Yakshagana ಹೈಕೋರ್ಟ್ ಸಮ್ಮತಿಸಿದರೂ ಪ್ರದರ್ಶನಕ್ಕೆ ತಾಂತ್ರಿಕ ಸಮಸ್ಯೆಯೇ ಅಡ್ಡಿ
ಇಡೀ ರಾತ್ರಿ ಯಕ್ಷಗಾನ ಸಂಗತಿ ಮತ್ತೆ ಮುನ್ನೆಲೆಗೆ
Team Udayavani, Dec 13, 2023, 7:20 AM IST
ಮಂಗಳೂರು: ಕೊರೊನಾ ಪೂರ್ವದಲ್ಲಿದ್ದಂತೆಯೇ ಇಡೀ ರಾತ್ರಿ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ನೀಡಬಹುದೆಂದು ಹೈಕೋರ್ಟ್ ಅಭಿಪ್ರಾಯಪಟ್ಟಿದ್ದರೂ ಅದರ ಅನುಷ್ಠಾನಕ್ಕೆ ತಾಂತ್ರಿಕ ಸಮಸ್ಯೆಯೊಂದು ಎದುರಾಗಿದೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಮೇಳಗಳಿಗೆ ಕೊರೊನಾ ಪೂರ್ವ ದಲ್ಲಿದ್ದಂತೆಯೇ ಇಡೀ ರಾತ್ರಿ ಪ್ರದರ್ಶ ನಕ್ಕೆ ಅನುಮತಿ ಕೋರಿ ಹೈಕೋರ್ಟ್‌ಗೆ ಕೃಷ್ಣ ಕುಮಾರ್ ಅವರು ಅರ್ಜಿ ಹಾಕಿ 15-11-2022ರ ಜಿಲ್ಲಾಧಿಕಾರಿಗಳ ಆದೇಶಕ್ಕೆ ತಡೆಯಾಜ್ಞೆ ಕೋರಿದ್ದರು. ಇದಕ್ಕೆ ಸಮ್ಮತಿಸಿರುವ ಹೈಕೋರ್ಟ್, ಶಬ್ದ ಮಾಲಿನ್ಯ ನಿಯಮಾವಳಿ-2000 ಅನ್ನು ಉಲ್ಲಂಘಿಸಬಾರದು ಎಂದು ಷರತ್ತು ಹಾಕಿದೆ. ಅರ್ಜಿದಾರರು ಮನವಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಬೇಕು, ಅವರು ಈ ಆದೇಶದಲ್ಲಿನ ಅಂಶಗಳನ್ನು ಆಧರಿಸಿ ಕ್ರಮ ಕೈಗೊಳ್ಳಬಹುದು ಎಂದಿದೆ.
ಡೆಸಿಬೆಲ್ ಸಮಸ್ಯೆ
ಹೈಕೋರ್ಟ್ ಸಮ್ಮತಿಸಿದ್ದರೂ ಕಾರ್ಯ ಯೋಗ್ಯವಲ್ಲ ಎಂಬ ಅಭಿಪ್ರಾಯವಿದೆ. ಕಾರಣ ಇಲ್ಲಿ ಮುಖ್ಯ ಸಮಸ್ಯೆ ಡೆಸಿಬಲ್(ಡಿಬಿ)ನದ್ದು. ಜನರು ಮಾತನಾಡುವಾಗಿನ ಧ್ವನಿಯೇ 50 ಡಿಬಿ ಇರುತ್ತದೆ. ಚೆಂಡೆಯ ಪೆಟ್ಟು 200 ಡಿಬಿ, ಧ್ವನಿವರ್ಧಕದ ಡಿಬಿ ಕನಿಷ್ಠ 450-500 ರಷ್ಟಿರುತ್ತದೆ. ನಾವು ಈ ವಿಷಯದಲ್ಲಿ ಹಿಂದೆಯೇ ಸೌಂಡ್ ಎಂಜಿನಿಯರ್‌ಗಳೊಂದಿಗೆ ಸಮಾಲೋಚಿಸಿದ್ದೇವೆ. ಆದರೆ ಸುಪ್ರೀಂ ಕೋರ್ಟ್‌ನ ನಿರ್ದೇಶನದ ಅನ್ವಯ ರಾತ್ರಿ 10ರಿಂದ ಬೆಳಗ್ಗೆ 6 ರ ವರೆಗೆ 50 ಡೆಸಿಬೆಲ್ ಮೀರುವಂತಿಲ್ಲ, ಹಾಗಾಗಿ ಇದು ಕಷ್ಟ ಎನ್ನುತ್ತಾರೆ ಕಟೀಲು ಮೇಳಕ್ಕೆ ಸಂಬಂಧಿಸಿದವರು.
ಜಿಲ್ಲಾಧಿಕಾರಿಯವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ಮೇಳದ ಆಟಗಳು ಪರಂಪರೆ, ಸಂಪ್ರದಾಯ ದಂತೆ ನಡೆದುಕೊಂಡು ಬಂದಿರುವ ಸೇವೆ ಎನ್ನುವ ಅಂಶವನ್ನು ಗಮನದಲ್ಲಿರಿಸಿ ರಾತ್ರಿ 12.30ರ ವರೆಗೂ ಕಾಲಮಿತಿಯಲ್ಲಿ ವಿಶೇಷ ಪ್ರಕರಣವೆಂದು ಅನುಮತಿ ನೀಡಿದ್ದಾರೆ. ಈ ಮಧ್ಯೆ ಕಟೀಲು ಮೇಳವು ಕಳೆದ ವರ್ಷದಿಂದ ಕಾಲಮಿತಿ ಪ್ರದರ್ಶನ ಆರಂಭಿಸಿದ್ದು, ಈ ವರ್ಷದ ತಿರುಗಾಟಕ್ಕೂ ಚಾಲನೆ ನೀಡಿದೆ.
ರಾತ್ರಿ ಪೂರ್ತಿ ಆಟಗಳಿವೆಯೇ?
ಕರಾವಳಿಯ ಬಹುತೇಕ ಮೇಳಗಳು ಕಾಲಮಿತಿ ಪ್ರಯೋಗಕ್ಕೆ ಒಗ್ಗಿಕೊಂಡಿವೆ. ಕೆಲವೇ ಮೇಳಗಳು ಹಳ್ಳಿಗಳಲ್ಲಿ ರಾತ್ರಿ ಪೂರ್ತಿ ಪ್ರದರ್ಶನ ಪ್ರದರ್ಶಿಸುತ್ತಿವೆ. ಅಲ್ಲಿ ಸಮಸ್ಯೆಯಾಗಿಲ್ಲ. ಆದರೆ ಕಟೀಲು ಮೇಳದವರು ನಗರ, ಪಟ್ಟಣದ ವಸತಿ ಪ್ರದೇಶದಲ್ಲಿ ಹೆಚ್ಚಾಗಿ ಪ್ರದರ್ಶನ ನೀಡುತ್ತಾರೆ. ರಾತ್ರಿ ಯಾರಾದರೂ ಅಡ್ಡಿಪಡಿಸಿದರೆ ಅದು ಭಕ್ತರ ಸೇವೆಗೆ ಅಡ್ಡಿಯಾದಂತೆ ಎನ್ನುತ್ತಾರೆ ಕಟೀಲು ಮೇಳದವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್ ಅಮಾನತು
Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ
ICC World Rankings: ಟೆಸ್ಟ್ ಬೌಲಿಂಗ್ ರ್‍ಯಾಂಕಿಂಗ್ ಬುಮ್ರಾ ಮರಳಿ ನಂ.1
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.