Human; ಸಹಬಾಳ್ವೆಯಿಂದ ಸುಖಜೀವನ ಸಾಧ್ಯ


Team Udayavani, Dec 10, 2023, 5:18 AM IST

1-sadasdas

ಒಂದು ಮನೆಯಲ್ಲಿನ ನಾಯಿ ಮತ್ತು ಬೆಕ್ಕು ಸ್ನೇಹದಲ್ಲಿರುವುದನ್ನು ನಾವು ನೋಡಿದ್ದೇವೆ. ಒಂದು ಕೊಟ್ಟಿಗೆಯಲ್ಲಿನ ಹಸುಗಳು ಮತ್ತು ಮೇಕೆಗಳು ಸಹಬಾಳ್ವೆಯಿಂದ ಬದುಕುವುದನ್ನು ಗಮನಿಸಿದ್ದೇವೆ. ಆನೆ, ಕುದುರೆ ಮುಂತಾದ ಪ್ರಾಣಿಗಳು ತನ್ನ ಮಾಲಕನ ಜತೆಗೆ ಸಹಕಾರದಿಂದ ಇರುವುದನ್ನು ನಾವು ಕಾಣುತ್ತೇವೆ. ಆಲದ ಮರವು ನೂರಾರು ಪ್ರಾಣಿಗಳಿಗೆ ನೆರಳನ್ನು ನೀಡುತ್ತದೆ. ಮರದಲ್ಲಿ ಹತ್ತಾರು ಪಕ್ಷಿಗಳು ಆಶ್ರಯ ಪಡೆಯುತ್ತವೆ. ಸಸ್ಯಗಳು ಪ್ರಾಣಿಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ಸಹಕಾರ ನೀಡುತ್ತಾ ಬಂದಿವೆ. ಉಸಿರಾಡಲು ಆಮ್ಲಜನಕ, ತಿನ್ನಲು ಆಹಾರ ನೀಡುತ್ತಾ ಬಂದಿವೆ. ಇಲ್ಲೆಲ್ಲೂ ಸ್ವಾರ್ಥವೆಂಬುದಿಲ್ಲ. ಆದರೆ ಬುದ್ಧಿಜೀವಿಯಾದ ಮನುಷ್ಯ ಮನುಷ್ಯರ ನಡುವೆ ಸಹಕಾರದ ಕೊರತೆ ಏಕೆ ಎದ್ದು ಕಾಣುತ್ತಿದೆ? ಹಾಗಾದರೆ ಸಹಬಾಳ್ವೆಯಿಂದ ಜೀವನ ನಡೆಸಲು ಮನುಷ್ಯರಿಗೆ ಸಾಧ್ಯವಿಲ್ಲವೇ?…

ಖಂಡಿತ ಸಾಧ್ಯವಿದೆ. ನಾನು, ನನ್ನದು ಎಂಬ ಸ್ವಾರ್ಥ ಮನೋಭಾವ, ನಾನೇ ಎಲ್ಲ, ನನ್ನಿಂದಲೇ ಎಲ್ಲ, ನಾನು ಎಣಿಸಿದಂತೆ ನಡೆಯಬೇಕು ಎಂಬ ದುರಹಂಕಾರವು ಮನುಷ್ಯನ ಬುದ್ಧಿಯನ್ನು ವಿಕಾರಗೊಳಿಸುತ್ತದೆ. ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ಮಾತಿನಂತೆ ಮನೆ ಮಂದಿಯೆಲ್ಲ ಒಗ್ಗಟ್ಟಿನಿಂದ ಬಾಳಿದರೆ ಖಂಡಿತ ಆ ಮನೆ ಸ್ವರ್ಗವಾಗುವುದರಲ್ಲಿ ಸಂಶಯವಿಲ್ಲ.

ಈ ಮೌಲ್ಯಗಳನ್ನು ಮೊದಲು ಮನೆಯಲ್ಲೇ ಕಲಿಸಬೇಕು. ಪರಸ್ಪರ ಸಹಕಾರ ಮನೋಭಾವ, ಹಂಚಿ ತಿನ್ನುವುದು, ಪ್ರೀತಿ, ಸ್ನೇಹ, ನಂಬಿಕೆ, ವಿಶ್ವಾಸ ಮೊದಲಾದ ಮಾನವೀಯ ಮೌಲ್ಯಗಳನ್ನು ಮಗು ಬಾಲ್ಯದಿಂದಲೇ ಕಲಿಯಬೇಕು.

