South Africa vs India, 2nd T20:ಎರಡೇ ಪಂದ್ಯಗಳಲ್ಲಿಇತ್ಯರ್ಥವಾಗಬೇಕಿದೆ ಸರಣಿ;ಮಳೆ ಭೀತಿ

ವಿಶ್ವಕಪ್‌ಗೂ ಮುನ್ನ ಇತ್ತಂಡಗಳಿಗೆ ಉಳಿದಿರುವುದು ಕೇವಲ 5 ಪಂದ್ಯ

Team Udayavani, Dec 12, 2023, 6:30 AM IST

1-asasa

ಕೆಬೆರಾ (ದಕ್ಷಿಣ ಆಫ್ರಿಕಾ): ಭಾರತ-ದಕ್ಷಿಣ ಆಫ್ರಿಕಾ ನಡುವಿನ ಮಹತ್ವದ ಸರಣಿಗೆ ಆರಂಭದಲ್ಲೇ ಮಳೆಯಿಂದ ವಿಘ್ನ ಎದುರಾಗಿದೆ. ರವಿವಾರದ ಮೊದಲ ಟಿ20 ಪಂದ್ಯದಲ್ಲಿ ಟಾಸ್‌ ಕೂಡ ಹಾರಿಸಲಾಗಲಿಲ್ಲ. ಸರಣಿಯ ಕುತೂಹಲ ನೀರುಪಾಲಾಗಿದೆ. ಇಂಥ ಸ್ಥಿತಿಯಲ್ಲಿ ದ್ವಿತೀಯ ಟಿ20 ಪಂದ್ಯ ಮಂಗಳವಾರ ಕೆಬೆರಾದಲ್ಲಿ (ಪೋರ್ಟ್‌ ಎಲಿಜಬೆತ್‌) ನಡೆಯಲಿದೆ. ಉಳಿದ ಎರಡೇ ಪಂದ್ಯಗಳಲ್ಲಿ ಸರಣಿ ಇತ್ಯರ್ಥವಾಗಬೇಕಿದೆ. ಆದರೆ ಇದಕ್ಕೂ ಮಳೆಯಿಂದ ಅಡಚಣೆಯಾದೀತೆಂಬ ಮುನ್ಸೂಚನೆಯೊಂದು ಲಭಿಸಿದೆ.
ಈ ಸರಣಿ ಮುಂದಿನ ವರ್ಷದ ಟಿ20 ವಿಶ್ವಕಪ್‌ ಹಿನ್ನೆಲೆಯಲ್ಲಿ ಅತ್ಯಂತ ಮಹತ್ವ ಪಡೆದಿತ್ತು. ನಮ್ಮ ಯುವ ತಂಡ ವಿದೇಶಿ ಟ್ರ್ಯಾಕ್‌ನಲ್ಲಿ ಎಂತಹ ಪ್ರದರ್ಶನ ನೀಡೀತು ಎಂಬುದನ್ನು ಅರಿಯಬೇಕಿತ್ತು. ಅಲ್ಲದೇ ಟಿ20 ವಿಶ್ವಕಪ್‌ಗ್ೂ ಮುನ್ನ ಉಳಿದದ್ದು 6 ಪಂದ್ಯ ಮಾತ್ರ. ಇದರಲ್ಲಿ ಒಂದು ಈಗಾಗಲೇ ಮಳೆಪಾಲಾಗಿದೆ. ಉಳಿ ದೆರಡು ಪಂದ್ಯಗಳ ಬಳಿಕ ಭಾರತ ತವರಲ್ಲಿ ಅಫ್ಘಾನಿಸ್ಥಾನ ವಿರುದ್ಧ 3 ಪಂದ್ಯಗಳನ್ನು ಆಡಬೇಕಿದೆ. ಇದು ಬಿಟ್ಟರೆ ವಿಶ್ವಕಪ್‌ ಸಿದ್ಧತೆಗೆ ಉಳಿದದ್ದು ಐಪಿಎಲ್‌ ಮಾತ್ರ. ಜೂನ್‌ನಲ್ಲಿ ವೆಸ್ಟ್‌ ಇಂಡೀಸ್‌-ಅಮೆರಿಕ ಆತಿಥ್ಯದಲ್ಲಿ ವಿಶ್ವಕಪ್‌ ನಡೆಯಲಿದೆ.

