Cybercrime: ಖದೀಮರ ಖಜಾನೆಗೆ ಕೋಟಿ ಕೋಟಿ ರೂ.!

ಪ್ರಕರಣಗಳು ದುಪ್ಪಟ್ಟಾಗುತ್ತಿರುವುದು ಆತಂಕಕ್ಕೀಡು ಮಾಡಿದ್ದು..

Team Udayavani, Dec 11, 2023, 6:15 AM IST

cyber crime

ಬೆಂಗಳೂರು: ರಾಜ್ಯದಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ಸೈಬರ್‌ ಕ್ರೈಂ ಪ್ರಕರಣಗಳು ದುಪ್ಪಟ್ಟಾಗುತ್ತಿರುವುದು ಆತಂಕಕ್ಕೀಡು ಮಾಡಿದ್ದು, ಕಳೆದೊಂದು ವರ್ಷದಲ್ಲಿ 19,478 ಪ್ರಕರಣಗಳಲ್ಲಿ ಸುಮಾರು 414 ಕೋಟಿ ರೂ.ಗೂ ಅಧಿಕ ದುಡ್ಡು ಸೈಬರ್‌ ಖದೀಮರ “ಕಳ್ಳ ಖಜಾನೆ’ ಸೇರಿದೆ.

ಕರ್ನಾಟಕವು ಸೈಬರ್‌ ಕಳ್ಳರ ಸ್ವರ್ಗ ವಾಗಿ ಮಾರ್ಪಟ್ಟಿದೆ. ಅಮಾಯಕರಿಂದ ದುಡ್ಡು ಕಸಿಯಲು ಹೊಸ ಮಾರ್ಗ ಕಂಡುಕೊಳ್ಳುತ್ತಲೇ ಇರುವ ವಂಚಕರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಹಿಂದೆ ಬಿದ್ದಿದ್ದಾರೆ. ಪರಿಣಾಮ ಪ್ರತಿ 2 ವರ್ಷಗಳಿಗೊಮ್ಮೆ ರಾಜ್ಯದಲ್ಲಿ ಸೈಬರ್‌ ಅಪ ರಾಧ ದುಪ್ಪಟ್ಟಾಗುತ್ತಿದೆ. ಈ ಪೈಕಿ ಸಿಲಿ ಕಾನ್‌ ಸಿಟಿಯ ಪಾಲು ಶೇ. 85ರಷ್ಟಿದೆ. 2021ರಲ್ಲಿ ರಾಜ್ಯದಲ್ಲಿ ದಾಖಲಾಗಿರುವ 8,134 ಸೈಬರ್‌ ಕ್ರೈಂ ಕೇಸ್‌ಗಳ ಸಂಖ್ಯೆ 2022ರಲ್ಲಿ 12,549ಕ್ಕೆ ಏರಿಕೆಯಾಗಿದೆ. 2023ರಲ್ಲಿ ಸೈಬರ್‌ ವಂಚಕರು ಕರ್ನಾಟಕವನ್ನೇ ಟಾರ್ಗೆಟ್‌ ಮಾಡಿದ ಪರಿಣಾಮ ಬರೋಬ್ಬರಿ 19,478 ಪ್ರಕರಣಗಳು ವರದಿಯಾಗಿದೆ.

