Ayodhya Ram ಮಂದಿರ ನಿರ್ಮಾಣ ಬಳಿಕ ಹೆಚ್ಚಿದ ಜವಾಬ್ದಾರಿ: ಪೇಜಾವರ ಶ್ರೀ
ಪೇಜಾವರ ಮಠಾಧೀಶರ ಷಷ್ಟ್ಯಬ್ದ ಅಭಿವಂದನೆ
Team Udayavani, Dec 16, 2023, 11:40 PM IST
ಉಡುಪಿ:ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮಮಂದಿರ ನಿರ್ಮಾಣ ವಾಗುತ್ತಿದೆ, ಮಥುರಾದಲ್ಲೂ ಮಂದಿರ ನಿರ್ಮಾಣಕ್ಕೆ ನಾಂದಿಯಾಗಿದೆ.ಮಂದಿರ ಮಂದಿರವಾಗಿ ಉಳಿಯಲು ಹಿಂದೂಗಳು ಹಿಂದೂಗಳಾಗಿ ಉಳಿಯಬೇಕು. ಮಕ್ಕಳಿಗೆ ಸಂಸ್ಕಾರ ನೀಡಬೇಕು. ಇಲ್ಲವಾದರೆ ಅವರಿಂದಲೇ ದೇಶ,ಧರ್ಮ, ಸಂಸ್ಕೃತಿಗೆ ಹಾನಿಯಾದೀತು ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಎಚ್ಚರಿಸಿದರು.
ಪೇಜಾವರ ಶ್ರೀ ಗುರುವಂದನ ಸಮಿತಿಯು ಶನಿವಾರ ಪೇಜಾವರ ಮಠದ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಷಷ್ಟ್ಯಬ್ದ ಅಭಿವಂದನ ಸಮಾರಂಭದಲ್ಲಿ ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾ ಗರತೀರ್ಥ ಶ್ರೀಪಾದರು, ಪಲಿಮಾರು ಮಠಾಧೀಶ ಶ್ರೀ ವಿದ್ಯಾ ಧೀಶತೀರ್ಥ ಶ್ರೀಪಾದರು ಹಾಗೂ ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರಿಂದ ಅಭಿನಂದನೆ ಸ್ವೀಕರಿಸಿದ ಪೇಜಾವರ ಶ್ರೀಪಾದರು ಆಶೀರ್ವಚನ ನೀಡಿದರು.
ನಮ್ಮ ಸಂತತಿ ಹಿಂದೂಗಳಾಗಿ ಉಳಿ ಯಲು ಮಕ್ಕಳಿಗೆ ಸಂಸ್ಕಾರಯುತವಾದ ಹೆಸರಿಡಬೇಕು ಎಂದರು.
ಪ್ರಜಾರಾಜ್ಯದಲ್ಲಿ ರಾಮರಾಜ್ಯ ಆಗಲು ಪ್ರಜೆಗಳು ರಾಮನಾಗಬೇಕು. ರಾಮ ರಾಜ್ಯದಲ್ಲಿ ಯಾರೂ ಮನೆ ಇಲ್ಲದೇ ಇರಬಾರದು. ನಾವೆಲ್ಲರೂ ನಮ್ಮಿಂ ದಾದ ಸಹಾಯದ ಮೂಲಕ ವಸತಿ ವಂಚಿತರಿಗೆ ವಸತಿ ನಿರ್ಮಿಸಿಕೊಡಬೇಕು ಎಂದರು.
ಪರ್ಯಾಯ ಶ್ರೀಕೃಷ್ಣಾಪುರ ಶ್ರೀಪಾದರು ಅನುಗ್ರಹಿಸಿ, ಪೇಜಾವರ ಶ್ರೀಪಾದರು ಸಾರ್ವಜನಿಕರ ರಂಗದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಜನರ ಸಂಕಷ್ಟಗಳನ್ನು ಆಲಿಸಿ ಬಗೆಹರಿಸುವ ಜತೆಗೆ ಧರ್ಮವನ್ನು ಉಳಿಸುವ ಕಾರ್ಯ ಇನ್ನಷ್ಟು ಮಾಡಲಿ ಎಂದರು.
ಪಲಿಮಾರು ಶ್ರೀಪಾದರು ಆಶೀರ್ವಚಿಸಿ, ಇದು ಶ್ರೀಕೃಷ್ಣ, ರಾಮ ದೇವರ ಕಾರ್ಯಕ್ರಮ. ಅಯೋಧ್ಯೆ ಮಾತ್ರವಲ್ಲ ಪ್ರತಿ ಹಳ್ಳಿ ಹಳ್ಳಿಯಲ್ಲೂ ದೇವಾಲಯ ನಿರ್ಮಾ ಣವಾಗಿದೆ. ಮಥುರಾದಲ್ಲೂ ಇವರ ಮುಂದಾಳತ್ವದಲ್ಲೇ ಭವ್ಯ ಶ್ರೀಕೃಷ್ಣ ಮಂದಿರ ವಾಗಲಿ ಎಂದರು.
