Illiterate; 9,290 ಗ್ರಾಮ ಪಂಚಾಯತ್ ಸದಸ್ಯರು ಅನಕ್ಷರಸ್ಥರು!

ಡಿ.26ರಿಂದ ಅನಕ್ಷರಸ್ಥ ಸದಸ್ಯರಿಗೆ ಓದು, ಬರಹ, ಪಾಠ ಸಾಕ್ಷರ ಸಮ್ಮಾನ ಅನುಷ್ಠಾನಕ್ಕೆ ನಿರ್ಧಾರ

Team Udayavani, Dec 15, 2023, 6:30 AM IST

1-qwqwewq

ಚಿಕ್ಕಬಳ್ಳಾಪುರ: ಗ್ರಾಮೀಣ ಭಾಗದ ಸ್ಥಳೀಯ ಸಂಸ್ಥೆಗಳಲ್ಲಿ ಆಡಳಿತ, ನೀತಿ ನಿರೂಪಣೆಯಲ್ಲಿ ಮಹತ್ತರ ಪಾತ್ರ ವಹಿಸುವ ರಾಜ್ಯದ ಗ್ರಾ.ಪಂ.ಗಳ ಸದಸ್ಯರಲ್ಲಿ ಬರೋಬ್ಬರಿ 9,290ಕ್ಕೂ ಹೆಚ್ಚು ಮಂದಿಗೆ ಓದು ಬರಹವೇ ಗೊತ್ತಿಲ್ಲ. ಅಂದರೆ, ರಾಜ್ಯದಲ್ಲಿ ಒಟ್ಟು ಒಟ್ಟು 95,000 ಕ್ಕೂ ಅಧಿಕ ಗ್ರಾಪಂ ಸದಸ್ಯರಿದ್ದು, ಈ ಪೈಕಿ ಶೇ.10ರಷ್ಟು ಸದಸ್ಯರು ಅನಕ್ಷರಸ್ಥರು! ಹೀಗಾಗಿ ರಾಜ್ಯದ ಗ್ರಾ.ಪಂ.ಗಳ ಅನಕ್ಷರಸ್ಥ ಸದಸ್ಯರನ್ನು ಗುರುತಿಸಿ ಅವರಿಗೆ ಓದು, ಬರಹ, ಮತ್ತು ಲೆಕ್ಕಾಚಾರದಲ್ಲಿ ಕನಿಷ್ಠ ಸ್ವಾವಲಂಬನೆ ತರಲು ರಾಷ್ಟ್ರೀಯ ಗ್ರಾಮ ಸ್ವರಾಜ್‌ ಅಭಿಯಾನ ದಡಿ ಅಬ್ದುಲ್‌ ನಜೀರ್‌ ಸಾಬ್‌ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಪಂಚಾಯತ್‌ರಾಜ್‌ ಮುಂದಾಗಿದೆ.

21 ಜಿಲ್ಲೆಗಳಲ್ಲಿ ಸಾಕ್ಷರ ಸಮ್ಮಾನ
ರಾಜ್ಯದ 21 ಜಿಲ್ಲೆಗಳಲ್ಲಿ ಡಿ.26ರಿಂದ ಸಾಕ್ಷರ ಸಮ್ಮಾನ ಕಾರ್ಯಕ್ರಮದ ಮೂಲಕ 4,078 ಮಂದಿ ಅನಕ್ಷರಸ್ಥ ಗ್ರಾಮ ಪಂಚಾಯತ್‌ ಸದಸ್ಯರಿಗೆ ರಾಜ್ಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ಸಂಸ್ಥೆ ಸಹಯೋಗದೊಂದಿಗೆ ತರಬೇತಿ ಪಡೆದ ಬೋಧಕರಿಂದ ತರಬೇತಿ ಸಿಗಲಿದೆ. ಈಗಾಗಲೇ ಈ ಸಂಬಂಧ ಈ ಹಿಂದೆ ಸಾಕ್ಷರತಾ ಕಾರ್ಯಕ್ರಮದಲ್ಲಿ ಕೆಲಸ ಮಾಡಿ ಅನುಭವ ಹೊಂದಿರುವ ಹಾಗು ನಿವೃತ್ತ ಶಿಕ್ಷಕರು, ಗ್ರಾ.ಪಂ. ಗ್ರಂಥಪಾಲಕರು, ವಯಸ್ಕರ ಕಲಿಕೆ-ಬೋಧನೆಯಲ್ಲಿ ಅನುಭವ ಇರುವರನ್ನು ಸಾಕ್ಷರ ಸಮ್ಮಾನ ಕಾರ್ಯಕ್ರಮದಡಿ ಬೋಧಕರನ್ನಾಗಿ ಗುರುತಿಸಿ ಅವರಿಗೆ ತರಬೇತಿ ನೀಡಲಾಗಿದೆ.

