Ayodhya: ರಾಮಲಲ್ಲಾನಿಗೆ ರಾಮನಂದಿ ಪೂಜೆ


Team Udayavani, Dec 14, 2023, 8:09 PM IST

ram mandir rama

ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಸಿದ್ಧತೆಗಳೆಲ್ಲವೂ ಭರದಿಂದ ಸಾಗುತ್ತಿದ್ದು, ಇಡೀ ಅಯೋಧ್ಯೆಯಲ್ಲಿ ಸಂಭ್ರಮದ ವಾತಾವರಣ ಏರ್ಪಟ್ಟಿದೆ. ಅಯೋಧ್ಯೆಯ ಜನರು ನೂರಾರು ವರ್ಷಗಳಿಂದ ನಡೆದುಬರುತ್ತಿರುವ ತಮ್ಮ ಸಂಪ್ರದಾಯಿಕ ಪೂಜಾ ವಿಧಾನದ ಮೂಲಕವೇ ಬಾಲರಾಮನ ಸ್ವಾಗತಿಸಲು ಕಾದಿದ್ದಾರೆ. ಯಾವುದು ಆ ವಿಶಿಷ್ಟ ಪೂಜಾ ವಿಧಾನ ? ಎಂಬುದರ ವಿವರ ಹೀಗಿದೆ.

ದ್ವಿವಿಧ ಪೂಜಾ ಪರಂಪರೆ
ಮರ್ಯಾದ ಪುರುಷೋತ್ತಮ ರಾಮನನ್ನು ಜಗದೊಡೆಯ ಎಂದೇ ಪೂಜಿಸಿದರೂ, ಅಯೋಧ್ಯೆಯಲ್ಲಿ ಆತನಿನ್ನೂ ಬಾಲಕ. ಸಹಸ್ರಾರು ವರ್ಷಗಳಿಂದಲೂ ರಾಮನನ್ನು ಬಾಲ ರೂಪದಲ್ಲೇ ಪೂಜಿಸುತ್ತಾ ಬರಲಾಗಿದೆ. ಇದಕ್ಕಾಗಿ ಅಲ್ಲಿನ ದೇಗುಲಗಳಲ್ಲಿ ಅನುಸರಿಸುವ ವಿಶೇಷ ಪೂಜಾ ವಿಧಾನವೇ ರಾಮನಂದಿ!. ಶ್ರೀ ಜಗದ್ಗುರು ರಮಾನಂದಾಚಾರ್ಯರು ಈ ಸಂಪ್ರದಾಯವನ್ನು ಆರಂಭಿಸಿದರು ಎನ್ನಲಾಗುತ್ತದೆ. ಪ್ರೌಢಾವಸ್ತೆಯ ರಾಮನ ಆರಾಧನೆಗೆ ರಾಮಾನುಜಚಾರ್ಯ ಪೂಜಾ ವಿಧಾನ ಅನುಸರಿಸುವಂತೆಯೇ ರಾಮಲಲ್ಲಾನ ಪೂಜಿಸುವ ಎಲ್ಲ ದೇಗುಲಗಳೂ ಈ ರಾಮನಂದಿ ಪೂಜಾ ವಿಧಾನವನ್ನು ಅನುಸರಿಸುತ್ತವೆ.

ಬೆಳಗಾಯಿತು ಏಳ್ಳೋ ರಾಮ !
ರಾಮನಂದಿ ಪೂಜಾ ವಿಧಾನದ ಪ್ರಮುಖ ವೈಶಿಷ್ಟéವೇ ರಾಮನನ್ನು ನಿದ್ದೆಯಿಂದ ಎಬ್ಬಿಸುವುದಂತೆ. ದಿನಂಪ್ರತಿ ಮುಂಜಾನೆ ಮಲಗಿರುವ ಮಗುವನ್ನು ಎಬ್ಬಿಸುವಂತೆಯೇ ರಾಮಲಲ್ಲಾನ ವಿಗ್ರಹವನ್ನು ಎಚ್ಚರಗೊಳಿಸುವುದರೊಂದಿಗೆ ಈ ಪೊಜಾವಿಧಿ ಆರಂಭಗೊಳ್ಳುತ್ತದೆ. ಬಳಿಕ ಆತನಿಗೆ ಅಭ್ಯಂಜನ (ಸ್ನಾನ) ಮಾಡಿಸಿ, ಚಂದನ, ಜೇನು ತುಪ್ಪ ಲೇಪಿಸಿ, ಬಣ್ಣದ ಬಟ್ಟೆಗಳನ್ನು ತೊಡಿಸಿ, ಆತನಿಗೊಪ್ಪುವ ಅಲಂಕಾರವನ್ನು ಮಾಡಲಾಗುತ್ತದೆ. ನಂತರ ಬಾಲ ರಾಮನಿಗೆ ಏನು ಇಷ್ಟವೋ ಅದೇ ತಿನಿಸನ್ನು ನೇವೇದ್ಯ ಮಾಡಿ, ಆರತಿ ಮಾಡಲಾಗುತ್ತದೆ. ಆತನ ನಿದ್ದೆ, ಆಟ, ಸೇವೆ ಎಲ್ಲವನ್ನೂ ಮಾಡುತ್ತಾ ಬೆಳಗ್ಗಿನಿಂದ ರಾತ್ರಿಯವರೆಗೆ 16 ವಿಧಿವಿಧಾನಗಳನ್ನು ಈ ರಾಮನಂದಿ ಸಂಪ್ರದಾಯದ ಅನ್ವಯ ನೆವೇರಿಸಲಾಗುತ್ತದೆ. ರಾಮನ ಪ್ರಾಣಪ್ರತಿಷ್ಠೆ ದಿನದಂದು ಇಡೀ ಅಯೋಧ್ಯೆಯ ಎಲ್ಲ ದೇಗುಲಗಳಲ್ಲೂ ಇದೇ ಪೂಜಾ ವಿಧಿ ನಡೆಯಲಿದೆ.

