Land Trades Builders & Developers ಚಿತ್ರನಟ ರೂಪೇಶ್ ಶೆಟ್ಟಿ ಬ್ರ್ಯಾಂಡ್ ಅಂಬಾಸಿಡರ್
ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ ಆ್ಯಂಡ್ ಡೆವಲಪರ್ - 32ನೇ ವರ್ಷದ ಸಂಭ್ರಮ
Team Udayavani, Dec 17, 2023, 12:15 AM IST
ಮಂಗಳೂರು: ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ ಆ್ಯಂಡ್ ಡೆವಲಪರ್ನ 32ನೇ ವರ್ಷದ ಸಂಭ್ರಮದಲ್ಲಿ ಸಂಸ್ಥೆಯ ಹಿತೈಷಿಗಳಿಗಾಗಿ ಲ್ಯಾಂಡ್ ಟ್ರೇಡ್ಸ್ “ಗ್ರೇಷಿಯಸ್'(ಕೃತಜ್ಞತೆ) ಸಮಾರಂಭ ಏರ್ಪಡಿಸಲಾಯಿತು.
ಇದೇ ವೇಳೆ ಲ್ಯಾಂಡ್ ಟ್ರೇಡ್ಸ್‌ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಚಿತ್ರನಟ ರಾಕ್‌ಸ್ಟಾರ್ ರೂಪೇಶ್ ಶೆಟ್ಟಿ ಅವರನ್ನು ಘೋಷಿಸಲಾಯಿತು.
ಈ ವೇಳೆ ರೂಪೇಶ್ ಶೆಟ್ಟಿ ಮಾತ ನಾಡಿ, ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಕ್ಕೆ ಖುಷಿಯಾಗಿದೆ, ಲ್ಯಾಂಡ್ ಟ್ರೇಡ್ಸ್ ಪ್ರವರ್ತಕ ಶ್ರೀನಾಥ್ ಹೆಬ್ಬಾರ್ ಅವರು ನನಗೆ ಹಿಂದಿನಿಂದಲೂ ಬೆಂಬಲವಾಗಿ ನಿಂತಿದ್ದಾರೆ, ಗಿರ್‌ಗಿಟ್‌ನಿಂದ ಶುರುವಾಗಿ ಹಲವು ಸಿನಿಮಾಗಳ ಯಶಸ್ಸಿಗೆ ಸಹಕಾರ ಕೊಟ್ಟಿದ್ದಾರೆ. ನಾನು ಬಿಗ್‌ಬಾಸ್ ಗೆದ್ದ ಬಳಿಕ ಮೂರ್ನಾಲ್ಕು ಬಿಲ್ಡರ್‌ಗಳಿಂದ ಬ್ರ್ಯಾಂಡ್ ಅಂಬಾಸಿಡರ್ ಆಗಲು ಆಫರ್ ಇತ್ತು. ನಾನು ಏನೂ ಇಲ್ಲದಾಗ ಸಹಕಾರ ನೀಡಿದ್ದು ಹೆಬ್ಟಾರ್, ಹಾಗಾಗಿ ಲ್ಯಾಂಡ್ ಟ್ರೇಡ್ಸ್ ಯಶಸ್ಸಿಗಾಗಿ ಸದಾ ಸಹಕಾರ ನೀಡಲು ಸಿದ್ಧವಾಗಿದ್ದೇನೆ ಎಂದು ಶುಭ ಹಾರೈಸಿದರು.
ಲ್ಯಾಂಡ್‌ಟ್ರೇಡ್ಸ್‌ನ ಶ್ರೀನಾಥ್ ಹೆಬ್ಟಾರ್ ಪ್ರಾಸ್ತಾವಿಕವಾಗಿ ಮಾತನಾಡಿ, 1992ರ ಅ.28ರಂದು ಮಂಗಳೂರಿನಲ್ಲಿ ಮೊದಲ ತಲೆಮಾರಿನ ಉದ್ಯಮವಾಗಿ ಆರಂಭಗೊಂಡ ಲ್ಯಾಂಡ್‌ಟ್ರೇಡ್ಸ್ ನ ಸುಂದರ ಪಯಣದಲ್ಲಿ 42 ಯೋಜನೆಗಳನ್ನು ಯಶಸ್ವಿಯಾಗಿ ಪೂರೈಸಿದೆ. ಹೊಸ ಮನೋಭಾವದ ಹಾಗೂ ಜನರ ಬದಲಾಗುವ ಆಶೋ ತ್ತರಗಳನ್ನು ಪೂರೈಸಲು ಸಂಸ್ಥೆಯಿಂದ ನಿರಂತರವಾಗಿ ಶ್ರಮಿಸುತ್ತೇವೆ ಎಂದರು.
