Ullal ಅಂತಾರಾಜ್ಯ ಸ್ಪಿರಿಟ್‌ ಮಾರಾಟ ದಂಧೆ ಪತ್ತೆ: ಮೂವರು ವಶಕ್ಕೆ, ಓರ್ವ ಪರಾರಿ

ಲಕ್ಷಾಂತರ ಬೆಲೆಯ ಸ್ಪಿರಿಟ್‌, ಕಾರು, ನಕಲಿ ಸಾರಾಯಿ ವಶಕ್ಕೆ

Team Udayavani, Dec 13, 2023, 11:14 PM IST

Ullal ಅಂತಾರಾಜ್ಯ ಸ್ಪಿರಿಟ್‌ ಮಾರಾಟ ದಂಧೆ ಪತ್ತೆ: ಮೂವರು ವಶಕ್ಕೆ, ಓರ್ವ ಪರಾರಿ

ಉಳ್ಳಾಲ: ಕರ್ನಾಟಕ – ಕೇರಳ ಗಡಿಭಾಗದ ತಲಪಾಡಿ ಮತ್ತು ಕಿನ್ಯಾ ಗ್ರಾಮದ ಸಾಂತ್ಯದಲ್ಲಿ ಅಕ್ರಮವಾಗಿ ಸ್ಪಿರಿಟ್‌ ದಾಸ್ತಾನು ಮಾಡಿ ಕೇರಳ ಭಾಗಕ್ಕೆ ಸಾಗಾಟ ನಡೆಸುತ್ತಿದ್ದ ಬೃಹತ್‌ ಸ್ಪಿರಿಟ್‌ ಮತ್ತು ನಕಲಿ ಸಾರಾಯಿ ಜಾಲವನ್ನು ಅಬಕಾರಿ ಇಲಾಖೆ ಪತ್ತೆ ಹಚ್ಚಿದೆ.

ಮಂಗಳೂರು ವಿಭಾಗ ಉಪ ಆಯುಕ್ತ ಟಿ.ಎಂ. ಶ್ರೀನಿವಾಸ್‌ ನೇತೃತ್ವದ ತಂಡವು 2,450 ಲೀ. ಸ್ಪಿರಿಟ್‌, 242 ಲೀ. ನಕಲಿ ಬ್ರಾಂಡಿ, 2..34 ಲೀ. ಪ್ರಸ್ಟೀಜ್‌ ವಿಸ್ಕಿ ಸೇರಿದಂತೆ ಸಾರಾಯಿ ಪ್ಯಾಂಕಿಂಗ್‌ ಯಂತ್ರ, ಸಾಗಾಟಕ್ಕೆ ಬಳಸಿದ್ದ ಇನ್ನೋವಾ ಕಾರನ್ನು ವಶಕ್ಕ ಪಡೆದುಕೊಂಡಿದ್ದು, ಮೂವರನ್ನು ಬಂಧಿಸಿದೆ. ಇಬ್ಬರ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಕಿನ್ಯಾ ಗ್ರಾ.ಪಂ. ವ್ಯಾಪ್ತಿಯ ಸಾಂತ್ಯದ ಮನೆಯಿಂದ 2,240 ಲೀ. ಮದ್ಯ ಸಾರ, 222 ಲೀ. ನಕಲಿ ಬ್ರಾಂಡಿ ಹಾಗೂ ನಕಲಿ ಸಾರಾಯಿ ಪ್ಯಾಕಿಂಗ್‌ ನಡೆಸುತ್ತಿದ್ದ ಯಂತ್ರವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆರೋಪಿ ನಿತ್ಯಾನಂದ ಭಂಡಾರಿ ತಲೆಮರೆಸಿಕೊಂಡಿದ್ದಾನೆ. ತಲಪಾಡಿ ಮಸೀದಿ ಬಳಿಯ ಮನೆಯೊಂದರಿಂದ 210 ಲೀ. ಸ್ಪಿರಿಟ್‌ 20ಲೀ. ನಕಲಿ ಬ್ರಾಂಡಿ, 2.34 ಲೀ. ನಕಲಿ ಪ್ರಸ್ಟೀಜ್‌ ವಿಸ್ಕಿ, ಇನೋವಾ ಕಾರು ಸಹಿತ ಅದರೊಳಗಿದ್ದ 70 ಲೀ. ಸ್ಪಿರಿಟ್‌ ವಶಕ್ಕೆ ಪಡೆಯಲಾಗಿದೆ. ಸತೀಶ್‌ ತಲಪಾಡಿ, ಕುಂಜತ್ತೂರಿನ ನೌಷಾದ್‌ ಹಾಗೂ ಅನ್ಸಿಫ್‌ ಎಂಬವರನ್ನು ವಶಕ್ಕೆ ಪಡೆಯಲಾಗಿದೆ.

ಪ್ರಮುಖ ಆರೋಪಿ ಮಂಜೇಶ್ವರ ಕುಂಜತ್ತೂರು ನಿವಾಸಿ ಆನ್ನು ಯಾನೆ ಅರವಿಂದನ ಪತ್ತೆಗೆ ಕರ್ನಾಟಕದ ಅಬಕಾರಿ ಇಲಾಖೆಯ ಅಧಿಕಾರಿಗಳ ತಂಡ ಕೇರಳದ ಅಬಕಾರಿ ಇಲಾಖೆಯ ಸಹಯೋಗದೊಂದಿಗೆ ದಾಳಿ ನಡೆಸಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ. ನಿತ್ಯಾನಂದ ಮತ್ತು ಅರವಿಂದನ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿದಿದೆ.

