China: ಚೀನಾದಲ್ಲಿ ಜಗತ್ತಿನ ಅತ್ಯಂತ ಆಳದ ಪ್ರಯೋಗಾಲಯ ಆರಂಭ
-ಡಾರ್ಕ್ ಮ್ಯಾಟರ್ ಅಧ್ಯಯನಕ್ಕಾಗಿ ಚೀನಾ ವಿಜ್ಞಾನಿಗಳಿಂದ 2,400 ಮೀ. ಆಳದಲ್ಲಿ ಪ್ರಯೋಗಾಲಯ
Team Udayavani, Dec 8, 2023, 9:03 PM IST
ಬೀಜಿಂಗ್: ಚೀನಾ ಭೂಗರ್ಭದಲ್ಲಿ ಹೊಸತೊಂದು ಸಾಹಸ ಮಾಡಿದೆ. ಸಿಜೆಪಿಎಲ್ ಯೋಜನೆಯ (ಚೀನಾ ಜಿನ್‌ಪಿಂಗ್ ಅಂಡರ್‌ಗ್ರೌಂಡ್ ಲ್ಯಾಬೊರೇಟರಿ) 2ನೇ ಹಂತ ಯಶಸ್ವಿಯಾಗಿ ಮುಗಿದು, ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ 2,400 ಮೀಟರ್ ಆಳದಲ್ಲಿ ಭೌತಶಾಸ್ತ್ರದ ಪ್ರಯೋಗಾಲಯ ಕಾರ್ಯಾರಂಭ ಮಾಡಿದೆ. ಡಿಯುಆರ್‌ಎಫ್ (ದಿ ಡೀಪ್ ಅಂಡರ್‌ಗ್ರೌಂಡ್ ಆ್ಯಂಡ್ ಅಲ್ಟ್ರಾ ಲೋ ರೇಡಿಯೇಶನ್ ಬ್ಯಾಕ್‌ಗ್ರೌಂಡ್ ಫೆಸಿಲಿಟಿ ಫಾರ್ ಫ್ರಾಂಟಿಯರ್ ಫಿಸಿಕ್ಸ್ ಎಕ್ಸ್‌ಪೆರಿಮೆಂಟ್ಸ್) ಎಂದು ಚುಟುಕಾಗಿ ಕರೆಸಿಕೊಳ್ಳುವ ಇದು ಇಡೀ ಜಗತ್ತಿನಲ್ಲೇ ಅತ್ಯಂತ ಆಳದಲ್ಲಿರುವ ಪ್ರಯೋಗಾಲಯ ಎಂಬ ಹೆಗ್ಗಳಿಕೆ ಪಡೆದಿದೆ.
ಭೌತಶಾಸ್ತ್ರದ ಪ್ರಯೋಗಗಳು ಇಲ್ಲಿ ನಡೆಯಲಿವೆ. ಮುಖ್ಯವಾಗಿ ವಿಜ್ಞಾನಿಗಳಿಂದ ಡಾರ್ಕ್ ಮ್ಯಾಟರ್ ಎಂದು ಕರೆಸಿಕೊಳ್ಳುವ ಕಣ್ಣಿಗೆ ಕಾಣದ ವಸ್ತುಗಳ ಬಗ್ಗೆ ಇಲ್ಲಿ ಅಧ್ಯಯನ ನಡೆಯಲಿದೆ. ಸಾಮಾನ್ಯವಾಗಿ ಡಾರ್ಕ್ ಮ್ಯಾಟರ್ ಬಾಹ್ಯಾಕಾಶದಲ್ಲಿ ಕಾಣಬರುವ ಸಂಗತಿ ಎಂದು ಖಭೌತ ಶಾಸ್ತ್ರಜ್ಞರು ಹೇಳುತ್ತಾರೆ. ಅದರ ಅಧ್ಯಯನಕ್ಕೆ ಭೂಗರ್ಭವನ್ನು ಆಯ್ಕೆ ಮಾಡಿಕೊಂಡಿರುವುದು ಮಹತ್ವದ್ದು. ಚೀನೀ ವಿಜ್ಞಾನಿಗಳ ಪ್ರಕಾರ ಡಾರ್ಕ್ ಮ್ಯಾಟರ್ ಅಧ್ಯಯನಕ್ಕೆ, ಈ ಜಾಗ ಅತ್ಯಂತ ಸ್ವತ್ಛವಾದ ಅವಕಾಶವನ್ನು ಒದಗಿಸಿಕೊಡುತ್ತದೆ. ಸದ್ಯದ ಮಟ್ಟಿಗೆ ಚೀನಾ ಈ ವಿಚಾರದ ಅಧ್ಯಯನದಲ್ಲಿ ಬಹಳ ಮುನ್ನಡೆ ಸಾಧಿಸಿದೆ.
ಡಿಯುಆರ್‌ಎಫ್ ಪ್ರಯೋಗಾಲಯ 3,30,000 ಕ್ಯೂಬಿಕ್ ಮೀಟರ್ ವಿಸ್ತಾರವಾಗಿದೆ. ಇದು ಸಿಜೆಪಿಎಲ್ ಯೋಜನೆಯ 2ನೇ ಹಂತ. ಇದರ ಒಂದನೇ ಹಂತ 2010ರಲ್ಲೇ ಮುಗಿದಿತ್ತು. 2ನೇ ಹಂತವನ್ನು ಯಾಲಾಂಗ್ ನದಿ ಜಲವಿದ್ಯುತ್ ಅಭಿವೃದ್ಧಿ ಕಂಪನಿ 2020ರಲ್ಲಿ ಆರಂಭಿಸಿ ಈಗ ಮುಗಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
Udupi: ವಕ್ಫ್ ಬೋರ್ಡ್ ಭೂ ಕಬಳಿಕೆ ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.