Rohit Sharma ಟಿ20 ಪಯಣ ಮುಕ್ತಾಯದ ಸೂಚನೆ ; ಬುಮ್ರಾ ಕತೆ ಏನು?
Team Udayavani, Dec 16, 2023, 6:30 AM IST
ಮುಂಬಯಿ: ಅಚ್ಚರಿಯ ಹಾಗೂ ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ ತಂಡದ ನಾಯಕನನ್ನಾಗಿ ನೇಮಿಸಲಾಗಿದೆ. ಇದರೊಂದಿಗೆ ಮುಂಬೈಗೆ ಅತ್ಯಧಿಕ 5 ಸಲ ಐಪಿಎಲ್ ಚಾಂಪಿಯನ್ ಪಟ್ಟದ ಮೇಲೆ ಕೂರಿಸಿದ ರೋಹಿತ್ ಶರ್ಮ ಅವರ ಟಿ20 ಕ್ರಿಕೆಟ್ ಕೊನೆಗೊಂಡಿರುವ ಸೂಚನೆಯೊಂದು ಲಭಿಸಿದೆ.
ಕಳೆದ ಟ್ರೇಡಿಂಗ್ ವೇಳೆ ಹಾರ್ದಿಕ್ ಪಾಂಡ್ಯ ಗುಜರಾತ್‌ನಿಂದ ಮುಂಬೈಗೆ ಮರಳಿದಾಗಲೇ ಐಪಿಎಲ್‌ನಲ್ಲಿ ಭಾರೀ ಸಂಚಲನವೊಂದು ಮೂಡಿತ್ತು. ಇದೀಗ ಒಂದು ಹಂತದ ಕುತೂಹಲಕ್ಕೆ ತೆರೆ ಬಿದ್ದಿದೆ.
ರೋಹಿತ್ ಶರ್ಮ ಐಪಿಎಲ್‌ನಲ್ಲಿ ಮುಂದುವರಿಯುವರೇ, ಟಿ20ಯಲ್ಲಿ ಭಾರತವನ್ನು ಪ್ರತಿನಿಧಿಸುವರೇ ಎಂಬ ಪ್ರಶ್ನೆಗಳು ಈ ಸಂದರ್ಭದಲ್ಲಿ ತಲೆಯೆತ್ತಿದ್ದವು. ಈಗಿನ ಬೆಳವಣಿಗೆ ಪ್ರಕಾರ ಇದಕ್ಕೆಲ್ಲ “ಇಲ್ಲ’ ಎಂಬುದೇ ಉತ್ತರವಾಗಿದೆ.
ವಿಶ್ವಕಪ್ ಗುರಿ
ಮುಂದಿನ ವರ್ಷದ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ದೃಷ್ಟಿಯಲ್ಲಿ ರಿಸಿಕೊಂಡೇ ಈ ಬೆಳವಣಿಗೆ ಸಂಭವಿಸಿ ರುವುದು ಸ್ಪಷ್ಟ. ಅರ್ಥಾತ್, ಟಿ20 ವಿಶ್ವ ಕಪ್‌ನಲ್ಲೂ ಪಾಂಡ್ಯ ಅವರೇ ಭಾರತ ತಂಡದ ನಾಯಕರಾಗಿರುತ್ತಾರೆ ಎಂಬ ಸೂಚನೆಯೊಂದು ಸಿಕ್ಕಿದೆ.
“ಮುಂಬೈ ಇಂಡಿಯನ್ಸ್ ಐಪಿಎಲ್‌ನ ಅತ್ಯಂತ ಯಶಸ್ವಿ ತಂಡ. 5 ಸಲ ಚಾಂಪಿಯನ್ ಆಗಿ ಮೂಡಿಬಂದಿದೆ. ಈ ಐದೂ ಸಂದರ್ಭಗಳಲ್ಲಿ ರೋಹಿತ್ ಶರ್ಮ ಅವರೇ ತಂಡದ ಸಾರಥಿಯಾಗಿದ್ದರೆಂಬುದು ಅವರ ಜನಪ್ರಿಯತೆಗೆ ಸಾಕ್ಷಿ. ಆದರೆ ತಂಡದ ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ನಾಯಕತ್ವದ ಬದಲಾವಣೆ ಮಾಡಲಾಗಿದೆ’ ಎಂದು ಮುಂಬೈ ಇಂಡಿಯನ್ಸ್ ಮುಖ್ಯಸ್ಥ ಮಾಹೇಲ ಜಯವರ್ಧನೆ ತಿಳಿಸಿದ್ದಾರೆ.
