Nervous System: ಸಿಂಪೆಥೆಟಿಕ್‌ ಮತ್ತು ಪ್ಯಾರಾಸಿಂಪೆಥೆಟಿಕ್‌ ನರವ್ಯವಸ್ಥೆ


Team Udayavani, Dec 17, 2023, 8:27 AM IST

2-health

ಸ್ವನಿಯಂತ್ರಿತ ನರವ್ಯವಸ್ಥೆಯು ನಮ್ಮ ಅರಿವಿಗೆ ಬಾರದೆಯೇ ಸ್ವಯಂಚಾಲಿತವಾಗಿ ನಮ್ಮ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ, ಹೀಗಾಗಿಯೇ “ಸ್ವನಿಯಂತ್ರಿತ’ ಎಂಬ ಹೆಸರು. ಇದು ಸಿಂಪೆಥೆಟಿಕ್‌ ಮತ್ತು ಪ್ಯಾರಾಸಿಂಪೆಥೆಟಿಕ್‌ ನರವ್ಯವಸ್ಥೆಗಳನ್ನು ಒಳಗೊಂಡಿದೆ. ಸ್ವನಿಯಂತ್ರಿತ ನರವ್ಯವಸ್ಥೆಯು ನಮ್ಮ ಕರುಳುಗಳು, ಹೃದಯ, ಲಾಲಾರಸ ಗ್ರಂಥಿಗಳು, ಲ್ಯಾಕ್ರಿಮಲ್‌ ಗ್ರಂಥಿಗಳು, ಕಣ್ಣುಗುಡ್ಡೆ, ಶ್ವಾಸಕೋಶ ಮತ್ತು ಜನನಾಂಗಗಳಂತಹ ಆಂತರಿಕ ಅಂಗಗಳಿಗೆ ಸಂಪರ್ಕ ಹೊಂದಿರುತ್ತದೆ.

ಸಿಂಪೆಥೆಟಿಕ್‌ ನರವ್ಯವಸ್ಥೆಯು ಹಾರಾಟದ ಅಥವಾ ಹೋರಾಟದ ಪ್ರತಿಸ್ಪಂದನೆಗಳನ್ನು ಸಕ್ರಿಯಗೊಳಿಸಿದರೆ ಪ್ಯಾರಾಸಿಂಪೆಥೆಟಿಕ್‌ ನರವ್ಯವಸ್ಥೆಯು ವಿಶ್ರಾಂತಿ ಮತ್ತು ಜೀರ್ಣ ಪ್ರತಿಸ್ಪಂದನೆಗಳನ್ನು ಸಕ್ರಿಯಗೊಳಿಸುತ್ತದೆ. ಏರಿದ ಹೃದಯ ಬಡಿತ, ರಕ್ತದೊತ್ತಡ ಮತ್ತು ಜೀರ್ಣಕ್ರಿಯೆ ಕುಂದಿಸುವುದು ಸಿಂಪೆಥೆಟಿಕ್‌ ನರವ್ಯವಸ್ಥೆಯ ಕಾರ್ಯಚಟುವಟಿಕೆಗಳಲ್ಲಿ ಸೇರಿವೆ. ವ್ಯಕ್ತಿಯನ್ನು ಯಾವುದೇ ಅಪಾಯದಿಂದ ಪಾರಾಗಲು ಸಿದ್ಧಗೊಳಿಸುವುದು ಇದರ ಹೊಣೆಗಾರಿಕೆ. ಪ್ರಿಗ್ಯಾಂಗ್ಲಿಯೋನಿಕ್‌ ಫೈಬರ್‌ಗಳು ಅಸಿಟಿಲ್‌ ಕೊಲೈನ್‌ನ್ನು ಬಿಡುಗಡೆ ಮಾಡುತ್ತದೆ, ಇದು ನೊರಾಅಡ್ರಿನಾಲಿನ್‌ ಬಿಡುಗಡೆ ಮಾಡುವಂತೆ ಪೋಸ್ಟ್‌ ಗ್ಯಾಂಗ್ಲಿಯೋನಿಕ್‌ ಫೈಬರ್‌ಗಳನ್ನು ಪ್ರಚೋದಿಸುತ್ತದೆ. ಇದರಿಂದ ಶ್ವಾಸಕೋಶಗಳು ವಿಸ್ತಾರಗೊಳ್ಳುತ್ತವೆ, ಹೃದಯ ಬಡಿತ ಹೆಚ್ಚುತ್ತದೆ, ರಕ್ತವು ಹೆಚ್ಚು ಪ್ರಮಾಣದಲ್ಲಿ ಹೃದಯಕ್ಕೆ ಹರಿದುಬರುತ್ತದೆ ಮತ್ತು ವ್ಯಕ್ತಿ ಆಲೋಚನೆ ಮಾಡಿ ಓಡುವಂತೆ ಮೆದುಳಿಗೆ ಸಹಾಯ ಮಾಡುತ್ತದೆ.

