Jammu Kashmir; ಆರ್ಟಿಕಲ್ 370 ರದ್ದತಿ ಕ್ರಮ ಎತ್ತಿ ಹಿಡಿದ ಸುಪ್ರೀಂ ಕೋರ್ಟ್


Team Udayavani, Dec 11, 2023, 11:38 AM IST

supreme-court

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಣಯ ಪ್ರಶ್ನಿಸಿ ಸಲ್ಲಿಕೆ ಯಾಗಿರುವ ಅರ್ಜಿಗಳ ಕುರಿತು ಬಹುನಿರೀಕ್ಷೆಯ ತೀರ್ಪನ್ನು ಸುಪ್ರೀಂಕೋರ್ಟ್‌ ಸೋಮವಾರ ಪ್ರಕಟಿಸಿದೆ.

ಸಿಜೆಐ ಡಿವೈ ಚಂದ್ರಚೂಡ್ ಅವರು ತೀರ್ಪನ್ನು ಓದಲು ಪ್ರಾರಂಭಿಸಿದರು. ಇಲ್ಲಿ ಮೂರು ಅಭಿಪ್ರಾಯಗಳಿವೆ ಎಂದರು. ಒಂದು ಸ್ವತಃ ಸಿಜೆಐ, ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಬಿಆರ್ ಗವಾಯಿ ಅವರದ್ದು. ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ತಮ್ಮದೇ ಆದ ಪ್ರತ್ಯೇಕ ಅಭಿಪ್ರಾಯಗಳನ್ನು ಬರೆದಿದ್ದಾರೆ ಎಂದರು.

ಜಮ್ಮು ಕಾಶ್ಮೀರವು ಭಾರತಕ್ಕೆ ವಿಲೀನವಾದ ಬಳಿಕ ಅದು ಸಾರ್ವಭೌಮತ್ವವನ್ನು ಹೊಂದಿಲ್ಲ. ಆರ್ಟಿಕಲ್ 370 ತಾತ್ಕಾಲಿಕ ವಿಧಾನವಾಗಿದ್ದು, ಅದನ್ನು ರದ್ದುಗೊಳಿಸಿದ ನಿರ್ಧಾರವು ಮಾನ್ಯ ಎಂದು ಪೀಠ ಹೇಳಿದೆ. ಈ ಮೂಲಕ ಕೇಂದ್ರ ಸರ್ಕಾರದ ತೀರ್ಮಾನವನ್ನು ಎತ್ತಿ ಹಿಡಿದಿದೆ

ಲಡಾಖ್ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನಾಗಿಸಿದ ಕೇಂದ್ರದ ನಿರ್ಧಾರವನ್ನೂ ಸುಪ್ರೀಂ ಎತ್ತಿ ಹಿಡಿದಿದೆ.  ಜಮ್ಮು ಕಾಶ್ಮೀರದಲ್ಲಿ ಚುನಾವಣೆಯನ್ನು ತಡೆಯುವಂತಿಲ್ಲ. ಹೀಗಾಗಿ 2024ರ ಸಪ್ಟೆಂಬರ್ 30ರೊಳಗೆ ಚುನಾವಣೆ ನಡೆಸಲು ಸುಪ್ರೀಂ ಸೂಚಿಸಿದೆ.

ತೀರ್ಪಿನಲ್ಲಿ ಏನಿದೆ?

ತೀರ್ಪು ಓದಿದ ಸಿಜೆಐ ಚಂದ್ರಚೂಡ್, “ರಾಜ್ಯದ ಪರವಾಗಿ ಒಕ್ಕೂಟವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವು ಸವಾಲಿಗೆ ಒಳಪಡುವುದಿಲ್ಲ. ಇದು ಅವ್ಯವಸ್ಥೆ ಮತ್ತು ಅನಿಶ್ಚಿತತೆಗೆ ಕಾರಣವಾಗುತ್ತದೆ ಮತ್ತು ರಾಜ್ಯದ ಆಡಳಿತವನ್ನು ಸ್ಥಗಿತಗೊಳಿಸುತ್ತದೆ ಎಂದರು.

