Drug Addiction : ಮಾದಕ ವ್ಯಸನದಿಂದ ಬಿಡುಗಡೆಯೆಡೆಗೆ…
Team Udayavani, Dec 16, 2023, 9:00 PM IST
ಆಧುನಿಕ ನಾಗರಿಕ ಸಮಾಜದ ಅತಿ ದೊಡ್ಡ ದುರಂತವೆಂದರೆ ಈ ಮಾದಕ ವಸ್ತುಗಳ ಸೇವನೆ ಎಂದೇ ಹೇಳಬಹುದು. ಅನೇಕರು ಒಂದಲ್ಲಾ ಒಂದು ಕಾರಣಗಳಿಂದ ಮಾದಕ ವ್ಯಸನಕ್ಕೆ ಒಳಗಾಗುತ್ತಲೇ ಇರುತ್ತಾರೆ. ಹದಿ ಹರೆಯದ ಅನೇಕರು ಪ್ರೇಮ ವೈಫಲ್ಯದ ಕಾರಣದಿಂದಾಗಿ ಮಾದಕ ವ್ಯಸನಿಗಳಾಗುತ್ತಿದ್ದಾರೆ ಎನ್ನುವುದು ವಿಪರ್ಯಾಸ!
ಬ್ರೌನ್ ಶುಗರ್, ಗಾಂಜಾ, ಕೊಕೈನ್, ಮರಿಜುವಾನ, ಅಫೀಮು, ಧೂಮಪಾನ, ಮದ್ಯಪಾನ ಮುಂತಾದ ಮಾದಕ ವ್ಯಸನಗಳ ದಾಸನಾದರೆ ಅವುಗಳಿಂದ ಹೊರ ಬರುವುದು ಬಲು ಕಠಿಣವೇ ಸರಿ.
ಈಗೀಗ ಮಾದಕ ವ್ಯಸನಗಳ ದೊಡ್ಡ ದಂಧೆಯೇ ನಡೆಯುತ್ತಿದೆ ಎನ್ನಬಹುದು. ಶಾಲಾ ಕಾಲೇಜುಗಳ ಆವರಣದಲ್ಲಿರುವ ಅನೇಕ ಅಂಗಡಿಗಳಲ್ಲಿ ಮಾದಕ ವಸ್ತುಗಳನ್ನು ಮಾರುವ ದೊಡ್ಡ ದಂಧೆಯೇ ನಡೆಯುತ್ತಿದೆ! ಕೆಲವು ವ್ಯಾಪಾರಸ್ಥರು ತಮ್ಮ ವ್ಯಾಪಾರದ ಲಾಭಕ್ಕಾಗಿ ಮಾದಕ ವಸ್ತುಗಳನ್ನು ಬಲು ಗುಟ್ಟಾಗಿ, ವ್ಯವಸ್ಥಿತವಾಗಿ ಮಾರಾಟ ಮಾಡುತ್ತಿದ್ದಾರೆ! ಇದರಿಂದ ಯುವ ಪೀಳಿಗೆಯು ದಾರಿ ತಪ್ಪುತ್ತಿರುವುದಂತೂ ನಿಜ.
ತಮ್ಮ ಮನಸ್ಸಿನ ಸಂತೋಷಕ್ಕೆಂದೋ, ನೋವುಗಳನ್ನು ಮರೆಯಲೆಂದೋ ಹೀಗೆ ಹತ್ತು ಹಲವು ಕಾರಣಗಳಿಂದ ಅನೇಕರು ಇಂದು ಮಾದಕ ವ್ಯಸನಿಗಳಾಗುತ್ತಿದ್ದಾರೆ. ಮಾದಕ ವ್ಯಸನದಿಂದ ಆರೋಗ್ಯದ ಮೇಲೆ ಅನೇಕ ದುಷ್ಪರಿಣಾಮಗಳು ಬೀರುತ್ತವೆ. ಒಮ್ಮೆ ಮಾದಕ ವ್ಯಸನ ನಮ್ಮ ದೇಹದೊಳಗೆ ಸೇರಿದರೆ ಅದೇನೋ ಉನ್ಮಾದ ಬಂದಂತೆ ಅನಿಸಿ, ಅವುಗಳನ್ನು ಮತ್ತೆ ಮತ್ತೆ ಬಳಸುವಂತೆ ಪ್ರೇರೇಪಿಸುತ್ತದೆ. ಯುವ ಪೀಳಿಗೆಯು ಮಾದಕ ವಸ್ತುಗಳಿಂದ ಮನಕೆ ಬಹಳ ನೆಮ್ಮದಿ ಸಿಗುವುದೆಂಬ ಭ್ರಮೆಯಲ್ಲಿ ಪದೇ ಪದೇ ಮಾದಕ ವ್ಯಸನಗಳಿಗೆ ಬಲಿಯಾಗುತ್ತಲೇ ಇದ್ದಾರೆ ಎಂಬುದು ಬಹಳ ದುಃಖದ ಸಂಗತಿ.
