Goravanahalli; ಶ್ರೀಮಹಾಲಕ್ಷ್ಮೀ ಬೆಳ್ಳಿ ರಥೋತ್ಸವಕ್ಕೆ ಹನುಮಂತನಾಥ ಸ್ವಾಮೀಜಿ ಚಾಲನೆ
ಗೊರವನಹಳ್ಳಿ ಮಹಾಲಕ್ಷ್ಮೀ ಟ್ರಸ್ಟ್ ಧಾರ್ಮಿಕ ಮತ್ತು ಸಮಾಜಿಕ ಕ್ಷೇತ್ರದಲ್ಲೂ ಸೇವೆ
Team Udayavani, Dec 8, 2023, 7:57 PM IST
ಕೊರಟಗೆರೆ: ನಾಡಿನ ಸುಪ್ರಸಿದ್ದ ಪುಣ್ಯಕ್ಷೇತ್ರವಾದ ಗೊರವನಹಳ್ಳಿ ಶ್ರೀ ಮಹಾಲಲಕ್ಷ್ಮೀ ಕ್ಷೇತ್ರದ ಅಧಿದೇವತೆ ಮಹಾಲಕ್ಷ್ಮೀ ಭಕ್ತರ ಇಷ್ಠಾರ್ಥ ನೇರವೇಸುತ್ತಿದ್ದು ಇದರೊಂದಿಗೆ ದೇವಾಲಯದ ಆಡಳಿತ ಮಂಡಳಿ ಶ್ರೀ ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಕ್ರಮದೊಂದಿಗೆ ಅನ್ನದಾನ, ವಿದ್ಯಾದಾನ ಮತ್ತು ವೈದ್ಯಕೀಯ ಸೇವೆ ಸಲ್ಲಿಸುವ ಮೂಲಕ ತಮ್ಮದೇ ಆದ ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ಎಲೆರಾಂಪುರ ಕುಂಚಿಟಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಶ್ರೀ ಡಾ.ಹನುಮಂತನಾಥಸ್ವಾಮೀಜಿ ತಿಳಿಸಿದರು.
ಅವರು ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇವಾಲಯದಲ್ಲಿ ಕಾರ್ತಿಕ ಮಾಸದಲ್ಲಿ ಏರ್ಪಡಿಸಿದ್ದ ಬ್ರಹ್ಮರಥೋತ್ಸವ ಏಳೆಯುವ ಮೂಲಕ ಸಂಜೆ ನಡೆಯುವ ಲಕ್ಷ ದೀಪೋತ್ಸವ ಹಾಗೂ ಬೆಳ್ಳಿ ಪಲ್ಲಕ್ಕೆ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ಶ್ರೀ ಕ್ಷೇತ್ರವು ದೇಶದಲ್ಲಿಯೇ ಸುಪ್ರಸಿದ್ದವಾಗಿದ್ದು, ದೇವಾಲಯದ ಆಡಲಿತ ಮಂಡಳಿಯ ಜನಪರ ಸೇವೆಯಿಂದ ಶ್ರೀ ಕ್ಷೇತ್ರವು ಎತ್ತರಕ್ಕೆ ಬೆಳೆದಿದ್ದು, ಮಹಾಲಕ್ಷ್ಮೀಯ ಆಶ್ರೀರ್ವಾದ ದಿಂದ ನಡೆಯುತ್ತಿರುವ ಮಹಾಲಕ್ಷ್ಮೀ ಸೇವಾಟ್ರಸ್ಟ್ನ ಸೇವಾ ಕಾರ್ಯಕ್ರಮದ ಜತೆಯಲ್ಲಿ ಗ್ರಾಮೀಣ ಬಡ ಜನತೆಯ ಮಕ್ಕಳ ಶೈಕ್ಷಣಿಕ ಅಭಿವೃದ್ದಿ ಹಾಗೂ ಸಾರ್ವಜನಿಕರ ಆರೋಗ್ಯ ಸೇವೆ ದೊರೆಯಲಿ ಎಂದರು.
ದೇವಾಲಯದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದಿಂದ ನಾಡಿನಲ್ಲಿ ಮಳೆಇ ಲ್ಲದೆ ತಲೆದೋರಿರುವ ಬರದ ಛಾಯೆಯನ್ನು ಹೋಗಲಾಡಿಸಿ ಸುಭಿಕ್ಷ ಮಳೆ-ಬೆಳೆ ಯಾಗುವಂತೆ ದೇವಿ ಆಶ್ರೀರ್ವದಿಸಲಿ ಎಂದು ಪ್ರಾರ್ಥಿಸಿದರು.
ಮಧುಗಿರಿ ತಗ್ಗಿಹಳ್ಳಿ ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷ ರಾಮನಂದಜೀ ಮಹಾರಾಜ್ ಮಾತನಾಡಿ, ಮನುಷ್ಯನು ದೇವಾಲಯಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಮನುಷ್ಯನಿಗೆ ಆರಿವು, ಆರೋಗ್ಯ ಮತ್ತು ಆಯುಷ್ಯ ವೃದ್ದಿಯಾಗುವುದರೊಂದಿಗೆ ಬೌತಿಕ ಬದುಕು ಸಂಪತ್ತಿನಷ್ಟೆ ಉಜ್ವಲಗೊಳುತ್ತದೆ, ಸಂಪತ್ತಿನ ಜತೆ ಜ್ಞಾನದ ಅರಿವಿನೋಂದಿಗೆ ಧಾರ್ಮಿಕ ಭಾವನೆಗಳನ್ನು ಸಂಪಾದಿಸಿಕೊಂಡು ಸಮಾಜದಲ್ಲಿ ಆದರ್ಶಗಳ ಪರಿಪಾಲನೆ ಮಾಡುವ ಮೂಲಕ ಜೀವನ ಉಜ್ವಲಗೊಳಿಸಿಕೊಳ್ಳಬೇಕು ಎಂದು ತಿಳಿಸಿದರು.
