School Bag: ಶಾಲಾ ಮಕ್ಕಳ ಬ್ಯಾಗ್ ಆಗಲಿದೆ ಇನ್ನಷ್ಟು ಹಗುರ
Team Udayavani, Dec 16, 2023, 11:49 PM IST
ದಾವಣಗೆರೆ: ಮುಂದಿನ ಶೈಕ್ಷಣಿಕ ವರ್ಷದಿಂದ (2024-25) ಶಾಲಾ ಮಕ್ಕಳ ಬ್ಯಾಗ್ ಹೊರೆ ಇನ್ನಷ್ಟು ಅಂದರೆ ಅರ್ಧಕ್ಕರ್ಧ ಇಳಿಸಲು ಶಾಲಾ ಶಿಕ್ಷಣ ಇಲಾಖೆ ಮುಂದಾಗಿದ್ದು, ಇದರ ಪರಿಣಾಮ ಮುಂದಿನ ವರ್ಷದಿಂದ ಪಠ್ಯಪುಸ್ತಕಗಳು ಕೂಡ ಎರಡು ವಿಭಾಗಗಳಾಗಿ (ಭಾಗ-1 ಮತ್ತು ಭಾಗ-2) ವಿಂಗಡಣೆ ಆಗಲಿವೆ.
ಮುಂದಿನ ಶೈಕ್ಷಣಿಕ ವರ್ಷ ಒಂದರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳ ಪಠ್ಯಪುಸ್ತಕಗಳನ್ನು ಸಂಕಲನಾತ್ಮಕ ಮೌಲ್ಯಮಾಪನ ರೀತಿಯಲ್ಲಿ ಅಂದರೆ ಎಸ್‌ಎ-1 ಹಾಗೂ ಎಸ್‌ಎ-2ಗಳಾಗಿ ವಿಂಗಡಿಸಿ ಪಠ್ಯಪುಸ್ತಕಗಳನ್ನು ಮುದ್ರಿಸಿ, ಸರಬರಾಜು ಮಾಡಲು ಇಲಾಖೆ ತೀರ್ಮಾನಿಸಿದೆ. ಪ್ರಸಕ್ತ ಶೈಕ್ಷಣಿಕ ವರ್ಷ ಶಾಲಾ ಮಕ್ಕಳ ಬ್ಯಾಗ್ ಹೊರೆ ಇಳಿಸಿ ತರಗತಿವಾರು 1.5 ಕೆಜಿಯಿಂದ ಗರಿಷ್ಠ ಐದು ಕೆಜಿ ವರೆಗೆ ತೂಕ ನಿಗದಿ ಮಾಡಿದ್ದ ಶಾಲಾ ಶಿಕ್ಷಣ ಇಲಾಖೆ, ಮುಂದಿನ ವರ್ಷದಿಂದ ಶೇ.50ರಷ್ಟು ಪಠ್ಯಪುಸ್ತಕದ ಹೊರೆ ಇಳಿಸಲು ಮುಂದಾಗಿದೆ. ಇದರಿಂದ ಶಾಲಾ ಮಕ್ಕಳು ಅರ್ಧವಾರ್ಷಿಕ ಪರೀಕ್ಷೆವರೆಗೆ ಒಂದು ಪಠ್ಯಪುಸ್ತಕ (ಭಾಗ-1), ಬಳಿಕ ವಾರ್ಷಿಕ ಪರೀಕ್ಷೆವರೆಗೆ ಇನ್ನೊಂದು ಪಠ್ಯಪುಸ್ತಕ (ಭಾಗ-2) ಬಳಸುವ ಮೂಲಕ ಶಾಲಾ ಬ್ಯಾಗ್‌ನ ಹೊರೆ ತಗ್ಗಿಸಿಕೊಳ್ಳಬಹುದಾಗಿದೆ.
ಸಮಿತಿ ನೀಡಿರುವ ಸಲಹೆ ಏನು?