50 ದಿನ 100 ಗಂಟೆಗಳ ತರಬೇತಿ
ಕನಿಷ್ಠ 100 ಗಂಟೆಗಳ ತರಬೇತಿಗೆ ಯೋಜನೆ ರೂಪಿಸಲಾಗಿದೆ. ದಿನಕ್ಕೆ 2 ಗಂಟೆಯಂತೆ ಒಟ್ಟು 50 ದಿನ ಒಬ್ಬರಿಂದ ಒಬ್ಬರಿಗೆ ಕಲಿಸುವ ವಿಧಾನವನ್ನು ರೂಪಿಸಲಾಗಿದ್ದು, ಈಗಾಗಲೇ ಬೋಧಕರಿಗೆ 3 ದಿನಗಳ ಪಠ್ಯಾಧಾರಿತ ತರಬೇತಿ ನೀಡಲಾಗಿದೆ. ನಾಯಕತ್ವ, ಆರೋಗ್ಯ, ಪರಿಸರ, ಸಹಕಾರ, ಬಾಲ ಕಾರ್ಮಿಕ ಪದ್ಧತಿ ನಿಷೇಧ ಮತ್ತಿತರ ವಿಷಯಗಳ ಬಗ್ಗೆ ಪಠ್ಯ ಬೋಧನೆ ಮಾಡಲಾಗುತ್ತಿದೆ. ಸಾಕ್ಷರ ಸಮ್ಮಾನ ತರಬೇತಿ ವೇಳೆ ಮೌಲ್ಯಮಾಪನವೂ ನಡೆಯಲಿದೆ.

ಬೆಳಗಾವಿಯಲ್ಲಿ ಅತಿ ಹೆಚ್ಚು
ಡಿ.26ರಿಂದ ಚಾಲನೆಗೊಳ್ಳುತ್ತಿರುವ ಸಾಕ್ಷರ ಸಮ್ಮಾನ ಕಾರ್ಯಕ್ರಮದಡಿ ರಾಜ್ಯದ 21 ಜಿಲ್ಲೆಗಳಲ್ಲಿ ಗುರುತಿಸಿರುವ ಅನಕ್ಷರಸ್ಥ ಗ್ರಾ.ಪಂ. ಸದಸ್ಯರ ಪಟ್ಟಿಯಲ್ಲಿ ಬೆಳಗಾವಿ (681) ಮೊದಲ ಸ್ಥಾನದಲ್ಲಿದೆ, ತುಮಕೂರು (328), ಚಿಕ್ಕಬಳ್ಳಾಪುರ (305), ವಿಜಯ ನಗರ (298), ಚಾಮರಾಜನ ನಗರ (275), ರಾಮನಗರ (227), ಹಾಸನ (223), ದಾವಣಗೆರೆ (215), ಚಿತ್ರದುರ್ಗ (183), ಕೋಲಾರ (184), ಗದಗ(182) ಹೊಂದಿದ್ದರೆ ಅತಿ ಕಡಿಮೆ ಅನಕ್ಷರಸ್ಥ ಗ್ರಾ.ಪಂ. ಸದಸ್ಯರನ್ನು ಕೊಡಗು (45), ಉಡುಪಿ (46), ಬೆಂಗಳೂರು ಗ್ರಾಮಾಂತರ (61), ಬೆಂಗಳೂರು (62), ದಕ್ಷಿಣ ಕನ್ನಡ (76) ಸದಸ್ಯರನ್ನು ಹೊಂದಿದೆ.