ರಾಷ್ಟ್ರಪತಿ ಆಳ್ವಿಕೆಯ ಅವಧಿಯಲ್ಲಿ ರಾಜ್ಯದಲ್ಲಿ ಬದಲಾಯಿಸಲಾಗದ ಪರಿಣಾಮಗಳ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಳ್ಳಲು ಸಾಧ್ಯವಿಲ್ಲ ಎಂಬ ಅರ್ಜಿದಾರರ ವಾದವನ್ನು ಒಪ್ಪಲಾಗದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಭಾರತಕ್ಕೆ ವಿಲೀನವಾದ ನಂತರ ಜಮ್ಮು ಮತ್ತು ಕಾಶ್ಮೀರವು ಆಂತರಿಕ ಸಾರ್ವಭೌಮತ್ವದ ಅಂಶವನ್ನು ಉಳಿಸಿಕೊಂಡಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಭಾರತದ ಸಂವಿಧಾನದ 1 ಮತ್ತು 370 ನೇ ವಿಧಿಗಳಿಂದ ಸ್ಪಷ್ಟವಾದಂತೆ ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆರ್ಟಿಕಲ್ 370 ತಾತ್ಕಾಲಿಕ ನಿಬಂಧನೆಯಾಗಿದೆ ಎಂದು ಅದು ಹೇಳಿದೆ.

370 ನೇ ವಿಧಿಯು ರಾಜ್ಯದಲ್ಲಿನ ಯುದ್ಧದ ಪರಿಸ್ಥಿತಿಗಳಿಂದಾಗಿ ಮಧ್ಯಂತರ ವ್ಯವಸ್ಥೆಯಾಗಿದೆ ಎಂದು ನ್ಯಾಯಾಲಯವು ಹೇಳುತ್ತದೆ. 370 ನೇ ವಿಧಿ ತಾತ್ಕಾಲಿಕ ನಿಬಂಧನೆಯಾಗಿದೆ ಎಂದು ಎಂದು ಸಿಜೆಐ ತೀರ್ಪಿನಲ್ಲಿ ಹೇಳಿದರು.

ರಾಷ್ಟ್ರಪತಿ ಆಳ್ವಿಕೆಯ ಘೋಷಣೆಯ ನಂತರ ರಾಷ್ಟ್ರಪತಿಗಳ ಕ್ರಮಗಳಿಗೆ ಮಿತಿಗಳಿದ್ದರೂ, ಈ ಸಂದರ್ಭದಲ್ಲಿ, ಅವು ಮಾನ್ಯವಾಗಿರುತ್ತವೆ. 356 ನೇ ವಿಧಿಯ ಅಡಿಯಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಘೋಷಿಸಿದ ನಂತರ ರಾಜ್ಯಪಾಲರು /ರಾಜ್ಯ ಶಾಸಕಾಂಗವಾಗಿ ಅಧಿಕಾರ ವಹಿಸಿಕೊಳ್ಳಲು ರಾಷ್ಟ್ರಪತಿ ಮತ್ತು ಸಂಸತ್ತಿಗೆ ಅಡ್ಡಿಯಾಗುವುದಿಲ್ಲ. ರಾಷ್ಟ್ರಪತಿಗಳ ಆದೇಶಗಳು ದುರಾಚಾರ ಅಥವಾ ಅಧಿಕಾರದ ಬಾಹ್ಯ ಚಲಾವಣೆಯಾಗಿದೆ ಎಂಬುದು ಪ್ರಾಥಮಿಕವಾಗಿ (ಮೇಲ್ನೋಟಕ್ಕೆ) ಕಂಡು ಬರುವುದಿವಿಲ್ಲ ಎಂದು ಸಿಜೆಐ ಹೇಳುತ್ತಾರೆ.

370 ನೇ ವಿಧಿಯು ಜಮ್ಮು ಮತ್ತು ಕಾಶ್ಮೀರವನ್ನು ಒಕ್ಕೂಟದೊಂದಿಗೆ ಸಾಂವಿಧಾನಿಕ ಏಕೀಕರಣಕ್ಕಾಗಿ ಉದ್ದೇಶಿಸಲಾಗಿತ್ತು, ಅದು ವಿಭಜನೆಗಾಗಿ ಅಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ ಮತ್ತು 370 ನೇ ವಿಧಿ ಅಸ್ತಿತ್ವದಲ್ಲಿಲ್ಲ ಎಂದು ರಾಷ್ಟ್ರಪತಿಗಳು ಘೋಷಿಸಬಹುದು ಎಂದರು.

