Alvas Virasat: ಜನಮನ ಸೆಳೆಯುತ್ತಿದೆ ಆಳ್ವಾಸ್‌ ವಿರಾಸತ್‌


Team Udayavani, Dec 15, 2023, 10:46 AM IST

6-alvas

ಮೂಡುಬಿದಿರೆ: ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಾಲ್ಕು ದಿನಗಳ ಸಾಂಸ್ಕೃತಿಕ ಸಿರಿ-ಸೊಬಗಿನ 29ನೇ ವರ್ಷದ “ಆಳ್ವಾಸ್‌ ವಿರಾಸತ್‌ 2023′ ವಿದ್ಯಾಗಿರಿಯಲ್ಲಿ ಆರಳಿಕೊಂಡಿದೆ. ಸಂಜೆಯ ಸಾಂಸ್ಕೃತಿಕ ಕಲಾಪಗಳ ಮುನ್ನುಡಿಯಾಗಿ ಬೆಳಗಿನಿಂದ ರಾತ್ರಿ 10ರ ವರೆಗೆ ಕೃಷಿಸಿರಿ ವೇದಿಕೆ- ಮುಂಡ್ರುದೆಗುತ್ತು ಅಮರನಾಥ ಶೆಟ್ಟಿ ಸಭಾಂಗಣದಲ್ಲಿ ಮತ್ತು ಪರಿಸರದಲ್ಲಿ ಏಳು ಬಗೆಯ ಮೇಳಗಳ ತೆರೆ ತೆರೆದಾಗಿದೆ, ಜನ ಮನ ಸೆಳೆಯತೊಡಗಿದೆ.

ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ ಸ್ಮರಣಾರ್ಥ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿಸಿರಿ) ಆವರಣದಲ್ಲಿ ಕೃಷಿ ಮೇಳ, ಆಹಾರ ಮೇಳ, ಫಲ-ಪುಷ್ಪ ಮೇಳ, ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ, ಚಿತ್ರಕಲಾ ಮೇಳ, ಕಲಾಕೃತಿಗಳ ಮೇಳ ಮತ್ತು ಛಾಯಾಚಿತ್ರಗಳ ಮೇಳ ಹೀಗೆ ಸಪ್ತ ಮೇಳಗಳ ಸಿರಿವಂತಿಕೆ ಇಲ್ಲಿ ಅನಾವರಣಗೊಂಡಿದೆ.

ಭುವನೇಶ್ವರಿ ದೇವಿ, ಆಕೆಯ ಸುತ್ತಲೂ ಭಾರತದ ವಿವಿಧ ರಾಜ್ಯಗಳ ಪ್ರಜೆಗಳ ಆಳೆತ್ತರದ ಮೂರ್ತಿಗಳು ಒಂದೆಡೆ ಭಾವೈಕ್ಯ ಸಾರುತ್ತಿವೆ. ಇನ್ನು ಕೋಟಿ ಚೆನ್ನಯ, ಸಂಗೊಳ್ಳಿರಾಯಣ್ಣ, ವಿವೇಕಾನಂದ, ಗಾಂಧಿ, ಬುದ್ದ, ಆದಿಯೋಗಿ ಶಿವ, ಮೀರಾಬಾಯಿ, ಬಾಹುಬಲಿ, ಹೂರಾಶಿಯ ನಡುವೆ ಕಂಗೊಳಿಸುವ ಅಂಬೇಡ್ಕರ, ಮೈಸೂರು ಮಹಾರಾಜರು, ಮತ್ತೂಂದೆಡೆ ಯಕ್ಷಗಾನದ ವೇಷಗಳು, ಮಹಿಷಾಸುರ, ರಾಧಾಕೃಷ್ಣ, ವೀರಗಾಸೆಯ ಶೂರ, ಡೊಳ್ಳು ಮೊದಲಾದ ಜಾನಪದ ಕುಣಿತಗಳ ಆಳೆತ್ತರದ ಮೂರ್ತಿಗಳು ಜೀವಂತ ಇರುವಂತ ಭಾಸವಾಗುತ್ತಿದೆ. ಬೃಹತ್‌ ಸಿಂಹ ಬಾಯ್ತೆರೆದು ತಲೆಯಲ್ಲಾಡಿಸುತ್ತಿರುವುದು, ಗಾಳಿಯ ಒತ್ತಡಕ್ಕೆ ವಾಹನ ಮಾರ್ಗದರ್ಶನ ಮಾಡುವ ಗಾಳಿ ಬೊಂಬೆ, ಬಕ, ಕೋಳಿ, ಹದ್ದು, ಆನೆ, ಜಿರಾಫೆ, ಹೂವುಗಳಲ್ಲಿ ಮೈದಳೆದ ನವಿಲು, ನಗಿಸುವ ಮೋಟು, ಕುಸ್ತಿಪಟು, ಪುಟಾಣಿಗಳ ನೆಚ್ಚಿನ ಕಾರ್ಟೂನ್‌ ಪಾತ್ರಗಳು, ಆನೆ, ಜಿರಾಫೆ, ಎತ್ತು, ಮಹಿಷಾಸುರ, ಯಕ್ಷಗಾನ, ಎತ್ತಿನ ಬಂಡಿ, ಚಕ್ರ, ಗಣಪತಿ, ಡೊಳ್ಳು ಕುಣಿತ, ವೀರಗಾಸೆ, ಹನುಮಂತ, ಲಕ್ಷ್ಮೀ ನರಸಿಂಹ, ವೀರಭದ್ರ ಕಥಕ್ಕಳಿ ಕಾಟೂìನ್‌ ಪಾತ್ರಧಾರಿಗಳಾದ ಚೋಟಾ ಭೀಮ್‌, ಚುಟ್ಕಿ, ರಾಜು, ಕಾಲಿಯಾ, ಡೊನಾಲ್ಡ್‌ ಡಕ್‌ ಇವೆಲ್ಲ ಪುಟಾಣಿಗಳನ್ನಲ್ಲದೆ ಹಿರಿಯರನ್ನೂ ರಂಜಿಸುವಂತಿವೆ.

