FARMERS: ಜಿಲ್ಲೆಯಲ್ಲಿ ಹಸಿ ತೊಗರಿಕಾಯಿಗೆ ಬಂಪರ್‌ ಬೆಲೆ

Team Udayavani, Dec 16, 2023, 11:08 AM IST

FARMERS: ಜಿಲ್ಲೆಯಲ್ಲಿ ಹಸಿ ತೊಗರಿಕಾಯಿಗೆ ಬಂಪರ್‌ ಬೆಲೆ

ದೇವನಹಳ್ಳಿ: ಚಳಿಗಾಲದ ಸಮೃದ್ಧ ಬೆಳೆಯಾಗಿರುವ ತೊಗರಿಕಾಯಿಗೆ ಈಗ ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಯಾಗಿ ಬಂಪರ್‌ ಬೆಲೆ ಬಂದಿದ್ದು. ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಕಳೆದ ಕೆಲವು ದಿನಗಳಿಂದ ಜಿಲ್ಲೆಯ ನಾನಾ ಕಡೆ ರಸ್ತೆ ಬದಿಗಳಲ್ಲಿ ತೊಗರಿಕಾಯಿ ಮಾರಾಟ ಜೋರಾಗಿಯೇ ನಡೆಯುತ್ತಿದೆ.

ಕಾರ್ತಿಕ ಸೋಮವಾರದ ನಂತರ ಮಾರುಕಟ್ಟೆಯಲ್ಲಿ ತೊಗರಿಕಾಯಿಗೆ ಗ್ರಾಹಕರಿಂದ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದ್ದು, ಬೇಡಿಕೆಗೆ ತಕ್ಕಂತೆ ಸಿಗುತ್ತಿಲ್ಲ. ಈ ಬಾರಿ ಮಾರುಕಟ್ಟೆಗೆ ನಿರೀಕ್ಷಿತ ಮಟ್ಟದಲ್ಲಿ ತೊಗರಿಕಾಯಿ ಬಂದಿಲ್ಲ. ಹೀಗಾಗಿ ಸಹಜವಾಗಿ ಬೆಲೆ ಏರಿಕೆಯಾಗಿದೆ. ಮಳೆ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಎಲ್ಲೆಡೆ ಹಸಿ ತೊಗರಿ ಸಮೃದ್ಧವಾಗಿ ಬೆಳೆದಿಲ್ಲ. ಹಾಗಾಗಿ ಮರುಕಟ್ಟೆಯಲ್ಲಿ ತೊಗರಿ ನಿರೀಕ್ಷಿತ ಅವಕ ಪ್ರಮಾಣದಲ್ಲಿ ಕುಸಿತಗೊಂಡಿದೆ. ಕಳೆದ ವಾರದಿಂದ ವಾತಾವರಣ ಮೋಡ ಕವಿದಿದೆ ವಾತಾವರಣ ಕಂಡುಬಂದಿದೆ. ಚುಮುಚುಮು ಚಳಿ ಹೆಚ್ಚಾಗಿದೆ ತರಕಾರಿ ಸೊಪ್ಪು ಖರೀದಿಸುತ್ತಿದ್ದ ಗ್ರಾಹಕರು ತೊಗರಿಕಾಯಿ ಅವರೇ ಖರೀದಿಸಲು ಮುಂದಾಗಿದ್ದಾರೆ. ಹಾಗಾಗಿ ಮಾರುಕಟ್ಟೆಯಲ್ಲಿ ಅವರೇ, ತೊಗರಿ ಕಾಯಿಗೆ ಉತ್ತಮ ಬೆಲೆ ಬಂದಿದೆ.

ಒಂದು ಕೆಜಿ ತೊಗರಿ ಕಾಯಿ 60 ರಿಂದ 70 ರೂ. ಇದೆ. ಇನ್ನು ಕೆಲವು ಕಡೆ 50ರಿಂದ 60 ರೂ. ವರೆಗೆ ಮಾರಾಟ ಮಾಡುತ್ತಿದ್ದಾರೆ. ಗ್ರಾಹಕರು ದರದಲ್ಲಿ ಎಷ್ಟೇ ಚೌಕಾಶಿ ಮಾಡಿದರೂ ದರವನ್ನು ಇಳಿಕೆ ಮಾಡುತ್ತಿಲ್ಲ.

