Christmas ಹಬ್ಬದ ಪೂರ್ವ ತಯಾರಿಯಲ್ಲಿ ಕ್ರೈಸ್ತ ಬಾಂಧವರು
Team Udayavani, Dec 11, 2023, 2:11 PM IST
ಪಣಜಿ: ರಾಜ್ಯದಲ್ಲಿ ಕ್ರಿಸ್‍ಮಸ್ ಹಬ್ಬದ ಸಂಭ್ರಮಾಚರಣೆಯ ಸಿದ್ಧತೆ ಆರಂಭಗೊಂಡಿದ್ದು, ಕ್ರಿಸ್‍ಮಸ್ ಹಬ್ಬದ ವಿವಿಧ ವಸ್ತುಗಳು ಮಾರುಕಟ್ಟೆಗೆ ಬರುತ್ತಿವೆ. ಅಲಂಕಾರಗಳು, ವಿದ್ಯುತ್ ದೀಪಗಳ ಮಾಲೆಗಳು, ಕ್ರಿಸ್ಮಸ್ ಟ್ರೀಗಳು, ಸಾಂಟಾ ಕ್ಲಾಸ್ ಗಳು, ಸ್ನೋಬಾಲ್ ಗಳು, ಟೋಪಿಗಳು, ಸಿದ್ಧವಾದ ಕೊಟ್ಟಿಗೆಗಳು ಮತ್ತು ವರ್ಣರಂಜಿತ ನಕ್ಷತ್ರಗಳು ಮತ್ತು ಮೂನ್ ಲೈಟ್ ಗಳು ಮಾರುಕಟ್ಟೆ ಪ್ರವೇಶಿಸಿವೆ.
ಕ್ರಿಸ್‍ಮಸ್ ಹಬ್ಬದ ಹಿನ್ನೆಲೆ ನಾಗರಿಕರು ಮಾರುಕಟ್ಟೆಯಲ್ಲಿ ವಸ್ತುಗಳನ್ನು ಖರೀದಿಸುವುದನ್ನು ಕಾಣಬಹುದು. ಹಬ್ಬದ ನಿಮಿತ್ತ ಕ್ರೈಸ್ತ ಬಾಂಧವರು ಮನೆಗಳನ್ನು ಸ್ವಚ್ಛಗೊಳಿಸಿ ಬಣ್ಣ ಬಳಿದು ಸಿದ್ಧಪಡಿಸುತ್ತಿದ್ದಾರೆ.
ಕ್ರಿಸ್‍ಮಸ್‍ಗೆ ಇನ್ನೂ ಎರಡು ವಾರಗಳು ಬಾಕಿಯಿದ್ದು, ಮಾರಾಟಗಾರರು ಇನ್ನೂ ನಿರೀಕ್ಷಿತ ಪ್ರತಿಕ್ರಿಯೆಯನ್ನು ಪಡೆಯದಿದ್ದರೂ, ಶಾಪಿಂಗ್ ಈಗಾಗಲೇ ಪ್ರಾರಂಭವಾಗಿದೆ. ನಾಗರಿಕರು ಕ್ರಿಸ್ಮಸ್ ಕೇಕ್ ಮತ್ತು ಸಿಹಿತಿಂಡಿಗಳನ್ನು ಕೂಡಾ ಖರೀದಿಸುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಲಂಕಾರ ಸಾಮಗ್ರಿಗಳ ಬೆಲೆ ಶೇ.5ರಿಂದ 10ರಷ್ಟು ಏರಿಕೆಯಾಗಿದೆ ಎನ್ನುತ್ತಾರೆ ಮಾರಾಟಗಾರರು.
ಕ್ರಿಸ್‍ಮಸ್‍ಗಾಗಿ ಮನೆಗಳು, ಪ್ರಾರ್ಥನಾ ಮಂದಿರಗಳು ಮತ್ತು ಶಿಲುಬೆಗಳನ್ನು ಅಲಂಕರಿಸುವ ಕೆಲಸ ಪ್ರಾರಂಭವಾಗಿದೆ. ಏಸು ಕ್ರಿಸ್ತರ ಜನ್ಮ ದಿನವನ್ನು ಆಧರಿಸಿ ಭವ್ಯ ದೃಶ್ಯಗಳನ್ನು ನಿರ್ಮಿಸುವ ಕೆಲಸವೂ ಕೆಲವೆಡೆ ಆರಂಭವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
Tirupati: ಮೂರು ವರ್ಷದ ಬಾಲಕಿ ಮೇಲೆ ಸಂಬಂಧಿಯಿಂದಲೇ ಅತ್ಯಾ*ಚಾರ!
MUST WATCH
ಹೊಸ ಸೇರ್ಪಡೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.