ಮುಸಲ್ಮಾನರಿಂದ ವಿಗ್ರಹ ಕೆತ್ತನೆ
ರಾಮ ಮಂದಿರ ಆವರಣದಲ್ಲಿ ನೆಲೆಗೊಳ್ಳಲಿರುವ ಪ್ರಭು ಶ್ರೀರಾಮನ ವಿವಿಧ ರೂಪದ ವಿಗ್ರಹಗಳ ಕೆತ್ತನೆ ಬಹುತೇಕ ಪೂರ್ಣಗೊಂಡಿವೆ. ವಿಶೇಷವಂದರೆ ಇವುಗಳನ್ನು ಕೆತ್ತನೆ ಮಾಡಿರುವುದು ಪಶ್ಚಿಮ ಬಂಗಾಳದ ಖ್ಯಾತ ಮುಸ್ಲಿಂ ಶಿಲ್ಪಿಗಳು. ಹೌದು, ಮೊಹಮ್ಮದ್‌ ಜಲಾಲುದ್ದೀನ್‌ ಹಾಗೂ ಅವರ ಮಗ ಬಿಟ್ಟು ಫೈಬರ್‌ ರಾಮನ ಮೂರ್ತಿಗಳನ್ನು ತಯಾರಿಸಿದ್ದಾರೆ. ಆಳೆತ್ತರ ಈ ಶಿಲ್ಪಗಳು ಮಂದಿರ ಹೊರಾಂಗಣದಲ್ಲಿದ್ದರೂ ಮಳೆ, ಬಿಸಿಲು ಎಲ್ಲ ಸಮಯದಲ್ಲಿಯೂ ಸ್ಥಿರವಾಗಿರಬಲ್ಲಂಥದ್ದಾಗಿವೆ. ಜಾಲತಾಣದಲ್ಲಿ ಮೊಹಮ್ಮದ್‌ ಅವರ ಕಲೆ ನೋಡಿ ಅಯೋಧ್ಯೆಯಿಂದಾ ಆರ್ಡರ್‌ ನೀಡಲಾಗಿದ್ದು, ಕಲೆಯೇ ನನ್ನ ಧರ್ಮ ಎಂದು ಜಲಾಲುದ್ದೀನ್‌ ಹೇಳಿಕೊಂಡಿದ್ದಾರೆ.

ವಿದೇಶದಿಂದ ಅರಿಶಿಣ
ಮಂದಿರ ಉದ್ಘಾಟನೆ ಸಮಾರಂಭಕ್ಕೆ ಬಳಕೆ ಮಾಡಲೆಂದು ಕಾಂಬೋಡಿಯಾ ಮತ್ತು ಥೈಲ್ಯಾಂಡ್‌ನಿಂದ ಅರಿಶಿಣವನ್ನು ಅಯೋಧ್ಯೆಗೆ ಕಳುಹಿಸಲಾಗಿದೆ. ಥೈಲ್ಯಾಂಡ್‌ನ‌ಲ್ಲಿ ಅಯುತ್ಯಾ ಎಂಬ ಜಾಗವನ್ನು ಮಿನಿ ಅಯೋಧ್ಯೆ ಎಂದೇ ಗುರಿತಿಸಲಾಗುತ್ತದೆ. ಅಲ್ಲಿಂದಲೇ ಅರಿಶಿಣವನ್ನು ತರಿಸಲಾಗಿದೆ ಎಂದು ಮಂದಿರ ಟ್ರಸ್ಟ್‌ ತಿಳಿಸಿದೆ. ಇತ್ತ ಉ.ಪ್ರದೇಶದ ನೆರೆ ರಾಜ್ಯ ಮಧ್ಯಪ್ರದೇಶವೂ ಮಂದಿರ ಉದ್ಘಾಟನೆಗೆ ಕೈ ಜೋಡಿಸಿದ್ದು, ಅಯೋಧ್ಯೆಗೆ ತೆರಳುವವರಿಗೆ ತಿಲಕ ಇಟ್ಟು, ಎಲ್ಲ ರೀತಿಯ ಸೌಕರ್ಯ ಏರ್ಪಡಿಸಿಕೊಡುವುದಾಗಿ ಹೇಳಿದೆ.

