ಇನ್ಸ್ಟಾಗ್ರಾಮ್ನಲ್ಲಿ ‘RIP’ ಫೋಟೋ ಪೋಸ್ಟ್ ಮಾಡಿ ಆತ್ಮಹತ್ಯೆಗೆ ಶರಣಾದ ಯುವಕ
Team Udayavani, Dec 10, 2023, 1:09 PM IST
ಕೊಚ್ಚಿ: ಸಾವಿನ ಮೊದಲೇ ತನ್ನ ಫೋಟೋಗೆ ‘RIP’ಎಂದು ಬರೆದು ಯುವಕನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ಎರ್ನಾಕುಲಂ ಜಿಲ್ಲೆಯ ಆಲುವಾದಲ್ಲಿ ನಡೆದಿದೆ.
ಅಜ್ಮಲ್ ಶೆರೀಫ್ (28) ಮೃತ ಯುವಕ.
ಅಜ್ಮಲ್ ಶೆರೀಫ್ ಅವರಿಗೆ ಇನ್ಸ್ಟಾಗ್ರಾಮ್ ನಲ್ಲಿ 14 ಸಾವಿರಕ್ಕೂ ಹೆಚ್ಚಿನ ಫಾಲೋವರ್ಸ್ ಗಳಿದ್ದಾರೆ. ಫೋಟೋಗ್ರಾಫಿ, ಕಾರು ಹಾಗೂ ಬೈಕ್ ಸಂಬಂಧಿತ ಫೋಸ್ಟ್ ಗಳನ್ನು ಈ ಪೇಜ್ ನಲ್ಲಿ ಅಜ್ಮಲ್ ಹಾಕುತ್ತಿದ್ದರು.
ಶುಕ್ರವಾರ (ಡಿ.8 ರಂದು) ಸಂಜೆ ಅಜ್ಮಲ್ ತನ್ನ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಫೋಟೋ ಹಾಕಿ ಅದರ ಕೆಳಗೆ ʼRIP’ಎಂದು ಬರೆದು ʼ1995-2023ʼ ಅಜ್ಮಲ್ ಶೆರೀಫ್ ನಿಧನರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬರೆದುಕೊಂಡಿದ್ದಾರೆ.
ಶುಕ್ರವಾರ ಸಂಜೆ 6.30ರ ಸುಮಾರಿಗೆ ಅಜ್ಮಲ್ ಶೆರೀಫ್ ತನ್ನ ಮನೆಯ ಕೊಠಡಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
‘‘ಉತ್ತಮ ಕೆಲಸ ಸಿಗದ ಕಾರಣ ಆತ ಖಿನ್ನತೆಗೆ ಒಳಗಾಗಿದ್ದ ಎಂದು ಕುಟುಂಬದವರು ಹೇಳಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು
Puja Khedkar: ಐಎಎಸ್ ಸೇವೆಯಿಂದ ಪೂಜಾ ಖೇಡ್ಕರ್ ವಜಾ; ಕೇಂದ್ರ ಆದೇಶ
ರಸ್ತೆ ಬದಿ ನಡೆದ ಅತ್ಯಾಚಾರ ಕೃತ್ಯವನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿದ ಆಟೋ ಚಾಲಕ ಬಂಧನ
Drunk Driver: ಆಹಾರ ನೀಡಿಲ್ಲವೆಂದು ಸಿಟ್ಟಿಗೆದ್ದು ಲಾರಿಯನ್ನೇ ಹೋಟೆಲ್ ಗೆ ನುಗ್ಗಿಸಿದ ಚಾಲಕ
Crime: ಸೈನೈಡ್ ಮಿಶ್ರಿತ ಜ್ಯೂಸ್ ನೀಡಿ ಚಿನ್ನಾಭರಣ ಲೂಟಿ; ಲೇಡಿ ಗ್ಯಾಂಗ್ ಅರೆಸ್ಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.