![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Dec 14, 2023, 7:12 AM IST
ಮೇಷ: ಅನೇಕ ವಿಷಯಗಳಲ್ಲಿ ಆಳವಾದ ಆಸಕ್ತಿ. ಉದ್ಯೋಗ ಸ್ಥಾನದಲ್ಲಿ ಹೆಚ್ಚುವರಿಯಾಗಿ ಹೊಸಬರಿಗೆ ಮಾರ್ಗದರ್ಶನ ಮಾಡುವ ಜವಾಬ್ದಾರಿ. ಉದ್ಯೋಗದ ಜತೆಯಲ್ಲೇ ಪೂರಕ ಆದಾಯದ ಮಾರ್ಗ ಪರಿಶೀಲನೆ. ವಸ್ತ್ರಕ್ಕೆ ಸಂಬಂಧಪಟ್ಟ ವ್ಯವಹಾರದಲ್ಲಿ ಯಶಸ್ಸು.
ವೃಷಭ: ಚೆನ್ನಾಗಿ ಯೋಚಿಸಿಯೇ ಕಾರ್ಯವನ್ನು ಆರಂಭಿಸಿ. ಉದ್ಯೋಗ ಸ್ಥಾನದಲ್ಲಿ ಪ್ರೋತ್ಸಾಹದ ವಾತಾವರಣ. ಉತ್ತರದ ಕಡೆಯಿಂದ ಶುಭ ವಾರ್ತೆ. ಹಿರಿಯ ಉದ್ಯಮಿಗಳಿಗೆ ಸಾಮಾಜಿಕರಿಂದ ಪುರಸ್ಕಾರ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಬಿಡುವಿಲ್ಲದ ವ್ಯಾಪಾರ.
ಮಿಥುನ: ಆಧ್ಯಾತ್ಮಿಕ ಸಾಧನೆಯಿಂದ ಧೈರ್ಯ, ಸ್ಥೈರ್ಯ ವೃದ್ಧಿ. ಉದ್ಯೋಗದಲ್ಲಿ ಪ್ರತಿಭೆ, ಅನು ಭವಕ್ಕೆ ಮನ್ನಣೆ. ಸ್ವಂತ ಉದ್ಯಮ ಕ್ರಮವಾಗಿ ಅಭಿವೃದ್ಧಿ. ಪ್ರಾಚೀನ ವಿದ್ಯೆ ಕಲಿಯುವ ಆಸಕ್ತಿ. ಪರಿಸರ ರಕ್ಷಣಾ ಕಾರ್ಯ ಗಳಲ್ಲಿ ಪಾಲುಗೊಳ್ಳಲು ಆಹ್ವಾನ. ಕೃಷಿಭೂಮಿ ಕೊಳ್ಳಲು ಸಂಕಲ್ಪ.
ಕರ್ಕಾಟಕ: ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳ ಬಾಧೆ. ಸ್ವಂತ ಉದ್ಯಮಕ್ಕೆ ಪೈಪೋಟಿಯ ಸಮಸ್ಯೆ. ವಸ್ತ್ರ ವ್ಯಾಪಾರಿಗಳಿಗೆ ಆದಾಯ ತೆರಿಗೆ ಭೀತಿ. ಆರೋಗ್ಯ ವೃದ್ಧಿಗೆ ಯೋಗ, ಪ್ರಾಣಾಯಾಮ, ಧ್ಯಾನ ಕಲಿಕೆ. ನ್ಯಾಯಾಲಯ ವ್ಯವಹಾರದಲ್ಲಿ ಜಯ.
ಸಿಂಹ: ಕಾರ್ಯದ ಹಿಂದೆ ಸಮರ್ಪಣಭಾವ ಇದ್ದಾಗ ಭಗವದನುಗ್ರಹ ಖಚಿತ. ಉದ್ಯೋಗ ಸ್ಥಾನದಲ್ಲಿ ಕೀರ್ತಿ. ಉದ್ಯಮದ ಪ್ರಗತಿಗೆ ಅಡ್ಡಿಯಾದ ಸಮಸ್ಯೆಗಳ ನಿವಾರಣೆ. ಉತ್ಪನ್ನಗಳ ಜನಪ್ರಿಯತೆ ವೃದ್ಧಿ.ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ.
ಕನ್ಯಾ: ಸ್ವಪ್ರಯತ್ನದಿಂದ ಆತ್ಮಬಲ ವೃದ್ಧಿ.ಉದ್ಯೋಗ ಸ್ಥಾನದಲ್ಲಿ ಹಿತಕರ ವಾತಾವರಣ. ವಾಹನ ಉದ್ಯಮಿಗಳಿಗೆ ಆದಾಯ ವೃದ್ಧಿ. ಸಟ್ಟಾ ವ್ಯವಹಾರದಲ್ಲಿ ನಷ್ಟ. ಬಾಲ್ಯದ ಒಡನಾಡಿಯ ಅನಿರೀಕ್ಷಿತ ಭೇಟಿ. ಬಂಧುಗಳ ಮನೆಯಲ್ಲಿ ಶುಭ ಕಾರ್ಯ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಸಮಾಧಾನದ ವಾತಾವರಣ.