ಪಠ್ಯಪುಸ್ತಕಗಳಿಂದ ಮಕ್ಕಳ ಶಾಲಾ ಬ್ಯಾಗ್ ಭಾರ ಹೆಚ್ಚಾಗಿದ್ದು, ಭಾರ ಇಳಿಸುವ ಕುರಿತು ಚರ್ಚಿಸಿ ಸಲಹೆ ನೀಡಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು. ಈ ಕುರಿತು ಅಧ್ಯಯನ ನಡೆಸಿದ ಸಮಿತಿ, ಶಾಲಾ ಬ್ಯಾಗ್ ಹೊರೆ ಇಳಿಕೆಗೆ ಪಠ್ಯಪುಸ್ತಕಗಳನ್ನು ಸಂಕಲನಾತ್ಮಕ ಮೌಲ್ಯಮಾಪನ ರೀತಿಯಲ್ಲಿ ಎರಡು ವಿಭಾಗಗಳಾಗಿ ವಿಂಗಡಿಸಿ, ಮುದ್ರಿಸುವ ಸಲಹೆ ನೀಡಿದ್ದು ಇದಕ್ಕೆ ಸರ್ಕಾರ ಅಸ್ತು ಎಂದಿದೆ.
ಶಾಲಾ ಬ್ಯಾಗ್‌ನಲ್ಲಿ ಮಕ್ಕಳು ಕೊಂಡೊಯ್ಯುವ ಪಠ್ಯಪುಸ್ತಕಗಳ ತೂಕ ಕಡಿಮೆ ಮಾಡುವ ಉದ್ದೇಶದಿಂದ 1ರಿಂದ 10ನೇ ತರಗತಿವರೆಗಿನ ವಿಷಯವಾರು ಎಲ್ಲ ಪಠ್ಯಪುಸ್ತಕಗಳನ್ನು ರೂಪನಾತ್ಮಕ ಮೌಲ್ಯಮಾಪನ ಮತ್ತು ಸಂಕಲನಾತ್ಮಕ ಮೌಲ್ಯಮಾಪನವಾರು ವಿಂಗಡಿಸಿ ಮುದ್ರಿಸಬಹುದು. ಅರ್ಧ ವಾರ್ಷಿಕ ಪರೀಕ್ಷೆವರೆಗೆ ಭಾಗ-1 ಹಾಗೂ ವಾರ್ಷಿಕ ಪರೀಕ್ಷೆವರೆಗೆ ಭಾಗ-2 ಪುಸ್ತಕ ಮಾತ್ರ ಬಳಸುವುದರಿಂದ ಶಾಲಾ ಮಕ್ಕಳ ಬ್ಯಾಗ್ ಹೊರೆ ಅರ್ಧದಷ್ಟು ಇಳಿಕೆಯಾಗಲಿದೆ. ವಿಷಯವಾರು ಎರಡು ಭಾಗಗಳಾಗಿ (ಎಸ್‌ಎ-1, ಎಸ್‌ಎ- 2) ಪುಸ್ತಕಗಳನ್ನು ವಿಭಾಗಿಸಿ ಮುದ್ರಿಸಿದರೆ ಪ್ರತಿ ಪಠ್ಯಪುಸ್ತಕಕ್ಕೆ 8-10 ಪುಟಗಳು ಹೆಚ್ಚಾಗಲಿದ್ದು, ಪ್ರತಿ ಪುಟಕ್ಕೆ 0.45 ಪೈಸೆ ವೆಚ್ಚು ಹೆಚ್ಚಾಗಲಿದೆ. ಅಂದಾಜು 10 ಕೋಟಿ ರೂ.ಗಳಷ್ಟು ಹೆಚ್ಚುವರಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಶಾಲಾ ಶಿಕ್ಷಣ ಇಲಾಖೆ ಈ ಕ್ರಮದಿಂದ ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ ಬ್ಯಾಗ್ ಹೊರೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿ ಮಕ್ಕಳ ಅನುಕೂಲವಾಗಲಿದೆ.
ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.