ನಾವು ಕೆಲಸ ಮಾಡುವ ಕಚೇರಿಯಲ್ಲಿ, ಕುಟುಂಬದ ಸದಸ್ಯರಲ್ಲಿ, ಸಂಬಂಧಿಕರ ಮಧ್ಯೆ, ನೆರೆಮನೆಯವರೊಂದಿಗೆ, ಗಂಡ ಹೆಂಡಿರ ಮಧ್ಯೆ, ಅಣ್ಣ ತಮ್ಮಂದಿರ ನಡುವೆ ಸ್ನೇಹ ಸಹಕಾರ, ಸಹಬಾಳ್ವೆ ಇಲ್ಲದಿದ್ದರೆ ನೆಮ್ಮದಿಯಿಂದ ಬಾಳುವುದು ತುಂಬಾನೆ ಕಷ್ಟ. ನಾನ್ಯಾಕೆ ಮಾಡಬೇಕು? ನಾನೊಬ್ಬನೇ ಇರುವುದಾ? ಯಾರೇನಾದರೂ ಮಾಡಲಿ, ನಂಗ್ಯಾಕೆ ಬಿಡು ಎನ್ನುವ ಉಡಾಫೆ ಮಾತುಗಳು ಸಂಬಂಧಗಳ ಮಧ್ಯೆ ಬಿರುಕನ್ನುಂಟು ಮಾಡುತ್ತದೆ. ಒಮ್ಮೊಮ್ಮೆ ಅತಿಯಾದ ಸ್ವಾಭಿಮಾನವು ಸಹ ಮನುಷ್ಯರನ್ನು ದೂರ ಮಾಡುತ್ತದೆ. ಮನುಷ್ಯರಾದ ನಾವು ಪ್ರಾಣಿಗಳಂತೆ ಕಚ್ಚಾಡದೇ ತಾಳ್ಮೆಯಿಂದ, ವಿವೇಚನೆಯಿಂದ ಬದುಕು ನಡೆಸಬೇಕು. ಕೆಲವೊಮ್ಮೆ ಅತಿಯಾದ ಕೆಲಸದ ಒತ್ತಡವು ಕೂಡ ಮನುಷ್ಯನನ್ನು ಬೇರೆಯವರೊಂದಿಗೆ ಬೆರೆಯದಂತೆ ಮಾಡುತ್ತದೆ. ಇಂತಹ ಸಂದರ್ಭಗಳಲ್ಲಿ ಕೆಲಸವನ್ನು ಒಬ್ಬರೇ ಮಾಡುವುದಕ್ಕಿಂತ ಹಂಚಿಕೊಂಡು ಮಾಡುವುದರಿಂದ ಕೆಲಸದ ಹೊರೆಯೂ ಕಡಿಮೆಯಾಗಿ ಒತ್ತಡ ನಿವಾರಣೆಯಾಗುತ್ತದೆ. ಹಾಗೆಯೇ ಉಳಿದವರಿಗೂ ಜವಾಬ್ದಾರಿ ಬರುತ್ತದೆ. ಎಷ್ಟೇ ಕಷ್ಟ ಬಂದರೂ ಒಬ್ಬರನ್ನೊಬ್ಬರು ಬಿಟ್ಟು ಕೊಡದೇ ಪರಸ್ಪರ ಹೊಂದಾಣಿಕೆಯಿಂದ ಬಾಳಬೇಕು. ಏನೇ ವೈಮನಸ್ಸು ಬಂದರೂ ತತ್‌ಕ್ಷಣವೇ ಮುಕ್ತವಾಗಿ ಮಾತನಾಡಿ ಸರಿಪಡಿಸಿಕೊಳ್ಳಬೇಕೇ ವಿನಾ ಮುಖ ಊದಿಸಿಕೊಂಡು ಕುಳಿತುಕೊಳ್ಳಬಾರದು. ಬೇರೆಯವರ ಮೇಲೆ ಅನುಮಾನಗಳಿದ್ದಲ್ಲಿ ಮುಖಾಮುಖೀ ಮಾತನಾಡಿ ಬಗೆಹರಿಸಿಕೊಳ್ಳಬೇಕು.