ಈ ಕಲಾಕೃತಿಗಳನ್ನು ಮರ, ಲೋಹ, ಸಿಮೆಂಟ್‌, ರಬ್ಬರ್‌, ಬಟ್ಟೆ ಮೊದಲಾದ ಮಾಧ್ಯಮಗಳಿಂದ ರಚಿಸಲಾಗಿದೆ. ಪ್ರಮುಖ ವೇದಿಕೆಯ, ರಸ್ತೆ ಬದಿಯಲ್ಲೂ ಸಾಲಾಗಿ ನಿಂತ ಗೊಂಬೆಗಳು ಮುದ ನೀಡುತ್ತಿವೆ.

ಫಲಪುಷ್ಪ

ಚೆಂಡು ಹೂ, ಸದಾಪುಷ್ಪ, ಸೇವಂತಿಗೆ, ಜೀನ್ಯ, ಗೌರಿ, ಡಾಲಿ, ಲಿಲ್ಲಿ, ಕೇಪುಳ, ಸಿಲ್ವರ್‌ ಡಸ್ಟ್‌ ಲವೆಂಡಾರ್‌, ಅನೆಸೊಪ್ಪು, ಅಂತೋರಿಯಮ್‌, ಮಲ್ಲಿಗೆ, ಸಲ್ವಿಯ ಸ್ಪೆಂಡನ್ಸ್‌, ಸೆಲೋಶಿಯ, ಚೆ„ನೀಸ್‌ ಫ್ರಿಂಜ್‌, ಪಿಂಗ್‌ ಫಿಗ್‌ ಮೊದಲಾದ, ಮೂರೂವರೆ ಲಕ್ಷಕ್ಕೂ ಅಧಿಕ ಪುಷ್ಪಗಳ ನಂದನವನವೇ ಇಲ್ಲಿ ಅರಳಿಕೊಂಡಿದೆ.

ಹೂವಿನಿಂದಲೇ ರಚಿಸಿದ ಆನೆ, ಕುದುರೆ, ಜಿರಾಫೆ, ನವಿಲು ಮೊದಲಾದ ಕಲಾಕೃತಿಗಳು ನೋಟಕರ ಮನಸೆಳೆಯುತ್ತಿವೆ ಆವರಣದಲ್ಲೇ ಬೆಳೆಸಿದ ತರಕಾರಿಗಳಾದ ಬೆಂಡೆ , ಸೋರೆಕಾಯಿ, ಟೊಮೆಟೊ, ಬದನೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಹಾಗಲಕಾಯಿ, ಔಷಧೀಯ ಸಸ್ಯಗಳಾದ ಅಮ್ರ, ನಂದಿ, ಬಕುಳ, ಶಾಲ್ಮಲಿ, ಜಂಬೂ, ತಿಲಕ, ತಾರೇಕಾಯಿ, ಪ್ರಿಯಂಗು, ಕದಂಬ, ತೆಂದುಕ, ಅಶ್ವತ್ಥ, ಶಿರೀಶ, ಸಪ್ತ ಪರ್ಣಿ, ದೇವದಾರು, ಸಂಪಿಗೆ, ಅಶೋಕ, ಕಪಿತ, ಶಾಲವೃಕ್ಷ, ನಾಗಕೇಸರ, ಪಾಲಶ ಗಿಡ ಸೇರಿದಂತೆ ನೂರಾರು ಸಸ್ಯ ಸಂಕಲವಿದೆ.