“ಮುಂಬೈ ಯಾವತ್ತೂ ಅಸಾಧಾರಣ ನಾಯಕತ್ವ ಕಂಡ ತಂಡ. ಸಚಿನ್ ಅವರಿಂದ ಹರ್ಭಜನ್ ತನಕ, ಪಾಂಟಿಂಗ್ ಅವರಿಂದ ರೋಹಿತ್ ತನಕ ಉತ್ತಮ ಸಾರಥಿಗಳನ್ನು ಕಂಡಿದೆ. ಇವರಲ್ಲಿ ರೋಹಿತ್ ಅವರದು ಅತ್ಯಂತ ದೊಡ್ಡ ಯಶಸ್ಸು. ನಮ್ಮ ತಂಡ ರೋಹಿತ್‌ಗೆ ಕೃತಜ್ಞವಾಗಿದೆ’ ಎಂದು ಮುಂಬೈ ತನ್ನ ವೆಬ್‌ಸೈಟ್‌ನಲ್ಲಿ ಬರೆದಿದೆ.
ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್‌ನ ಯಶಸ್ವಿ ನಾಯಕರಾಗಿ ಹೆಸರು ಗಳಿಸಿದ್ದರು. ಗುಜರಾತ್ ತಂಡವನ್ನು ಮೊದಲ ವರ್ಷವೇ ಪಟ್ಟಕ್ಕೇರಿಸಿದ್ದು, ಸತತ 2ನೇ ವರ್ಷ ಫೈನಲ್‌ಗೆಏರಿಸಿದ್ದೆಲ್ಲ ಇವರ ಸಾಧನೆ ಎಂಬುದನ್ನು ಮರೆಯುವಂತಿಲ್ಲ. ಹಾಗೆಯೇ ಮುಂಬೈ ತಂಡದ ಯಶಸ್ಸಿನ ಅವಧಿಯಲ್ಲೂ (2015-2021) ಪಾಂಡ್ಯ ತಂಡದಲ್ಲಿದ್ದರು.
4 ಲಕ್ಷ ಫಾಲೋವರ್ ನಷ್ಟ!
ರೋಹಿತ್ ಅವರನ್ನು ಕೈಬಿಟ್ಟು ಪಾಂಡ್ಯ ಅವರಿಗೆ ಪಟ್ಟ ಕಟ್ಟಿದ ಕೆಲವೇ ಕ್ಷಣಗಳಲ್ಲಿ ಮಂಬೈ ಇಂಡಿಯನ್ಸ್ ಫ್ರಾಂಚೈಸಿಯು ಟ್ವಿಟರ್‌ನಲ್ಲಿ (ಎಕ್ಸ್) ನಾಲ್ಕು ಲಕ್ಷಕ್ಕೂ ಹೆಚ್ಚು ಫಾಲೋವರ್ಗಳನ್ನು ಕಳೆದುಕೊಂಡಿದೆ.
ಬುಮ್ರಾ ಕತೆ ಏನು?
ಜಸ್‌ಪ್ರೀತ್ ಬುಮ್ರಾ ಕೂಡ ಮುಂಬೈ ನಾಯಕತ್ವದ ಆಕಾಂಕ್ಷಿಯಾಗಿದ್ದರು, ಅವರಿಗೆ ಹಾರ್ದಿಕ್ ಪಾಂಡ್ಯ ಪುನರಾಗಮನದಿಂದ ಅಸಮಾಧಾನ ವಾಗಿದೆ ಎಂದೆಲ್ಲ ಸುದ್ದಿಯಾಗಿತ್ತು. ಬುಮ್ರಾ ಆರ್‌ಸಿಬಿ ಸೇರಿಕೊಳ್ಳುತ್ತಾರೆ ಎಂದೂ ಕೇಳಿಬಂದಿತ್ತು.
ಆದರೆ ಐಪಿಎಲ್ ರೀಟೇನಿಂಗ್ ಪ್ರಕ್ರಿಯೆ ಅವಧಿ ನ. 26ಕ್ಕೆ ಮುಗಿದರೂ ಡಿ. 12ರ ತನಕ ಪರಿವರ್ತನೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ಡೆಡ್‌ಲೈನ್ ಮುಗಿದೊಡನೆಯೇ ಪಾಂಡ್ಯ ಅವರ ನಾಯಕತ್ವವನ್ನು ಘೋಷಿಸಲಾಗಿದೆ. ಹೀಗಾಗಿ ಬುಮ್ರಾ ಕೂಡ ಇವರ ಕೈಕೆಳಗೆ ಆಡಬೇಕಾದುದು ಅನಿವಾರ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Perth test: ಜೈಸ್ವಾಲ್, ವಿರಾಟ್ ಶತಕ; ಆಸೀಸ್ ಗೆ ಭಾರೀ ಗುರಿ ನೀಡಿದ ಭಾರತ
Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್ ನೀಡಿದ ರಿಷಭ್ ಪಂತ್
Perth test: ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಮಾನ: ಏನಿದು ವಿವಾದ?
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
IPL Auction 2025: ಇಂದು, ನಾಳೆ ಐಪಿಎಲ್ ಬೃಹತ್ ಹರಾಜು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.