T20; ಇಂದು ದ್ವಿತೀಯ ಟಿ20: ಗೆಲುವಿನ ಗೌರವಕ್ಕೆ ಕಾದಿದೆ ಕೌರ್‌ ಪಡೆ


Team Udayavani, Dec 9, 2023, 6:55 AM IST

1-sadasad

ಮುಂಬಯಿ: ಪ್ರಬಲ ಇಂಗ್ಲೆಂಡ್‌ ತಂಡವನ್ನು ದ್ವಿತೀಯ ಟಿ20 ಪಂದ್ಯದಲ್ಲಿ ಎದುರಿಸಲಿರುವ ಭಾರತೀಯ ವನಿತೆಯರು ಗೆಲ್ಲ ಲೇಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ. ಈ ನಿರ್ಣಾಯಕ ಮುಖಾಮುಖೀ ಶನಿವಾರ ಮುಂಬಯಿಯಲ್ಲಿ ನಡೆಯಲಿದೆ.

ಬ್ಯಾಟಿಂಗ್‌ ಮೇಲಾಟವಾಗಿ ಪರಿಣಮಿಸಿದ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ 38 ರನ್ನುಗಳ ಗೆಲುವು ಸಾಧಿಸಿತ್ತು. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಗಳಿಸಿದೆ.
ಬುಧವಾರದ ಮುಖಾಮುಖೀಯ ಮೊದಲ ಓವರ್‌ನಲ್ಲೇ 2 ವಿಕೆಟ್‌ ಕಳೆದುಕೊಂಡ ಬಳಿಕ ಅಮೋಘ ಚೇತರಿಕೆ ಕಂಡ ಇಂಗ್ಲೆಂಡ್‌ 6 ವಿಕೆಟಿಗೆ 197 ರನ್‌ ಪೇರಿಸಿತ್ತು. ಜವಾಬಿತ್ತ ಭಾರತ 6ಕ್ಕೆ 159 ರನ್‌ ಗಳಿಸಿ ಸೋಲನುಭವಿಸಿತು.

ದುಬಾರಿಯಾದರೇ ನಾಲ್ವರು ಸ್ಪಿನ್ನರ್?
ಪರಿಸ್ಥಿತಿಯನ್ನು ಅಂದಾಜಿಸುವಲ್ಲಿ ವಿಫ‌ಲವಾದದ್ದೇ ಭಾರತದ ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಭಾರತ 4 ಮಂದಿ ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಿ ಇಂಗ್ಲೆಂಡನ್ನು ಕಟ್ಟಿಹಾಕುವ ಯೋಜನೆ ರೂಪಿಸಿತಾದರೂ ಇದು ಉಲ್ಟಾ ಹೊಡೆಯಿತು. ಇವರ 12 ಓವರ್‌ಗಳಲ್ಲಿ 121 ರನ್‌ ಸೋರಿ ಹೋಯಿತು.

ಇವರಲ್ಲಿ ಇಬ್ಬರು ಸ್ಪಿನ್ನರ್‌ಗಳಿಗೆ ಇದು ಪದಾರ್ಪಣ ಪಂದ್ಯವಾಗಿತ್ತು. ಒಬ್ಬರು ಕರ್ನಾಟಕದ ಶ್ರೇಯಾಂಕಾ ಪಾಟೀಲ್‌. ಇವರು 44 ರನ್‌ ವೆಚ್ಚದಲ್ಲಿ 2 ವಿಕೆಟ್‌ ಉರುಳಿಸುವಲ್ಲಿ ಯಶಸ್ವಿಯಾದರು. ಸೈಕಾ ಇಶಾಖ್‌ 38 ರನ್ನಿಗೆ ಒಂದು ವಿಕೆಟ್‌ ಕಿತ್ತರು. ಹಿರಿಯ ಸ್ಪಿನ್ನರ್‌ ದೀಪ್ತಿ ಶರ್ಮ ಅವರಿಗೆ (0/28) ಮೂರೇ ಓವರ್‌ ಅವಕಾಶ ಸಿಕ್ಕಿತು. ಕನಿಕಾ ಅಹುಜಾ ಒಂದು ಓವರ್‌ನಲ್ಲಿ 12 ರನ್‌ ಬಿಟ್ಟುಕೊಟ್ಟರು. ಸ್ಪಿನ್ನರ್‌ಗಳ ಶಾರ್ಟ್‌ ಹಾಗೂ ಫ‌ುಲ್‌ಟಾಸ್‌ ಎಸೆತಗಳನ್ನು ಡೇನಿಯಲ್‌ ವ್ಯಾಟ್‌-ನ್ಯಾಟ್‌ ಸ್ಕಿವರ್‌ ಬ್ರಂಟ್‌ ಚೆನ್ನಾಗಿಯೇ ನಿಭಾಯಿಸಿದರು.

