US: ಡ್ರಗ್ಸ್, ಲಕ್ಸುರಿ ಕಾರು, ಸೆಕ್ಸ್ ಕ್ಲಬ್….!- ಬೈಡೆನ್ ಪುತ್ರನ ಐಷಾರಾಮಿ ಶೋಕಿ
ಹಂಟರ್ ವಿರುದ್ಧ ತೆರಿಗೆ ವಂಚನೆ ಆರೋಪ
Team Udayavani, Dec 9, 2023, 10:32 PM IST
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರ ಪುತ್ರ ಹಂಟರ್ ಬೈಡೆನ್ ತೆರಿಗೆ ವಂಚನೆಯ ಆರೋಪ ಎದುರಿಸುತ್ತಿದ್ದಾರೆ. ತಮ್ಮ ಐಷಾರಾಮಿ ಜೀವನಕ್ಕೆ ದೊಡ್ಡ ಮೊತ್ತದ ಹಣವನ್ನು ವ್ಯಯಿಸಿರುವ ಅವರು, ಇದಕ್ಕಾಗಿ ತೆರಿಗೆ ಕಟ್ಟದೇ ಕ್ಯಾಲಿಫೋರ್ನಿಯಾ ನ್ಯಾಯಾಲಯದ ಎದುರು ವಿಚಾರಣೆ ಎದುರಿಸುತ್ತಿದ್ದಾರೆ.
2016ರಿಂದ 2019ರ ವರೆಗಿನ ಸಮಯದಲ್ಲಿ ವೇಶ್ಯೆಯರು, ಆನ್ಲೈನ್ ಪೋರ್ನೋಗ್ರಫಿ, ಐಷಾರಾಮಿ ಕಾರುಗಳು, ಸೆಕ್ಸ್ ಕ್ಲಬ್ ಸದಸ್ಯತ್ವಕ್ಕಾಗಿ 10,000 ಡಾಲರ್, ಮಾದಕ ದ್ರವ್ಯ, ಗರ್ಲ್ ಫ್ರಂಡ್ಗಳು, ಐಷಾರಾಮಿ ಹೋಟೆಲ್ಗಳಲ್ಲಿ ವಾಸ್ತವ್ಯ, ಉಡುಪು, ಅಂಗರಕ್ಷಕರು, ಹೀಗೆ ಐಷಾರಾಮಿ ಜೀವನಕ್ಕಾಗಿ 8,72,000 ಡಾಲರ್ಗಳನ್ನು ವ್ಯಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಂಟರ್ ಬೈಡೆನ್ ಒಟ್ಟು 14 ಲಕ್ಷ ಡಾಲರ್ಗಳಷ್ಟು ತೆರಿಗೆಯನ್ನು ವಂಚಿಸಿದ್ದಾರೆ ಎಂಬ ಆರೋಪಗಳು ಅವರ ಮೇಲಿದೆ. ಅಮೆರಿಕದ ಕಾನೂನಿನ ಪ್ರಕಾರ, ಇದಕ್ಕೆ 17 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಬಹುದಾಗಿದೆ.
“ಹಂಟರ್ ಬೈಡೆನ್ ಬಾಕಿ ಇದ್ದ ಎಲ್ಲಾ ತೆರಿಗೆಯನ್ನು ಪಾವಿತಿಸಿದ್ದು, ಇದೀಗ ತೆರಿಗೆ ಮುಕ್ತರಾಗಿದ್ದಾರೆ” ಎಂದು ಹಂಟರ್ ಪರವಾದ ನ್ಯಾಯವಾದಿ ಅಬ್ಬೆ ಲೋವರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.