ʼKantara Chapter 1ʼನಲ್ಲಿ ನನ್ನನ್ನು ಸೇರಿಸಿಕೊಳ್ಳಿ..ರಿಷಬ್ ಶೆಟ್ಟಿಗೆ ಖ್ಯಾತ ನಟಿಯ ಮನವಿ
Team Udayavani, Dec 13, 2023, 11:35 AM IST
ಬೆಂಗಳೂರು: ರಿಷಬ್ ಶೆಟ್ಟಿ ಅವರ ʼಕಾಂತಾರ ಪ್ರೀಕ್ವೆಲ್ʼ ಇತ್ತೀಚೆಗೆ ಫಸ್ಟ್ ಲುಕ್ ರಿಲೀಸ್ ಮಾಡಿ ಸುದ್ದಿಯಲ್ಲಿದೆ. ಸದ್ಯ ಸಿನಿಮಾಕ್ಕಾಗಿ ಅಡಿಷನ್ ನಡೆಯಲಿದ್ದು, ಕಲಾವಿದರ ಆಯ್ಕೆಗಾಗಿ ಚಿತ್ರತಂಡ ಎದುರು ನೋಡುತ್ತಿದೆ.
ʼಕಾಂತಾರʼ ಚಿತ್ರದಲ್ಲಿ ನಟಿಸಲು ಕಲಾವಿದರು ಬೇಕಾಗಿದ್ದಾರೆ ಎಂದು ಚಿತ್ರತಂಡ ಪ್ರಕಟಣೆಯಲ್ಲಿ ಹೇಳಿದೆ. ಸಿನಿಮಾದಲ್ಲಿ ನಟಿಸಲು 30 ರಿಂದ 60 ರ ವಯಸ್ಸಿನ ಪುರುಷರು ಬೇಕಾಗಿದ್ದಾರೆ. ಇನ್ನು 18 ರಿಂದ 60ರ ವಯಸ್ಸಿನ ಮಹಿಳೆಯರು ಬೇಕಾಗಿದ್ದಾರೆ ಎಂದು ರಿಷಬ್ ಶೆಟ್ಟಿ ಪೋಸ್ಟ್ ನಲ್ಲಿ ಹೇಳಿದ್ದಾರೆ. ನೋಂದಣಿಗಾಗಿ Kantara.film ಲಿಂಕ್ ಒತ್ತಿ ತಮ್ಮ ಪ್ರತಿಭೆಯನ್ನು ತೋರಿಸಬಹುದು. ರೀಲ್ಸ್ ಮತ್ತು ಅವುಗಳನ್ನೇ ಹೋಲುವ ಇತರೆ ವಿಷಯಗಳನ್ನು ಸ್ವೀಕರಿಸುವುದಿಲ್ಲ ಎಂದು ಚಿತ್ರತಂಡ ಹೇಳಿದೆ. ಡಿ.14 ರವರೆಗೆ ಲಿಂಕ್ ಚಾಲ್ತಿಯಲ್ಲಿರುತ್ತದೆ ಎಂದು ಚಿತ್ರತಂಡ ಹೇಳಿದೆ.
ಸದ್ಯ ಪೋಸ್ಟ್ ನೋಡಿ ಖ್ಯಾತ ಟಾಲಿವುಡ್ ನಟಿಯೊಬ್ಬರು ರಿಷಬ್ ಶೆಟ್ಟಿ ಬಳಿ ತಮ್ಮನ್ನು ʼಕಾಂತಾರʼ ಸಿನಿಮಾದಲ್ಲಿ ಸೇರಿಸಿಕೊಳ್ಳಿ ಎಂದು ಮನವಿಯನ್ನು ಮಾಡಿದ್ದಾರೆ.
ʼಆರ್ ಎಕ್ಸ್ 100ʼ ಮೂಲಕ ಗಮನ ಸೆಳೆದ ನಟಿ ಪಾಯಲ್ ರಜಪೂತ್ ಇತ್ತೀಚೆಗೆ ತೆರೆಕಂಡ ‘ಮಂಗಳವಾರಂ’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಮೆಚ್ಚುಗೆ ಗಳಿಸಿದ್ದಾರೆ. ಇದರಿಂದ ಕೆಲ ಅಭಿಮಾನಿಗಳು ʼಕಾಂತಾರ -1ʼ ಸಿನಿಮಾದ ಅಡಿಷನ್ ವಿಚಾರ ತಿಳಿಸಿ ಪಾಯಲ್ ಅವರ ಹೆಸರನ್ನು ಸೋಶಿಯಲ್ ಮೀಡಿಯಾದಲ್ಲಿ ಮೆನ್ಷನ್ ಮಾಡಿದ್ದಾರೆ.