ಇದಕ್ಕೆ ತದ್ವಿರುದ್ಧವೆಂಬಂತೆ ಇಂಗ್ಲೆಂಡ್‌ ಸ್ಪಿನ್ನರ್‌ಗಳಾದ ಸೋಫಿ ಎಕ್‌Éಸ್ಟೋನ್‌ (4-0-15-3) ಮತ್ತು ಸಾರಾ ಗ್ಲೆನ್‌ (25ಕ್ಕೆ 1) ಅಮೋಘ ಲೈನ್‌-ಲೆಂತ್‌ ಕಾಯ್ದುಕೊಂಡು ಭಾರತಕ್ಕೆ ಸವಾಲಾಗಿ ಪರಿಣಮಿಸಿದರು.
“ವಾಂಖೇಡೆ’ ಟ್ರ್ಯಾಕ್‌ ಸ್ಪಿನ್‌ ದಾಳಿಯ ಲಾಭ ಪಡೆದವರಿಗೆ ಹಾಗೂ ಇದನ್ನು ಸಮರ್ಥ ರೀತಿಯಲ್ಲಿ ನಿಭಾಯಿಸಿದವರಿಗೆ ಯಶಸ್ಸು ಒಲಿಯಲಿದೆ ಎಂಬುದು ಮೊದಲ ಪಂದ್ಯದಲ್ಲಿ ಸಾಬೀತಾಗಿದೆ.

ಇಂಗ್ಲೆಂಡ್‌ ವಿರುದ್ಧ ಕಳಪೆ ದಾಖಲೆ
ಇಂಗ್ಲೆಂಡ್‌ ವಿರುದ್ಧ ಭಾರತದ ಟಿ20 ದಾಖಲೆ ಅತ್ಯಂತ ಕಳಪೆ ಎಂಬುದಾಗಿ ಅಂಕಿಅಂಶಗಳು ಸಾರುತ್ತವೆ. 2006ರ ಆರಂಭಿಕ ಟಿ20 ಸರಣಿ ಬಳಿಕ ಇಂಗ್ಲೆಂಡ್‌ ವಿರುದ್ಧ ಭಾರತ ಜಯ ಸಾಧಿಸಿಲ್ಲ. ಇಂಗ್ಲೆಂಡ್‌ ವಿರುದ್ಧ ಆಡಿದ ಒಟ್ಟು 28 ಪಂದ್ಯಗಳಲ್ಲಿ ಭಾರತ ಜಯಿಸಿದ್ದು ಏಳರಲ್ಲಿ ಮಾತ್ರ. ಇಂಗ್ಲೆಂಡ್‌ ಉಳಿದ 21 ಪಂದ್ಯಗಳನ್ನು ಜಯಿಸಿದೆ.
ಆದರೆ ಹಿಂದಿನ ದಾಖಲೆ, ಅಂಕಿಅಂಶಗಳ ಕುರಿತು ಯೋಚಿಸುತ್ತ ಕೂರುವ ಬದಲು ಭವಿಷ್ಯದತ್ತ ವಿಶಾಲ ದೃಷ್ಟಿಯನ್ನು ಹೊಂದಿರಬೇಕಾದ ಅಗತ್ಯವಿದೆ ಎಂಬುದು ತಂಡದ ನೂತನ ಕೋಚ್‌ ಅಮೋಲ್‌ ಮುಜುಮಾªರ್‌ ಅಭಿಪ್ರಾಯ.

