Ayodhya Temple: ಭಗವಾನ್‌ ಶ್ರೀರಾಮನ ವಿಗ್ರಹ ರಚನೆಯಲ್ಲಿ ಮುಸ್ಲಿಂ ಶಿಲ್ಪಿಗಳ ಕೈಚಳಕ


ನಾಗೇಂದ್ರ ತ್ರಾಸಿ, Dec 14, 2023, 1:46 PM IST

Ayodhya Temple: ಭಗವಾನ್‌ ಶ್ರೀರಾಮನ ವಿಗ್ರಹ ರಚನೆಯಲ್ಲಿ ಮುಸ್ಲಿಂ ಶಿಲ್ಪಿಗಳ ಕೈಚಳಕ

ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಬೃಹತ್‌ ರಾಮಮಂದಿರದ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ. ಈಗಾಗಲೇ ರಾಮಮಂದಿರ ಉದ್ಘಾಟನಾ ಸಮಾರಂಭ, ವಿಗ್ರಹ ಸ್ಥಾಪನೆಯ ರೂಪರೇಷೆ ಸಿದ್ಧಗೊಂಡಿದ್ದು, ಅಯೋಧ್ಯೆಯಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ಏತನ್ಮಧ್ಯೆ ಪಶ್ಚಿಮಬಂಗಾಳದ ಉತ್ತರ 24 ಪರಾಗಣ ಜಿಲ್ಲೆಯ ಇಬ್ಬರು ಮುಸ್ಲಿಂ ಶಿಲ್ಪಿಗಳು ಅಯೋಧ್ಯೆ ದೇವಾಲಯದ ಅಲಂಕಾರಕ್ಕಾಗಿ ಭಗವಾನ್‌ ಶ್ರೀರಾಮನ ವಿಗ್ರಹ ರಚನೆಯಲ್ಲಿ ತೊಡಗಿಕೊಂಡಿರುವುದಾಗಿ ವರದಿ ತಿಳಿಸಿದೆ.

ಯಾರೀವರು?

ಮೊಹಮ್ಮದ್‌ ಜಮಾಲುದ್ಧೀನ್‌ ಮತ್ತು ಅವರ ಮಗ ಬಿಟ್ಟು ಅಯೋಧ್ಯೆ ರಾಮಮಂದಿರದ ಸಂಕೀರ್ಣವನ್ನು ಅಲಂಕರಿಸುವ ಭವ್ಯವಾದ ಶ್ರೀರಾಮನ ಪ್ರತಿಮೆಗಳನ್ನು ನಿರ್ಮಾಣ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಅಯೋಧ್ಯೆಯಲ್ಲಿ ಭಗವಾನ್‌ ಶ್ರೀರಾಮನ ರಾಮರಾಜ್ಯದ ನೆನಪನ್ನು ಮರುಕಳಿಸುವ ನಗರವನ್ನಾಗಿ ಪರಿವರ್ತಿಸುವ ಪ್ರಯತ್ನ ಭರದಿಂದ ಸಾಗಿದೆ. ಭಗವಾನ್‌ ರಾಮಲಲ್ಲಾನ ವಿಗ್ರಹ ಸ್ಥಾಪನೆಯ ಗರ್ಭಗುಡಿಗೆ ನೇಪಾಳದಿಂದ ತಂದ ಪವಿತ್ರ ಸಾಲಿಗ್ರಾಮ ಕಲ್ಲುಗಳನ್ನು ಉಪಯೋಗಿಸಲಾಗಿದೆ. ಮತ್ತೊಂದೆಡೆ ಉದ್ಘಾಟನೆಯ ಹಿನ್ನೆಲೆಯಲ್ಲಿ ಇಡೀ ಅಯೋಧ್ಯಾ ನಗರವನ್ನು ಅಲಂಕರಿಸುವ ಕಾರ್ಯ ನಡೆಯುತ್ತಿದೆ. ವಿದ್ಯುದೀಪಗಳಿಂದ ಅಲಂಕಾರಗೊಳ್ಳಲಿರುವ ರಸ್ತೆಯ ಸ್ಥಳಗಳಲ್ಲಿ ಭಗವಾನ್‌ ಶ್ರೀರಾಮನ ವಿಗ್ರಹಗಳನ್ನು ಇಡಲು ಸಿದ್ಧತೆ ನಡೆಯುತ್ತಿದೆ.

