India-England ಅಪರೂಪದ ವನಿತಾ ಟೆಸ್ಟ್ ಇಂದು ಆರಂಭ
ಭಾರತಕ್ಕೆ ಅನುಭವದ ಕೊರತೆ
Team Udayavani, Dec 14, 2023, 6:20 AM IST
ನವೀ ಮುಂಬಯಿ: ಭಾರತ-ಇಂಗ್ಲೆಂಡ್ ನಡುವಿನ ಏಕೈಕ ವನಿತಾ ಟೆಸ್ಟ್ ಪಂದ್ಯ ಗುರುವಾರ ಇಲ್ಲಿನ “ಡಿ.ವೈ. ಪಾಟೀಲ್ ಸ್ಟೇಡಿಯಂ’ ನಲ್ಲಿ ಆರಂಭವಾಗಲಿದೆ. ಎರಡೂ ತಂಡಗಳು ಒಮ್ಮೆಲೇ ಟಿ20 ಮಾದರಿ ಯಿಂದ ಟೆಸ್ಟ್ ಮಾದರಿಗೆ ಹೊಂದಿಕೊಳ್ಳಬೇಕಾದ ತರಾತುರಿಯಲ್ಲಿವೆ.
ಹರ್ಮನ್‌ಪ್ರೀತ್ ಕೌರ್ ಮೊದಲ ಸಲ ಟೆಸ್ಟ್ ತಂಡವನ್ನು ಮುನ್ನಡೆಸು ತ್ತಿರುವುದು ಇಲ್ಲಿನ ವಿಶೇಷ. ಅವರಿಲ್ಲಿ ಮಿಥಾಲಿ ರಾಜ್ ಉತ್ತರಾಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಇತ್ತಂಡಗಳು 1986ರಲ್ಲಿ ಟೆಸ್ಟ್ ಆಡತೊಡಗಿದ್ದರೂ ಈವರೆಗೆ ನಡೆದದ್ದು 14 ಪಂದ್ಯ ಮಾತ್ರ. ಇದರಲ್ಲಿ ಭಾರತ ಒಂದರಲ್ಲಿ ಸೋಲನುಭವಿಸಿದೆ. ಇದು ಕೇವಲ 2 ರನ್ನುಗಳ ಆಘಾತವಾಗಿತ್ತು. 1995ರ ಜಮ್ಶೆಡ್‌ಪುರದಲ್ಲಿ ಇಂಗ್ಲೆಂಡ್ ಈ ಏಕೈಕ ಜಯವನ್ನು ಸಾಧಿಸಿತ್ತು. ಭಾರತ-ಇಂಗ್ಲೆಂಡ್ 2021ರಲ್ಲಿ ಕೊನೆಯ ಸಲ ಎದುರಾಗಿದ್ದವು. ಬ್ರಿಸ್ಟಲ್ ನಲ್ಲಿ ನಡೆದ ಈ ಮುಖಾಮುಖೀ ಡ್ರಾ ಗೊಂಡಿತ್ತು. ಸ್ಮತಿ ಮಂಧನಾ ಮೊದಲ ಇನ್ನಿಂಗ್ಸ್‌ನಲ್ಲಿ 78 ರನ್, ಯಂಗ್ ಶಫಾಲಿ ವರ್ಮ 96 ಮತ್ತು 63 ರನ್ ಹೊಡೆದು ಮಿಂಚಿದ್ದರು.
ಮುಂದೆ ಆಸ್ಟ್ರೇಲಿಯ
ಭಾರತ ಈ ಟೆಸ್ಟ್ ಪಂದ್ಯದ ಬಳಿಕ ಇನ್ನೊಂದು ಬಲಿಷ್ಠ ತಂಡವಾದ ಆಸ್ಟ್ರೇಲಿಯ ವಿರುದ್ಧವೂ ಟೆಸ್ಟ್ ಒಂದನ್ನು ಆಡಲಿಕ್ಕಿದೆ. ಇದು ಡಿ. 21-24ರ ತನಕ “ವಾಂಖೇಡೆ ಸ್ಟೇಡಿಯಂ’ ನಲ್ಲಿ ಸಾಗಲಿದೆ. ಭಾರತ ಕೊನೆಯ ಸಲ 2021ರ ಸೆಪ್ಟಂಬರ್‌ನಲ್ಲಿ ಆಸ್ಟ್ರೇಲಿಯ ವಿರುದ್ಧವೇ ಟೆಸ್ಟ್ ಆಡಿತ್ತು. ಕೆರಾರ ದಲ್ಲಿ ನಡೆದ ಈ ಪಂದ್ಯದಲ್ಲಿ ಸ್ಮತಿ ಮಂಧನಾ 127 ಮತ್ತು 31 ರನ್ ಬಾರಿಸಿ ಮಿಂಚಿದ್ದರು.
ಅನುಭವಕ್ಕೆ ಹೋಲಿಸಿದರೆ ಭಾರತ ಕ್ಕಿಂತ ಇಂಗ್ಲೆಂಡ್ ಆಟಗಾರ್ತಿಯರು ಎಷ್ಟೋ ಮುಂದಿದ್ದಾರೆ. ನಮ್ಮ ಖಾಯಂ ಆಟಗಾರ್ತಿಯರಾಗಿರುವ ಜೆಮಿಮಾ ರೋಡ್ರಿಗಸ್, ಹರ್ಲೀನ್ ದೇವಲ್ ಕೂಡ ಟೆಸ್ಟ್ ಆಡಿದವರಲ್ಲ! ಯಾಸ್ತಿಕಾ ಭಾಟಿಯಾ, ಸ್ನೇಹ್ ರಾಣಾ ಆಡಿದ್ದು ಒಂದೇ ಟೆಸ್ಟ್. ದೀಪ್ತಿ ಶರ್ಮ 2 ಟೆಸ್ಟ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿ ಕೌರ್ 3, ಮಂಧನಾ ಅತ್ಯಧಿಕ 4 ಟೆಸ್ಟ್ ಆಡಿದ್ದಾರೆ.
ಪ್ರಧಾನ ವೇಗಿ ರೇಣುಕಾ ಸಿಂಗ್ ಠಾಕೂರ್ ಇನ್ನಷ್ಟೇ ಟೆಸ್ಟ್ ಕ್ಯಾಪ್ ಧರಿಸಬೇಕಿದೆ. ಹಾಗೆಯೇ ಕರ್ನಾಟಕದ ಎಡಗೈ ಆರಂಭಿಕ ಆಟಗಾರ್ತಿ ಶುಭಾ ಸತೀಶ್ ಟೆಸ್ಟ್ ಪದಾರ್ಪಣೆಯ ನಿರೀಕ್ಷೆಯಲ್ಲಿದ್ದಾರೆ. ಭಾರತಕ್ಕೆ ಹೋಲಿಸಿದರೆ ಇಂಗ್ಲೆಂಡ್ ಆಟಗಾರ್ತಿಯರ ಟೆಸ್ಟ್ ಅನುಭವ ಹೆಚ್ಚು. ನಾಯಕಿ ಹೀತರ್ ನೈಟ್ 11, ನ್ಯಾಟ್ ಸ್ಕಿವರ್ ಬ್ರಂಟ್ 9, ಕೇಟ್ ಕ್ರಾಸ್ 7, ಎಕ್ಲ್ ಸ್ಟೋನ್ 6 ಪಂದ್ಯ ಆಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.