ಅತಿ ಹೆಚ್ಚು ಅನಕ್ಷರಸ್ಥರು ಇರುವುದೆಲ್ಲಿ?
ರಾಜ್ಯದ ಬೀದರ್‌, ಕಲಬುರಗಿ, ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ, ಬಾಗಲಕೋಟೆ, ವಿಜಯಪುರ, ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳ ಒಟ್ಟು 80 ತಾಲೂಕುಗಳ 1,268 ಗ್ರಾಪಂಗಳಲ್ಲಿ ಬರೋಬ್ಬರಿ 5,798 ಅನಕ್ಷರಸ್ಥ ಗ್ರಾಪಂ ಸದಸ್ಯರು ಇರುವುದನ್ನು ಗುರುತಿಸಿ ಆ ಪೈಕಿ 3,011 ಅನಕ್ಷರಸ್ಥ ಗ್ರಾಪಂ ಸದಸ್ಯರಿಗೆ 1,500 ಕ್ಕೂ ಹೆಚ್ಚು ಸಾಕ್ಷರ ಬೋಧಕರ ಮೂಲಕ ಸಾಕ್ಷರತೆ ಕಲಿಸಲಾಗಿದೆ. ಇನ್ನೂ 2,787 ಓದು, ಬರಹ ಬಾರದ ಗ್ರಾಪಂ ಸದಸ್ಯರಿಗೆ ಸಾಕ್ಷರ ಸಮ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿದೆ.

ಕಾಗತಿ ನಾಗರಾಜಪ್ಪ

ಟಾಪ್ ನ್ಯೂಸ್

1-deee

Haryana Polls; ಕೈ ಕಾರ್ಯಕರ್ತರು ಮತ್ತು ಪಕ್ಷೇತರನ ಬೆಂಬಲಿಗರ ಮಾರಾಮಾರಿ

010

Bigg Boss: ಬಿಗ್‌ ಬಾಸ್‌ ಮನೆಯಲ್ಲಿ ರಾದ್ಧಾಂತ ಸೃಷ್ಟಿಸಿದ ವಿವಾದಿತ ಸ್ಪರ್ಧಿಗಳಿವರು..

Irani Cup: Tanush Kotyan puts up a brave fight; Mumbai won the Irani Cup after 27 years

Irani Cup: ತನುಷ್‌ ಕೋಟ್ಯಾನ್‌ ದಿಟ್ಟ ಹೋರಾಟ; 27 ವರ್ಷದ ಬಳಿಕ ಇರಾನಿ ಕಪ್‌ ಗೆದ್ದ ಮುಂಬೈ

1-aaaa

Goa ದಲ್ಲಿ ನಡೆದ ಘಟನೆ ಅಲ್ಲ; ವಿದೇಶಿ ಕಡಲಿನಲ್ಲಿ ಬೋಟ್ ದುರಂತ: ವೈರಲ್ ವಿಡಿಯೋ ನೋಡಿ

1

Renukaswamy Case: ದರ್ಶನ್‌ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ

Bellary; ಸಿದ್ರಾಮಯ್ಯ 5 ಸಾವಿರ ಕೋಟಿ ಬೇನಾಮಿ ಆಸ್ತಿ ಮಾಡಿದ್ದಾರೆ: ಜನಾರ್ದನ ರೆಡ್ಡಿ ಆರೋಪ

Bellary; ಸಿದ್ರಾಮಯ್ಯ 5 ಸಾವಿರ ಕೋಟಿ ಬೇನಾಮಿ ಆಸ್ತಿ ಮಾಡಿದ್ದಾರೆ: ಜನಾರ್ದನ ರೆಡ್ಡಿ ಆರೋಪ

PM: ಕಾಂಗ್ರೆಸ್ ಡ್ರಗ್ಸ್‌ ದಂಧೆ ಹಣ ಚುನಾವಣೆ ಗೆಲ್ಲಲು ಬಳಸಿಕೊಳ್ಳುತ್ತಿದೆ: ಪ್ರಧಾನಿ ಮೋದಿ

PM: ಕಾಂಗ್ರೆಸ್ ಡ್ರಗ್ಸ್‌ ದಂಧೆ ಹಣ ಚುನಾವಣೆ ಗೆಲ್ಲಲು ಬಳಸಿಕೊಳ್ಳುತ್ತಿದೆ: ಪ್ರಧಾನಿ ಮೋದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Renukaswamy Case: ದರ್ಶನ್‌ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ

