Rajasthan; ಬಿಕಾನೇರ್ ನಲ್ಲಿದೆ ಇಲಿಗಳ ಮಂದಿರ: ಏನಿದರ ವೈಶಿಷ್ಟ್ಯ
ಮಂದಿರದಲ್ಲಿ ಸುಮಾರು 25 ಸಾವಿರ ಇಲಿಗಳಿವೆಯೆಂದು ಅಂದಾಜಿಸಲಾಗಿದೆ!!!
Team Udayavani, Dec 11, 2023, 7:46 PM IST
ಕಾಲ ಗರ್ಭದಲ್ಲಿ ಅಡಗಿರುವ ರಹಸ್ಯಗಳು ನಮ್ಮನ್ನು ನಿಬ್ಬೆರಾಗುಗೊಳಿಸುವುದಲ್ಲದೆ ಕೆಲವೊಮ್ಮೆ ಹೀಗೂ ಉಂಟೆ ಎಂದು ಮೂಕರನ್ನಾಗಿಸುತ್ತವೆ. ಕಳೆದ ತಿಂಗಳು ರಾಜಸ್ಥಾನ ಪ್ರವಾಸಕ್ಕೆ ತೆರಳಿದ್ದೆವು. ಮೊದಲ ದಿನ ಜಯಪುರದ ಅರಮನೆಯನ್ನೆಲ್ಲ ನೋಡಿ ಮರುದಿನ ಉದಯಪುರದ ಕಡೆಗೆ ಹೋರಟ ನಮಗೆ ಇಡೀ ದಿನ ಬಸ್ಸಿನಲ್ಲಿ ಪ್ರಯಾಣವೇ ಆಗಿತ್ತು. ಊಟಕ್ಕೆ ಉಪಹಾರ ಸ್ವೀಕರಿಸಲು ಮಾತ್ರ ವಿಶ್ರಾಂತಿ. ಹೀಗೇ ಹೋಗುತ್ತಿರುವಾಗ ನಮ್ಮನ್ನು ಕೊಂಡೊಯುತ್ತಿದ್ದ ಬಸ್ ನಿಲ್ಲಿಸುತ್ತ ನಿರ್ವಾಹಕರು ಈಗ ನಾವು ತಲಪಿದ ಜಾಗವು ಕರಣಿ ಮಾತಾ ಮಂದಿರ ಇಲಿಗಳ ಮಂದಿರ ಎಂಬ ಹೆಸರಿನಿಂದ ಪ್ರಸಿದ್ಧ, ಇಲ್ಲಿಯ ದೇವಿಯನ್ನು ನಂಬಿಕೊಂಡು ಆರಾಧಿಸಿಕೊಂಡು ಬಂದವರಿಗೆ ಅವರ ಇಷ್ಟಾರ್ಥ ಈಡೇರುತ್ತದೆ ಎಂಬ ನಂಬಿಕೆ. ಅದಕ್ಕಾಗಿ ದೂರದೂರುಗಳಿಂದ ಬಂದು ಅವರರ ಇಷ್ಟಾರ್ಥ ನಡೆಸಿಕೊಳ್ಳುತ್ತಾರೆ ಹೇಳುತ್ತಿರುವಂತೆ ನಮ್ಮ ಕಾಲುಗಳು ಮುನ್ನಡೆಯುತ್ತಿದ್ದುವು.
ದೇವಸ್ಥಾನದ ಒಳಗೆ ಹೋದರೆ ವಿಶೇಷವೆಂದರೆ ಒಳಗೆ ಹೊರಗೆ ಗರ್ಭ ಗುಡಿಯೊಳಗೆಲ್ಲ ಇಲಿಗಳದೆ ಸಾಮ್ರಾಜ್ಯ! ಅವುಗಳಿಗೆ ತಿನ್ನಲೆಂದೆ ಬಂದ ತಿಂಡಿಗಳು ಎಲ್ಲವೂ ಭಕ್ತಾದಿಗಳಿಂದ ಬಂದ ಹರಕೆ!. ಆದರೆ ವಿಶೇಷ ವೆಂದರೆ ಇಲಿಗಳನ್ನು ನಾವು ಮುಟ್ಟುವಂತಿಲ್ಲ ಆದರೆ ಇಲಿಗಳ ಸುದ್ದಿಗೂ ಹೋಗುವಂತಿಲ್ಲ. ನಮ್ಮ ಇರುವಿಕೆ ಅವುಗಳ ಗಮನ ಸೆಳೆಯುವುದೂ ಇಲ್ಲ.