ಪ್ಯಾರಾಸಿಂಪೆಥೆಟಿಕ್‌ ನರವ್ಯವಸ್ಥೆಯು ವ್ಯಕ್ತಿ ವಿಶ್ರಾಂತಿ ಪಡೆದು ಜೀರ್ಣಕ್ರಿಯೆ ನಡೆಯಲು ಅನುವು ಮಾಡಿಕೊಡುತ್ತದೆ. ಪ್ರಿಗ್ಯಾಂಗ್ಲಿಯೋನಿಕ್‌ ಫೈಬರ್‌ ಗಳು ಅಸಿಟಿಲ್‌ ಕೊಲೈನ್‌ ಬಿಡುಗಡೆ ಮಾಡುತ್ತವೆ, ಇದರಿಂದ ಪೋಸ್ಟ್‌ ಗ್ಯಾಂಗ್ಲಿಯೋನಿಕ್‌ ಫೈಬರ್‌ಗಳು ಪ್ರಚೋದನೆಗೊಂಡು ಅಸಿಟಿಲ್‌ ಕೊಲೈನ್‌ ಬಿಡುಗಡೆ ಮಾಡುತ್ತವೆ. ಇದರಿಂದ ಹೃದಯ ಬಡಿತ ತಗ್ಗುತ್ತದೆ, ಕರುಳುಗಳು ಮತ್ತು ಹೃದಯದ ಸ್ನಾಯುಗಳು ವಿಶ್ರಮಿಸುತ್ತವೆ ಹಾಗೂ ಇದು ಹೃದಯ ಬಡಿತ ತಗ್ಗುವುದಕ್ಕೂ ಕಾರಣವಾಗಿದೆ. ಹಾರಾಟ ಅಥವಾ ಹೋರಾಟ ಪ್ರತಿಕ್ರಿಯೆಯಿಂದ ಅಂಗಾಂಗ ವ್ಯವಸ್ಥೆಗಳು ವಿಶ್ರಮಿಸಿಕೊಳ್ಳಲು ಈ ವ್ಯವಸ್ಥೆಯು ಸಹಾಯ ಮಾಡುತ್ತದೆ. ಪ್ಯಾರಾಸಿಂಪೆಥೆಟಿಕ್‌ ನರ ವ್ಯವಸ್ಥೆಯು ಮೂತ್ರಕೋಶವನ್ನೂ ಸಂಪರ್ಕಿಸುತ್ತಿದ್ದು, ಇದು ಮೂತ್ರಕೋಶವನ್ನು ಸಂಕುಚನಗೊಳಿಸುವ ಮೂಲಕ ಮೂತ್ರವಿಸರ್ಜನೆಯಾಗಲು ನೆರವಾಗುತ್ತದೆ. ಸಿಂಪೆಥೆಟಿಕ್‌ ಫೈಬರ್‌ಗಳು ಮೂತ್ರಕೋಶದ ಸ್ಪಿಂಕ್ಟರ್‌ಗಳಿಗೆ ಸಂಪರ್ಕ ಹೊಂದಿದ್ದು, ಮೂತ್ರ ವಿಸರ್ಜನೆಯ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.

ನಮ್ಮ ದೇಹದಲ್ಲಿ 12 ಕ್ರೇನಿಯಲ್‌ ನರಗಳಿದ್ದು, ಈ ಪೈಕಿ ಮೂರನೇ, ಏಳನೇ, ಒಂಬತ್ತನೇ ಮತ್ತು ಹತ್ತನೆ ಕ್ರೇನಿಯಲ್‌ ನರಗಳು ಸ್ವನಿಯಂತ್ರಿತ ನರವ್ಯವಸ್ಥೆಯ ಫೈಬರ್‌ಗಳನ್ನು ಹೊಂದಿವೆ. ಪ್ಯಾರಾಸಿಂಪೆಥೆಟಿಕ್‌ ಫೈಬರ್‌ಗಳು ಮೆದುಳು ಕಾಂಡದಿಂದ ಆರಂಭವಾಗುತ್ತವೆ. ವೇಗಸ್‌ ಅಥವಾ ಹತ್ತನೇ ಕ್ರೇನಿಯಲ್‌ ನರವು ಪ್ರಧಾನ ಪ್ಯಾರಾಸಿಂಪೆಥೆಟಿಕ್‌ ಕ್ರೇನಿಯಲ್‌ ನರವಾಗಿದೆ. ಸಿಂಪೆಥೆಟಿಕ್‌ ನರ ವ್ಯವಸ್ಥೆಯೂ ಆರಂಭವಾಗುವುದು ಮೆದುಳು ವ್ಯವಸ್ಥೆಯಿಂದಲೇ; ಪ್ರಧಾನ ಗಾಂಗ್ಲಿಯಾ ಬೆನ್ನುಹುರಿಯ ಹೊರಗಿರುತ್ತದೆ.