ಅದೇ ರೀತಿ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿತಿರಬೇಕು. ಅದನ್ನು ಚಾಚೂ ತಪ್ಪದೆ ಪಾಲಿಸಬೇಕು. ಅದರ ಬದಲಾಗಿ ಕೇವಲ ನಮ್ಮ ಹಕ್ಕನ್ನಷ್ಟೇ ಚಲಾಯಿಸಿದರೆ ಏನು ಪ್ರಯೋಜನ? ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಿದರೆ ದೇವರು ಕೂಡ ಮೆಚ್ಚುತ್ತಾನೆ. ಒಬ್ಬ ವ್ಯಕ್ತಿಯು ತನ್ನ ಕಷ್ಟವನ್ನು ತಿಳಿಯುವುದರ ಜತೆಗೆ ಬೇರೆಯವರ ಕಷ್ಟವನ್ನು ಅರಿತು ಅದಕ್ಕೆ ತಕ್ಕಂತೆ ಸ್ಪಂದಿಸಿದರೆ ಅದು ಮನುಷ್ಯತ್ವ ಎನಿಸಿಕೊಳ್ಳುತ್ತದೆ. ಮನುಷ್ಯನಾದವರು ಒಬ್ಬರಿಗೊಬ್ಬರು ಪರಸ್ಪರ ಸಹಾಯ ಮಾಡುತ್ತಾ ಸಹಬಾಳ್ವೆಯಿಂದ ಬಾಳಬೇಕು. ಸ್ನೇಹ ಸೌಹಾರ್ದದಿಂದ ಜೀವಿಸುವುದೇ ಮನುಷ್ಯನ ಶ್ರೇಷ್ಠ ಗುಣವೆನಿಸಿಕೊಳ್ಳುತ್ತದೆ. ನಿಜವಾದ ಸುಖಜೀವನ ಇದೇ ಅಲ್ಲವೇ?…

ಚಂದ್ರಿಕಾ ಆರ್‌. ಬಾಯಿರಿ, ಬಾರಕೂರು

ಟಾಪ್ ನ್ಯೂಸ್

SUPER-MOON

Space Wonder: ಇಂದು ವಿಶೇಷ ಸೂಪರ್‌ಮೂನ್‌

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Cashews

Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್‌ ಸಿಸ್ಟಮ್‌

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮರುನಾಮಕರಣ ರಾಜಕಾರಣ! ಪ್ರಮುಖ ಸ್ಥಳಗಳು, ನಗರಗಳ ಹೆಸರು ಬದಲಾವಣೆ ಈಚೆಗಿನ ಟ್ರೆಂಡ್‌

ಮರುನಾಮಕರಣ ರಾಜಕಾರಣ! ಪ್ರಮುಖ ಸ್ಥಳಗಳು, ನಗರಗಳ ಹೆಸರು ಬದಲಾವಣೆ ಈಚೆಗಿನ ಟ್ರೆಂಡ್‌

ವಿಕಸಿತ ಭಾರತದ ಕನಸು ಸಾಕಾರದತ್ತ ದಿಟ್ಟ ಹೆಜ್ಜೆ

ವಿಕಸಿತ ಭಾರತದ ಕನಸು ಸಾಕಾರದತ್ತ ದಿಟ್ಟ ಹೆಜ್ಜೆ

1-rrrr

Yakshagana;ನೋಡಿ ಕಲಿಯುವುದು ಬಹಳಷ್ಟಿದೆ: ಶಿವರಾಮ ಜೋಗಿ ಬಿ.ಸಿ.ರೋಡು

Desi Swara: ಸಾಂಪ್ರದಾಯಿಕ ವೈವಿಧ್ಯದ ಓಣಂ ವೈಭವ-ವಿಶೇಷ ಹತ್ತು ದಿನಗಳು

Desi Swara: ಸಾಂಪ್ರದಾಯಿಕ ವೈವಿಧ್ಯದ ಓಣಂ ವೈಭವ-ವಿಶೇಷ ಹತ್ತು ದಿನಗಳು

ಇ-ತ್ಯಾಜ್ಯ ತಗ್ಗಿಸಲು ಸರಕಾರದ ಐಡಿಯಾ! ಯಶಸ್ಸು ತಂದೀತೇ ಕರ್ನಾಟಕ ಸರಕಾರದ ಹೊಸ ಹೆಜ್ಜೆ?

Electronic Waste ತಗ್ಗಿಸಲು ಸರಕಾರದ ಐಡಿಯಾ!ಯಶಸ್ಸು ತಂದೀತೇ ಕರ್ನಾಟಕ ಸರಕಾರದ ಹೊಸ ಹೆಜ್ಜೆ?

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

SUPER-MOON

Space Wonder: ಇಂದು ವಿಶೇಷ ಸೂಪರ್‌ಮೂನ್‌

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Cashews

Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್‌ ಸಿಸ್ಟಮ್‌

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.