Alva’s: ವಿರಾಸತ್‌ನಲ್ಲಿ ಸಂಗೀತ ರಸಧಾರೆ- ಬೆನ್ನಿ ದಯಾಳ್ ಹಾಡಿಗೆ ಪ್ರೇಕ್ಷಕರು ಮಂತ್ರಮುಗ್ಧ
Team Udayavani, Dec 16, 2023, 1:04 AM IST
ಮೂಡುಬಿದಿರೆ: ಅಬ್ಬರದ ಹಾಡುಗಳು, ಅದಕ್ಕೆ ತಕ್ಕುದಾದ ಹಿನ್ನೆಲೆ ಸಂಗೀತ, ಬಣ್ಣ ಬಣ್ಣದ ಬೆಳಕಿನ ಚಿತ್ತಾರ, ಮುಗಿಲು ಮುಟ್ಟಿದ ಪ್ರೇಕ್ಷಕರ ಹರ್ಷೋದ್ಘಾರ, ಕರತಾಡನ….
ಇದು ಪುತ್ತಿಗೆ ವಿವೇಕಾನಂದ ನಗರ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗ ಮಂದಿರದಲ್ಲಿ ಶುಕ್ರವಾರ ಜರಗಿದ ಅಳ್ವಾಸ್ ವಿರಾಸತ್‌ನಲ್ಲಿ ಖ್ಯಾತ ಹಿನ್ನೆಲೆ ಗಾಯಕ ಬೆನ್ನಿ ದಯಾಳ್ ಅವರಿಂದ ಪ್ರಸ್ತುತಗೊಂಡ ಗಾನ ವೈಭವದ ಒಂದು ಝಲಕ್.
ವೇದಿಕೆಗೆ ಆಗಮಿಸುತ್ತಿದ್ದಂತೆ “ಲೋ ಚಾಹೆ ಉಲ್ಫತ್’ ಹಾಡಿನ ಮೂಲಕ ಸಂಗೀತ ರಸಧಾರೆ ಆರಂಭಿಸಿದ ಬೆನ್ನಿ ದಯಾಳ್ ಆವರು ಒಂದೂವರೆ ಗಂಟೆಯಲ್ಲಿ ಸುಮಾರು 30ಕ್ಕೂ ಅಧಿಕ ಹಾಡುಗಳನ್ನು ಹಾಡಿ ರಂಜಿಸಿದರು.
ಅವರು ವೇದಿಕೆಗೆ ಆಗಮಿಸುತ್ತಿದ್ದಂತೆ ಶಿಳ್ಳೆ ಚಪ್ಪಾಳೆ ಕೇಕೆ ಮುಗಿಲು ಮುಟ್ಟಿತ್ತು. ಬೆನ್ನಿ…ಬೆನ್ನಿ… ಎನ್ನುವ ಉದ್ಘಾರ ಸಭೆ ಯಲ್ಲಿದ್ದ ಆಭಿಮಾನಿ ಬಳಗದಿಂದ ಕೇಳಿ ಬಂತು. ಮಾತ್ರವಲ್ಲದೆ ಹಾಡಿಗೂ ಜತೆಯಾದರು. ದಯಾಳ್ ಹಾಡಿನೊಂದಿಗೆ ಡ್ಯಾನ್ಸ್ ಮಾಡಿ ರಂಜಿಸಿದರು.
ಧ್ವನಿ ಬದಲಾಯಿಸಿ ಹಾಡು
ಹಳೆಯ ಹೊಸ ಹಾಡುಗಳನ್ನು ಹಾಡಿದ ಬೆನ್ನಿ ಭಿನ್ನ ಸ್ವರಗಳನ್ನು ಹಾಡುಗಳಲ್ಲಿ ತರುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.
“ಕ್ಯಾ ಕರೋ ಹಾ ಲೇಡಿಸ್’ ಎನ್ನುವ ಹಾಡಿಗೆ ಯುವತಿಯರ ತಂಡವೊಂದು ನೃತ್ಯದಲ್ಲಿ ತೊಡಗಿತ್ತು. ಹೃತಿಕ್ ರೋಷನ್, ಕತ್ರಿನಾ ಕೈಫ್ ಅಭಿನಯದ ಹಾಡು ಬ್ಯಾಂಗ್ ಬ್ಯಾಂಗ್ ಜೋರಾಗಿ ಸದ್ದು ಮಾಡಿತು.
