Deep Fake: ಇನ್ಫಿ ಮೂರ್ತಿಯನ್ನೂ ಬಿಡದ ಡೀಪ್ ಫೇಕ್ ವಂಚಕರು
ನಾರಾಯಣ ಮೂರ್ತಿಯವರ ಧ್ವನಿಯಲ್ಲಿ ವಿಡಿಯೋ- ಮೋಸ ಹೋಗದಿರುವಂತೆ ಮೂರ್ತಿ ಮನವಿ
Team Udayavani, Dec 14, 2023, 9:12 PM IST
ನವದೆಹಲಿ: ಐಟಿ ದಿಗ್ಗಜ ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರು ಡೀಪ್ ಫೇಕ್ ಜಾಲಕ್ಕೆ ತುತ್ತಾಗಿದ್ದಾರೆ. ಅವರ ಹೆಸರಿನಲ್ಲಿ ಹೂಡಿಕೆ ಮಾಡುವ ಜಾಲದ ಬಗ್ಗೆ ಖುದ್ದು ಮೂರ್ತಿಯವರೇ ವಿಡಿಯೋದಲ್ಲಿ ಹೇಳಿದಂತೆ ವಂಚಕರು ವಿಡಿಯೋ ಅಪ್ ಲೋಡ್ ಮಾಡಿದ್ದಾರೆ.
ಆ ವಿಡಿಯೋ ಪ್ರಕಾರ “ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಅವರೊಂದಿಗಿನ ನಮ್ಮ ನೂತನ ಪ್ರಾಜೆಕ್ಟ್ ಕುರಿತು ನಿಮಗೆ ತಿಳಿಯಬಯಸುತ್ತೇನೆ. ನಮ್ಮ ತಂಡ ಹಾಗೂ ಎಲಾನ್ ಮಸ್ಕ್ ಅವರ ತಂಡ ಸೇರಿಕೊಂಡು ವಿಶ್ವದ ಮೊದಲ ಕ್ವಾಂಟಮ್ ಕಂಪ್ಯೂಟಿಂಗ್ ಸಾಫ್ಟ್ವೇರ್ “ಕ್ವಾಂಟಮ್ ಎಐ” ಅನ್ನು ಅಭಿವೃದ್ಧಿಪಡಿಸಿದ್ದೇವೆ. ಇದು ಶೇ.94ರಷ್ಟು ಯಶಸ್ಸಿನ ದರ ಹೊಂದಿದೆ. ಇದನ್ನು ಬಳಸುವ ಬಳಕೆದಾರರು ಮೊದಲ ದಿನವೇ ಸುಮಾರು 2.5 ಲಕ್ಷ ರೂ.ಗಳನ್ನು ಗಳಿಸಬಹುದು’ ಎಂದು ಉಲ್ಲೇಖೀಸಲಾಗಿದೆ.
ಡೀಪ್ ಫೇಕ್ ವಿಡಿಯೋದಲ್ಲಿ ನಾರಾಯಣಮೂರ್ತಿ ಅವರು ಹೇಳಿದಂತೆ ಆಡಿಯೋ ಮಾರ್ಫ್ ಮಾಡಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ನಾರಾಯಾಣಮೂರ್ತಿ ಅವರು, “ಈ ರೀತಿಯ ಡೀಪ್ ಫೇಕ್ ವಿಡಿಯೋಗಳ ಕುರಿತು ಎಚ್ಚರಿಕೆ ವಹಿಸಿ. ಇಂಥ ವಿಡಿಯೋಗಳಿಂದ ವಂಚನೆಗೆ ಒಳಗಾಗದಿರಿ” ಎಂದು ಹೇಳಿದ್ದಾರೆ. ಇತ್ತೀಚಿಗೆ ನಟಿಯರಾದ ರಶ್ಮಿಕಾ ಮಂದಣ್ಣ ಮತ್ತು ಕತ್ರಿಕಾ ಕೈಫ್ ಅವರ ಡೀಪ್ ಫೇಕ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.