ಕರಣಿ ಮಾತಾ ಯಾರು?
ಇಲಿಗಳಿಗೂ ಕರಣಿ ಮಾತಾಳಿಗೂ ಏನು ಸಂಬಂಧ ಎಂಬುದು ಪ್ರಶ್ನೆ. ಕರಣಿ ಮಾತಾ ಎಂದರೆ 14ನೇ ಶತಮಾನದಲ್ಲಿ ಜನಿಸಿದ ರಿಧು ಬಾಯಿ ಎಂಬ ಹೆಸರಿನ ಸ್ತ್ರೀ ಎಂದು ತಿಳಿಯಿತು. ಅನೇಕ ಪವಾಡಗಳನ್ನು ಮಾಡಿತೋರಿಸಿದ ಅವಳನ್ನು ಸಾಕ್ಷಾತ್ ದುರ್ಗೆಯ ಅವತಾರ ಎಂದು ನಂಬಲಾಗುತ್ತದೆ. ದೀಪೋಜಿ ಚರಣ್ ಎಂಬವರೊಡನೆ ಮದುವೆಯಾಗಿ ಎರಡೇ ವರ್ಷಗಳಲ್ಲಿ ತಂಗಿಯ ಜತೆ ಗಂಡನಿಗೆ ಮದುವೆ ಮಾಡಿಸಿ ತಾನು ಲೋಕಕಲ್ಯಾಣಕ್ಕಾಗಿ ಸನ್ಯಾಸ ದೀಕ್ಷೆ ತೆಗೆದು ಕೊಂಡಳು. ಒಮ್ಮೆ ಲಕ್ಷ್ಮಣ ಎಂಬ ಹೆಸರಿನ ತಂಗಿಯ ಮಗ, ಕಪಿಲ ಸರೋವರದಲ್ಲಿ ನೀರು ಕುಡಿಯಲು ಹೋದಾಗ ನೀರಿನಲ್ಲಿ ಮುಳುಗಿದ್ದ. ಅವನನ್ನು ಬದುಕಿಸಲು ಕರಣಿ ಮಾತಾ ಯಮನಲ್ಲಿ ಪ್ರಾರ್ಥಿಸತೊಡಗಿದಳು. ಅವಳ ಪ್ರಾರ್ಥನೆಗೆ ಮಣಿದು ಯಮನು ಲಕ್ಷ್ಮಣನನ್ನು ಇಲಿಯ ರೂಪದಲ್ಲಿ ಬದುಕಿಸಲು ಒಪ್ಪಿದನು. ಈ ಲಕ್ಷ್ಮಣ ಇಲಿಯ ಸಂತಾನವೇ ಈ ದೇವಾಲಯದಲ್ಲಿ ಮುಂದುವರೆದು ಬಂದುದಾಗಿ ನಂಬಲಾಗಿದೆ. ಈಗ ಕರಣಿ ಮಾತಾ ಮಂದಿರದಲ್ಲಿ ಸುಮಾರು 25000 ಇಲಿಗಳಿವೆಯೆಂದು ಅಂದಾಜಿಸಲಾಗಿದೆ. ಅಂತೂ ಪ್ರಕೃತಿಯ ವಿಚಿತ್ರ ನೋಡಿ ಮೂಕ ವಿಸ್ಮಿತರಾಗಿ ಉದಯಪುರದ ಕಡೆಗೆ ಪ್ರಯಾಣ ಮುಂದುವರಿಸಿದೆವು.
ಬರಹ: ಬಾಳಿಕೆ ಸುಬ್ಬಣ್ಣ ಭಟ್, ಬ್ರಾಂಪ್ಟಾನ್ ನಗರ, ಕೆನಡಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.