ಮಾಹಿತಿಯಿದ್ದರೂ ಪತ್ತೆ ಅಸಾಧ್ಯ ?
ಝಾರ್ಖಂಡ್‌, ದಿಲ್ಲಿ, ರಾಜಸ್ಥಾನ, ಪಶ್ಚಿಮ ಬಂಗಾಲಗಳ ಗ್ರಾಮೀಣ ಭಾಗದಲ್ಲಿ ಸೈಬರ್‌ ಕ್ರೈಂಗಾಗಿಯೇ ವಂಚಕರು ನಿರ್ಜನ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡಿರುವುದು ತನಿಖೆಯಲ್ಲಿ ಬಹಿರಂಗಗೊಂಡಿದೆ. ಬೆಂಗಳೂರಿನಲ್ಲಿ 2023ರಲ್ಲಿ ಸಂಭವಿಸಿದ್ದ 15,668 ಪ್ರಕರಣಗಳಲ್ಲಿ ಶೇ.70ರಷ್ಟು ಕೃತ್ಯಗಳನ್ನು ಈ ತಂಡವೇ ಎಸಗುತ್ತಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ. ಅಲ್ಲಿನ ಸ್ಥಳೀಯ ಪೊಲೀಸರು ಕರ್ನಾಟಕ ಪೊಲೀಸರಿಗೆ ಸೂಕ್ತ ರೀತಿ ಸ್ಪಂದಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಹೀಗಾಗಿ ವಂಚಕರ ಹೆಡೆಮುರಿ ಕಟ್ಟಲು ಕರ್ನಾಟಕ ಪೊಲೀಸರು ವಿಫ‌ಲರಾಗಿದ್ದಾರೆ ಎಂಬ ಸಂಗತಿಯನ್ನು ಪೊಲೀಸ್‌ ಉನ್ನತ ಮೂಲಗಳು ತಿಳಿಸಿವೆ.

ಡೇಟಿಂಗ್‌: ವೈದ್ಯನಿಗೆ 66.50 ಲಕ್ಷ ರೂ. ಟೋಪಿ
ವಿಜಯನಗರದ 46 ವರ್ಷದ ವೈದ್ಯನಿಗೆ ಜು.31ರಂದು ಡೇಟಿಂಗ್‌ ವೆಬ್‌ಸೈಟ್‌ನಲ್ಲಿ ಲಕ್ಷ್ಮೀ ರೈ (45) ಎಂಬಾಕೆ ಪರಿಚಯವಾಗಿದ್ದಳು. ವೈದ್ಯನೊಂದಿಗೆ ವಾಟ್ಸ್‌ಆ್ಯಪ್‌ನಲ್ಲಿ ಸಲುಗೆಯಿಂದ ಚಾಟ್‌ಮಾಡುತ್ತಿ
ದ್ದಳು. ಆನ್‌ಲೈನ್‌ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿ ಲಕ್ಷಾಂತರ ರೂ. ಲಾಭ ಗಳಿಸಿದ್ದೇನೆ. ಈಗಲೇ ಇಲ್ಲಿ ದುಡ್ಡು ಹೂಡಿದರೆ ನಮ್ಮ ವೈವಾಹಿಕ ಜೀವನಕ್ಕೆ ಉಪಯೋಗವಾಗಲಿದೆ ಎಂದಿದ್ದಳು. ಬಳಿಕ ಆಕೆ ಕಳಿಸಿದ್ದ ಟೆಲಿಗ್ರಾಂ ಲಿಂಕ್‌ಗೆ ಸೇರಿಕೊಂಡು ಅದರಲ್ಲಿದ್ದ ಬ್ಯಾಂಕ್‌ ಖಾತೆಗೆ ಹಂತ
ಹಂತವಾಗಿ 66.50 ಲಕ್ಷ ರೂ. ವರ್ಗಾಯಿಸಿದ್ದ. ಬಳಿಕ ಆಕೆ ಸಂಪರ್ಕಕ್ಕೆ ಸಿಗಲಿಲ್ಲ. ಈಗ ವೈದ್ಯ ಸೈಬರ್‌ ಕ್ರೈಂ ಪೊಲೀಸರ ಮೊರೆ ಹೋಗಿದ್ದಾರೆ.

