Dharwad: ಸಹಕಾರ ಸಂಘಗಳಿಗೆ ರೈತರೇ ಜೀವಾಳ-ಜಿ.ಟಿ. ದೇವೇಗೌಡ
264 ಜನ ಸದಸ್ಯರು, 37240 ರೂ. ಶೇರು ಬಂಡವಾಳ ಇತ್ತು.
Team Udayavani, Dec 14, 2023, 2:15 PM IST
ಅಣ್ಣಿಗೇರಿ: ಪ್ರತಿಯೊಂದು ಹಳ್ಳಿಯಲ್ಲಿ ಸಹಕಾರಿ ಸಂಘವು ಉನ್ನತ ಮಟ್ಟದಲ್ಲಿ ಬೆಳೆಯಲು ರೈತರ ಪಾತ್ರ ದೊಡ್ಡದು ಎಂದು
ಸಹಕಾರ ಮಹಾಮಂಡಳದ ಅಧ್ಯಕ್ಷ ಹಾಗೂ ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ, ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ
ಹಾಗೂ ಸಂಘದ ಗೋದಾಮು ಅಡಿಗಲ್ಲು ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಹಕಾರ ಸಂಘಗಳು ಆರ್ಥಿಕವಾಗಿ ಸದೃಢವಾಗುವುದರ ಜೊತೆಗೆ ರೈತರನ್ನು ಆರ್ಥಿಕವಾಗಿ ಬಲಿಷ್ಠರನ್ನಾಗಿಸಲು ಕೆಲಸ ಮಾಡುತ್ತಿವೆ. ಸಹಕಾರಿ ಸಂಘಗಳಿಗೆ ರೈತರೇ ಜೀವಾಳ. ಉದಾರೀಕರಣ, ಜಾಗತೀಕರಣ ಬಂದು ಸಹಕಾರ ಕ್ಷೇತ್ರಕ್ಕೆ ಬಹಳ ಹೊಡೆತ
ಬಿದ್ದಿದ್ದರೂ ಸಹಕಾರ ಸಂಘವು ಬೆಳೆದು ಬಂದಿರುವುದು ಸಂತಸವಾಗುತ್ತದೆ.
ಗ್ರಾಮಕ್ಕೊಂದು ಗ್ರಾಪಂ, ಶಾಲೆ, ಸಹಕಾರ ಸಂಘ ಈ ಮೂರು ಮೂಲಭೂತವಾಗಿ ಇರಬೇಕು. ಅಂದಾಗ ಗ್ರಾಮದ ಅಭಿವೃದ್ಧಿ
ಸಾಧ್ಯ ಎಂದರು.
ಸಂಘದ ನಿರ್ದೇಶಕ ಚಂದ್ರಗೌಡ್ರು ಕಿತ್ತೂರ ಪ್ರಾಸ್ತಾವಿಕ ಮಾತನಾಡಿ, ಸಂಘವು 1919ರಲ್ಲಿ ಹುಟ್ಟಿಕೊಂಡಿತು. ಸ್ಥಾಪನೆ ಮಾಡಿದವರು ಶ್ರೀಮಂತ ಶಂಕ್ರಪ್ಪಗೌಡ ಫಕ್ಕೀರಗೌಡ ಸಿಕ್ಕೆದೇಸಾಯಿ. ಅಣ್ಣಿಗೇರಿ ಗ್ರಾಮದ ರೈತರು ಒಂದಾಗಿ ಸ್ವಲ್ಪ ಬಂಡವಾಳದಿಂದ ಈ ಸಂಸ್ಥೆಯನ್ನು ಕಟ್ಟಿಕೊಂಡರು. ಪ್ರಾರಂಭದಲ್ಲಿ 264 ಜನ ಸದಸ್ಯರು, 37240 ರೂ. ಶೇರು ಬಂಡವಾಳ ಇತ್ತು.
ಪ್ರಸ್ತುತ ಸಂಘದ ಸದಸ್ಯರ ಸಂಖ್ಯೆ 1896 ಆಗಿದೆ. ಸಂಘ ಹೊಸದಾಗಿ ಒಂದು ರೇಶನ್ ಅಂಗಡಿ ಮತ್ತು ಕೇಂದ್ರ ಸರ್ಕಾರದ
ಭಾರತೀಯ ಜನೌಷ ಧಿ ಕೇಂದ್ರ ಹೊಂದಿದೆ. ಸಂಘದಿಂದ ಪ್ರತಿವರ್ಷ ಯೋಗ್ಯದರದಲ್ಲಿ ಸುಮಾರು 1 ಕೋಟಿ ರೂ. ವರೆಗಿನ
ಗೊಬ್ಬರ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಬಾಪುಗೌಡ ಪಾಟೀಲ, ಷಣ್ಮುಖ ಗುರಿಕಾರ ಮಾತನಾಡಿದರು. ಪಿಕೆಪಿಎಸ್ ಅಧ್ಯಕ್ಷ ನಿಜಲಿಂಗಪ್ಪ ಅಕ್ಕಿ, ಜಿ.ಪಿ. ಪಾಟೀಲ,
ಶಿವಕುಮಾರಗೌಡ ಪಾಟೀಲ, ಮೋಹನ ಲಿಂಬಿಕಾಯಿ, ಮಲ್ಲಿಕಾರ್ಜುನ ಹೋರಕೇರಿ, ಬಿ.ಬಿ. ಗಂಗಾಧರಮಠ, ಶಿವಣ್ಣ ಮಾಡೊಳ್ಳಿ, ವಿಜಯ ಗುಡ್ಡದ, ಬಸನಗೌಡ ಕುರಹಟ್ಟಿ, ಚಂಬಣ್ಣ ಹಾಳದೋಟರ, ಪುರಸಭೆ ಅಧ್ಯಕ್ಷೆ ಮೆಹಬೂಬಿ ನವಲಗುಂದ, ಉಪಾಧ್ಯಕ್ಷೆ ಜಯಲಕ್ಷ್ಮೀ ಜಕರಡ್ಡಿ, ಈಶ್ವರ ಕಾಳಪ್ಪನವರ, ಮಹೇಶ ಅಂಗಡಿ, ಮಹಾಬಳೇಶ್ವರ ಹೆಬಸೂರ, ಚಂಬಣ್ಣ ಸುರಕೋಡ, ಶೇಖಣ್ಣ ಹಾಳದೋಟರ, ಚಂಬಣ್ಣ ಆಲೂರ, ಸಂಘದ ಉಪಾದ್ಯಕ್ಷ ದೇವೇಂದ್ರಪ್ಪ ನರಗುಂದ, ಈಶ್ವರಪ್ಪ ಹೊಂಬಳ, ಕುಮಾರ ಬೀಳೆಬಾಳ, ಹನುಮಂತ ಉಣಕಲ್ಲ, ಲಲಿತಾ ಆಲೂರ, ಚನ್ನಮ್ಮ ಹಾಳದೋಟರ, ಸಂಘದ ಮುಖ್ಯ
ಕಾರ್ಯನಿರ್ವಾಹಕ ಲಿಂಗನಗೌಡ್ರು ಕುರಹಟ್ಟಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
MUST WATCH
ಹೊಸ ಸೇರ್ಪಡೆ
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Kollywood: ಯೂಟ್ಯೂಬ್ ವಿಮರ್ಶೆ ಬ್ಯಾನ್ ಮಾಡಲು ತಮಿಳು ನಿರ್ಮಾಪಕರ ಸಂಘ ಆಗ್ರಹ
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…
Panaji: ಗೋವಾಕ್ಕೆ ಬರುತ್ತಿದ್ದ ವಿಮಾನದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.