ಈ ಸರಣಿಯ ನಿಕಟಪೂರ್ವ ಸಾಧನೆಯ ಹೆಗ್ಗಳಿಕೆಯೊಂದು ಭಾರತದ ಪರವಾಗಿರುವುದನ್ನು ಮರೆಯುವಂತಿಲ್ಲ. ಅದೆಂದರೆ, ನಮ್ಮ ವನಿತೆಯರಿಗೆ ಹ್ಯಾಂಗ್‌ಝೂ ಏಷ್ಯಾಡ್‌ನ‌ಲ್ಲಿ ಒಲಿದ ಚಿನ್ನದ ಪದಕ. ಇನ್ನೊಂದೆಡೆ ಇಂಗ್ಲೆಂಡ್‌ ತನ್ನ ತವರಲ್ಲೇ 7ನೇ ರ್‍ಯಾಂಕಿಂಗ್‌ ತಂಡವಾದ ಶ್ರೀಲಂಕಾ ವಿರುದ್ಧ 1-2ರಿಂದ ಸರಣಿ ಸೋತಿತ್ತು!

 ಆರಂಭ: ರಾತ್ರಿ 7.00
 ಪ್ರಸಾರ: ಸ್ಪೋರ್ಟ್ಸ್ 18

ಟಾಪ್ ನ್ಯೂಸ್

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

20

UV Fusion: ವಿಘ್ನ ವಿನಾಯಕನಿಗೆ ನಮನ

19

Ganesh Chaturthi: ನೆನಪಿನ ಬುತ್ತಿಯಾದ ಗಣೇಶ ಹಬ್ಬ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

Diamond League: ಡೈಮಂಡ್‌ ಲೀಗ್‌ ಋತು ಫೈನಲಿಗೆ ನೀರಜ್‌ ಚೋಪ್ರಾ ಅರ್ಹತೆ

Diamond League: ಡೈಮಂಡ್‌ ಲೀಗ್‌ ಋತು ಫೈನಲಿಗೆ ನೀರಜ್‌ ಚೋಪ್ರಾ ಅರ್ಹತೆ

Paralympics closing ceremony: ಸಮಾರೋಪ ಸಮಾರಂಭದಲ್ಲಿ ಹರ್ವಿಂದರ್‌, ಪ್ರೀತಿ ಧ್ವಜಧಾರಿಗಳು

Paralympics: ಸಮಾರೋಪ ಸಮಾರಂಭದಲ್ಲಿ ಹರ್ವಿಂದರ್‌ ಸಿಂಗ್‌, ಪ್ರೀತಿ ಪಾಲ್‌ ಧ್ವಜಧಾರಿಗಳು

US Open: ಯುಎಸ್‌ ಓಪನ್‌ ಟೆನಿಸ್‌ ಗ್ರ್ಯಾನ್‌ ಸ್ಲಾಮ್‌: ಪೆಗುಲಾ-ಸಬಲೆಂಕಾ ನಡುವೆ ಫೈನಲ್‌

US Open: ಯುಎಸ್‌ ಓಪನ್‌ ಟೆನಿಸ್‌ ಗ್ರ್ಯಾನ್‌ ಸ್ಲಾಮ್‌: ಪೆಗುಲಾ-ಸಬಲೆಂಕಾ ನಡುವೆ ಫೈನಲ್‌

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

2-desiswara-1

Teacher: ಗುರಿಯೊಂದಿಗೆ ಗುರುಕೃಪೆಯಿದ್ದರೆ ಯಶ

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

1-teachers-day

Teacher’s Day ವಿಶೇಷ: ವಿಚಾರ ವಿನಿಮಯ ಶಿಕ್ಷಣದ ಸುತ್ತ: ಆಲೋಚನೆಯಲ್ಲಿ ವೈವಿಧ್ಯತೆ ಇರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.