63.17 ಲಕ್ಷ ರೂ. ವಂಚನೆ
ನಾಗರಬಾವಿಯ ಜನಾರ್ದನ್‌ (67) ಅವರಿಗೆ ನ.29ರಂದು ಅಪರಿಚಿತ ವ್ಯಕ್ತಿಯೊಬ್ಬ ಫೆಡೆಕ್ಸ್‌ ಕೊರಿಯರ್‌ ಉದ್ಯೋಗಿ ಸೋಗಲ್ಲಿ ಕರೆ ಮಾಡಿ ನಿಮ್ಮ ಹೆಸರಿನಲ್ಲಿ ಥೈವಾನ್‌ಗೆ ಡ್ರಗ್ಸ್‌ ಪಾರ್ಸೆಲ್‌ ಹೋಗುತ್ತಿದೆ ಎಂದಿದ್ದ. ಕೆಲವೇ ಕ್ಷಣಗಳಲ್ಲಿ ಸ್ಕೈಪ್‌ ಮೂಲಕ ಜನಾರ್ದನ್‌ ಅವರನ್ನು ಸಂಪರ್ಕಿಸಿದ ಮತ್ತೂಬ್ಬ ವ್ಯಕ್ತಿ ತನ್ನ ಬ್ಯಾಂಕ್‌ ಖಾತೆಗೆ ಆರ್‌ಟಿಜಿಎಸ್‌ ಮೂಲಕ 63.17 ಲಕ್ಷ ರೂ. ವರ್ಗಾಯಿಸಿಕೊಂಡಿದ್ದ.

ಸೈಬರ್‌ ವಂಚನೆಗೊಳಗಾದರೆ ಹೀಗೆ ಮಾಡಿ
ಸೈಬರ್‌ ಕಳ್ಳರು ವಂಚಿಸಿದರೆ ಪೊಲೀಸ್‌ ಕಂಟ್ರೋಲ್‌ ರೂಮ್‌ 1930ಗೆ ಕರೆ ಮಾಡಿ. ಕೃತ್ಯ ಎಸಗಿದ ಒಂದು ಗಂಟೆಯೊಳಗೆ ಕರೆ ಮಾಡಿದರೆ ಪೊಲೀಸರು ನಿಮ್ಮ ಖಾತೆಯಿಂದ ಆರೋಪಿಗಳ ಖಾತೆಗೆ ವರ್ಗಾವಣೆಗೊಂಡ ದುಡ್ಡನ್ನು ಫ್ರೀಜ್‌ ಮಾಡುತ್ತಾರೆ. ಆಗ ಆರೋಪಿಗಳಿಗೆ ದುಡ್ಡು ಡ್ರಾ ಮಾಡಲು ಸಾಧ್ಯವಾಗುವುದಿಲ್ಲ. ಪೊಲೀಸರು ಬ್ಯಾಂಕ್‌ ಅಧಿಕಾರಿಗಳ ಜತೆಗೆ ಸಂಪರ್ಕ ಸಾಧಿಸಿ ನಿಮ್ಮ ದುಡ್ಡನ್ನು ಮರಳಿಸುತ್ತಾರೆ. ಸದ್ಯ ಸೈಬರ್‌ ವಂಚನೆ ಕುರಿತು ದೂರು ಕೊಡಲು ಪೊಲೀಸ್‌ ಠಾಣೆಗೆ ಅಲೆಯಬೇಕಾಗಿಲ್ಲ. ಡಿಡಿಡಿ.cyಚಿಛಿrcrಜಿಞಛಿ.ಜಟv.ಜಿn ಮೂಲಕ ಆನ್‌ಲೈನ್‌ನಲ್ಲೇ ದೂರು ಕೊಟ್ಟರೆ ಆಯಾ ಪ್ರದೇಶದ ಠಾಣೆಗಳಲ್ಲಿ ಎಫ್ಐಆರ್‌ ದಾಖಲಾಗುತ್ತದೆ. ಎಫ್ಐಆರ್‌ ಪ್ರತಿಯನ್ನೂ ಆನ್‌ಲೈನ್‌ನಲ್ಲೇ ಪಡೆದುಕೊಳ್ಳಬಹುದು.

