Biometric: ನೋಂದಣಿ, ಖರೀದಿಗೆ ಬಯೋಮೆಟ್ರಿಕ್‌


Team Udayavani, Dec 16, 2023, 3:18 PM IST

Biometric: ನೋಂದಣಿ, ಖರೀದಿಗೆ ಬಯೋಮೆಟ್ರಿಕ್‌

ಮಂಡ್ಯ: ಜಿಲ್ಲೆಯಲ್ಲಿ ಭತ್ತ ಕಟಾವು ನಡೆಯುತ್ತಿದ್ದು, ಖರೀದಿ ಕೇಂದ್ರ ತೆರೆಯಲು ವಿಳಂಬವಾಗುತ್ತಿದೆ. ಇದರಿಂದ ಭತ್ತ ದಲ್ಲಾಳಿಗಳ ಪಾಲಾಗುತ್ತಿದೆ. ಆದ್ದರಿಂದ ಕೂಡಲೇ ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಗಳು ಕೇಳಿಬಂದ ಹಿನ್ನೆಲೆಯಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ನೋಂದಣಿ ಹಾಗೂ ಖರೀದಿ ಕೇಂದ್ರ ಗುರುತಿಸಿ ಆದೇಶ ಹೊರಡಿಸಿದೆ. ಆದರೆ, ಬಯೋಮೆಟ್ರಿಕ್‌ ಪರಿಕರಗಳು ಬಾರದ ಹಿನ್ನೆಲೆಯಲ್ಲಿ ನೋಂದಣಿ ವಿಳಂಬವಾಗುತ್ತಿದೆ.

ಇತ್ತೀಚೆಗೆ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಅ ಧಿಕಾರಿಗಳ ಸಭೆ ನಡೆಸಿ ಖರೀದಿ ಕೇಂದ್ರ ತೆರೆಯುವ ಸಂಬಂಧ ಟಾಸ್ಕ್ಫೋರ್ಸ್‌ ಸಮಿತಿ ರಚನೆ ಮಾಡಿದ್ದರು. ಅದರಂತೆ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಯನ್ನು ಖರೀದಿ ಏಜೆನ್ಸಿಯಾಗಿ ನೇಮಿಸಲಾಗಿದ್ದು, ಆಯಾ ತಾಲೂಕುಗಳ ತಹಶೀಲ್ದಾರ್‌ಗಳಿಗೆ ಜವಾಬ್ದಾರಿ ನೀಡಲಾಗಿದೆ. ಆದರೆ, ಈ ಬಾರಿ ಬಯೋಮೆಟ್ರಿಕ್‌ ಮೂಲಕ ಭತ್ತ, ರಾಗಿ ಖರೀದಿಗೆ ರೈತರಿಂದ ನೋಂದಣಿ ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಆದರೆ, ಇನ್ನೂ ನೋಂದಣಿಗೆ ಬಯೋಮೆಟ್ರಿಕ್‌ ಯಂತ್ರಗಳು ಬಾರದಿರುವುದರಿಂದ ನೋಂದಣಿ ಹಾಗೂ ಖರೀದಿ ಆರಂಭವೇ ಆಗಿಲ್ಲ.

33 ನೋಂದಣಿ ಕೇಂದ್ರಗಳು: ಜಿಲ್ಲಾದ್ಯಂತ ಭತ್ತ ಖರೀದಿಗೆ 33 ನೋಂದಣಿ ಕೇಂದ್ರಗಳು, 13 ಖರೀದಿ ಕೇಂದ್ರಗಳನ್ನು ತೆರೆಯಲು ಗುರುತಿಸಲಾಗಿದೆ. ಮಂಡ್ಯ, ಮದ್ದೂರು, ಕೆ.ಆರ್‌.ಪೇಟೆ ತಲಾ 6, ಮಳವಳ್ಳಿ, ಪಾಂಡವಪುರ, ಶ್ರೀರಂಗಪಟ್ಟಣ ತಲಾ 4 ಹಾಗೂ ನಾಗಮಂಗಲದಲ್ಲಿ 3 ನೋಂದಣಿ ಕೇಂದ್ರಗಳನ್ನು ತೆರೆಯಲು ಸಿದ್ಧತೆ ನಡೆದಿದೆ.