ಮಾದಕದ್ರವ್ಯಗಳು ನೇರವಾಗಿ ಮೆದುಳು ಹಾಗೂ ನರ ಮಂಡಲಕ್ಕೆ ಅನೇಕ ದುಷ್ಪರಿಣಾಮಗಳನ್ನು ತಂದೊಡ್ಡುತ್ತವೆ. ಮನಸ್ಸು ನಮ್ಮ ನಿಯಂತ್ರಣವನ್ನು ತಪ್ಪಿ ಅನೇಕ ಅಪರಾಧಗಳನ್ನು ಮಾಡುವಂತೆ ಪ್ರೇರೇಪಿಸುತ್ತದೆ. ಜಗತ್ತಿನಲ್ಲಿ ಅನೇಕ ಕಳ್ಳತನ, ದರೋಡೆ, ಅಪಘಾತಗಳು ಮುಂತಾದ ನಾನಾ ರೀತಿಯ ಅಪರಾಧಗಳು ನಡೆಯುವುದು ಈ ಮಾದಕ ವ್ಯಸನಿಗಳಿಂದಲೇ.
ಮಾದಕ ವ್ಯಸನಗಳು ಇತರರ ಉಪಟಳಕ್ಕೆ ಪ್ರಚೋದಿಸುವುದು ಮಾತ್ರವಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುವಂತೆಯೂ ಪ್ರೇರೇಪಿಸುತ್ತದೆ! ಮೊದ ಮೊದಲು ಕಡಿಮೆ ಇದ್ದ ಚಟ ದಿನಕಳೆಯುತ್ತಾ ಹೋದಂತೆ ಅಧಿಕವಾಗಿ ಅವುಗಳ ವಶಕ್ಕೆ ಒಳಗಾಗುವ ಪರಿಸ್ಥಿತಿ ಬರುತ್ತದೆ. ಇದರಿಂದ ಮನುಷ್ಯ ದೈಹಿಕವಾಗಿ ಕೃಶವಾಗುವುದರ ಜೊತೆಗೆ ಮಾನಸಿಕವಾಗಿ ಅಸ್ಥಿರಗೊಂಡು, ಸಮಾಜದಲ್ಲಿ ತನ್ನ ಗೌರವ, ಘನತೆ, ಸ್ಥಾನಮಾನವನ್ನು ಕಳೆದುಕೊಳ್ಳುತ್ತಾನೆ.
ಮಾದಕ ವ್ಯಸನಗಳಿಂದ ಹಚ್ಚ ಹಸುರಾಗಿದ್ದ ಸಂಬಂಧಗಳು ಕೆಡುತ್ತವೆ, ಕುಟುಂಬದಲ್ಲಿ ಜಗಳಗಳು, ಭಿನ್ನಾಭಿಪ್ರಾಯಗಳು, ಪರಸ್ಪರ ಪ್ರೀತಿ, ಕಾಳಜಿಗಳು ಮರೆಯಾಗುತ್ತವೆ. ಇದರಿಂದ ಸಂಬಂಧಗಳು ನುಚ್ಚು ನೂರಾಗುತ್ತವೆ. ಇವುಗಳ ದುಷ್ಪರಿಣಾಮದಿಂದ ಮಕ್ಕಳ ಮನಸ್ಸಿನ ಮೇಲೆಯೂ ಬಲು ದೊಡ್ಡ ಪರಿಣಾಮವನ್ನೇ ಬೀರುತ್ತವೆ. ಮಕ್ಕಳು ಕೂಡ ಸಂಸ್ಕಾರ ಹೀನರಾಗಿ ಬೆಳೆದು, ಮುಂದೆ ಅವರೂ ಕೂಡ ಹಿರಿಯರನ್ನೇ ಅನುಸರಿಸಿ, ಹಿರಿಯರ ದಾರಿಯನ್ನೇ ಹಿಡಿಯುವ ಸಾಧ್ಯತೆಗಳೂ ಇರುತ್ತವೆ. ಹಾಗಾಗಿ ಮಾದಕ ವ್ಯಸನಗಳಿಂದ ದೂರವಾಗುವುದೇ ಲೇಸು.