ತುಲಾ: ಹಿರಿಯರೊಂದಿಗೆ ತಪ್ಪಿಹೋಗಿದ್ದ ಸಂಪರ್ಕ ಪುನರಾರಂಭ. ನಿರೀಕ್ಷಿಸಿದಂತೆ ಹಿರಿಯರ ಭೇಟಿ. ಉದ್ಯೋಗದಲ್ಲಿ ಪ್ರತಿಭೆಗೆ ಪುರಸ್ಕಾರ. ಗಣೇಶನ ಪ್ರಾರ್ಥನೆಯಿಂದ ಅನುಕೂಲ. ಮನೆಯಲ್ಲಿ ವರ್ಷಾವಧಿ ದೇವತಾ ಕಾರ್ಯಕ್ಕೆ ಸಿದ್ಧತೆ. ಮಕ್ಕಳ ಭವಿಷ್ಯ ಚಿಂತನೆ.
ವೃಶ್ಚಿಕ: ದೇಹ, ಮನಸ್ಸುಗಳ ಮೇಲೆ ಹವಾಮಾನ ವ್ಯತ್ಯಾಸದ ಪರಿಣಾಮ. ಉದ್ಯೋಗ ನಿರ್ವಹಣೆ ಮಂದಗತಿಯಲ್ಲಿ. ಸರಕಾರಿ ಉದ್ಯೋಗಿಗಳಿಗೆ ಆನಂದ. ವಾಹನ ಬಿಡಿಭಾಗ ಮಾರಾಟಗಾರರಿಗೆ ಲಾಭ.ಅವಿವಾಹಿತರಿಗೆ ವಿವಾಹ ಯೋಗ. ಹಿರಿಯರ ಆರೋಗ್ಯ ಉತ್ತಮ.
ಧನು: ನಿರಂತರ ಶ್ರಮ ಹಾಗೂ ಪ್ರತಿಭೆಯ ಬಳಕೆಗೆ ಸೂಕ್ತ ಫಲ ಪ್ರಾಪ್ತಿ. ಸಹೋದ್ಯೋಗಿಗಳಿಂದ ಗೌರವದ ನಡವಳಿಕೆ. ತಾಯಿಯ ಕಡೆಯ ಹಿರಿಯ ಬಂಧುಗಳ ಭೇಟಿ. ಸ್ವಂತದ ಚಿಕ್ಕ ಉದ್ಯಮದ ಬೆಳವಣಿಗೆ ಆರಂಭ. ಸಮಾಜದ ಕಿರಿಯರಿಗೆ ಮಾರ್ಗದರ್ಶನ ಮಾಡುವ ಅವಕಾಶ.
ಮಕರ: ಏಳೂವರೆ ಶನಿ ಬಾಧೆಯ ಕೊನೆಯ ಹಂತದಲ್ಲಿ ಕೆಲವು ಅನಿರೀಕ್ಷಿತ ಅನುಭವಗಳು. ಸಹಾಯ ಮಾಡುವ ಮನಸ್ಸಿನ ಹೊಸಬರ ಪರಿಚಯ. ವಸ್ತ್ರ, ಸಿದ್ಧ ಉಡುಪು, ಆಭರಣ, ಪಾದರಕ್ಷೆ, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ.
ಕುಂಭ: ಹೆಚ್ಚುಕಡಿಮೆ ಮಿಶ್ರಫಲಗಳ ದಿನ. ಉದ್ಯೋಗದಲ್ಲಿ ಕೆಲಸದ ಭಾರ ಹೆಚ್ಚಳ. ಸಂಸಾರದ ಜವಾಬ್ದಾರಿ ನಿರ್ವಹಣೆಯಲ್ಲಿ ಯಶಸ್ವಿ. ಕೃಷಿ ಭೂಮಿ ವಿಸ್ತರಣೆ ಕ್ರಮ ಆರಂಭ. ಗ್ರಾಹಕರ ಬೇಡಿಕೆಗೆ ಸ್ಪಂದಿಸಲು ವಿಶೇಷ ಶ್ರಮ. ಸಮಾಜ ಸೇವೆಗೆ ಹೊಸ ಅವಕಾಶ ಅನ್ವೇಷಣೆ.
ಮೀನ: ಗುರು, ದೇವತಾನುಗ್ರಹ ವಿಶೇಷವಾಗಿರುವ ದಿನ. ಉದ್ಯೋಗದಲ್ಲಿ ಸಂತೃಪ್ತಿ. ನಿರೀಕ್ಷಿತ ವ್ಯಕ್ತಿಗಳಿಂದ ಸಕಾರಾತ್ಮಕ ಸ್ಪಂದನ. ಅಪೇಕ್ಷಿತ ಕಾರ್ಯಗಳ ನೆರವೇರಿಕೆ. ವ್ಯವಹಾರದ ಸಂಬಂಧ ಸಣ್ಣ ಪ್ರಯಾಣದ ಸಾಧ್ಯತೆ. ಭವಿಷ್ಯದ ಯೋಜನೆಯ ನೀಲನಕ್ಷೆ ತಯಾರಿ. ಸಮಾಜದ ಕಾರ್ಯಗಳ ಹೊಣೆಗಾರಿಕೆ ಮುಂದುವರಿಕೆ. ದೇವತಾ ಸಾನ್ನಿಧ್ಯಕ್ಕೆ ಭೇಟಿ.
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.