ಪ್ರಾಪರ್ಟಿ ಶೋ ಸೀಸನ್ 5
ಸಂಸ್ಥೆಯ ಪ್ರಾಪರ್ಟಿ ಶೋದ 5ನೇ ಆವೃತ್ತಿಯು ಈ ಬಾರಿ ಡಿ. 17ರಿಂದ 20ರ ವರೆಗೆ ಬಲ್ಮಠದ ಮೈಲ್ ಸ್ಟೋನ್-25 ಬಿಲ್ಡಿಂಗ್‌ನ 5ನೇ ಮಹಡಿಯಲ್ಲಿ ನಡೆಯಲಿದೆ. ಅನೇಕ ರಾಷ್ಟ್ರೀಕೃತ, ಖಾಸಗಿ ಬ್ಯಾಂಕ್‌ಗಳೂ ಭಾಗವಹಿಸ
ಲಿದ್ದು, ಸ್ಥಳದಲ್ಲೇ ಖರೀದಿ ಮಾಡಲು ಸಂಸ್ಥೆ ವ್ಯಾಪಕ ವ್ಯವಸ್ಥೆ ಮಾಡಿದೆ. ಶನಿವಾರ ಇದರ ಬಿಡುಗಡೆ ಮಾಡಲಾಯಿತು.
ಕಾರ್ಪೊರೇಟರ್‌ಗಳಾದ ನವೀನ್ ಡಿ’ಸೋಜಾ, ಶಶಿಧರ ಹೆಗ್ಡೆ, ಮಾಜಿ ಕಾರ್ಪೊರೇಟರ್ ಅಶೋಕ್ ಕುಮಾರ್ ಡಿ.ಕೆ., ಸಿಇಒ ರಮಿತ್ ಕುಮಾರ್ ಸಿದ್ಧಕಟ್ಟೆ ಉಪಸ್ಥಿತರಿದ್ದರು. ಶರ್ಮಿಳಾ ನಿರೂಪಿಸಿದರು.
ಲ್ಯಾಂಡ್ ಟ್ರೇಡ್ಸ್ ಸಾಧನೆ
ಆಸ್ತಿ ವ್ಯವಹಾರದ ಕನ್ಸಲ್ಟನ್ಸಿಯಾಗಿ ಆರಂಭವಾದ ಲ್ಯಾಂಡ್ ಟ್ರೇಡ್ಸ್ ಮುಂದೆ ಗೃಹ ನಿವೇಶನಗಳ ಅಭಿವೃದ್ಧಿ ಉದ್ಯಮದಲ್ಲಿ 1993ರಲ್ಲಿ ಜಪ್ಪು ಬಪ್ಪಲ್‌ನಲ್ಲಿ ಮೊದಲ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿತು. ಎಲ್ಲ ವರ್ಗದ ಜನರಿಗೆ ಸಾಧ್ಯವಾಗುವಂತೆ ಬೃಹತ್, ಮಧ್ಯಮ, ಸಣ್ಣ ಪ್ರಮಾಣದ 25 ಗೃಹ ಬಡಾವಣೆಗಳನ್ನು ನಿರ್ಮಿಸಲಾಯಿತು. 21ನೇ ಶತಮಾನದ ಅಪಾರ್ಟ್‌ಮೆಂಟ್ ಸಂಸ್ಕೃತಿಗೆ ಅನುಗುಣವಾಗಿ 2008ರಲ್ಲಿ ಅಸ್ಟೋರಿಯಾ, ಮುಂದೆ ಪ್ರೀಮಿಯಂ ಯೋಜನೆಗಳಾದ ಸಾಲಿಟೇರ್, ಸಾಯಿ ಗ್ರಾಂಡ್ಯೂರ್, ನಕ್ಷತ್ರ, ಮೌರಿಷ್ಕ ಪ್ಯಾಲೇಸ್, ಅಟ್ಲಾಂಟಿಸ್, ಅದೀರಾ, ಮೈಲ್‌ಸ್ಟೋನ್-25 ಇತ್ಯಾದಿ ನಿರ್ಮಾಣಗೊಂಡವು. ಈಗ ಕದ್ರಿಯಲ್ಲಿ ಶಿವಭಾಗ್, ಬೆಂದೂರ್‌ವೆಲ್‌ನಲ್ಲಿ ಅಲೂrರ, ಚಿಲಿಂಬಿಯಲ್ಲಿ ಪ್ರಿಸ್ಟಿನ್, ಪಿವಿಎಸ್ ಜಂಕ್ಷನ್ ಬಳಿ ವಿಕ್ರಂ ನಿರ್ಮಾಣವಾಗುತ್ತಿದೆ.
ನಿರ್ಮಾಣ ಕ್ಷೇತ್ರದ ಗರಿಷ್ಠ ಸಾಧನೆಗಳಾಗಿ ಐಎಸ್‌ಒ 9001:2015 ಮಾನ್ಯತೆ, ಕ್ರಿಸಿಲ್‌ನಿಂದ ಡಿಎ2 ಡೆವೆಲಪರ್ ರೇಟಿಂಗ್ ಮಾನ್ಯತೆ ಇವು ಸಂಸ್ಥೆಗೆ ಬಂದ ಗರಿಮೆಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.