ಸಿಂಪೆಥೆಟಿಕ್‌ ಮತ್ತು ಪ್ಯಾರಾಸಿಂಪೆಥೆಟಿಕ್‌ ನರವ್ಯವಸ್ಥೆಯ ನಡುವೆ ಅಸಮತೋಲವುಂಟಾದರೆ ಅನಾರೋಗ್ಯ, ಸಾವಿನ ಸಾಧ್ಯತೆ ಅಧಿಕವಾಗುತ್ತದೆ. ಕಾರ್ಡಿಯಾಯಿಕ್‌ ಅರಿತ್ಮಿಯಾಸ್‌ ಮತ್ತು ನಿಶ್ಶಬ್ದ ಮೆಯೊಕಾರ್ಡಿಯಲ್‌ ಇನ್‌ಫ್ರಾಕ್ಷನ್‌ನಿಂದ ಹಠಾತ್‌ ಸಾವು ಉಂಟಾಗಬಹುದಾದ ಸಾಧ್ಯತೆಯೇ ಇದಕ್ಕೆ ಕಾರಣ.

ಸಿಂಪೆಥೆಟಿಕ್‌ ನರವ್ಯವಸ್ಥೆಯನ್ನು ಬಾಧಿಸಬಹುದಾದ ಕೆಲವು ಅನಾರೋಗ್ಯಗಳಿವೆ. ಮಧುಮೇಹ, ಉದ್ವೇಗ ಅನಾರೋಗ್ಯಗಳು, ಫಿಕ್ರೊಮೊಸೈಟೊಮಾದಂತಹ ಅಡ್ರಿನಾಲಿನ್‌ ಗ್ರಂಥಿಯ ಗಡ್ಡೆಗಳು ಇವುಗಳಲ್ಲಿ ಸೇರಿವೆ. ಹಾರ್ನರ್ ಸಿಂಡ್ರೋಮ್‌ ನಿರ್ದಿಷ್ಟವಾಗಿ ಸಿಂಪೆಥೆಟಿಕ ನರವ್ಯವಸ್ಥೆಯನ್ನು ಬಾಧಿಸುವ ಅನಾರೋಗ್ಯವಾಗಿದ್ದು, ಕಣೆÅಪ್ಪೆಗಳು ಮುಚ್ಚಿಕೊಳ್ಳಲು ಕಾರಣವಾಗುತ್ತದೆ. ಸಿಂಪೆಥೆಟಿಕ್‌ ನರವ್ಯವಸ್ಥೆಯ ಮೇಲೆ ಒತ್ತಡ ಹೇರುವ ಶ್ವಾಸಕೋಶದ ಕ್ಯಾನ್ಸರ್‌ ಮತ್ತು ಮೆದುಳು ಕಾಂಡದ ವಿವಿಧ ಗಡ್ಡೆಗಳಿಂದಾಗಿ ಹೀಗಾಗುತ್ತದೆ.

ಇದರ ಲಕ್ಷಣಗಳಲ್ಲಿ ಅರಿತ್ಮಿಯಾಸ್‌, ಮಲಬದ್ಧತೆ ಸೇರಿವೆ. ಹೃದಯದಿಂದ ಕೆಳಭಾಗದ ರಕ್ತನಾಳಗಳಲ್ಲಿ ರಕ್ತವು ಸಂಗ್ರಹಗೊಳ್ಳುವ ಅನಾರೋಗ್ಯವು ಪೊ ಸ್ಟ್ಯೂರಲ್‌ ಓರ್ಥೊಸ್ಟಾಟಿಕ್‌ ಟೇಕಿಕಾರ್ಡಿಯಾ ಸಿಂಡ್ರೋಮ್‌.

