Shimoga; ವಿರೋಧ ಪಕ್ಷವಾಗಿ ಭಾರತೀಯ ಜನತಾ ಪಕ್ಷ ವಿಫಲವಾಗಿದೆ: ಆಯನೂರು ಮಂಜುನಾಥ್


Team Udayavani, Dec 11, 2023, 2:33 PM IST

Shimoga; ವಿರೋಧ ಪಕ್ಷವಾಗಿ ಭಾರತೀಯ ಜನತಾ ಪಕ್ಷ ವಿಫಲವಾಗಿದೆ: ಆಯನೂರು ಮಂಜುನಾಥ್

ಶಿವಮೊಗ್ಗ: ಬೆಳಗಾವಿಯಲ್ಲಿ ಅದಿವೇಶನ ನಡೆಯುತ್ತಿದೆ. ಕುಡಿಯುವ ನೀರಿನ ಹಾಹಾಕಾರ ಸೇರಿ ಉತ್ತರ ಕನ್ನಡ ಹತ್ತಾರು ಜಲ್ವಂತ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚೆಯಾಗಿಲ್ಲ. ಈ ಕುರಿತು ವಿರೋಧ ಪಕ್ಷ ಚರ್ಚೆ ಮಾಡುತ್ತದೆಂದು ನಿರೀಕ್ಷೆಯಿತ್ತು. ವಿರೋಧ ಪಕ್ಷವಾಗಿ ಭಾರತೀಯ ಜನತಾ ಪಕ್ಷ ವಿಫಲವಾಗಿದೆ ಎಂದು ಮಾಜಿ ಸಂಸದ ಆಯನೂರು ಮಂಜುನಾಥ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆತಂರಿಕ ಹೋರಾಟದಿಂದ ಭಾರತೀಯ ಜನತಾ ಪಕ್ಷ ತನ್ನ ದೌರ್ಬಲ್ಯ ತೊರಿಸಿಕೊಂಡಿದೆ. ಸರ್ವ ಸಮ್ಮತ ಇಲ್ಲದೆ ಭಿನ್ನಮತ ಸ್ಪೋಟಗೊಂಡಿದೆ. ವಿರೋಧ ಪಕ್ಷದ ನಾಯಕನ ಬಗ್ಗೆ ಅಪಸ್ವರ ಎತ್ತುತ್ತಿದ್ದಾರೆ.  ಯತ್ನಾಳ್ ಬಹಿರಂಗ ಅಸಮಾಧಾನ ತೊಂಡಿಕೊಂಡಿದ್ದಾರೆ. ವಿಧಾನ ಪರಿಷತ್ ನಲ್ಲಿ ವಿರೋಧ ಪಕ್ಷದ ನಾಯಕನಿಲ್ಲ. 26 ಜನ ಬಿಜೆಪಿಯ ಸಂಸದರು ಇಲ್ಲಿಯವರೆಗೆ ಬರಗಾಲದ ಬಗ್ಗೆ ಮಾತಾಡಿಲ್ಲ. ಪ್ರಧಾನಿಗಳನ್ನು ಭೇಟಿ ಮಾಡಿ ಪರಿಹಾರ ಹಣ ತರುವುದನ್ನು ಮರೆತಿದ್ದಾರೆ. ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವುದು ಬಿಟ್ಟು ಪುಡಿ ರೌಡಿ ಮಣಿಕಂಠನ ವಿಷಯ ಇಟ್ಟುಕೊಂಡು ಅಧಿವೇಶನ ಬಾಯ್ಕಾಟ್ ಮಾಡುತ್ತಾರೆ. ಪ್ರಜಾತಂತ್ರ ವ್ಯವಸ್ಥೆ ಬಗ್ಗೆ ಮಾತನಾಡುವ ಯಾವ ನೈತಿಕತೆ ಬಿಜೆಪಿ ಇಟ್ಟುಕೊಂಡಿಲ್ಲ ಎಂದರು.

ರಾಜ್ಯಾಧ್ಯಕ್ಷರು ದೆಹಲಿಗೆ ಹೋದ ಪುಟ್ಟಾ, ಬಂದ ಪುಟ್ಟ ಎಂದಾಗಿದೆ. ಟೀಕೆ ಟಿಪ್ಪಣಿಗಳಲ್ಲಿ‌ ಮಾತ್ರ ವಿರೋಧ ಮಾಡುತ್ತಿದೆ. ಸದನವನ್ನು ವಿರೋಧ ಪಕ್ಷ ವಿಫಲಗೊಳಿಸಿದೆ. ಇದರ ಸಂಪೂರ್ಣ ಹೊಣೆಯನ್ನು ಬಿಜೆಪಿ ನಾಯಕರು ಹೊರಬೇಕು ಎಂದರು.