2 ಪಂದ್ಯ, 17 ಆಟಗಾರರು
ಅರ್ಥಾತ್‌, ವಿಶ್ವಕಪ್‌ಗೂ ಮೊದಲು ಭಾರತಕ್ಕೆ ವಿದೇಶದಲ್ಲಿ ಆಡಲಿಕ್ಕಿರುವುದು 2 ಪಂದ್ಯ ಮಾತ್ರ. ತಂಡದಲ್ಲಿ 17 ಆಟಗಾರರಿದ್ದಾರೆ. ಈ ಸೀಮಿತ ಅವಕಾಶದಲ್ಲಿ ಎಲ್ಲರನ್ನೂ ಆಡಿಸಬೇಕಾದ ಒತ್ತಡವೀಗ ಎದುರಾಗಿದೆ.
ಆಸ್ಟ್ರೇಲಿಯ ವಿರುದ್ಧ ಸರಣಿ ಗೆದ್ದ ತಂಡದಲ್ಲಿನ ಆಟಗಾರರನ್ನು ಹೊರತು ಪಡಿಸಿ ಕೆಲವು ಅನುಭವಿ ಆಟಗಾರರನ್ನು ಈ ತಂಡ ಹೊಂದಿದೆ. ಶುಭಮನ್‌ ಗಿಲ್‌, ರವೀಂದ್ರ ಜಡೇಜ, ಮೊಹಮ್ಮದ್‌ ಸಿರಾಜ್‌ ಇವರಲ್ಲಿ ಪ್ರಮುಖರು. ಇವರಿಗೆ ಆಡುವ ತಂಡದಲ್ಲಿ ಸ್ಥಾನ ನೀಡಬೇಕಾ ದರೆ ಆಸೀಸ್‌ ವಿರುದ್ಧ ಆಡಿದ ಕೆಲವರನ್ನು ಒಂದು ಪಂದ್ಯದ ಮಟ್ಟಿಗಾದರೂ ಕೈಬಿಡಬೇಕಾಗುತ್ತದೆ. ಹೀಗಾಗಿ ಜೈಸ್ವಾಲ್‌, ಗಾಯಕ್ವಾಡ್‌, ತಿಲಕ್‌ ವರ್ಮ, ಜಿತೇಶ್‌ ಶರ್ಮ, ಇಶಾನ್‌ ಕಿಶನ್‌ ಮೊದಲಾದವರು ತಮಗೆ ಲಭಿಸಿದ ಅವಕಾಶವನ್ನು ವ್ಯರ್ಥಗೊಳಿಸುವಂತಿಲ್ಲ.

ಸದ್ಯದ ಮಟ್ಟಿಗೆ ಆಡುವ ಬಳಗದಲ್ಲಿ ಉಳಿದುಕೊಳ್ಳುವ ಬ್ಯಾಟರ್‌ಗಳೆಂದರೆ ನಾಯಕ ಸೂರ್ಯಕುಮಾರ್‌, ಶ್ರೇಯಸ್‌ ಅಯ್ಯರ್‌ ಮತ್ತು ರಿಂಕು ಸಿಂಗ್‌ ಮಾತ್ರ ಎನ್ನಬಹುದು. ಉಪನಾಯಕನೂ ಆಗಿರುವ ರವೀಂದ್ರ ಜಡೇಜ ಕೂಡ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳ ಬಹುದು. ಜೈಸ್ವಾಲ್‌-ಗಾಯಕ್ವಾಡ್‌-ಗಿಲ್‌ ನಡುವೆ ತ್ರಿಕೋನ ಸ್ಪರ್ಧೆ ಇದೆ. ಭವಿಷ್ಯದಲ್ಲಿ ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ ಟಿ20 ಆಡದೇ ಹೋದರೆ ಉಳಿದ ಕೆಲವು ಯುವ ಪ್ರತಿಭೆಗಳ ಸ್ಥಾನ ಉಳಿದೀತು.

ಬೌಲಿಂಗ್‌ ವಿಭಾಗಕ್ಕೆ ಬುಮ್ರಾ ಪ್ರವೇಶವಾದರೆ ಆಗ ಅರ್ಷದೀಪ್‌ ಸ್ಥಾನ ಅಲುಗಾಡುವುದು ಸ್ಪಷ್ಟ. ಅಕ್ಷರ್‌ ಪಟೇಲ್‌ ಬಂದರೆ ಸ್ಪಿನ್‌ ವಿಭಾಗದಲ್ಲಿ ತೀವ್ರ ಪೈಪೋಟಿ ಕಂಡುಬರಲಿದೆ.

ವಿಶ್ವಕಪ್‌ಗೆ ಇನ್ನೂ 6 ತಿಂಗಳಿದೆ. ಆಗ ಏನೂ ಸಂಭವಿಸಬಹುದು. ಆದರೆ ಪ್ರಸ್ತುತ ನಮ್ಮ ಆಟಗಾರರಿಗೆ ದಕ್ಷಿಣ ಆಫ್ರಿಕಾದಂಥ ಫಾಸ್ಟ್‌ ಟ್ರ್ಯಾಕ್ ಗಳ ಮೇಲೆ, ಬಲಿಷ್ಠ ತಂಡವೊಂದರ ವಿರುದ್ಧ ಆಡಿದ ಅನುಭವ ಲಭಿಸಬೇಕಾದುದು ಮುಖ್ಯ. ಈ ಕಾರಣಕ್ಕಾಗಿ ಉಳಿ ದೆರಡು ಪಂದ್ಯಗಳು ನಿರ್ವಿಘ್ನವಾಗಿ ಸಾಗಬೇಕಾದ ಅಗತ್ಯವಿದೆ.

