Dunki vs Salaar: ಅಡ್ವಾನ್ಸ್ ಬುಕಿಂಗ್ನಲ್ಲೇ ಕೋಟಿ ಗಳಿಸಿದ ಶಾರುಖ್ – ಪ್ರಭಾಸ್ ಸಿನಿಮಾ
Team Udayavani, Dec 17, 2023, 3:21 PM IST
ಮುಂಬಯಿ: ವರ್ಷಾಂತ್ಯಕ್ಕೆ ಭಾರತೀಯ ಸಿನಿರಂಗದಲ್ಲಿ ಎರಡು ಬಹುದೊಡ್ಡ ಸಿನಿಮಾಗಳು ರಿಲೀಸ್ ಆಗಲಿದೆ. ಪ್ಯಾನ್ ಇಂಡಿಯಾ ʼಸಲಾರ್ʼ ಹಾಗೂ ಶಾರುಖ್ ಖಾನ್ ಅವರ ʼಡಂಕಿʼ ಜೊತೆಯಾಗಿಯೇ ರಿಲೀಸ್ ಆಗಲಿದ್ದು, ಬಾಕ್ಸ್ ಆಫೀಸ್ ದಂಗಲ್ ಗೆ ದಿನಗಣನೆ ಆರಂಭವಾಗಿದೆ.
ಎರಡೂ ಸಿನಿಮಾಗಳು ಕೂಡ ಬಹು ನಿರೀಕ್ಷಿತ ಸಿನಿಮಾಗಳಾಗಿವೆ. ಪ್ರಶಾಂತ್ ನೀಲ್ ಹಾಗೂ ರಾಜ್ ಕುಮಾರ್ ಹಿರಾನಿ ನಿರ್ದೇಶನದ ಸಿನಿಮಾಗಳನ್ನು ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಈಗಾಗಲೇ ಟ್ರೇಲರ್ ಮೂಲಕ ಪ್ರಭಾಸ್ – ಶಾರುಖ್ ಕಮಾಲ್ ಮಾಡಿದ್ದಾರೆ.
ಬಾಕ್ಸ್ ಆಫೀಸ್ ನಲ್ಲಿ ʼಡಂಕಿʼvs ‘ಸಲಾರ್ʼ ಗಳಿಕೆ ಬಗ್ಗೆ ಚರ್ಚೆ ನಡೆಯುತ್ತಿದೆ. ಇತ್ತ ಅಡ್ವಾನ್ಸ್ ಬುಕಿಂಗ್ ನಲ್ಲೂ ಎರಡೂ ಸಿನಿಮಾಗಳ ನಡುವೆ ಪೈಪೋಟಿ ಉಂಟಾಗಿದೆ.
ʼಡಂಕಿʼ ಸಿನಿಮಾ ಹಿಂದಿಯಲ್ಲಿ ಮಾತ್ರ ರಿಲೀಸ್ ಆಗಲಿದ್ದು, ಹಿಂದಿಯಲ್ಲಿ 2836 ಶೋಗಳಿಗೆ 38,000 ಟಿಕೆಟ್ಗಳು ಮುಂಗಡ ಬುಕ್ಕಿಂಗ್ನ ಮೊದಲ ದಿನವೇ ಮಾರಾಟವಾಗಿವೆ. ಆ ಮೂಲಕ 1.45 ಕೋಟಿ ರೂಪಾಯಿ ಗಳಿಕೆಯನ್ನು ಮಾಡಿದೆ ಎಂದು ಸ್ಯಾಕ್ನಿಲ್ಕ್.ಕಾಮ್ ವರದಿ ಮಾಡಿದೆ.
ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳ, ಗುಜರಾತ್ ಮತ್ತು ಕರ್ನಾಟಕದಿಂದ ಹೆಚ್ಚು ಟಿಕೆಟ್ ಗಳು ಬುಕ್ ಆಗಿದೆ ಎಂದು ವರದಿ ತಿಳಿಸಿದೆ.
ಪ್ಯಾನ್ ಇಂಡಿಯಾದಲ್ಲಿ ರಿಲೀಸ್ ಆಗಲಿರುವ ʼಸಲಾರ್ʼ ಹಿಂದಿ ಆವೃತ್ತಿಯ ಟಿಕೆಟ್ ಬುಕಿಂಗ್ ಭಾನುವಾರ (ಡಿ.17 ರಂದು) ಓಪನ್ ಆಗಿದೆ. ಅಂದಾಜು 6 ಲಕ್ಷ ಮೌಲ್ಯದ 2500 ಟಿಕೆಟ್ಗಳು ಹಿಂದಿಯಲ್ಲಿ ಮಾರಾಟವಾಗಿದೆ. ಒಟ್ಟಾರೆ ʼಸಲಾರ್ʼ ಪ್ರೀ ರಿಲೀಸ್ ಮಾರಾಟವು ತಮಿಳು, ತೆಲುಗು, ಕನ್ನಡ, ಮಲಯಾಳಂನಲ್ಲಿ ಸೇರಿ 1,151 ಪ್ರದರ್ಶನಗಳಿಗೆ ಅಂದಾಜು. 1.55 ಕೋಟಿ ರೂ.ಗಳಿಸಿದ್ದು, 75.8 ಸಾವಿರ ಟಿಕೆಟ್ಗಳು ಮಾರಾಟವಾಗಿದೆ ಎಂದು ವರದಿಯಾಗಿದೆ.
ಇದೇ ಡಿ.22 ರಂದು ಎರಡೂ ಸಿನಿಮಾಗಳು ತೆರೆಕಾಣಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Actor ರೂಪಾಲಿ ಗಂಗೂಲಿಯಿಂದ ಮಲಮಗಳಿಗೆ ಕಿರುಕುಳ?
CELEBRITIES: ಶಾರುಖ್ ಟು ಸಲ್ಮಾನ್; ಧೂಮಪಾನದ ಚಟಕ್ಕೆ ಬಿದ್ದು ಹೊರಬಂದ ಸೆಲೆಬ್ರಿಟಿಗಳು
Bollywood: ವರುಣ್ ಧವನ್ ʼಬೇಬಿ ಜಾನ್ʼ ಟೀಸರ್ ನೋಡಿ ʼಜವಾನ್ʼ ಕಾಪಿ ಎಂದ ನೆಟ್ಟಿಗರು
Ranveer-Deepika ಮಗಳ ಹೆಸರು ‘ದುವಾ ಪಡುಕೋಣೆ ಸಿಂಗ್’
MUST WATCH
ಹೊಸ ಸೇರ್ಪಡೆ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.