Mangaluru ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ
Team Udayavani, Dec 10, 2023, 9:49 PM IST
ಮಂಗಳೂರು: ನಗರದ ದಕ್ಷಿಣ ದಕ್ಕೆಯ ಸಮೀಪ ಗುರುಪುರ ನದಿಯಲ್ಲಿ ರವಿವಾರ ಬೆಳಗ್ಗೆ ಸುಮಾರು 45-50 ವರ್ಷ ವಯಸ್ಸಿನ ಅಪರಿಚಿತ ಗಂಡಸಿನ ಮೃತದೇಹ ಪತ್ತೆಯಾಗಿದೆ.
ಮೃತದೇಹ ಕೊಳೆತ ಸ್ಥಿತಿಯಲ್ಲಿದೆ. ಸುಮಾರು 5.7 ಅಡಿ ಎತ್ತರ, ಎಣ್ಣೆಕಪ್ಪು ಮೈಬಣ್ಣ, 3 ಇಂಚು ಕಪ್ಪು ಬಿಳಿ ಮಿಶ್ರಿತ ತಲೆಕೂದಲು, 1 ಇಂಚು ಬಿಳಿ ಗಡ್ಡ, ಸಾಧಾರಣ ಶರೀರ ಹೊಂದಿದ್ದಾರೆ.
ಕಪ್ಪು ಬಣ್ಣದ ಉದ್ದ ತೋಳಿನ ಅಂಗಿ, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ನೀಲಿ ಕೆಂಪು ಬಣ್ಣದ ಚಡ್ಡಿ, ಬಿಳಿ ಬಣ್ಣದ ಬೆಲ್ಟ್ ಧರಿಸಿದ್ದರು.
ವಾರಸುದಾರರಿದ್ದರೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆ (0824-2220518) ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.