Moodabidri ನಕಲಿ ದಾಖಲೆ ಸೃಷ್ಟಿಸಿ: ಚಲನಚಿತ್ರ ಪ್ರದರ್ಶಿಸಿ ವಂಚನೆ
ಅಮರಶ್ರೀ ಚಿತ್ರಮಂದಿರದ ಮಾಲಕಿಯಿಂದ ದೂರು
Team Udayavani, Dec 9, 2023, 12:31 AM IST
ಮಂಗಳೂರು: ಮೂಡುಬಿದಿರೆಯ “ಅಮರಶ್ರೀ’ ಚಿತ್ರಮಂದಿರದಲ್ಲಿ ಸಿನೆಮಾ ಪ್ರದರ್ಶನಕ್ಕೆ ಸಂಬಂಧಿಸಿದಂತೆ ದಿ| ಕೆ. ಅಮರನಾಥ ಶೆಟ್ಟಿ ಅವರ ಹೆಸರಿನಲ್ಲಿ ನಕಲಿ ದಾಖಲೆ ತಯಾರಿಸಿ ವಂಚಿಸಿರುವ ಬಗ್ಗೆ ಅವರ ಪುತ್ರಿ, ಅಮರಶ್ರೀ ಚಿತ್ರಮಂದಿರದ ಮಾಲಕಿ ಡಾ| ಅಮರಶ್ರೀ ಅಮರನಾಥ ಶೆಟ್ಟಿ ಅವರು ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿದೆ.
ಅಮರನಾಥ ಶೆಟ್ಟಿ ಅವರು ಚಿತ್ರಮಂದಿರದ ಮ್ಯಾನೇಜ್‌ಮೆಂಟ್ ಬಗ್ಗೆ ಕಾರ್ಕಳದ ಜೆರಾಲ್ಡ್ ಕುಟಿನ್ಹೋ ಅವರನ್ನು ಮ್ಯಾನೇಜರ್ ಆಗಿ ನೇಮಿಸಿದ್ದರು.
ಅಮರನಾಥ ಶೆಟ್ಟಿ ಅವರು 2020ರ ಜ. 27ರಂದು ಮೃತಪಟ್ಟಿದ್ದರು. ತಂದೆಯ ಹೆಸರಿನಲ್ಲಿದ್ದ ಚಿತ್ರ ಮಂದಿರವನ್ನು ತನ್ನ ಹೆಸರಿಗೆ ವರ್ಗಾ ವಣೆ ಮಾಡಿಕೊಳ್ಳಲು ಹಾಗೂ ಚಿತ್ರ ಮಂದಿರದ ದುರಸ್ತಿ ಕೆಲಸ ಮಾಡಿಸಲು ಆ ಸಮಯದಲ್ಲಿ ಚಿತ್ರಮಂದಿರ ದಲ್ಲಿ ಸಿನೆಮಾ ಪ್ರದರ್ಶನದ ಪರವಾನಿಗೆ ಪಡೆದಿರಲಿಲ್ಲ.
2023ರ ನವೆಂಬರ್‌ನಲ್ಲಿ ದುರಸ್ತಿ ಕೆಲಸ ಆರಂಭಿಸಿ ಸಿನೆಮಾ ಪ್ರದರ್ಶನದ ಪರವಾನಿಗೆ ಪಡೆದುಕೊಳ್ಳಲು ಸಂಬಂಧಿಸಿದ ಇಲಾಖೆಗೆ ಹೋದಾಗ ಆರೋಪಿ ಜೆರಾಲ್ಡ್ ಕುಟಿನ್ಹೋ, ಮೃತ ಅಮರನಾಥ ಶೆಟ್ಟಿ ಅವರ ಹೆಸರಿನಲ್ಲಿ ನಕಲಿ ಸಿನೆಮಾ ಪ್ರದರ್ಶನದ ಪರವಾನಿಗೆ ಪಡೆದು ವಂಚಿಸುವ ಉದ್ದೇಶದಿಂದ ಸಂಬಂಧಿಸಿದ ಇಲಾಖೆಗಳಿಂದ ನಿರಾಕ್ಷೇಪಣ ಪತ್ರವನ್ನು ಪಡೆದುಕೊಳು ವುದಕ್ಕಾಗಿ 2022ರ ನ. 7ರಂದು ನಕಲಿ ಕೋರಿಕೆ ಪತ್ರ ತಯಾರಿಸಿದ್ದರು.
ಇಲಾಖೆಗಳಿಗೆ ಸಲ್ಲಿಕೆ
ನಕಲಿ ಕೋರಿಕೆ ಪತ್ರವನ್ನು ಜಿಲ್ಲಾ ಅಗ್ನಿಶಾಮಕ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಯವರಿಗೆ ನೀಡಿ ನಿರಾಕ್ಷೇಪಣ ಪತ್ರ ಪಡೆದುಕೊಂಡಿದ್ದಾರೆ ಎಂದು ಅಮರಶ್ರೀ ಅಮರನಾಥ ಶೆಟ್ಟಿ ಅವರು ಪಾಂಡೇಶ್ವರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.