Bellary; ಸಿದ್ರಾಮಯ್ಯ 5 ಸಾವಿರ ಕೋಟಿ ಬೇನಾಮಿ ಆಸ್ತಿ ಮಾಡಿದ್ದಾರೆ: ಜನಾರ್ದನ ರೆಡ್ಡಿ ಆರೋಪ

Bellary; ಸಿದ್ರಾಮಯ್ಯ 5 ಸಾವಿರ ಕೋಟಿ ಬೇನಾಮಿ ಆಸ್ತಿ ಮಾಡಿದ್ದಾರೆ: ಜನಾರ್ದನ ರೆಡ್ಡಿ ಆರೋಪ

Heavy Rain: ದಾಂಡೇಲಿಯಲ್ಲಿ ವ್ಯಾಪಕ ಮಳೆ… ಅಂಗಡಿ, ಮನೆಗಳಿಗೆ ನುಗ್ಗಿದ ಕೊಳಚೆ ನೀರು

Heavy Rain: ದಾಂಡೇಲಿಯಲ್ಲಿ ವ್ಯಾಪಕ ಮಳೆ… ಅಂಗಡಿ, ಮನೆಗಳಿಗೆ ನುಗ್ಗಿದ ಕೊಳಚೆ ನೀರು

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗುವ ವಿಶ್ವಾಸವಿದೆ ಇಲ್ಲದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗುವ ವಿಶ್ವಾಸವಿದೆ ಇಲ್ಲದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ

ನನ್ನಂತ ದಲಿತರಿಗೆ ಒಳ್ಳೆಯದಾಗದಿದ್ದರೆ ಮುಂದೆ ಯಾವ ದಲಿತರಿಗೂ ಒಳ್ಳೆದಾಗಲ್ಲ: ಜಿಗಜಿಣಗಿ ಭಾವುಕ

ನನ್ನಂತ ದಲಿತರಿಗೆ ಒಳ್ಳೆಯದಾಗದಿದ್ದರೆ ಮುಂದೆ ಯಾವ ದಲಿತರಿಗೂ ಒಳ್ಳೆದಾಗಲ್ಲ: ಜಿಗಜಿಣಗಿ ಭಾವುಕ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-deee

Haryana Polls; ಕೈ ಕಾರ್ಯಕರ್ತರು ಮತ್ತು ಪಕ್ಷೇತರನ ಬೆಂಬಲಿಗರ ಮಾರಾಮಾರಿ

Vinesh Phogat forgot my father’s help: Babita Phogat

Vinesh Phogat; ನನ್ನ ತಂದೆಯ ಸಹಾಯವನ್ನು ವಿನೇಶ್‌ ಮರೆತಿದ್ದಾರೆ: ಬಬಿತಾ ಫೋಗಾಟ್

010

Bigg Boss: ಬಿಗ್‌ ಬಾಸ್‌ ಮನೆಯಲ್ಲಿ ರಾದ್ಧಾಂತ ಸೃಷ್ಟಿಸಿದ ವಿವಾದಿತ ಸ್ಪರ್ಧಿಗಳಿವರು..

Irani Cup: Tanush Kotyan puts up a brave fight; Mumbai won the Irani Cup after 27 years

Irani Cup: ತನುಷ್‌ ಕೋಟ್ಯಾನ್‌ ದಿಟ್ಟ ಹೋರಾಟ; 27 ವರ್ಷದ ಬಳಿಕ ಇರಾನಿ ಕಪ್‌ ಗೆದ್ದ ಮುಂಬೈ

1-aaaa

Goa ದಲ್ಲಿ ನಡೆದ ಘಟನೆ ಅಲ್ಲ; ವಿದೇಶಿ ಕಡಲಿನಲ್ಲಿ ಬೋಟ್ ದುರಂತ: ವೈರಲ್ ವಿಡಿಯೋ ನೋಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.