ಕುಂಜತ್ತೂರು ಸಂಪರ್ಕ
ಸಾಂತ್ಯದಲ್ಲಿ ನಿತ್ಯಾನಂದ ಮತ್ತು ತಲಪಾಡಿಯ ಸತೀಶ್‌ ಅಕ್ರಮ ಅಡ್ಡೆಯ ಪ್ರಮುಖ ರೂವಾರಿ ಕುಂಜತ್ತೂರು ನಿವಾಸಿ ಅನ್ನು ಯಾನೆ ಅರವಿಂದ್‌ ಎಂಬಾತನಾಗಿದ್ದು, ಆತನ ವಿರುದ್ಧ ಕರ್ನಾಟಕ ಮತ್ತು ಕೇರಳದಲ್ಲಿ ಅನೇಕ ಪ್ರಕರಣಗಳು ದಾಖಲಾಗಿವೆ. 9 ಪ್ರಕರಣಗಳು ತನಿಖೆಯ ಹಂತದಲ್ಲಿವೆ. ಕುಂಜತ್ತೂರು ಪ್ರದೇಶ ಅಕ್ರಮ ದಾಸ್ತನಿಗೆ ಅವಕಾಶವಿರದ ಕಾರಣ ತಲಪಾಡಿ ಮತ್ತು ಸಾಂತ್ಯದಲ್ಲಿ ಈ ಚಟುವಟಿಕೆ ಅರವಿಂದ್‌ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದು, ಅಲ್ಲಿಂದ ನಕಲಿ ಸಾರಾಯಿಯನ್ನು ಕಾಸರಗೋಡು ಜಿಲ್ಲೆಯ ವಿವಿಧೆಡೆಗೆ ಏಜೆಂಟ್‌ಗಳ ಮೂಲಕ ಸಾಗಾಟ ಮಾಡುತ್ತಿದ್ದರು.

ಬುಧವಾರ ಮಂಗಳೂರು ವಿಭಾಗದ ಅಬಕಾರಿ ಅಧಿಕಾರಿಗಳ ತಂಡ ಕಾಸರಗೋಡು ಜಿಲ್ಲೆಯ ಅಬಕಾರಿ ಇಲಾಖೆಯ ತಂಡದೊಂದಿಗೆ ಅರವಿಂದನ ಮನೆಗೆ ದಾಳಿ ನಡೆಸಿದ್ದು, ಆರೋಪಿ ಮನೆಯಿಂದ ಹೊರಗೆ ಹೋಗಿರುವ ಮಾಹಿತಿ ಲಭ್ಯವಾಗಿದೆ. ಅರವಿಂದ ವಿದೇಶಕ್ಕೆ ತೆರಳುವ ಸಾಧ್ಯತೆಯ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉಪ ಆಯುಕ್ತ ಟಿ.ಎಂ. ಶ್ರೀನಿವಾಸ ಮಾತನಾಡಿ, ಅಧಿಕಾರ ಸ್ವೀಕರಿಸಿದ 2 ತಿಂಗಳ ಅವಧಿಯಲ್ಲಿ ಇದು ಬೃಹತ ದಾಳಿಯಾಗಿದ್ದು, ಅಕ್ರಮ ಸ್ಪಿರಿಟ್‌ ಸೇರಿದಂತೆ ನಕಲಿ ಸಾರಾಯಿ ಮಾರಾಟದ ಮೇಲೆ ನಿಗಾ ವಹಿಸಿದ್ದು, ಈ ಪ್ರಕರಣದ ಹಿಂದೆ ಇರುವ ಎಲ್ಲಾ ಆರೋಪಿಗಳನ್ನು ಬಂಧಿಸಲಾಗುವುದು ಎಂದರು.

ಅಬಕಾರಿ ಮಂಗಳೂರು ವಿಭಾಗದ ಜಂಟಿ ಆಯುಕ್ತ ನಾಗರಾಜಪ್ಪ ಟಿ., ಉಪ ಆಯುಕ್ತ ಟಿ.ಎಂ. ಶ್ರೀನಿವಾಸ ಮಾರ್ಗದರ್ಶನದಲ್ಲಿ ಉಪಅಧೀಕ್ಷಕ ಸೈಯ್ಯದ್‌ ತಫಿjàಲುಲ್ಲಾ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ದಕ್ಷಿಣ ವಲಯ-2 ಅಬಕಾರಿ ಇಲಾಖೆ ನಿರೀಕ್ಷಕಿ ಕಮಲಾ ಎಚ್‌.ಎನ್‌. ಉಪ ನಿರೀಕ್ಷಕರಾದ ಅಶೀಷ್‌, ಉಮೇಶ್‌, ಉಪ ವಿಭಾಗ 2 ಮಂಗಳೂರು ದಕ್ಷಿಣ ವಲಯ 1 ಮತ್ತು ಪೂರ್ವ ವಲಯ 1ರ ಅಬಕಾರಿ ಇಲಾಖೆಯ ಸಿಬಂದಿ ಭಾಗವಹಿಸಿದ್ದರು.

ಟಾಪ್ ನ್ಯೂಸ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

1-abaz-matr-11

Maharashtra; ಇನ್‌ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್‌ ಇದ್ರು ಸಿಕ್ಕಿದ್ದು ಕೇವಲ 155 ಮತ!!

Riots against mosque survey: Police fire tear gas at Sambhal

Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

puttige-5

Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ

13

Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್‌

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

Karkala: ಬೈಕ್‌ ಢಿಕ್ಕಿ; ಗಾಯ

Karkala: ಬೈಕ್‌ ಢಿಕ್ಕಿ; ಗಾಯ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

20-uv-fusion

UV Fusion: ಜೀವಂತಿಕೆ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

1-abaz-matr-11

Maharashtra; ಇನ್‌ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್‌ ಇದ್ರು ಸಿಕ್ಕಿದ್ದು ಕೇವಲ 155 ಮತ!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.