ಟಾಪ್ ನ್ಯೂಸ್

1-weqwe

Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು

JK-Congress

J-K Election: ಚುನಾವಣೆ ಫ‌ಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್‌ ಆಕ್ಷೇಪ

1-frr

Risk; ಚಾರ್ ಮಿನಾರ್ ಕಿಟಕಿಗಳಲ್ಲಿ ನಡೆದು ಅಪಾಯಕಾರಿ ಸಾಹಸ: ವೈರಲ್ ವಿಡಿಯೋ

1-vij

Vijayapura;ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ: 184 ಗ್ರಾಂ ಚಿನ್ನ, 80 ಗ್ರಾಂ ಬೆಳ್ಳಿ ಜಪ್ತಿ

8

Mallika Sherawat: ಮೀಟೂ ವಿವಾದಕ್ಕೆ ನಟಿ ಮಲ್ಲಿಕಾ ಶೆರಾವತ್‌ ಧ್ವನಿ; ಹೀರೋ ಮೇಲೆ ಆರೋಪ

1-qweeqw

Shimla: ವಿವಾದಿತ ಮಸೀದಿಯ 3 ಅನಧಿಕೃತ ಮಹಡಿಗಳನ್ನು ಕೆಡವಲು ಆದೇಶ

Jaishankar

Jaishankar; ಭಾರತ-ಪಾಕ್ ಸಂಬಂಧದ ಕುರಿತ ಚರ್ಚೆಗೆ ಇಸ್ಲಾಮಾಬಾದ್‌ಗೆ ಹೋಗುತ್ತಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

JK-Congress

J-K Election: ಚುನಾವಣೆ ಫ‌ಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್‌ ಆಕ್ಷೇಪ

1-qweeqw

Shimla: ವಿವಾದಿತ ಮಸೀದಿಯ 3 ಅನಧಿಕೃತ ಮಹಡಿಗಳನ್ನು ಕೆಡವಲು ಆದೇಶ

Jaishankar

Jaishankar; ಭಾರತ-ಪಾಕ್ ಸಂಬಂಧದ ಕುರಿತ ಚರ್ಚೆಗೆ ಇಸ್ಲಾಮಾಬಾದ್‌ಗೆ ಹೋಗುತ್ತಿಲ್ಲ

1-yati

Prophet Hate Speech; ಯತಿ ನರಸಿಂಹಾನಂದ ಸರಸ್ವತಿ ಯುಪಿ ಪೊಲೀಸರ ವಶಕ್ಕೆ

congress

Exit poll results; ಹರಿಯಾಣದಲ್ಲಿ ಕೈಗೆ ಅಧಿಕಾರ, ಜಮ್ಮು ಮತ್ತು ಕಾಶ್ಮೀರ ಅತಂತ್ರ?

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-weqwe

Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು

Women’s T20 World Cup: ಆಸೀಸ್‌ಗೆ ಸುಲಭದ ತುತ್ತಾದ ಲಂಕಾ

Women’s T20 World Cup: ಆಸೀಸ್‌ಗೆ ಸುಲಭದ ತುತ್ತಾದ ಲಂಕಾ

JK-Congress

J-K Election: ಚುನಾವಣೆ ಫ‌ಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್‌ ಆಕ್ಷೇಪ

13

Asian Youth Archery: ಮಹಿಳಾ ತಂಡಕ್ಕೆ ಬೆಳ್ಳಿ ಪದಕ

1-frr

Risk; ಚಾರ್ ಮಿನಾರ್ ಕಿಟಕಿಗಳಲ್ಲಿ ನಡೆದು ಅಪಾಯಕಾರಿ ಸಾಹಸ: ವೈರಲ್ ವಿಡಿಯೋ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.