ಆಗಸ್ಟ್ 2019 ರ ಆದೇಶವನ್ನು ಹೊರಡಿಸಲು ರಾಷ್ಟ್ರಪತಿಗಳು ಆರ್ಟಿಕಲ್ 370 (3) ರ ಅಡಿಯಲ್ಲಿ ಅಧಿಕಾರವನ್ನು ಚಲಾಯಿಸುವಲ್ಲಿ ಯಾವುದೇ ತಪ್ಪುಗಳಿಲ್ಲ. ಹೀಗಾಗಿ, ನಾವು ರಾಷ್ಟ್ರಪತಿ ಅಧಿಕಾರದ ಕ್ರಮವನ್ನು ಮಾನ್ಯ ಮಾಡುತ್ತೇವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

*

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಅವರ ನೇತೃತ್ವದ ನ್ಯಾಯಪೀಠವು ತೀರ್ಪು ಪ್ರಕಟಿಸಿದ್ದು, ನ್ಯಾಯಮೂರ್ತಿ ಸಂಜಯ್‌ ಕಿಶನ್‌ ಕೌಲ್‌, ನ್ಯಾ.ಮೂರ್ತಿ ಸಂಜೀವ್‌ ಖನ್ನಾ, ನ್ಯಾ.ಮೂ. ಬಿ.ಆರ್‌.ಗವಾಯಿ ಮತ್ತು ನ್ಯಾ.ಮೂ. ಸೂರ್ಯಕಾಂತ್‌ ಅವರನ್ನೂ ನ್ಯಾಯಪೀಠ ಒಳಗೊಂಡಿದೆ.

2019ರ ಆ. 5ರಂದು ಮೋದಿ ನೇತೃತ್ವದ ಕೇಂದ್ರಸರ್ಕಾರ 370ನೇ ವಿಧಿಯನ್ನು ರದ್ದುಗೊಳಿಸಿತ್ತು. ಈ ನಿರ್ಣಯದ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಹಲವು ಅರ್ಜಿಗಳು ಸುಪ್ರೀಂಗೆ ಸಲ್ಲಿಕೆಯಾಗಿದ್ದವು. 2023ರ ಆ.2ರಂದು ಸಿಜೆಐ ನೇತೃತ್ವದ ಪಂಚಸದಸ್ಯ ಪೀಠವು ಅರ್ಜಿಗಳ ವಿಚಾರಣೆ ಆರಂಭಿಸಿತ್ತು. ಸೆ.5ರಂದು 16 ದಿನಗಳ ವಾದ-ವಿವಾದದ ಬಳಿಕ ತೀರ್ಪು ನೀಡಿದೆ.

ವಿಶೇಷ ಸ್ಥಾನಮಾನದ ಸಾಂವಿಧಾನಿಕ ಮಾನ್ಯತೆ, ಜಮ್ಮು ಮತ್ತು ಕಾಶ್ಮೀರ ಪುನರ್‌ ರಚನಾ ಕಾಯ್ದೆಯ ಸಿಂಧುತ್ವ ಮತ್ತು ರಾಜ್ಯಪಾಲರ ಆಡಳಿತವನ್ನು 2019ರ ನಂತರವೂ ವಿಸ್ತರಣೆಯ ಬಗ್ಗೆ ಆಕ್ಷೇಪಣೆ ಬಗ್ಗೆ ವಾದ- ಪ್ರತಿವಾದಗಳು ನಡೆದಿತ್ತು.

ಅಟಾರ್ನಿ ಜನರಲ್‌ ಆರ್‌.ವೆಂಕಟರಮಣಿ, ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಹರೀಶ್‌ ಸಾಳ್ವೆ, ಕಪಿಲ್‌ ಸಿಬಲ್‌, ಧುಷ್ಯಂತ್‌ ದವೆ ನ್ಯಾಯವಾದಿಗಳಾಗಿದ್ದರು.

ಟಾಪ್ ನ್ಯೂಸ್

1-a-bb

Pro Kabaddi: ಬೆಂಗಳೂರು ಬುಲ್ಸ್‌ ಗೆ 18ನೇ ಸೋಲು

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

“ರವಿ ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

“CT Ravi ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

1-vasu

Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

mohan bhagwat

Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-a-bb

Pro Kabaddi: ಬೆಂಗಳೂರು ಬುಲ್ಸ್‌ ಗೆ 18ನೇ ಸೋಲು

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

“ರವಿ ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

“CT Ravi ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

1-max

Max; ಟ್ರೈಲರ್ ಬಿಡುಗಡೆ: ಭರ್ಜರಿ ಲುಕ್ ನಲ್ಲಿ ಕಿಚ್ಚ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.