ಕುತೂಹಲಕಾರಿ ಅಂಶ ಎಂಬಂತೆ ಈ ಅಲಂಕಾರಿಕ ಶ್ರೀರಾಮನ ವಿಗ್ರಹಗಳು ಅಯೋಧ್ಯೆಯಿಂದ ದೂರದಲ್ಲಿರುವ ಪಶ್ಚಿಮಬಂಗಾಳದ ಉತ್ತರ ೨೪ ಪರಗಣ ಜಿಲ್ಲೆಯಲ್ಲಿ ತಯಾರಿಸಲಾಗುತ್ತಿದೆ. 24 ಪರಗಣದಲ್ಲಿನ ದತ್ತಪುಕುರ್‌ ಎಂಬಲ್ಲಿ ಭಗವಾನ್‌ ಶ್ರೀರಾಮನ ಬೃಹತ್‌ ಗಾತ್ರದ ಫೈಬರ್‌ ಮೂರ್ತಿಗಳನ್ನು ಜಮಾಲುದ್ದೀನ್‌ ಮತ್ತು ಪುತ್ರ ಬಿಟ್ಟು ತಯಾರಿಸುತ್ತಿದ್ದಾರೆ. ಮಳೆ ಹಾಗೂ ಬಿಸಿಲಿನ ತಾಪಮಾನವನ್ನು ತಡೆದುಕೊಂಡು ಗಮನಾರ್ಹ ಬಾಳಿಕೆಗೆ ಈ ವಿಗ್ರಹ ಹೆಸರುವಾಸಿಯಾಗಿದೆ. ಸಾಂಪ್ರದಾಯಿಕ ಮಣ್ಣಿನ ಮೂರ್ತಿಗಿಂತ ಈ ಫೈಬರ್‌ ಮೂರ್ತಿಗೆ ಹೆಚ್ಚಿನ ಬೇಡಿಕೆ ಇದ್ದು, ಪ್ರಮುಖವಾಗಿ ಪ್ರತಿಕೂಲ ಹವಾಮಾನ ತಡೆದುಕೊಳ್ಳಬಲ್ಲ ಈ ಫೈಬರ್‌ ಮೂರ್ತಿಯನ್ನು ಹೊರಾಂಗಣದಲ್ಲಿ ಹೆಚ್ಚಾಗಿ ಇಡಲು ಬಳಸಿಕೊಳ್ಳಲಾಗುತ್ತದೆ.

ಇತ್ತೀಚೆಗೆ ಫೈಬರ್‌ ಶ್ರೀರಾಮನ ವಿಗ್ರಹವನ್ನು ತಯಾರಿಸಿಕೊಡಬೇಕೆಂಬ ಆರ್ಡರ್‌ ಅಯೋಧ್ಯೆಯಿಂದ ತಮಗೆ ಬಂದಿರುವುದಾಗಿ ಜಮಾಲುದ್ದೀನ್‌ ಪುತ್ರ ಬಿಟ್ಟು ತಿಳಿಸಿದ್ದಾರೆ. ನೂರು ವರ್ಷಗಳ ಇತಿಹಾಸವಿರುವ ಈ ವರ್ಕ್‌ ಶಾಪ್‌ ಮಣ್ಣಿನ ವಿಗ್ರಹಕ್ಕೆ ಹೆಸರುವಾಸಿಯಾಗಿತ್ತು. ಆದರೆ ಫೈಬರ್‌ ವಿಗ್ರಹದ ಬೇಡಿಕೆ ಹೆಚ್ಚಾಗಿದ್ದರಿಂದ ಅದಕ್ಕೆ ಹೆಚ್ಚು ಒತ್ತು ನೀಡಿ ವಿಗ್ರಹ ತಯಾರಿಸುತ್ತಿದ್ದಾರಂತೆ. ಬೃಹತ್‌ ಗಾತ್ರದ ವಿಗ್ರಹ ತಯಾರಿಕೆಗೆ ಅಂದಾಜು 2.8 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಇದರಲ್ಲಿ ಕರಕುಶಲ ಕೆಲಸದ ಸಂಬಳವೂ ಸೇರಿರುತ್ತದೆ.