13 ಭತ್ತ, 7 ರಾಗಿ ಖರೀದಿ ಕೇಂದ್ರ: ಕೆ.ಆರ್‌.ಪೇಟೆ, ಮದ್ದೂರು, ಮಳವಳ್ಳಿ, ಮಂಡ್ಯ ತಲಾ 2, ನಾಗಮಂಗಲ, ಪಾಂಡವಪುರ ತಲಾ 1 ಹಾಗೂ ಶ್ರೀರಂಗಪಟ್ಟಣದ 3 ಕಡೆ ಸೇರಿದಂತೆ 13 ಖರೀದಿ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಅದರಂತೆ ಜಿಲ್ಲೆಯ ಏಳು ಕಡೆ ರಾಗಿ ಖರೀದಿ ಕೇಂದ್ರ ತೆರೆಯಲಾಗುತ್ತಿದೆ. ಏಳು ತಾಲೂಕುಗಳ ಆಯಾ ಎಪಿಎಂಸಿ ಆವರಣದಲ್ಲಿ ರಾಗಿ ಖರೀದಿಸಲು ಸಿದ್ಧತೆ ನಡೆದಿದೆ.

ಬಯೋಮೆಟ್ರಿಕ್‌ ಮೂಲಕ ನೋಂದಣಿ: ಈ ಬಾರಿ ಬಯೋಮೆಟ್ರಿಕ್‌ ಮೂಲಕ ನೋಂದಣಿ ಮಾಡಿಕೊಳ್ಳಲು ಮುಂದಾಗಿದೆ. ಆದ್ದರಿಂದ ಇನ್ನೂ ಏಜೆನ್ಸಿಯಿಂದ ನೋಂದಣಿ ಕೇಂದ್ರಗಳಿಗೆ ಬಯೋಮೆಟ್ರಿಕ್‌ ಪರಿಕರಗಳು ಬರಲು ತಡವಾಗಿದ್ದರಿಂದ ನೋಂದಣಿ ಹಾಗೂ ಖರೀದಿ ಎರಡೂ ವಿಳಂಬವಾಗುತ್ತಿದೆ. ಬಯೋಮೆಟ್ರಿಕ್‌ ಪರಿಕರಗಳು ಬಂದರೆ ಇನ್ನೆರಡು ದಿನಗಳಲ್ಲಿ ನೋಂದಣಿ ಆರಂಭವಾಗಲಿದೆ.

ದರ ನಿಗದಿ: ಭತ್ತ ಹಾಗೂ ರಾಗಿಗೆ ಈಗಾಗಲೇ ದರ ನಿಗದಿಪಡಿಸಲಾಗಿದೆ. ಸಾಮಾನ್ಯ ಭತ್ತ ಕ್ವಿಂಟಾಲ್‌ಗೆ 2,183 ರೂ., ಗ್ರೇಡ್‌ ಎ ಭತ್ತಕ್ಕೆ 2203 ರೂ. ನಿಗದಿಪಡಿಸಲಾಗಿದೆ. ರಾಗಿಗೆ ಕ್ವಿಂಟಾಲ್‌ಗೆ 3,846 ರೂ. ದರ ನಿಗದಿಪಡಿಸಲಾಗಿದೆ.