ಕರ್ನಾಟಕದ ಸಂಕಷ್ಟಗಳಿಗೆ ಧ್ವನಿಯಾಗದ ವಿರೋಧ ಪಕ್ಷದ ನಾಯಕರು ರಾಜ್ಯದ ಜನರ ಕ್ಷಮೆ ಕೇಳಬೇಕು. ಕಾಂಗ್ರೆಸ್ ಸರ್ಕಾರ ತನ್ನ ಇತಿಮಿತಿಗಳಲ್ಲಿ ಪರಿಹಾರ ನೀಡಲು ಮುಂದಾಗಿದೆ. ಆದರೆ ಕೇಂದ್ರ ಸರ್ಕಾರ ಏನು ಮಾಡಿದೆ. ಕರ್ನಾಟಕದ 25 ಜನ ಸಂಸದರು 5 ಜನ ಮಂತ್ರಿಗಳು ಏನು ಮಾಡುತ್ತಿದ್ದಾರೆ. ಏನು ಪ್ರಶ್ನೆ ಕೇಳದೆ ಇರುವ ಸಂಸದರು ರಾಜ್ಯದ ಜನರ ಕ್ಷೇಮೆ ಕೇಳಬೇಕು ಎಂದು ಆಯನೂರು ಆಗ್ರಹಿಸಿದರು.

ಸರ್ಕಾರದ ಭವಿಷ್ಯ ಬಗ್ಗೆ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಸುಳ್ಳು ಭವಿಷ್ಯ ಹೇಳುವವರು ಇವರು. ರಸ್ತೆ ಬದಿಯಲ್ಲಿ ಗಿಣಿ ಇಟ್ಟುಕೊಂಡು ಭವಿಷ್ಯ ಹೇಳುತ್ತಾರೆ. ಯತ್ನಾಳ್, ಕುಮಾರಸ್ವಾಮಿ, ಈಶ್ವರಪ್ಪ ಭವಿಷ್ಯ ಹೇಳುತ್ತಾರೆ. ಅವರ ಭವಿಷ್ಯವೇ ಅವರಿಗೆ ಗೊತ್ತಿಲ್ಲ. ಹೋರಿ ಹಿಂದೆ ಓಡುವ ನರಿಗಳ ಥರ ಕಾಣುತ್ತಿದ್ದಾರೆ ಹೊರತು ಬೇಟೆಯಾಡುವ ಹುಲಿಗಳ ತರ ಕಾಣುತ್ತಿಲ್ಲ. ಈಶ್ವರಪ್ಪ ರಾಜಕೀಯ ಮುತ್ಸದಿ ಅಲ್ಲ. ಅವರ ಬಗ್ಗೆ ಮಾತನಾಡುವುದೇ ವ್ಯರ್ಥ ಎಂದು ಟೀಕಿಸಿದರು.