ಸುಮಾರು 30ರಿಂದ 35 ಜನರು ಈ ಬೃಹತ್‌ ಶ್ರೀರಾಮನ ವಿಗ್ರಹ ತಯಾರಿಯಲ್ಲಿ ತೊಡಗಿಕೊಂಡಿದ್ದು, ಸುಮಾರು ಒಂದೂವರೆ ತಿಂಗಳು ಕಾಲ ವಿಗ್ರಹ ತಯಾರಿಸಲು ಬೇಕಾಗಿದ್ದು, ನಂತರ ಈ ವಿಗ್ರಹಗಳನ್ನು ಉತ್ತರ 24 ಪರಗಣದಿಂದ ಅಯೋಧ್ಯೆಗೆ ಸಾಗಿಸಲು 45 ದಿನಗಳ ಅಗತ್ಯವಿದೆ ಎಂದು ಯುವಶಿಲ್ಪಿ ಬಿಟ್ಟು ತಿಳಿಸಿದ್ದಾರೆ.

ವಿಗ್ರಹ ತಯಾರಿ ಬಗ್ಗೆ ಪ್ರಶ್ನಿಸಿದಾಗ ಜಮಾಲುದ್ದೀನ್‌ ಹೇಳಿದ್ದಿಷ್ಟು: ಧರ್ಮ ಎಂಬುದು ನಮ್ಮ ವೈಯಕ್ತಿಕ ವಿಚಾರ. ದೇಶದಲ್ಲಿ ವಿವಿಧ ಧರ್ಮದ ಜನರಿದ್ದಾರೆ. ಆದರೆ ಇದರಲ್ಲಿ ನಮ್ಮ ಸಂದೇಶ ಸಿಂಪಲ್ಲಾಗಿದೆ…ಕೋಮುವಾದದ ಈ ಕಾಲಘಟ್ಟದಲ್ಲಿ ನಾವೆಲ್ಲರೂ ಒಟ್ಟಾಗಿ ಬಾಳಬೇಕಾಗಿದೆ. ಆ ನಿಟ್ಟಿನಲ್ಲಿ ಭಗವಾನ್‌ ಶ್ರೀರಾಮನ ವಿಗ್ರಹ ತಯಾರಿ ಕೆಲಸ ನನಗೆ ತುಂಬಾ ಖುಷಿ ಕೊಟ್ಟಿದೆ. ಈ ಮೂಲಕ ನಾನೊಬ್ಬ ಕಲಾವಿದ ಎಂಬ ಸಂದೇಶದೊಂದಿಗೆ ಭ್ರಾತೃತ್ವ ಸಂಸ್ಕೃತಿ ಬೆಳೆಯಲಿದೆ ಎಂದು ಹೇಳಿದರು.

ಟಾಪ್ ನ್ಯೂಸ್

Digi-Arrest

Mangaluru: ಡಿಜಿಟಲ್‌ ಅರೆಸ್ಟ್‌, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ

Ramalinga reddy 2

Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

1-rewww

B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

muslim marriage

Marriage registration ಪ್ರಮಾಣಪತ್ರ ನೀಡುವ ಅಧಿಕಾರ ವಕ್ಫ್ ಬೋರ್ಡ್‌ಗೆ ಎಲ್ಲಿದೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

BGT: ವಿರಾಟ್‌ ಬಗ್ಗೆ ಆಸೀಸ್‌ ಜನರಿಗೆ ಯಾಕಿಷ್ಟು ಕುತೂಹಲ; ಇಂದು ಕಿಂಗ್‌ ಸಾಮ್ರಾಜ್ಯದ ಕಥೆ

BGT: ವಿರಾಟ್‌ ಬಗ್ಗೆ ಆಸೀಸ್‌ ಜನರಿಗೆ ಯಾಕಿಷ್ಟು ಕುತೂಹಲ; ಇದು ಕಿಂಗ್‌ ಸಾಮ್ರಾಜ್ಯದ ಕಥೆ

palaniswami

AIADMK-BJP ಮರು ಮೈತ್ರಿ ಸುದ್ದಿ: ನಿರ್ಧಾರ ಬದಲಿಸುವರೇ ಪಳನಿಸ್ವಾಮಿ?

Recipe: ಚಟ್ ಪಟ್ ಅಂತ ಮಾಡಿ ಪನೀರ್ ಪಕೋಡಾ…

Recipe: ಚಟ್ ಪಟ್ ಅಂತ ಮಾಡಿ ಪನೀರ್ ಪಕೋಡಾ…

coco

Coconut Oil: ತ್ವಚೆಗೆ ತೆಂಗಿನ ಎಣ್ಣೆ ಹಚ್ಚುವುದರಿಂದಾಗುವ ಉಪಯೋಗಗಳ ಬಗ್ಗೆ ತಿಳಿಯಿರಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Digi-Arrest

Mangaluru: ಡಿಜಿಟಲ್‌ ಅರೆಸ್ಟ್‌, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ

Ramalinga reddy 2

Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

1-rewww

B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.