ವಂಚನೆಗೊಳಗಾದವರಿಗೆ ಸ್ಥಳೀಯ ಪೊಲೀಸ್‌ ಠಾಣೆಗಳಲ್ಲಿ ದೂರು ನೀಡಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಸೈಬರ್‌ ವಂಚಕರ ಬಗ್ಗೆ ಎಚ್ಚರಿಕೆ ವಹಿಸಬೇಕು. ವೈಯಕ್ತಿಕ ಮಾಹಿತಿಗಳನ್ನು ಅಪರಿಚಿತರ ಬಳಿ ಹಂಚಿಕೊಳ್ಳದಿರುವುದು ಸೂಕ್ತ.
-ಬಿ.ದಯಾನಂದ್‌, ಬೆಂಗಳೂರು ಪೊಲೀಸ್‌ ಆಯುಕ್ತ.

 ಪಾರ್ಟ್‌ ಟೈಂ ಜಾಬ್‌: 37 ಲ.ರೂ. ನಾಮ
-ತುಂಗಾ ನಗರದ ಮೋಹನ್‌ (35) ಟೆಲಿಗ್ರಾಂನಲ್ಲಿ ಪಾರ್ಟ್‌ ಟೈಂ ಜಾಬ್‌ ಸಂದೇಶಕ್ಕೆ ಮರುಳಾಗಿ ಅಲ್ಲಿದ್ದ ನಂಬರ್‌ಗೆ ಕರೆ ಮಾಡಿದ್ದ. ಅಮೆಜಾನ್‌, ಫ್ಲಿಪ್‌ಕಾರ್ಟ್‌ಗಳಲ್ಲಿ ಕಡಿಮೆ ರೇಟಿಂಗ್‌ ಇರುವ ವಸ್ತುಗಳಿಗೆ ಒಳ್ಳೆಯ ರೇಟಿಂಗ್‌ ನೀಡಿದರೆ ದೊಡ್ಡ ಮೊತ್ತದ ಕಮಿಷನ್‌ ನೀಡುವುದಾಗಿ ನಂಬಿಸಿದ್ದರು. ಅನಂತರ ವಿವಿಧ ಶುಲ್ಕದ ನೆಪದಲ್ಲಿ ಹಂತಹಂತವಾಗಿ ಮೋಹನ್‌ರಿಂದ 37.63 ಲಕ್ಷ ರೂ.ಗಳನ್ನು ತನ್ನ ಖಾತೆಗೆ ಜಮೆ ಮಾಡಿಸಿಕೊಂಡಿದ್ದರು. ಬಳಿಕ ಸಂಪರ್ಕಕ್ಕೆ ಸಿಗದೇ ವಂಚಿಸಿದ್ದಾರೆ.

ಬೆಂಗಳೂರಿನಲ್ಲಿ ಕಳೆದ ಮೂರು ವರ್ಷಗಳಲ್ಲಿ ದಾಖಲಾದ ಸೈಬರ್‌ ಕ್ರೈಂ ಪ್ರಕರಣಗಳ ಅಂಕಿ-ಅಂಶ
ವರ್ಷ  ಪ್ರಕರಣ
2021  6,422
2022  9,940
2023  15,668

 ಅವಿನಾಶ ಮೂಡಂಬಿಕಾನ

ಟಾಪ್ ನ್ಯೂಸ್

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

1-ct

C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-vijay

Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!

1-ct

C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!

horatti

C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ

ct rav

C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ

MP-R

Davanagere: ಬಿಜೆಪಿ-ಕಾಂಗ್ರೆಸ್‌ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Sullia: ಅಸೌಖ್ಯದಿಂದ ಮಹಿಳೆ ಸಾವು

Sullia: ಅಸೌಖ್ಯದಿಂದ ಮಹಿಳೆ ಸಾವು

Kasaragod: ಅಪರಾಧ ಸುದ್ದಿಗಳು; ಕಾರ್ಮಿಕ ಆತ್ಮಹ*ತ್ಯೆ

Kasaragod: ಅಪರಾಧ ಸುದ್ದಿಗಳು; ಕಾರ್ಮಿಕ ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.