ಯುವ ಸಮುದಾಯದಲ್ಲಿ ಹೆಚ್ಚು ಜನಪ್ರಿಯವಾಗಿರುವ ಯೆಜವಾನಿ ಯೆ ದಿವಾನಿ ಚಿತ್ರದ “ಬತ್ತ ಮೀಝ್ ದಿಲ್’, ಜಾನೇ ತೂ ಯಾ ಜಾನೇ ನಾ ಚಿತ್ರದ “ಪಪ್ಪುಕಾಂಟ್ ಡಾನ್ಸ್ ಸಾಲಾ’, ದಿಲ್ ಸೇ ಚಿತ್ರದ ಚೈಂಯ್ಯ ಚೆ„ಂಯ್ಯ ಹಾಡು ಹುಚ್ಚೆದ್ದು ಕುಣಿಯುವಂತೆ ಮಾಡಿತು.
“ಮುಕ್ಕಾಲ ಮುಕ್ಕಾಬುಲಾ ಲೈಲಾ” ಹಿಂದಿ ಹಾಡಿಗೆ ಪ್ರಭುದೇವನ ಡ್ಯಾನ್ಸ್ ಸ್ಟೆಪ್ ಪ್ರದರ್ಶಿಸಿದರು.
ಐಯಾಮ್ ಎ ಡಿಸ್ಕೋ ಡಾನ್ಸರ್, ಇಶ್ಕ್ ದಿವಾನಿ, ಕೋಯಿ ಯಹಾ ಆ ನಾಚೇ ನಾಚೇ, ಓಂ…ಶಾಂತಿ..ಓಂ, ಬಚ್ ನಾ ಓ ಹಸೀನೋ, ಹಾಡುಗಳನ್ನು ಒಂದೇ ಸುತ್ತಿನಲ್ಲಿ ಹಾಡಿ ಮುಗಿಸಿದರು. ಪಂಜಾಬಿ ಮಿಶ್ರಿತ ಹಿಂದಿ ಹಾಡುಗಳು ಅದ್ಭುತವಾಗಿತ್ತು.
ಬೆನ್ನಿಯ ಮ್ಯೂಸಿಕ್ ಬ್ಯಾಂಡ್‌ನಲ್ಲಿ ಬೇಸ್ ಗಿಟಾರ್‌ನಲ್ಲಿ ಕಾರ್ಲ್, ಲೀಡ್ ಗಿಟಾರ್ ಜೋಶ್, ಡ್ರಮ್ಸ್ ಡೇವಿಡ್, ಕೀಬೋರ್ಡ್ ಅಲೋಕ್, ಟ್ರಂಪೆಟ್ ರಾಕೇಶ್, ಸ್ಯಾಕೊÕà´ೋನಲ್ಲಿ ರಾಹುಲ್, ಪರ್ಕ್ನೂಶನ್‌ನಲ್ಲಿ ಆಲೋಕ್ ಸಹಕರಿಸಿದರು.
ಮೆರವಣಿಗೆಯಲ್ಲಿ ಗಣ್ಯರು
ಸಭಾ ಕಾರ್ಯಕ್ರಮ ಕ್ಕೂ ಮುನ್ನ ಮೆರವಣಿಗೆ ನಡೆಯಿತು. ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಎಂ.ಮೋಹನ್ ಆಳ್ವ, ಮಾಜಿ ಯೋಧ ಕ್ಯಾ| ಬೃಜೇಶ್ ಚೌಟ, ಉದ್ಯಮಿ ಮುಸ್ತಫಾ ಭಾಗವಹಿಸಿದ್ದರು. ಬಳಿಕ ದೀಪ ಬೆಳಗಿಸಿ ಉದ್ಘಾಟಿಸಲಾಯಿತು, ಆಳ್ವಾಸ್ ಬ್ಯಾಂಡ್ ತಂಡ, ಎನ್ ಸಿಸಿ ಕೆಡೆಟ್‌ಗಳು ಮೆರವಣಿಗೆಯಲ್ಲಿದ್ದರು.