ಕೃಷಿಮೇಳ

ಕೃಷಿಯಲ್ಲಿ ಬೀಜದಿಂದ ಮಾರುಕಟ್ಟೆ ವರೆಗಿನ ಎಲ್ಲ ಘಟ್ಟಗಳ ಸಮಗ್ರ ಚಿತ್ರಣ ನೀಡುವ ಮಳಿಗೆಗಳು, ಪ್ರಾತ್ಯಕ್ಷಿಕೆಗಳು, ನರ್ಸರಿಗಳು, ಸಾವಯವ ಹಾಗೂ ರಾಸಾಯನಿಕ ಗೊಬ್ಬರಗಳು, ನೀರು- ನೆಲಗಳಲ್ಲಿ ಬೆಳೆಯುವ ಸಸ್ಯ ಪ್ರಭೇದಗಳು, ಉಪಕರಣ-ಯಂತ್ರಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಇಲ್ಲಿವೆ.

ಆಹಾರ ಮೇಳ

ಆಹಾರ ಮೇಳದಲ್ಲಿ ಸುಮಾರು 150ಕ್ಕೂ ಅಧಿಕ ಮಳಿಗೆಗಳಲ್ಲಿ ಬಹುಬಗೆಯ ಆಹಾರ, ತಿಂಡಿತಿನಿಸುಗಳಿವೆ. ತಿಂಡಿ ತಿನಿಸು ಪಾನೀಯಾದಿಗಳಿಗೆ ಜನ ಮುಗಿಬೀಳುತ್ತಲಿದ್ದಾರೆ.

ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ

ವಿವಿಧ ರಾಜ್ಯಗಳ ಸುಮಾರು 100ಕ್ಕೂ ಹೆಚ್ಚು ಮಳಿಗೆಗಳಲ್ಲಿ ಗುಡಿ ಕೈಗಾರಿಕೆ, ಕರಕುಶಲ, ಪ್ರಾಚ್ಯವಸ್ತುಗಳ ಪ್ರದರ್ಶನ ಹಾಗೂ ಮಾರಾಟ ನಡೆಯುತ್ತಿದೆ. ಬಟ್ಟೆಬರೆ ದಿರಿಸುಗಳ ಮಳಿಗೆಗಳೂ ಇವೆ.

ಚಿತ್ರಕಲಾ ಮೇಳ

ಸುಮಾರು 200ಕ್ಕೂ ಹೆಚ್ಚು ದೇಶ ವಿದೇಶಗಳ ಕಲಾಕಾರರ 500ಕ್ಕೂ ಅ ಕ ಚಿತ್ರಕಲಾಕೃತಿಗಳು ಪ್ರದರ್ಶನಕ್ಕಿವೆ.

ಛಾಯಾಚಿತ್ರಗಳ ಪ್ರದರ್ಶನ

ಸೃಜನಶೀಲತೆ ಸಾರುವ ಛಾಯಾಚಿತ್ರಪ್ರದರ್ಶನದೊಂದಿಗೆ ವಿರಾಸತ್‌ ಅಂಗವಾಗಿ ನಡೆಸಲಾದ ವನ್ಯಜೀವಿ ಛಾಯಾಚಿತ್ರದ ಸ್ಪರ್ಧೆಗೆ ಬಂದ ಸುಮಾರು 3000ಕ್ಕೂ ಅಧಿಕ ಛಾಯಚಿತ್ರಗಳ ಪ್ರದರ್ಶನ ನಡೆಯುತ್ತಿದೆ.

ಇದರ ಜತೆ ಜತೆಗೆ ಸ್ಕೌಟ್‌ -ಗೆ„ಡ್ಸ್‌ ಸಾಹಸಮಯ ಚಟುವಟಿಕೆ ಕೇಂದ್ರವು ಸುಮಾರು 2 ಎಕರೆ ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿದ್ದು ಮಕ್ಕಳಲ್ಲಿ ಸಾಹಸಮಯ ಪ್ರವೃತ್ತಿ, ಧೈರ್ಯ ಹಾಗೂ ಸ್ಪಂದನೆಯನ್ನು ತುಂಬುವಲ್ಲಿ ಸಹಕಾರಿಯಾಗುವ ತಾಣವಾಗಿದೆ. ಈ ಎಲ್ಲ ಪ್ರದರ್ಶನ-ಮಾರಾಟ ಮಳಿಗೆ ಗಳು ಗುರುವಾರದಿಂದ ರವಿವಾರದ ತನಕ ಬೆಳಗ್ಗೆ 9ರಿಂದ ರಾತ್ರಿ 10ರವರೆಗೆ ತೆರೆದಿರುತ್ತವೆ. ಒಟ್ಟಿನಲ್ಲಿ ಮನಸ್ಸನ್ನರಳಿಸುವ ನಂದನವನ ಇಲ್ಲಿ ಅರಳಿಕೊಂಡಿದೆ.

ಟಾಪ್ ನ್ಯೂಸ್

3-beehive

Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

24 Karnataka players in IPL Mega Auction; Here is the list

IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Digi-Arrest

Mangaluru: ಡಿಜಿಟಲ್‌ ಅರೆಸ್ಟ್‌, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

4(1

Mangaluru: ಪಂಪ್‌ವೆಲ್‌-ಪಡೀಲ್‌ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

KLE Technological University: Awarded Honorary Doctorate to Murugesh Nirani

KLE Technological University: ಮುರುಗೇಶ್‌ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ

3-beehive

Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.