ದಲ್ಲಾಳಿಗಳಿಂದ ಭತ್ತ ಖರೀದಿ: ಕೃತಕ ಅಭಾವ ಸೃಷ್ಟಿ ಸಾಧ್ಯತೆ: ಈಗಾಗಲೇ ಭತ್ತ ಕಟಾವು ವೇಗವಾಗಿ ನಡೆಯುತ್ತಿದೆ. ಆದರೆ, ದಲ್ಲಾಳಿಗಳು ನೇರವಾಗಿ ರೈತರಿಂದ ಖರೀದಿಸುತ್ತಿದ್ದಾರೆ. ಸರ್ಕಾರದ ಬೆಂಬಲ ಬೆಲೆಗಿಂತ ಹೆಚ್ಚು ದರ ನೀಡಿ ಗದ್ದೆಗಳಲ್ಲಿಯೇ ಒಕ್ಕಣೆಯಾಗುತ್ತಿದ್ದಂತೆ ಖರೀದಿ ಮಾಡುತ್ತಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಅಕ್ಕಿಗೆ ಕೃತಕ ಅಭಾವ ಸೃಷ್ಟಿಯಾಗುವ ಸಾಧ್ಯತೆ ಹೆಚ್ಚಿದೆ. ಸರ್ಕಾರವು ನಿಗದಿತ ಅವಧಿಯಲ್ಲಿ ಖರೀದಿ ಕೇಂದ್ರ ತೆರೆಯದೇ ನಿರ್ಲಕ್ಷ್ಯ ವಹಿಸಿರುವುದರಿಂದ ದಲ್ಲಾಳಿಗಳು ಭತ್ತ ಖರೀದಿಗೆ ಮುಗಿಬಿದ್ದಿದ್ದಾರೆ. ಅಲ್ಲದೇ, ಸರ್ಕಾರದ ಬೆಂಬಲ ಬೆಲೆಗಿಂತ ಹೆಚ್ಚು ದರ ನೀಡಿ ಭತ್ತ ಖರೀದಿಸುತ್ತಿದ್ದಾರೆ. ಸರ್ಕಾರ ಸಾಮಾನ್ಯ ಭತ್ತಕ್ಕೆ 2,183 ರೂ. ನಿಗದಿ ಮಾಡಿದ್ದರೆ, ದಲ್ಲಾಳಿಗಳು 2,200 ರಿಂದ 2300 ರೂ. ನೀಡುತ್ತಿದ್ದಾರೆ. ಗ್ರೇಡ್‌ ಎ ಭತ್ತಕ್ಕೆ ಸರ್ಕಾರ 2,203 ರೂ. ನೀಡುತ್ತಿದ್ದರೆ ದಲ್ಲಾಳಿಗಳು 2,800ರಿಂದ 3 ಸಾವಿರ ರೂ.ವರೆಗೂ ನೀಡುತ್ತಿದ್ದಾರೆ. ಇದರಿಂದ ಈ ಬಾರಿ ನಿರೀಕ್ಷೆಗಿಂತ ಕಡಿಮೆ ರೈತರಿಂದ ನೋಂದಣಿ ಆಗುವ ಸಾಧ್ಯತೆ ಇದೆ.

ಮೂಲ ಸೌಕರ್ಯ ತಹಶೀಲ್ದಾರ್‌ಗಳ ಹೊಣೆ : ಭತ್ತ, ರಾಗಿ ನೋಂದಣಿ ಹಾಗೂ ಖರೀದಿ ಕೇಂದ್ರಗಳಿಗೆ ಮೂಲ ಸೌಕರ್ಯ ಒದಗಿಸಲು ತಹಶೀಲ್ದಾರ್‌ಗಳಿಗೆ ಜವಾಬ್ದಾರಿ ನೀಡಲಾಗಿದೆ. ಆಯಾ ವ್ಯಾಪ್ತಿಯ ತಹಶೀಲ್ದಾರ್‌ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಯ ಶಾಖಾ ವ್ಯವಸ್ಥಾಪಕರು ಸಮನ್ವಯತೆಯಿಂದ ರೈತರಿಗೆ ಪ್ರಚಾರ, ಕೇಂದ್ರಗಳಿಗೆ ಮೂಲ ಸೌಕರ್ಯ ಒದಗಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ನೋಂದಣಿ ಹಾಗೂ ಖರೀದಿ ಕೇಂದ್ರಗಳ ಗುರುತಿಸಿ ಸಿದ್ಧತೆ ನಡೆಸಲಾಗಿದೆ. ಬಯೋಮೆಟ್ರಿಕ್‌ ಮೂಲಕ ರೈತರ ನೋಂದಣಿ ನಡೆಯಲಿದೆ. ಇನ್ನೂ ಬಯೋಮೆಟ್ರಿಕ್‌ ಪರಿಕರಗಳು ಬಂದಿಲ್ಲ. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಯಿಂದ ಬಂದ ನಂತರ ನೋಂದಣಿ ಹಾಗೂ ಖರೀದಿ ಪ್ರಕ್ರಿಯೆ ಆರಂಭಗೊಳ್ಳಲಿದೆ. ● ಕೃಷ್ಣಕುಮಾರ್‌, ಜಂಟಿ ನಿರ್ದೇಶಕರು,, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಮಂಡ್ಯ

