Terrorism: ನಕಲಿ ನೋಟು ಮುದ್ರಣ ಇನ್ನು “ಭಯೋತ್ಪಾದಕ ಕೃತ್ಯ”
ಪರಿಷ್ಕೃತ ಭಾರತೀಯ ನ್ಯಾಯ ಸಂಹಿತೆ ಮಸೂದೆಯಲ್ಲಿ ಸೇರ್ಪಡೆೆ
Team Udayavani, Dec 13, 2023, 12:09 AM IST
ಹೊಸದಿಲ್ಲಿ: “ಭಯೋತ್ಪಾದನ ಕೃತ್ಯ’ದ ಕಾನೂನಾತ್ಮಕ ವ್ಯಾಖ್ಯಾನವನ್ನು ಕೇಂದ್ರ ಸರಕಾರವು ಪರಿಷ್ಕರಿಸಿದೆ. ಇನ್ನು ಮುಂದೆ ನಕಲಿ ನೋಟುಗಳ ಮುದ್ರಣ, ಸರಕಾರಿ ಅಧಿಕಾರಿಗಳನ್ನು ಅಪಹರಿಸುವುದು, ಹಲ್ಲೆ ಮಾಡುವುದು ಅಥವಾ ಅವರ ಸಾವಿಗೆ ಕಾರಣವಾಗುವ ಮೂಲಕ ದೇಶದ ಆರ್ಥಿಕ ಮತ್ತು ಹಣಕಾಸು ಭದ್ರತೆಗೆ ಅಪಾಯ ತಂದೊಡ್ಡುವುದನ್ನು ಕೂಡ “ಭಯೋತ್ಪಾದನೆ” ಎಂದು ಪರಿಗಣಿಸಲಾಗುತ್ತದೆ.
ಮಂಗಳವಾರ ಲೋಕಸಭೆಯಲ್ಲಿ ಮಂಡಿಸಲಾದ ಭಾರತೀಯ ನ್ಯಾಯ ಸಂಹಿತೆಯ ಪರಿಷ್ಕೃತ ಮಸೂದೆ ಯಲ್ಲಿ ಈ ಅಂಶಗಳನ್ನು ಸೇರ್ಪಡೆ ಮಾಡಲಾಗಿದೆ. ಭಾರತೀಯ ದಂಡ ಸಂಹಿತೆಯ ಬದಲಿಗೆ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ಕ್ರಿಮಿನಲ್ ಪ್ರಕ್ರಿಯೆ ಸಂಹಿತೆಯ ಬದಲಿಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಇಂಡಿಯನ್ ಎವಿಡೆನ್ಸ್ ಆ್ಯಕ್ಟ್ ಬದಲು ಭಾರತೀಯ ಸಾಕ್ಷ್ಯ ಅಧಿನಿಯಮದ ಪರಿಷ್ಕೃತ ಮಸೂದೆಯನ್ನು ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಡಿಸಿದ್ದಾರೆ.
ಪರಿಷ್ಕೃತ ಮಸೂದೆಯಲ್ಲಿ “ಭಯೋತ್ಪಾದನೆ’ಗೆ ಮರುವ್ಯಾಖ್ಯಾನ ನೀಡಲಾಗಿದೆ. ಜತೆಗೆ ಸೆಕ್ಷನ್ 86ರಲ್ಲಿ ಮಹಿಳೆಯ ಮಾನಸಿಕ ಆರೋಗ್ಯಕ್ಕೆ ಹಾನಿ ಮಾಡುವುದನ್ನು ಕೂಡ “ಕ್ರೌರ್ಯ”ದ ವ್ಯಾಪ್ತಿಗೆ ತರಲಾಗಿದೆ. ಮಸೂದೆಯ ಹಿಂದಿನ ಆವೃತ್ತಿಯಲ್ಲಿ ಸೆಕ್ಷನ್ 85ರ ಅನ್ವಯ ಪತ್ನಿಯ ವಿರುದ್ಧ ಕ್ರೌರ್ಯ ಮೆರೆಯುವಂಥ ಪತಿ ಅಥವಾ ಆತನ ಕುಟುಂಬದ ಸದಸ್ಯರಿಗೆ 3 ವರ್ಷಗಳ ಜೈಲು ಶಿಕ್ಷೆ ವಿಧಿಸುವ ಬಗ್ಗೆ ಪ್ರಸ್ತಾವಿ ಸಲಾಗಿತ್ತು. ಆದರೆ “ಕ್ರೌರ್ಯ’ದ ವ್ಯಾಖ್ಯಾನವನ್ನು ಅದರಲ್ಲಿ ಉಲ್ಲೇಖೀಸಿರಲಿಲ್ಲ.
ಆಗಸ್ಟ್‌ನಲ್ಲಿ ಈ ಮೂರು ಮಸೂದೆಗಳನ್ನು ಮಂಡಿಸಲಾಗಿತ್ತಾದರೂ ಹೆಚ್ಚಿನ ಪರಿಶೀಲನೆಗಾಗಿ ಸಂಸದೀಯ ಸಮಿತಿಗೆ ಒಪ್ಪಿಸಲಾಗಿತ್ತು. ಸಮಿತಿಯ ಶಿಫಾರಸು ಗಳನ್ನು ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಈ ಮೂರೂ ಮಸೂದೆಗಳನ್ನು ವಾಪಸ್ ಪಡೆದು, ಪರಿಷ್ಕೃತ ಆವೃತ್ತಿಯನ್ನು ಮಂಗಳವಾರ ಮಂಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipur ಉದ್ವಿಗ್ನ: ಇಬ್ಬರು ಸಚಿವರು,ಐವರು ಶಾಸಕರ ಮನೆಗಳಿಗೆ ಬೆಂಕಿ!
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
MUST WATCH
ಹೊಸ ಸೇರ್ಪಡೆ
Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ
ಗಂಭೀರ್ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್ ಪೇನ್
Udupi: ಕಸ್ತೂರಿ ರಂಗನ್ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ
Congress ಗ್ಯಾರಂಟಿ ಸುಳ್ಳು ಎಂದು ಸಾಬೀತು ಮಾಡಿ: ಮೋದಿಗೆ ಸಿದ್ದರಾಮಯ್ಯ ಸವಾಲು
BJP; ಈ ವಾರವೇ ವಕ್ಫ್ ಹೋರಾಟ: ಅಧಿವೇಶನಕ್ಕೂ ಬಿಸಿ…ಹೇಗಿರಲಿದೆ ಪ್ರತಿಭಟನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.