ಸಂಸದ ರಾಘವೇಂದ್ರ ಅವರಿಗೆ ಮಠಾಧೀಶರು ಸನ್ಮಾನ ಕಾರ್ಯಕ್ರಮ ವಿಚಾರಕ್ಕೆ ಮಾತನಾಡಿ, ಬಿಜೆಪಿಯ ಪ್ರಾಯೋಜಿತ ಮಠಾಧೀಶರಾಗಿ ಸನ್ಮಾನ ಮಾಡಿದ್ದಾರೋ‌ ಗೊತ್ತಿಲ್ಲ. ಸಮಾಜದ ಯಾವ ಮುಖಂಡರಿಗೂ ಆಹ್ವಾನ ನೀಡಿಲ್ಲ. ರಾಘವೇಂದ್ರ ಅವರನ್ನು ಒಲೈಸುವ ಕೆಲಸ ಮಠಾಧೀಶರು ಮಾಡುತ್ತಿದ್ದಾರೆ. ಸಾರ್ಥಕ ಸನ್ಮಾನ ಮಾಡುವುದಾದರೆ ವಿಧಾನ ಪರಿಷತ್ ಸದಸ್ಯ ರುದ್ರೇಗೌಡರಿಗೆ ಸನ್ಮಾನ ಮಾಡಲಿ ಅಧಿಕಾರತನ‌, ಶ್ರೀಮಂತಿಗೆ ಬೆಂಬಲಿಸುವ ಕಾರ್ಯ ಸ್ವಾಮೀಜಿಗಳಿಗೆ ತರವಲ್ಲ. ಬಿಜೆಪಿ ಗೆ ಸಂಸದ ಸ್ಥಾನ ತಂದು ಕೊಟ್ಟವನು ನಾನು. ನಾನು ನಾಲ್ಕು ಸದನ ಹೋಗಿ ಬಂದಿದ್ದೇನೆ ನಾನು ನೆನಪಾಗಲಿಲ್ಲ. ಮುಖ್ಯಮಂತ್ರಿ ಮಗ ಎಂದು ಸಾಧಕನಾಗಿ ಕಂಡರಾ ರಾಘವೇಂದ್ರ? ಸ್ವಾಮೀಜಿಗಳು ಪಕ್ಷಕ್ಕೆ ಸೀಮಿತರಾಗಬಾರದು. ಸ್ವಾಮೀಜಿಗಳು ಸಹ ಬಿಜೆಪಿಯ ಪ್ರಚಾರಕರಾಗಿ ಕೆಲಸ ಮಾಡಿದ್ದಾರೆ. ಸ್ವಾಮೀಜಿಗಳಿಂದ ಇದಾಗಬಾರದು ಎಂದು ಹೇಳಿದರು.

ಟಾಪ್ ನ್ಯೂಸ್

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shiv sena:ರಾಹುಲ್‌ ಗಾಂಧಿ ನಾಲಿಗೆ ಕತ್ತರಿಸಿದವರಿಗೆ 11 ಲಕ್ಷ ರೂ. ಬಹುಮಾನ: ಶಿವಸೇನಾ ಶಾಸಕ

Shiv sena:ರಾಹುಲ್‌ ಗಾಂಧಿ ನಾಲಿಗೆ ಕತ್ತರಿಸಿದವರಿಗೆ 11 ಲಕ್ಷ ರೂ. ಬಹುಮಾನ: ಶಿವಸೇನಾ ಶಾಸಕ

Delhi Govt: ದೆಹಲಿ ಸಿಎಂ ರೇಸ್‌ ನಲ್ಲಿದ್ದಾರೆ ಹಲವರು..: ಇಲ್ಲಿದೆ ವಿವರ

Delhi Govt: ದೆಹಲಿ ಸಿಎಂ ರೇಸ್‌ ನಲ್ಲಿದ್ದಾರೆ ಹಲವರು..: ಇಲ್ಲಿದೆ ವಿವರ

Arvind Kejriwal announced his resignation from the post of Delhi CM

Arvind Kejriwal: ದೆಹಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಅರವಿಂದ ಕೇಜ್ರಿವಾಲ್

Bihar; ಅಧಿಕಾರಕ್ಕೆ ಬಂದಕೂಡಲೇ ಮದ್ಯ ನಿಷೇಧ ರದ್ದು ಮಾಡುತ್ತೇನೆ: ಪ್ರಶಾಂತ್‌ ಕಿಶೋರ್‌

Bihar; ಅಧಿಕಾರಕ್ಕೆ ಬಂದಕೂಡಲೇ ಮದ್ಯ ನಿಷೇಧ ರದ್ದು ಮಾಡುತ್ತೇನೆ: ಪ್ರಶಾಂತ್‌ ಕಿಶೋರ್‌

Haryana: ಬಿಜೆಪಿ ವಿರುದ್ಧವೇ ಬಂಡಾಯ, ಸ್ವತಂತ್ರ ಅಭ್ಯರ್ಥಿಯಾಗಿ ಸಾವಿತ್ರಿ ಜಿಂದಾಲ್ ನಾಮಪತ್ರ

Haryana: ಬಿಜೆಪಿ ವಿರುದ್ಧವೇ ಬಂಡಾಯ, ಸ್ವತಂತ್ರ ಅಭ್ಯರ್ಥಿಯಾಗಿ ಸಾವಿತ್ರಿ ಜಿಂದಾಲ್ ನಾಮಪತ್ರ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.