ಜ್ಞಾನ, ವಿರಕ್ತಿ, ಧೈರ್ಯ, ಸ್ಥೈರ್ಯ ಇವೆಲ್ಲ ಗುಣಗಳು ಹನುಮಂತ ದೇವ ರಂತೆ ಪೇಜಾವರ ಶ್ರೀಗಳಲ್ಲೂ ಇದೆ. ಯಾವ ಸಂದರ್ಭದಲ್ಲೂ ಅವರು ಭಯ ಗೊಳ್ಳುವವರಲ್ಲ. ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪೂರ್ಣ ಅನುಗ್ರಹ ಅವರಿಗಿದೆ ಎಂದು ಕಾಣಿಯೂರು ಶ್ರೀಗಳು ನುಡಿದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಸಂಸ್ಕೃತ ಕಾಲೇಜಿನ ಕಾರ್ಯದರ್ಶಿ ವಿದ್ವಾನ್ ಗೋಪಾಲ್ ಜೋಯಿಸ್ ಇರ್ವತ್ತೂರು ಅಭಿವಂದನ ಮಾತುಗಳನ್ನಾಡಿದರು.
ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕಿರಣ್ ಕೊಡ್ಗಿ, ಮಾಜಿ ಸಚಿವ ನಾಗರಾಜ ಶೆಟ್ಟಿ, ಮಾಜಿ ಶಾಸಕ ರಘುಪತಿ ಭಟ್, ವಿದ್ಯೋದಯ ಟ್ರಸ್ಟ್ ಅಧ್ಯಕ್ಷ ನಾಗರಾಜ ಬಲ್ಲಾಳ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಕೆ. ಸುವರ್ಣ, ಯುವ ಉದ್ಯಮಿ ಅಜಯ್ ಪಿ. ಶೆಟ್ಟಿ ಉಪಸ್ಥಿತರಿದ್ದರು. ಸಮಿತಿ ಅಧ್ಯಕ್ಷರಾದ ಶಾಸಕ ಯಶ್‌ಪಾಲ್ ಸುವರ್ಣ ಸ್ವಾಗ ತಿಸಿ, ವಾಸುದೇವ ಭಟ್ ಪೆರಂಪಳ್ಳಿ ನಿರ್ವಹಿಸಿದರು.
ಅಯೋಧ್ಯೆ ಸೇವೆ ಆ್ಯಪ್ ಬಿಡುಗಡೆ
ರೋಬೋ ಸಾಫ್ಟ್ ನಿಂದ ಸಿದ್ಧಪಡಿಸಿರುವ ಅಯೋಧ್ಯೆಯ ಸೇವೆಗೆ ಸಂಬಂಧಿಸಿದ ಆ್ಯಪ್ ಬಿಡುಗಡೆ ಮಾಡಲಾಯಿತು. ಅನಂತರ ಅರ್ಹರಿಬ್ಬರಿಗೆ ಮನೆ ನಿರ್ಮಾಣಕ್ಕೆ ತಲಾ 5 ಲಕ್ಷ ಸಹಾಯಧನ, ಅಂಗವಿಕಲರಿಗೆ ಗಾಲಿಕುರ್ಚಿ ಹಾಗೂ ನಿರುದ್ಯೋಗಿ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು.
ವಿಶೇಷ ರೀತಿಯಲ್ಲಿ ನಡೆದ ಅಭಿವಂದನೆ
ಅಭಿವಂದನೆ ವಿಶಿಷ್ಟ ರೀತಿಯಲ್ಲಿ ನೆರವೇರಿದೆ. ರಥಬೀದಿಯಲ್ಲಿ ದೋಣಿ ಮೂಲಕ ಅಕ್ಕಿಮುಡಿ, ಹೂ, ಹಣ್ಣು ಸಹಿತ ಮಂಗಳದ್ರವ್ಯಗಳನ್ನು ವೇದಿಕೆಯ ಬಳಿ ತರಲಾಯಿತು. ವೇದಿಕೆಯ ಮೇಲಿದ್ದ ಪೀಠದಲ್ಲಿ ಶ್ರೀಪಾದರನ್ನು ಕುಳ್ಳಿರಿಸಿ ಸ್ವರ್ಣಾಭಿಷೇಕ, ಪುಷ್ಪಾಭಿಷೇಕ, ಮಂಗಳಾರತಿ, ಕಪ್ಪಕಾಣಿಕೆಯ ಇಡುಗಂಟು ಒಪ್ಪಿಸಿ ವಂದಿಸಲಾಯಿತು. ಮಧ್ವಾಚಾರ್ಯರು ಶ್ರೀ ಕೃಷ್ಣನ ಮೂರ್ತಿಯನ್ನು ಹೊತ್ತು ತರುತ್ತಿರುವ ವಿಶೇಷ ಕಲಾಕೃತಿಯ ಹಾಗೂ ಅವರ ಸಾಧನೆಯನ್ನು ಕವನ ರೂಪದಲ್ಲಿ ಸಮರ್ಪಿಸಲಾಯಿತು. ಅಭಿವಂದನೆ ಪೂರ್ವದಲ್ಲಿ ಜೋಡುಕಟ್ಟೆಯಿಂದ ರಥಬೀದಿಯವರೆಗೂ ಆಕರ್ಷಕ ಶೋಭಾಯಾತ್ರೆ ಮೂಲಕ ಶ್ರೀಪಾದರನ್ನು ಕರೆತರಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Puttur: ಇದು ಅಜಿತರ ಸಾಹಸ : ರಬ್ಬರ್ ತೋಟದಲ್ಲಿ ಕಾಫಿ ಘಮ ಘಮ
Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.