ನಟಿ ಪಾಯಲ್ ರಜಪೂತ್ ಈ ಬಗ್ಗೆ ಟ್ವೀಟ್ ಮಾಡಿದ್ದು, ʼಕಾಂತಾರ-1ʼ ನ ಭಾಗವಾಗಲು ತಾನು ಆಸಕ್ತಿ ಹೊಂದಿದ್ದೇನೆ ಎಂದು ಹೇಳಿದ್ದಾರೆ.
“ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ ʼಕಾಂತಾರ ಅಧ್ಯಾಯ -1ʼರ ಅಡಿಷನ್ ಇರುವುದು ನನಗೆ ಗೊತ್ತಾಗಿದೆ. ಈ ಅದ್ಭುತ ಸಿನಿಮಾದ ಭಾಗವಾಗಲು ನಾನು ಆಸಕ್ತಿ ಹೊಂದಿದ್ದೇನೆ. ಈ ಸಿನಿಮಾಕ್ಕೆ ಕೊಡುಗೆ ನೀಡಲು ಉತ್ಸುಕಳಾಗಿದ್ದೇನೆ. ಇತ್ತೀಚೆಗೆ ಬಂದ ನನ್ನ ʼ’ಮಂಗಳವಾರಂ’ʼ ಸಿನಿಮಾ ಮೆಚ್ಚುಗೆ ಪಡೆದುಕೊಂಡಿದೆ. ನೀವು ಸಾಧ್ಯವಾದರೆ ನಿಮ್ಮ ಸಮಯವನ್ನು ಮೀಸಲಿಟ್ಟು ಸಿನಿಮಾವನ್ನು ನೋಡಿ. ಈ ಪ್ರಾಜೆಕ್ಟ್ ಆಡಿಷನ್ ಪ್ರಕ್ರಿಯೆಯ ಕುರಿತು ದಯವಿಟ್ಟು ಸಲಹೆ ನೀಡಿ. ನನ್ನ ಹೆಸರನ್ನು ಮೆನ್ಷನ್ ಮಾಡಿದ್ದಕ್ಕಾಗಿ ಅಭಿಮಾನಿಗಳಿಗೆ ಧನ್ಯವಾದ” ಎಂದು ಪಾಯಲ್ ಟ್ವೀಟ್ ಮಾಡಿದ್ದಾರೆ.
ಸದ್ಯ ಈ ಟ್ವೀಟ್ ಗೆ ರಿಷಬ್ ಶೆಟ್ಟಿಯಿಂದ ಯಾವ ಪ್ರತಿಕ್ರಿಯೆ ಬರುತ್ತದೆನ್ನುವುದು ಕಾದುನೋಡಬೇಕಿದೆ.
ಅಂದಹಾಗೆ ʼಕಾಂತಾರʼ ಸಿನಿಮಾದ ಚಿತ್ರೀಕರಣ ಶೀಘ್ರದಲ್ಲಿ ಶುರುವಾಗುವ ಸಾಧ್ಯತೆಯಿದೆ.
@shetty_rishab @hombalefilms I’ve learned that auditions are being held for Kantara Chapter 1. I am eager to contribute to this esteemed project. My recent film, Magalavaaram, has garnered significant praise for my performance. I would appreciate if you could spare some time to…
— paayal rajput (@starlingpayal) December 12, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Armaan Malik: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕ ಅರ್ಮಾನ್ ಮಲಿಕ್; ಇಲ್ಲಿದೆ ಫೋಟೋಸ್
ಹಲವು ಬಾರಿ ಸಾಯುವ ಬಗ್ಗೆ ಯೋಚಿಸಿದ್ದೆ.. #MeToo ಆರೋಪದ ಬಗ್ಗೆ ನಿರ್ದೇಶಕ ಸಾಜಿದ್ ಮಾತು
Transformation; ಕೇವಲ 18 ತಿಂಗಳಲ್ಲಿ 55 ಕೆ.ಜಿ. ತೂಕ ಕಳೆದುಕೊಂಡ ಖ್ಯಾತ ನಟ ರಾಮ್ ಕಪೂರ್
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Hollywood: Billy the kid- ಹಾಲಿವುಡ್ ಹಿರಿಯ ನಟ ಜೆಫ್ರಿ ಡ್ಯುಯೆಲ್ ಇನ್ನಿಲ್ಲ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.