Belagavi; 13ರಂದು ಕಾಂಗ್ರೆಸ್ ಸರ್ಕಾರ ವಿರುದ್ಧ ಬಿಜೆಪಿಯಿಂದ ಚಡಿ ಏಟು ಆಂದೋಲನ

Team Udayavani, Dec 11, 2023, 10:20 AM IST

13ರಂದು ಕಾಂಗ್ರೆಸ್ ಸರ್ಕಾರ ವಿರುದ್ಧ ಬಿಜೆಪಿಯಿಂದ ಚಡಿ ಏಟು ಆಂದೋಲನ

ಬೆಳಗಾವಿ: ರಾಜ್ಯ ಸರ್ಕಾರದ ರೈತ ವಿರೋಧಿ, ಬರ ನಿರ್ವಹಣೆಯಲ್ಲಿ ವಿಫಲವಾಗಿ ಬರದ ಮೇಲೆ ಬರೆ ಎಳೆಯುತ್ತಿರುವುದನ್ನು ಖಂಡಿಸಿ ಸರ್ಕಾರಕ್ಕೆ ಬಾರುಕೊಲಿನ ಚಡಿ ಏಟು ನೀಡಲು ಡಿ.‌ 13ರಂದು ಮಧ್ಯಾಹ್ನ‌ 3 ಗಂಟೆಗೆ ನಗರದ ಬಿ.ಎಸ್. ಯಡಿಯೂರಪ್ಪ ಮಾರ್ಗದಲ್ಲಿರುವ ಮೈದಾನದಲ್ಲಿ ಪ್ರತಿಭಟನಾ ಸಮಾವೇಶ ನಡೆಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಡಿ. 13ರಂದು ನಡೆಯಲಿರುವ ಬಿಜೆಪಿಯ ಬೃಹತ್ ಪ್ರತಿಭಟನೆಯಲ್ಲಿ ಸುಮಾರು 25 ಸಾವಿರ ರೂ. ಜನರು ಭಾಗವಹಿಸಲಿದ್ದಾರೆ ಎಂದರು.

ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಸದಾನಂದ ಗೌಡ, ಮುಖಂಡರಾದ ಗೋವಿಂದ‌ ಕಾರಜೋಳ, ಕೆ.ಎಸ್. ಈಶ್ವರಪ್ಪ, ಬಿ.‌ ಶ್ರೀರಾಮುಲು, ವಿಪಕ್ಷ ನಾಯಕ ಆರ್. ಅಶೋಕ, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿ ಎಲ್ಲ ನಾಯಕರು ಭಾಗವಹಿಸಲಿದ್ದಾರೆ. ಬಾರುಕೋಲಿನ ಚಡಿ ಏಟು ನೀಡುವ ಆಂದೋಲನ ನಡೆಸಲಾಗವುದು ಎಂದು ತಿಳಿಸಿದರು.

ಬರ ನಿರ್ವಹಣೆಯಲ್ಲಿ ಕರ್ನಾಟಕ ಸರ್ಕಾರ ವಿಫಲವಾಗಿದೆ. 125 ವರ್ಷಗಳಲ್ಲಿಯೇ ಇಂಥ ದೊಡ್ಡ ಮಳೆ‌ ಕೊರತೆ ಆಗಿದ್ದರೂ ರಾಜ್ಯ ಸರ್ಕಾರ 125 ರೂ. ಅನ್ನೂ ಬಿಡುಗಡೆ ಮಾಡಿಲ್ಲ.‌ ಇನ್ನೂವರೆಗೆ ಯಾವುದೇ ಶಾಸಕರಿಗೆ ಅನುದಾನ ನೀಡುತ್ತಿಲ್ಲ.‌ ಆತ್ಮಹತ್ಯೆ ಮಾಡಿಡ‌ರೈತರಿಗೂ ಪರಿಹಾರ ನೀಡುತ್ತಿಲ್ಲ. ಎಂದು ದೂರಿದರು.