ಹರಿಣಗಳಿಗೂ ಮಹತ್ವದ ಸರಣಿ
ದಕ್ಷಿಣ ಆಫ್ರಿಕಾ ಪಾಲಿಗೂ ಇದು ವಿಶ್ವಕಪ್‌ ದೃಷ್ಟಿಯಿಂದ ಅತ್ಯಂತ ಮಹ ತ್ವದ ಸರಣಿ. ವಿಶ್ವಕಪ್‌ಗ್ೂ ಮೊದಲು ಹರಿಣಗಳ ಮುಂದಿರುವುದು 5 ಟಿ20 ಪಂದ್ಯ ಮಾತ್ರ.
ವೇಗಿಗಳಾದ ಮಾರ್ಕೊ ಜಾನ್ಸೆನ್‌ ಮತ್ತು ಗೆರಾಲ್ಡ್‌ ಕೋಟಿj ಅವರನ್ನು ಮೊದಲೆರಡು ಪಂದ್ಯಗಳಿಗಷ್ಟೇ ಆರಿಸಲಾಗಿದೆ. ಇವರ ಮುಂದೆ ಉಳಿದಿರುವುದು ಒಂದೇ ಅವಕಾಶ. ಹಾಗೆಯೇ ತಂಡದಲ್ಲಿ ಬಹಳಷ್ಟು ಮಂದಿ ಯುವ ಆಟಗಾರರಿದ್ದಾರೆ. ಇವರಿಗೆ ಉತ್ತಮ ಅಭ್ಯಾಸ ಲಭಿಸಬೇಕಿದೆ.

ಸ್ಥಳ: ಜೆಬೆರಾ
ಆರಂಭ: ರಾತ್ರಿ 8.30
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಟಾಪ್ ನ್ಯೂಸ್

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

7-vitla

Vitla: ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು

Kane Williamson makes a brilliant comeback

NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್‌ ವಿಲಿಯಮ್ಸನ್‌

Delhi: ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಸ್ಫೋಟ… ಪೊಲೀಸ್, ಅಗ್ನಿಶಾಮಕ ದಳ ದೌಡು

Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ

Belagavi: ಸಿಪಿಐ ಕಿರುಕುಳ ಆರೋಪ, ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

11

BBK11: ಮಂಜುವನ್ನು ರೋಗಿಷ್ಠ ರಾಜ ಎಂದ ರಜತ್; ಜೋರಾಗಿ ನಕ್ಕ ಶಿಶಿರ್, ಐಶ್ವರ್ಯಾ

Bangladesh:ಇಸ್ಕಾನ್‌ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್‌,ಸರ್ಕಾರಕ್ಕೆ ಮುಖಭಂಗ

Bangladesh:ಇಸ್ಕಾನ್‌ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್‌,ಸರ್ಕಾರಕ್ಕೆ ಮುಖಭಂಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kane Williamson makes a brilliant comeback

NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್‌ ವಿಲಿಯಮ್ಸನ್‌

ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್‌ ಬೇಡಿಕೆ

IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್‌ ಬೇಡಿಕೆ

prithvi shaw

Mumbai Cricket: ಸಚಿನ್‌ ತೆಂಡೂಲ್ಕರ್‌ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..

ಸಿಎಸ್‌ ಕೆ ಮಾಲಿಕ ಶ್ರೀನಿವಾಸನ್‌ ವಿರುದ್ದ ಫಿಕ್ಸಿಂಗ್‌ ಆರೋಪ ಮಾಡಿದ ಲಲಿತ್ ಮೋದಿ

IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್‌ ವಿರುದ್ದ ಫಿಕ್ಸಿಂಗ್‌ ಆರೋಪ ಮಾಡಿದ ಲಲಿತ್ ಮೋದಿ

ICC Champions Trophy to be completely moved from Pakistan?: Decision will be taken at ICC meeting

ICC ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

8-sirwar

Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ

kuladalli keelyavudo kannada movie

Kannada Cinema: ಕ್ಲೈಮ್ಯಾಕ್ಸ್‌ ನತ್ತ ʼಕುಲದಲ್ಲಿ ಕೀಳ್ಯಾವುದೋʼ

7-vitla

Vitla: ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು

Kane Williamson makes a brilliant comeback

NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್‌ ವಿಲಿಯಮ್ಸನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.