ಆಳ್ವಾಸ್ ನ್ಯಾಚುರೋಪತಿ ಮತ್ತು ಯೋಗಿಕ್ ಸಯನ್ಸ್ ಕಾಲೇಜಿನ ವಿದ್ಯಾರ್ಥಿ ಅನಂತ ಕೃಷ್ಣ ಸ್ವಾಗತಿಸಿದರು.
ಎರಡನೇ ದಿನವೂ ಜನಸಾಗರ
ಮೂಡುಬಿದಿರೆ: ಆಳ್ವಾಸ್ ವಿರಾಸತ್‌ನ ಎರಡನೇ ದಿನವೂ ಜನ ಸಾಗರವೇ ಹರಿದು ಬಂದಿದೆ. ಸಪ್ತ ಮೇಳಗಳಲ್ಲಿ ಬೆಳಗ್ಗಿನಿಂದಲೇ ಮಕ್ಕಳು ಹಿರಿಯರು ಸೇರಿದಂತೆ ಸಾವಿರಾರು ಮಂದಿ ಸೇರಿದ್ದರು.
ಸಂಜೆಯಾಗುತ್ತಲೇ ಜನರು ಸಂಖ್ಯೆ ಹೆಚ್ಚಾಗಿದೆ. ಸಂಜೆಯ ಸಂಗೀತ ಕಾರ್ಯಕ್ರಮದ ವೇಳೆ ಜನ ಸಾಗರವೇ ಹರಿದು ಬಂದಿದೆ. ಬೆನ್ನಿ ದಯಾಳ್ ಸಂಗೀತ ಕಾರ್ಯಕ್ರಮದ ಸಂಗೀತ ಕಾರ್ಯಕ್ರಮಕ್ಕೆ ಒಂದು ಗಂಟೆ ಮೊದಲೇ ಜನ ಬಂದು ಕುರ್ಚಿ ಅಲಂಕರಿಸಿದ್ದರು. 40 ಸಾವಿರ ಮಂದಿ ಕುಳಿತುಕೊಳ್ಳುವ ಸಾಮರ್ಥ್ಯದ ಸಭಾಂಗಣದ ವೇದಿಕೆ ಸಂಪೂರ್ಣ ಭರ್ತಿಯಾಗಿತ್ತು. ಬಿಸಿಲ ಝಳವಿದ್ದರೂ ಜನರ ಉತ್ಸಾಹ ಬತ್ತಿಲ್ಲ. ಆಹಾರ ಮೇಳ, ಪ್ರದರ್ಶನ ಮಳಿಗೆಗಳು, ಕೃಷಿ ಮೇಳ ಸೇರಿದಂತೆ ಎಲ್ಲ ಮೇಳಗಳೂ ಜನರಿಂದ ತುಂಬಿತ್ತು. ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳಿಂದಲೂ ವಿದ್ಯಾರ್ಥಿಗಳು ಆಗಮಿಸಿದ್ದರು.
ಆಳ್ವಾಸ್ ವಿರಾಸತ್ ಇಂದಿನ ಕಾರ್ಯಕ್ರಮ
ಆಳ್ವಾಸ್ ವಿರಾಸತ್‌ನ ಮೂರನೇ ದಿನವಾದ ಶನಿವಾರ ಸಂಜೆ 6ರಿಂದ ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್ ಅವರಿಂದ ಭಾವ ಲಹರಿ ಸಂಗೀತ ಕಾರ್ಯಕ್ರಮ ನೆರವೇರಲಿದೆ. ಬಳಿಕ ರಾತ್ರಿ 8 ರಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ಪ್ರಸ್ತುತಗೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Fraud Case: ಗೂಗಲ್ ಪೇ ಮಾಡಿದೆ ಎಂದು ಹೇಳಿ ಮೋಸ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
MUST WATCH
ಹೊಸ ಸೇರ್ಪಡೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.