– ಎಚ್‌.ಶಿವರಾಜು

 

ಟಾಪ್ ನ್ಯೂಸ್

Session:ನ.25- ಡಿ.20- ಸಂಸತ್‌ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?

Session:ನ.25- ಡಿ.20- ಸಂಸತ್‌ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?

County Championship: Umpires objected to Shakib Hasan’s bowling style

County Championship: ಶಕಿಬ್‌ ಹಸನ್‌ ಬೌಲಿಂಗ್‌ ಶೈಲಿ ಬಗ್ಗೆ ಅಂಪೈರ್‌ ಗಳ ಆಕ್ಷೇಪ

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್

Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್

13

Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್‌ ಆಗಲಿದೆ ʼಕಂಗುವʼ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!

Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!

2047ಕ್ಕೆ ವಿಕಸಿತ ಭಾರತ ನಿರ್ಮಾಣ: ಉಪರಾಷ್ಟ್ರಪತಿ

Vice President: 2047ಕ್ಕೆ ವಿಕಸಿತ ಭಾರತ ನಿರ್ಮಾಣ: ಜಗದೀಪ್‌ ಧನಕರ್‌

20-mandya

Mahadevapura: ಲಿಫ್ಟ್ ಗುಂಡಿಗೆ ಬಿದ್ದ ಬಾಲಕ ಸಾವು

Mandya: ದೇಶದ ಮೊದಲ “ರೈತರ ಶಾಲೆ’ ಶೀಘ್ರ ಆರಂಭ

Mandya: ದೇಶದ ಮೊದಲ “ರೈತರ ಶಾಲೆ’ ಶೀಘ್ರ ಆರಂಭ

Mandya1

Mandya: ಸಾಹಿತ್ಯ ಸಮ್ಮೇಳನ ಸಂಭ್ರಮಕ್ಕೆ ಕೊರತೆಯಾಗದಂತೆ ಮಿತಿಯಲ್ಲಿ ಖರ್ಚು ಮಾಡಿ: ಸಚಿವ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Session:ನ.25- ಡಿ.20- ಸಂಸತ್‌ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?

Session:ನ.25- ಡಿ.20- ಸಂಸತ್‌ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?

13

Malpe ಫಿಶರೀಸ್‌ ಕಾಲೇಜು: ದುರ್ವಾಸನೆಯಲ್ಲೇ ಪಾಠ

12

Kaup: ಎರ್ಮಾಳು-ಉಚ್ಚಿಲ-ಮೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಕತ್ತಲೆಗೆ ಮುಕ್ತಿ!

County Championship: Umpires objected to Shakib Hasan’s bowling style

County Championship: ಶಕಿಬ್‌ ಹಸನ್‌ ಬೌಲಿಂಗ್‌ ಶೈಲಿ ಬಗ್ಗೆ ಅಂಪೈರ್‌ ಗಳ ಆಕ್ಷೇಪ

11

Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.