South Africa pitches ಸ್ಪಿನ್ನರ್‌ಗಳಿಗೆ ಲಾಭ: ಕುಲದೀಪ್ ಯಾದವ್
Team Udayavani, Dec 16, 2023, 5:23 AM IST
ಜೊಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾ ಪಿಚ್‌ಗಳು ಮೂಲತಃ ಪೇಸ್ ಮತ್ತು ಬೌನ್ಸ್ ಹೊಂದಿರಬಹುದಾದರೂ ಇವು ಸ್ಪಿನ್ನರ್‌ಗಳಿಗೂ ಲಾಭ ತರಲಿವೆ ಎಂಬುದಾಗಿ ತೃತೀಯ ಟಿ20 ಪಂದ್ಯದ ಬೌಲಿಂಗ್ ಹೀರೋ, ಬರ್ತ್‌ಡೇ ಬಾಯ್ ಕುಲದೀಪ್ ಯಾದವ್ ಹೇಳಿದ್ದಾರೆ.
ಗುರುವಾರ “ನ್ಯೂ ವಾಂಡರರ್ ಸ್ಟೇಡಿ ಯಂ’ನಲ್ಲಿ ನಡೆದ 3ನೇ ಹಾಗೂ ನಿರ್ಣಾಯಕ ಟಿ20 ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಕ್ರಿಕೆಟಿಗರು ಸ್ಪಿನ್ ಸುಳಿಗೆ ಸಿಲುಕಿ ಪಟಪಟನೆ ವಿಕೆಟ್ ಕಳೆದುಕೊಂಡಿದ್ದರು. ಭಾರತದ 7ಕ್ಕೆ 201 ರನ್ನಿಗೆ ಉತ್ತರವಾಗಿ ಮಾರ್ಕ್‌ರಮ್ ಬಳಗ 13.5 ಓವರ್‌ಗಳಲ್ಲಿ 95 ರನ್ನಿಗೆ ಕುಸಿದಿತ್ತು. ಕುಲದೀಪ್ ಗಳಿಕೆ 17ಕ್ಕೆ 5 ವಿಕೆಟ್. ಕೇವಲ 2.5 ಓವರ್‌ಗಳ “ಚೈನಾಮನ್’ ದಾಳಿಯಲ್ಲಿ ಹರಿಣಗಳ ಹೋರಾಟವನ್ನು ಅವರು ಕೊನೆಗೊಳಿಸಿದ್ದರು. ಇದರಿಂದ 3 ಪಂದ್ಯಗಳ ಸರಣಿ 1-1 ಸಮಬಲದಲ್ಲಿ ಕೊನೆಗೊಂಡಿತ್ತು.
ನಿಜಕ್ಕಾದರೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಅರ್ಹವಾದ ಸಾಧನೆ ಇದಾಗಿತ್ತು. ಅಲ್ಲದೇ ಬರ್ತ್‌ಡೇಯಂದೇ ಕುಲದೀಪ್ ಈ ಪರಾಕ್ರಮ ತೋರಿದ್ದರು. “ನನ್ನ ಪಾಲಿಗೆ ಇದೊಂದು ಸ್ಪೆಷಲ್ ಡೇ. 5 ವಿಕೆಟ್ ಉರುಳಿಸುತ್ತೇನೆಂದು ನಾನು ಭಾವಿಸಿರಲೇ ಇಲ್ಲ. ತಂಡದ ಗೆಲುವು ಮುಖ್ಯವಾಗಿತ್ತು. ಕೆಲವು ಸಮಯದ ಬಳಿಕ ಆಡಲಿಳಿದ ಕಾರಣ ಬೌಲಿಂಗ್ ಬಗ್ಗೆ ಚಿಂತೆ ಇತ್ತು. ಲಯ ಕಂಡುಕೊಳ್ಳಬೇಕಿತ್ತು. ಇಂದು ಪರಿಪೂರ್ಣ ಲಯದಲ್ಲಿದ್ದೆ. ಪಿಚ್ ಸ್ಪಿನ್ನಿಗೂ ನೆರವು ನೀಡುತ್ತಿತ್ತು’ ಎಂಬುದಾಗಿ ಜೀವನಶ್ರೇಷ್ಠ ಬೌಲಿಂಗ್ ಪ್ರದರ್ಶಿಸಿದ ಕುಲದೀಪ್ ಹೇಳಿದರು.
ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಕೇಶವ್ ಮಹಾರಾಜ್ ಕೂಡ ಯಶಸ್ಸು ಕಂಡಿದ್ದರು. 3ನೇ ಓವರ್‌ನಲ್ಲೇ ದಾಳಿಗಿಳಿದ ಅವರು ಒಂದೇ ಓವರ್‌ನಲ್ಲಿ ಗಿಲ್ ಮತ್ತು ತಿಲಕ್ ವರ್ಮ ವಿಕೆಟ್ ಉರುಳಿಸಿದ್ದರು
ಕುಲದೀಪ್ ಯಾದವ್ 2018 ಮತ್ತು 2021ರಲ್ಲೂ ದಕ್ಷಿಣ ಆಫ್ರಿಕಾದಲ್ಲಿ ಆಡಿದ್ದರು. ಅನಂತರ ಶಸ್ತ್ರಚಿಕಿತ್ಸೆಗೊಳಗಾದ ಕಾರಣ 6-7 ತಿಂಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯಬೇಕಾಯಿತು.
“2018ರಲ್ಲಿ ನಾನು ದ. ಆಫ್ರಿಕಾ ಪ್ರವಾಸಕ್ಕೆ ಹೊಸಬನಾಗಿದ್ದೆ. 2021ರಲ್ಲಿ ಫಿಟ್‌ನೆಸ್ ಸಮಸ್ಯೆ ಎದುರಾಗಿತ್ತು. ಶಸ್ತ್ರಚಿಕಿತ್ಸೆ ಬಳಿಕ ನನ್ನ ಬೌಲಿಂಗ್ ಶೈಲಿಯಲ್ಲಿ ಕೆಲವು ಬದಲಾವಣೆ ಮಾಡಿಕೊಂಡೆ. ಇದರಿಂದ ಯಶಸ್ಸು ಸಾಧ್ಯವಾಗಿದೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.