಂಯೋಜಿಸಿದ್ದಾರೆ. ಇಡೀ ಚಿತ್ರತಂಡದ ಪರಿಶ್ರಮದಿಂದ ಒಂದೊಳ್ಳೆಯ ಸಿನಿಮಾ ಮಾಡಿದ್ದೇವೆ. “ಅಥಿ ಐ ಲವ್ ಯು’ ಸಾಕಷ್ಟು ಕಲಿಸಿದೆ. ಒಳ್ಳೆಯ ಅನುಭವ ಕೊಟ್ಟಿದೆ.
ಸಿನಿಮಾ ನೋಡಿದ ದಂಪತಿಗಳಿಗೆ ಗೋವಾ ಟ್ರಿಪ್!
ಟಿಕೆಟ್ ಕೊಂಡು ಸಿನಿಮಾವೀಕ್ಷಿಸುವ ಏಳು ಜನ ದಂಪತಿಗಳಿಗೆ ಗೋವಾ ಟ್ರಿಪ್ ಆಫರ್ ನೀಡಿದೆ “ಅಥಿ ಐ ಲವ್ ಯು’ ಚಿತ್ರತಂಡ. ಥಿಯೇಟರ್‌ನಲ್ಲಿ ಗಂಡ ಟಿಕೆಟ್ ತೆಗೆದುಕೊಂಡರೆ ಹೆಂಡತಿಗೆ ಟಿಕೆಟ್ ಉಚಿತ ಹಾಗೂ ಹೆಂಡತಿ ಟಿಕೆಟ್ ತೆಗೆದುಕೊಂಡರೆ ಗಂಡನಿಗೆ ಉಚಿತವಾಗಿ ಸಿನಿಮಾ ತೋರಿಸುವ ಯೋಜನೆ ಹಾಕಿಕೊಂಡಿರುವ ಚಿತ್ರತಂಡ, ಅಂತಿಮವಾಗಿ “ಅಥಿ ಐ ಲವ್ ಯು’ ಸಿನಿಮಾ ನೋಡಿದ ಏಳು ಅದೃಷ್ಟಶಾಲಿ ದಂಪತಿಗಳಿಗೆ ಮೂರು ದಿನಗಳ ಕಾಲ ಗೋವಾ ಟ್ರಿಪ್ ಮಾಡಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.