ಇದರಿಂದ ನೊರೆಪಿನೆಫ್ರೈನ್‌ ಮತ್ತು ಎಪಿನೆಫ್ರೈನ್‌ ಪ್ರಚೋದನೆಗೊಳ್ಳುವ ಮೂಲಕ ಸರಿಯಾಗಿ ಸಂಕುಚನಗೊಳ್ಳದ ರಕ್ತನಾಳಗಳು ಕೂಡ ಸಂಕುಚನಗೊಳ್ಳುತ್ತವೆ. ಆದರೆ ಇದಕ್ಕೆ ಹೃದಯವು ಪ್ರತಿಸ್ಪಂದಿಸುವ ಮೂಲಕ ಟೇಕಿಕಾರ್ಡಿಯಾಕ್ಕೆ ಕಾರಣವಾಗುತ್ತದೆ. ಈ ಅಸಮತೋಲನವು ಮೂರ್ಛೆ ತಪ್ಪುವುದು, ತಲೆ ತಿರುಗುವಿಕೆ ಮತ್ತು ಉಸಿರುಗಟ್ಟುವುದನ್ನು ಉಂಟುಮಾಡುತ್ತದೆ. ಪ್ರಿಯಾಪಿಸಂ, ಹೈಪರ್‌ಹೈಡ್ರೋಸಿಸ್‌ (ಅತಿಯಾಗಿ ಬೆವರುವಿಕೆ)ಯಂತಹ ಲೈಂಗಿಕ ವೈಫ‌ಲ್ಯಗಳು, ಗ್ಯಾಸ್ಟ್ರೊಪೇರೆಸಿಸ್‌ (ಜೀರ್ಣ ಸಮಸ್ಯೆ)ಗಳು ಸಿಂಪೆಥೆಟಿಕ್‌ ನರವ್ಯವಸ್ಥೆಯ ಇತರ ತೊಂದರೆಗಳು.

ಪ್ಯಾರಾಸಿಂಪೆಥೆಟಿಕ್‌ ನರವ್ಯವಸ್ಥೆಯು ಹಲವು ಅನಾರೋಗ್ಯಗಳಿಂದ ಬಾಧಿತವಾಗುತ್ತದೆ. ಮಧುಮೇಹ, ಅಮೈಲಾಯ್ಡೋಸಿಸ್‌ನಂತಹ ವಂಶವಾಹಿ ಅನಾರೋಗ್ಯಗಳು ಇವುಗಳಲ್ಲಿ ಸೇರಿವೆ. ಮಲ್ಟಿಪಲ್‌ ಸಿಸ್ಟಮ್‌ ಅಟ್ರೊಫಿಯಂತಹ ನರಗಳು ಕ್ಷಯಿಸುವ ಕಾಯಿಲೆಗಳು ದೇಹಭಂಗಿಯಿಂದಾಗಿ ರಕ್ತದೊತ್ತಡ ಕುಸಿಯುವ ಮೂಲಕ ಆಗಾಗ ಬೀಳುವಿಕೆಯಂತಹ ಲಕ್ಷಣಗಳನ್ನು ಹೊಂದಿರುತ್ತವೆ.

ಪ್ಯಾರಾಸಿಂಪೆಥೆಟಿಕ್‌ ನರವ್ಯವಸ್ಥೆಗೆ ಹಾನಿಯಿಂದಾಗಿ ನಿಮಿರು ದೌರ್ಬಲ್ಯದಂತಹ ಲೈಂಗಿಕ ವೈಫ‌ಲ್ಯಗಳು ಉಂಟಾಗಬಹುದು. ಮಲಬದ್ಧತೆಯಂತಹ ಹೊಟ್ಟೆಯ ಅನಾರೋಗ್ಯಗಳು, ರೆಸ್ಟಿಂಗ್‌ ಟೇಕಿಕಾರ್ಡಿಯಾದಂತಹ ಹೃದಯ ಬಡಿತ ತೊಂದರೆಗಳು, ಆರ್ಟಿಯಲ್‌ ಫೈಬ್ರಿಲೇಶನ್‌ನಂತಹ ಹೃದಯ ಬಡಿತ ಗತಿಯ ಅಸಹಜತೆಗಳು ಪ್ಯಾರಾಸಿಂಪೆಥೆಟಿಕ್‌ ನರವ್ಯವಸ್ಥೆಯ ಇತರ ಅನಾರೋಗ್ಯಗಳು. ನಿಲ್ಲುವಾಗ ರಕ್ತದೊತ್ತಡ ಕುಸಿಯುವುದರಿಂದ ತಲೆತಿರುಗುವ ತೊಂದರೆಯೇ ವ್ಯಾಸೊವೇಗಲ್‌ ಸಿಂಕೋಪ್‌.

ಡಾ| ರೋಹಿತ್‌ ಪೈ,

ಕನ್ಸಲ್ಟಂಟ್‌ ನ್ಯುರಾಲಜಿ,

ಕೆಎಂಸಿ ಆಸ್ಪತ್ರೆ,

ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ನ್ಯುರಾಲಜಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು)

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

3(1)

Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ

2(1)

AI ಆರೋಗ್ಯ ರಕ್ಷಣೆಯ ವ್ಯವಸ್ಥೆಯಲ್ಲಿ ಸ್ವೀಕಾರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆಯೇ?

1(3)

World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್‌ 17

3-health

Mother: ತಾಯಂದಿರ ಮಾನಸಿಕ ಆರೋಗ್ಯ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.