ದೀಪಾವಳಿ ಬಳಿಕ ಕಾರ್ತಿಕ ಮಾಸದಲ್ಲಿ ತೊಗರಿಕಾಯಿ ಆವಕ: ಬೆಂ. ಗ್ರಾಮಾಂತರ ಜಿಲ್ಲೆಯಲ್ಲಿ ಮಳೆ ಆಶ್ರಿತವಾಗಿ ರೈತರು ರಾಗಿ ಬೆಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ. ಈ ಬೆಳೆಯಲ್ಲಿ 8 ರಿಂದ 10 ಅಡಿ ಸಾಲಿನಲ್ಲಿ ಅವರೇ ,ತೊಗರಿ ಸೇರಿದಂತೆ ಹಲವು ದ್ವಿದಳ ಧಾನ್ಯಗಳನ್ನು ಬೆಳೆಯುತ್ತಾರೆ. ಅಂದರೆ ಈ ಬಾರಿ ಮಳೆ ಕೊರತೆಯಿಂದ ಮುಂಗಾರಿನಲ್ಲಿ ಬಿತ್ತಿದ ಬೆಳೆಗಳು ನಾಶಗೊಂಡಿವೆ. ದ್ವಿದಳ ಧಾನ್ಯಗಳು ಸಹ ನೆಲಕಚ್ಚಿವೆ. ಬೆಂ. ಗ್ರಾಮಾಂತರ ಜಿಲ್ಲೆಯ ತಾಲೂಕುಗಳಲ್ಲಿ ತೊಗರಿ ಕಾಯಿ ಬೆಳೆಯನ್ನು ಮನೆಯ ಸುತ್ತಮುತ್ತಲು ಮತ್ತು ಇತರೆ ಭಾಗಗಳಲ್ಲಿ ಬೆಳೆಯುತ್ತಾರೆ. ಈ ಭಾಗದಿಂದ ಪ್ರತಿ ವರ್ಷ ಚಳಿಗಾಲದ ಸೀಸನ್‌ ಬಂದಾಗೆಲ್ಲ ಸ್ಥಳೀಯ ಮಾರುಕಟ್ಟೆಗಳಲ್ಲಿ ತೊಗರಿಕಾಯಿ ಮೂಟೆಗಟ್ಟಲೆ ಅವಕವಾಗುತ್ತಿತ್ತು. ಆದರೆ ಈ ಬಾರಿ ಮಳೆ ಕೊರತೆಯಿಂದ ಅವರೇ, ತೊಗರಿಕಾಯಿ ಹೆಚ್ಚು ನಾಶವಾಗಿದೆ. 100 ರಲ್ಲಿ 50 ಮಂದಿಗಷ್ಟೇ ಅದರಲ್ಲೂ ನೀರಾವರಿ ಹೊಂದಿರುವ ರೈತರು ಮಾತ್ರ ಬೆಳೆದು ಮಾರಾಟ ಮಾಡುತ್ತಿದ್ದಾರೆ. ‌

ಈ ಬಾರಿ ಮಳೆ ಕೈಕೊಟ್ಟಿದೆ. ತೊಗರಿಕಾಯಿ ಈ ಬಾರಿ ಸರಿಯಾಗಿ ಬಂದಿಲ್ಲ. ಇರುವ ಅಲ್ಪಸ್ವಲ್ಪದ ನೀರಿನಲ್ಲಿ ತೊಗರಿ ಮತ್ತು ಇತರೆ ಬೆಳೆಗಳನ್ನು ಬೆಳೆಯುತ್ತಿ ದ್ದೇವೆ. ಮಳೆಯಿಲ್ಲದೇ ಇರುವುದರಿಂದ ಬಿತ್ತನೆ ಮಾಡಿದ್ದ ತೊಗರಿ ಕಾಯಿ ನೆಲಕಚ್ಚಿದೆ. ವೆಂಕಟೇಶ್‌, ರೈತ ಜಿಲ್ಲೆಯಲ್ಲಿ