ಅಲ್ಪಸಂಖ್ಯಾತರ ಓಲೈಕೆಗಾಗಿ 10 ಸಾವಿರ‌ ಕೋಟಿ ರೂ. ನೀಡುವುದಾಗಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ರೈತರಿಗೆ ಸರಿಯಾಗಿ ವಿದ್ಯುತ್ ನೀಡದೆ ಬರದ ಮೇಲೆ ಬರೆ ಎಳೆಯುತ್ತಿದೆ.‌ ಹೊಸ ಬೋರ್ ವೆಲ್ ಹಾಕಬೇಕಾದರೆ ಟ್ರಾನ್ಸಫಾರ್ಮರ್, ವಿದ್ಯುತ್ ಖರ್ಚಿಗೆ 2ರಿಂದ 3 ಲಕ್ಷ ರೂ. ರೈತರೇ ಭರಿಸಬೇಕಿದೆ. ಇದು ರೈತ ವಿರೋಧಿ ನೀತಿಯಾಗಿದ್ದು, ರೈತರನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಒಬ್ಬ ಶಾಕಸರಿಗೂ ಅನುದಾನ ಸಿಗುತ್ತಿಲ್ಲ. ಉತ್ತರ ಕರ್ನಾಟಕದ ನೀರಾವರಿ ಯೋಜನೆಗೆ ಅನುದಾನ ನೀಡಿಲ್ಲ. ರೈತರು, ಉತ್ತರ ಕರ್ನಾಟಕದಲ್ಲಿ ಒಂದೂ‌ ರಸ್ತೆ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಎಸ್ ಸಿ, ಎಸ್ಟಿ ಸಮುದಾಯದ ಅನುದಾನವನ್ನು ಬೇರೆ ಇಲಾಖೆಗೆ ನೀಡಿದೆ. ವಿವಿಧ ನಿಗಮಗಳಿಗೆ ಒಂದು ಪೈಸೆಯೂ ನೀಡಿಲ್ಲ.‌ ಅಲ್ಪಸಂಖ್ಯಾತರಿಗೆ ಮಾತ್ರ ಪ್ರಥಮಾದ್ಯತೆ ನೀಡುತ್ತಿದೆ. 11,500 ಕೋಟಿ ರೂ. ಅನುದಾನವನ್ನು ವಾಪಸ್ ಪಡೆದು ಎಸ್ ಸಿ, ಎಸ್ ಟಿಗೆ ನೀಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ನಗರ ಅಧ್ಯಕ್ಷ ಅನಿಲ್ ಬೆನಕೆ, ಮುಖಂಡರಾದ ಎಂ.ಬಿ. ಜಿರಲಿ, ಡಾ. ರವಿ ಪಾಟೀಲ ಇದ್ದರು.

ಟಾಪ್ ನ್ಯೂಸ್

Test Cricket : ಮೆಂಡಿಸ್‌ದ್ವಯರಿಂದ ಚೇತರಿಸಿಕೊಂಡ ಶ್ರೀಲಂಕಾ

Test Cricket : ಮೆಂಡಿಸ್‌ದ್ವಯರಿಂದ ಚೇತರಿಸಿಕೊಂಡ ಶ್ರೀಲಂಕಾ

Nirashritha

Udupi: ಭಿಕ್ಷುಕರ ಪರಿಹಾರ ಕೇಂದ್ರಕ್ಕೆ ಜಿಲ್ಲಾಡಳಿತದಲ್ಲಿ ಭಿಕ್ಷೆ ಬೇಡಬೇಕಾದ ಸ್ಥಿತಿ

1-horoscope

Daily Horoscope: ಮನೋಬಲವನ್ನು ಹೆಚ್ಚಿಸಿ ಕೊಂಡಷ್ಟೂ ಹೆಚ್ಚು ಅನುಕೂಲ

Monkey-Pox

Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-belagavi

Belagavi: ಗಣೇಶ ಮೆರವಣಿಗೆ ವೇಳೆ ಟ್ರಾಲಿಗೆ ಸಿಲುಕಿ ವ್ಯಕ್ತಿ ಸಾವು

1-belgavi

Belagavi; ಗಣಪತಿ ಮೂರ್ತಿ ವಿಸರ್ಜನೆ ವೇಳೆ ಮೂವರಿಗೆ ಚಾಕು ಇರಿತ!!

Belagavi: ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಗೆ ಚಾಲನೆ: ವೈಭವದ ಮೆರವಣಿಗೆ

Belagavi: ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಗೆ ಚಾಲನೆ

Train ಬೆಳಗಾವಿಗೆ ಶೀಘ್ರ ಮತ್ತೊಂದು ರೈಲು: ಸೋಮಣ್ಣ

Train ಬೆಳಗಾವಿಗೆ ಶೀಘ್ರ ಮತ್ತೊಂದು ರೈಲು: ಸೋಮಣ್ಣ

Ramesh Jarkiholi: ಮುನಿರತ್ನ ಬಂಧನದ ಹಿಂದೆ ಡಿಕೆಶಿ ಕೈವಾಡ

Ramesh Jarkiholi: ಮುನಿರತ್ನ ಬಂಧನದ ಹಿಂದೆ ಡಿಕೆಶಿ ಕೈವಾಡ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Test Cricket : ಮೆಂಡಿಸ್‌ದ್ವಯರಿಂದ ಚೇತರಿಸಿಕೊಂಡ ಶ್ರೀಲಂಕಾ

Test Cricket : ಮೆಂಡಿಸ್‌ದ್ವಯರಿಂದ ಚೇತರಿಸಿಕೊಂಡ ಶ್ರೀಲಂಕಾ

Nirashritha

Udupi: ಭಿಕ್ಷುಕರ ಪರಿಹಾರ ಕೇಂದ್ರಕ್ಕೆ ಜಿಲ್ಲಾಡಳಿತದಲ್ಲಿ ಭಿಕ್ಷೆ ಬೇಡಬೇಕಾದ ಸ್ಥಿತಿ

1-horoscope

Daily Horoscope: ಮನೋಬಲವನ್ನು ಹೆಚ್ಚಿಸಿ ಕೊಂಡಷ್ಟೂ ಹೆಚ್ಚು ಅನುಕೂಲ

Monkey-Pox

Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.