ಮಾದಕ ವ್ಯಸನಿಗಳು ಮಾದಕ ವ್ಯಸನಗಳಿಂದ ಬಲು ಬೇಗ ಸಾವಿಗೆ ಹತ್ತಿರವಾಗುತ್ತಾರೆ. ಶ್ವಾಸಕೋಶದ ಸಮಸ್ಯೆಗಳು, ಟಿ.ಬಿ, ಮೂತ್ರ ಕೋಶದ ಸಮಸ್ಯೆಗಳು ಹೀಗೆ ಒಂದೇ ಎರಡೇ?!, ಬಹು ಅಂಗಾಗ ಖಾಯಿಲೆಗಳಿಗೆ ತುತ್ತಾಗಿ ನರಳುವ ಪರಿಸ್ಥಿತಿ ಬಂದೊದಗುತ್ತದೆ. ಇದರ ಅರಿವಿದ್ದರೂ ಆಗಾಗ ಮಾದಕ ವ್ಯಸನಗಳ ಮೊರೆ ಹೋಗುತ್ತಿರುವುದು ವಿಪರ್ಯಾಸ!!
ಮಾದಕ ವ್ಯಸನಗಳಿಂದ ಮುಕ್ತಿ ಪಡೆಯುವುದು ಹೇಗೆ?
ಪ್ರಯತ್ನ ಪಟ್ಟರೆ ಮಾದಕ ವ್ಯಸನಗಳಿಂದ ಮುಕ್ತಿ ಪಡೆಯಲು ಸಾಧ್ಯವಿದೆ. ಮಾದಕ ವ್ಯಸನಿಗಳ ಬಿಡುಗಡೆಗೆ ಈಗೀಗ ಅನೇಕ ಶಿಬಿರಗಳು ತೆರೆಯಲ್ಪಟ್ಟಿವೆ. ಆ ಶಿಬಿರಗಳಲ್ಲಿ ಮಾದಕ ವ್ಯಸನಗಳ ದುಷ್ಪರಿಣಾಮಗಳ ಬಗ್ಗೆ ಸರಿಯಾಗಿ ಅರಿವು ಮೂಡಿಸಿ, ಮಾದಕ ವ್ಯಸನಿಗಳ ಮನ ಪರಿವರ್ತನೆ ಮಾಡಿ ಅವರನ್ನು ವ್ಯಸನಗಳಿಂದ ಹೊರ ತಂದ ಅದೆಷ್ಟೋ ಉದಾಹರಣೆಗಳೂ ಇವೆ. ಕುಟುಂಬದವರ ಪ್ರೋತ್ಸಾಹ, ಸಹಕಾರ ಬಲು ಅಗತ್ಯ. ಕುಟುಂಬದ ಸದಸ್ಯರು ಮಾದಕ ವ್ಯಸನಿಗಳಿಗೆ ಧೈರ್ಯ ತುಂಬಿ, ಆತ್ಮವಿಶ್ವಾಸ ಹೆಚ್ಚಿಸುವಂತಹ ಮಾತುಗಳನ್ನಾಡಿ, ಅವರೊಡನೆ ಪ್ರೀತಿಯಿಂದ ನಡೆದುಕೊಂಡರೆ ಬಿಡುಗಡೆ ಹೊಂದಲು ಸಾಧ್ಯವಿದೆ.
–ಪ್ರಜ್ಞಾ ರವೀಶ್
ಕಾಸರಗೋಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.