ದ್ವಿದಳ ಧಾನ್ಯಗಳನ್ನು ಹೆಚ್ಚು ಬೆಳೆಯಬೇಕು. ರಾಗಿ ಜತೆ ತೊಗರಿ ಕಾಯಿ, ಅವರೇ ಬೆಳೆಯನ್ನು ಎಂಟರಿಂದ 10 ಅಡಿಗೆ ಹಾಕಿದರೆ ರೈತರಿಗೆ ಅನುಕೂಲ ವಾಗುತ್ತದೆ. ಬೆಂ. ಗ್ರಾಮಾಂತರ ಜಿಲ್ಲೆಯಲ್ಲಿ 782 ಹೆಕ್ಟೇರ್‌ ತೊಗರಿಕಾಯಿ ಬೆಳೆಯಲಾಗುತ್ತಿದೆ. ಡಾ. ಲಲಿತಾ ರೆಡ್ಡಿ, ಜಿಲ್ಲೆ ಜಂಟಿ ಕೃಷಿ ನಿರ್ದೇಶಕಿ

ಎಸ್‌ .ಮಹೇಶ್‌

ಟಾಪ್ ನ್ಯೂಸ್

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

CM-Mysore1

MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ

Kota-poojary

Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ

SSLLC

leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ

1-horoscope

Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ

Text-Bokk

KSOU: ಪರೀಕ್ಷೆ ಸಮೀಪಿಸುತ್ತಿದ್ದರೂ ಮುದ್ರಿತ ಪಠ್ಯ ಸಿಗಲಿಲ್ಲ

1-hejb

Israel ಸರ್ಜಿಕಲ್‌ ಸ್ಟ್ರೈಕ್‌: ಹೆಜ್ಬುಲ್ಲಾ ಮುಖ್ಯಸ್ಥನ ಅಂತ್ಯಕ್ಕೆ 80 ಟನ್‌ ಬಾಂಬ್‌!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap ಬೈಕ್‌ ಡಿಕ್ಕಿ: ಪಾದಚಾರಿ ಸಾವು

Road Mishap ಬೈಕ್‌ ಡಿಕ್ಕಿ: ಪಾದಚಾರಿ ಸಾವು

Ayodhya: 30 ಲಕ್ಷ ರೂ. ವೆಚ್ಚದ ಬಸ್‌ನಲ್ಲಿ ಬಸವನ ಅಯೋಧ್ಯೆ ಯಾತ್ರೆ

Ayodhya: 30 ಲಕ್ಷ ರೂ. ವೆಚ್ಚದ ಬಸ್‌ನಲ್ಲಿ ಬಸವನ ಅಯೋಧ್ಯೆ ಯಾತ್ರೆ

14-ragi-crop

Devanahalli: ಕೈಕೊಟ್ಟ ಮಳೆ: ಮೊಳಕೆಯಲ್ಲೇ ಒಣಗುತ್ತಿದೆ ರಾಗಿ

Doddaballapura ಮಳೆಗಾಗಿ ಪ್ರಾರ್ಥಿಸಿ ಮಕ್ಕಳಿಗೆ ಮದುವೆ

Doddaballapura ಮಳೆಗಾಗಿ ಪ್ರಾರ್ಥಿಸಿ ಮಕ್ಕಳಿಗೆ ಮದುವೆ

Anekal: ದೌರ್ಜನ್ಯ; ಕುಡುಕನ ನಗ್ನಗೊಳಿಸಿ ಥಳಿತ

Anekal: ದೌರ್ಜನ್ಯ; ಕುಡುಕನ ನಗ್ನಗೊಳಿಸಿ ಥಳಿತ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

CM-Mysore1

MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ

Kota-poojary

Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ

SSLLC

leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ

1-horoscope

Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.