ಕೈ ಸಂಸದನಲ್ಲಿ 220 ಕೋ.ರೂ. ನೋಟು ಕಂತೆ!
156 ಚೀಲಗಳಲ್ಲಿ ಪೇರಿಸಿಟ್ಟಿತ್ತು ರಾಶಿ ರಾಶಿ ಕರೆನ್ಸಿ
Team Udayavani, Dec 9, 2023, 1:00 AM IST
ಹೊಸದಿಲ್ಲಿ: ಒಂದಲ್ಲ ಎರಡಲ್ಲ, ಬರೋಬ್ಬರಿ 220 ಕೋಟಿ ರೂ.! ಇದು ಝಾರ್ಖಂಡ್‌ನಿಂದ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಮತ್ತು ಅಬಕಾರಿ ಉದ್ಯಮಿ ಧೀರಜ್ ಪ್ರಸಾದ್ ಸಾಹೂ ನಿವಾಸ ಮತ್ತು ಅವರಿಗೆ ಸೇರಿದ ಸ್ಥಳಗಳಲ್ಲಿ ಪತ್ತೆಯಾದ ನೋಟಿನ ಕಂತೆಗಳ ಮೌಲ್ಯ.
ಒಡಿಶಾದಲ್ಲಿ ಅವರಿಗೆ ಸೇರಿದ ಬೋಧ್ ಡಿಸ್ಟಿಲರಿ ಪ್ರೈ.ಲಿ. (ಬಿಡಿಪಿಎಲ್)ಯ ಕಚೇರಿ ಮತ್ತು ಇತರ ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರದಿಂದ ನಿರಂತರವಾಗಿ ದಾಳಿ ನಡೆಸಿ ಶೋಧ ನಡೆಸುತ್ತಿದ್ದ ವೇಳೆ ರಾಶಿ ರಾಶಿ ನೋಟುಗಳು ಪತ್ತೆಯಾಗಿವೆ. ಅವರ ನಿವಾಸದಲ್ಲಿ 500 ರೂ., 200 ರೂ., 100 ರೂ. ನೋಟುಗಳನ್ನು ವಿಶೇಷವಾಗಿ ನಿರ್ಮಿಸಲಾಗಿರುವ ಕಬ್ಬಿಣದ
ರ್ಯಾಕ್‌ನಲ್ಲಿ 156 ಬ್ಯಾಗ್‌ಗಳಲ್ಲಿ ಸಾಲಾಗಿ ಪೇರಿಸಿ ಇರಿಸಲಾಗಿತ್ತು. ರಾಶಿ ನೋಟು ಎಣಿಸುವುದಕ್ಕಾಗಿ ಹಲವು ನೋಟು ಎಣಿಕೆ ಯಂತ್ರಗಳನ್ನು ಅಧಿಕಾರಿಗಳು ಬಳಸಬೇಕಾಯಿತು.
ಗುರುವಾರ ವಂತೂ ನೋಟು ಎಣಿಸಿ ದಣಿದ ಒಂದು ಯಂತ್ರ ಕೆಟ್ಟು ಹೋಗಿ ಬೇರೊಂದನ್ನು ತರಿಸಬೇಕಾಯಿತು. ಪಶ್ಚಿಮ ಬಂಗಾಲ, ಒಡಿಶಾ, ಜಾರ್ಖಂಡ್‌ಗಳಲ್ಲಿ ಸಂಸದ ಸಾಹು ಅವರ ಕುಟುಂಬ ಸದಸ್ಯರಿಗೆ ಸೇರಿದ ಇತರ ಉದ್ಯಮಗಳ ಮೇಲೆ ಕೂಡ ದಾಳಿ ನಡೆಸಿ ಶೋಧಿಸಲಾಗಿದೆ.
ಸಿಬಿಐ ತನಿಖೆಗೆ ಒತ್ತಾಯ
ರಾಶಿ ರಾಶಿ ನೋಟಿನ ಕಂತೆಗಳು ಕಂಡುಬಂದಿರುವ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಒಡಿಶಾದ ಬಿಜೆಪಿ ನಾಯಕ ಮನೋಜ್ ಮಹಾಪಾತ್ರ ಒತ್ತಾಯಿಸಿದ್ದಾರೆ. ಒಡಿಶಾದಲ್ಲಿ ಬಿಜೆಡಿ ಸರಕಾರದ ಸಚಿವೆಯೊಬ್ಬರು ಸಂಸದ ಧೀರಜ್ ಪ್ರಸಾದ್ ಸಾಹೂಗೆ ಸೇರಿದ ಕಂಪೆನಿಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಫೋಟೋಗಳನ್ನು ಅವರು ಪ್ರದರ್ಶಿಸಿದ್ದಾರೆ. ಒಡಿಶಾದ ಅಬಕಾರಿ, ವಿಚಕ್ಷಣಾ ದಳ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಯಾರಿದು ಧೀರಜ್ ಪ್ರಸಾದ್ ಸಾಹೂ?
ಸತತ ಮೂರನೇ ಬಾರಿಗೆ ಕಾಂಗ್ರೆಸ್‌ನಿಂದ ರಾಜ್ಯಸಭಾ ಸದಸ್ಯರಾಗಿರುವ ಧೀರಜ್ ಪ್ರಸಾದ್ ಸಾಹೂ ಜಾರ್ಖಂಡ್‌ನವರು. ರಾಜಕೀಯವಾಗಿ ಮತ್ತು ಅಬಕಾರಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಕಾಲದಿಂದಲೂ ಅವರ ಕುಟುಂಬ ಕಾಂಗ್ರೆಸ್ ಜತೆಗೆ ಗುರುತಿಸಿಕೊಂಡಿದೆ. 2009ರ ಜೂನ್‌ನಿಂದ ಅವರು ರಾಜ್ಯಸಭೆಯ ಸದಸ್ಯರಾಗಿದ್ದಾರೆ. ಅವರ ಸಹೋದರ ಶಿವಪ್ರಸಾದ್ ಸಾಹೂ ಕೂಡ ಒಂದು ಬಾರಿ ಸಂಸದರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಬಾಸ್ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್
PM Modi: ಇಂದು ಕೆನ್-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC U19 ವನಿತಾ ಟಿ20 ವಿಶ್ವಕಪ್: ಭಾರತಕ್ಕೆ ನಿಕಿ ಪ್ರಸಾದ್ ನಾಯಕಿ
Maharashtra: ಬಾಸ್ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್
PM Modi: ಇಂದು ಕೆನ್-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.