ಗೊರವನಹಳ್ಳಿ ಮಹಾಲಕ್ಷ್ಮೀ ಸೇವಾ ಟ್ರಸ್ಟ್ನ ಅಧ್ಯಕ್ಷ ಬಿ.ಜಿ.ವಾಸುದೇವ್ ಮತ್ತು ಕಾರ್ಯದರ್ಶಿ ಆರ್.ಮುರಳೀಕೃಷ್ಣ ಮಾಹಿತಿ ನೀಡಿ ದೇವಲಯ ಟ್ರಸ್ಟ್ ಮತ್ತು ಭಕ್ತಾಧಿಗಳ ಸಹಕಾರೊಂದಿಗೆ ಇತ್ತೀಚೆಗೆ ೧೨ ಕೋಟಿ ರೂ ವೆಚ್ಚದಲ್ಲಿ ಸುಸರ್ಜಿತ ಮಹಾಲಕ್ಷ್ಮೀ ದಾಸೋಹ ಭವನ ನಿರ್ಮಿಸಿ ದೇವಾಲಯಕ್ಕೆ ಬರುವ ಭಕ್ತರಿಗೆ ಏಕಕಾಲದಲ್ಲಿ ೧ ಸಾವಿರ ಮಂದಿ ಭಕ್ತರಿಗೆ ಊಟ ನೀಡುವ ಸ್ಥಳಾವಕಾಶವಿರುವ ದಾಸೋಹ ಭವನ ಲೋಕಾರ್ಪಣೆ ಮಾಡಲಾಗಿದೆ ಹಾಗೂ ಭಕ್ತರ ಸಹಕಾರದಿಂದ ಮಹಾಲಕ್ಷ್ಮೀ ದೇವಿಯ ಗರ್ಭಗುಡಿಗೆ ಪಂಚಲೋಹದ ಚಿನ್ನದ ಲೇಪನ ಮತ್ತು ಗೋಪುರಕ್ಕೆ ಚಿನ್ನದ ಕಲಶ ಪ್ರತಿಷ್ಠಾಪಿಸಲಾಗಿದೆ, ದೇವಾಲಯದ ಸುತ್ತಲೂ ಸಿಸಿ ರಸ್ತೆ, ಹೈಟೆಕ್ ಶೌಚಾಲಯ ನಿಮಾರ್ಣ, ಭಕ್ತರ ಸುರಕ್ಷತೆಗಾಗಿ ದಿನದ ೨೪ ಗಂಟೆಗಳೂ ಸಿಸಿ ಟಿವಿ ಕ್ಯಾಮರಾಗಳು ಆಳವಡಿ ಸಲಾಗಿದೆ ಇದರೊಂದಿಗೆ ಸುತ್ತಮುತ್ತ ರೈತ ಕುಟುಂಬಗಳ ಮಕ್ಕಳ ಶೈಕ್ಷಣಿಕ ಅಭಿವೃಧ್ದಿಗಾಗಿ ವಿದ್ಯಾಸಂಸ್ಥೆ ಸ್ಥಾಪಿಸಿ ಉಚಿತ ಶಿಕ್ಷಣ ನೀಡುವ ವ್ಯವಸ್ಥೆ, ಪ್ರತಿ ತಿಂಗಳು ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ಮತ್ತು ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರಗಳು ನಡೆಸುವುದರೊಂದಿಗೆ ದೇವಾಲಯದ ಆವರಣದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಯಲಹಂಕ ಚೊಕ್ಕನಹಳ್ಳಿ ಕಾಳಿಪೀಠ ಮಹಾಸಂಸ್ಥಾನ ಮಠದ ಅರುಣ್‌ಗುರುಜೀ ಆಶ್ರೀರ್ವಾಚನ ನೀಡಿದರು, ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮಂಜುನಾಥ್, ಸಿಪಿಐ ಅನಿಲ್, ಕೊರಟಗೆರೆ ಪಿಎಸೈ ಚೇತನ್‌ಕುಮಾರ್, ಕೋಳಾಲ ಠಾಣೆಯ ಪಿಎಸೈ ಯೋಗಿಶ್, ದೇವಾಲಯ ಟ್ರಸ್ಟ್ನ ಕಾರ್ಯದರ್ಶಿ ಆರ್.ಮುರಳೀಕೃಷ್ಣ, ಖಜಾಂಚಿ ಆರ್. ಜಗದೀಶ್, ಧರ್ಮದರ್ಶಿಗಳಾದ ಡಾ.ಲಕ್ಷ್ಮೀಕಾಂತ ಟಿ.ಎಸ್, ಟಿಆರ್.ನಟರಾಜು, ಎಸ್.ಶ್ರೀಪ್ರಸಾದ್, ರವಿರಾಜೇಅರಸ್, ಜಿ.ಎಲ್,ಮಂಜುನಾಥ್, ಓಂಕಾರ್, ಚಿಕ್ಕನರಸಯ್ಯ, ವಿ.ಬಾಲಕೃಷ್ಣ, ನರಸರಾಜು, ಲಕ್ಷ್ಮೀನರಸಯ್ಯ, ಎನ್.ಜಿ.ನಾಗರಾಜು, ದೇವಾಲಯದ ಟ್ರಸ್ಟ್ನ ಕಾರ್ಯನಿರ್ವಹಣಾಧಿಕಾರಿ ಕೇಶವಮೂರ್ತಿ, ಲಕ್ಷ್ಮಣ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.